ಸಾಮಾನ್ಯವಾಗಿ ಜನರಿಗೆ ಶನಿಮಹಾತ್ಮನ ಬಗ್ಗೆ ಕೇಳಿದಾಗ ಅವನು ಕಷ್ಟವನ್ನು ಕೊಡುವವನು ಎಂದು ಭಾವಿಸುತ್ತಾರೆ. ಆದರೆ ಶನಿಮಹಾತ್ಮ ಕೇವಲ ಕಷ್ಟವನ್ನು ಮಾತ್ರ ನೀಡುವುದಿಲ್ಲ ಅವನು ಕೂಡ ಸಾಕಷ್ಟು ಉತ್ತಮ ಫಲಗಳನ್ನು ನೀಡುತ್ತಾನೆ ಹಾಗಾದರೆ ಶನಿಯನ್ನು ಯಾವ ರೀತಿಯಾಗಿ ಪೂಜಿಸಬೇಕು ಶನಿಯ ದೋಷದಿಂದ ಮುಕ್ತ ವಾಗುವುದಕ್ಕೆ ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು ಶನಿದೇವನಿಗೆ ಯಾವ ರೀತಿಯಾಗಿ ನಮಸ್ಕಾರವನ್ನು ಮಾಡಬೇಕು ಎಂಬುದರ ಬಗ್ಗೆ ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಸಾಮಾನ್ಯವಾಗಿ ಒಪ್ಪತ್ತಿನ ಆಚರಣೆ ಮಾಡುವವರಿಗೆ ಶನಿ ಪ್ರೀತ್ಯರ್ಥವಾಗಿ ಶನಿವಾರ ಸೂಕ್ತವಾದದ್ದು.

ಶನಿವಾರ ಬಂತೆಂದರೆ ಎಲ್ಲರಿಗೂ ಸಾಮಾನ್ಯವಾಗಿ ಒಂದು ರೀತಿಯ ಆಲಸ್ಯ ಶುರುವಾಗುತ್ತದೆ. ಸ್ವಯಂ ಕುಂಟನಾಗಿರುವಂತಹ ಶನಿ ಕಾರಣ ರಾವಣ ಅವನ ಕಾಲಿಗೆ ಏಟನ್ನು ಕೊಟ್ಟಿರುವುದರಿಂದ ಅವನು ಸದಾ ಕುಂಟುತ್ತಾ ನಿಧಾನವಾಗಿ ಸಾಗುತ್ತಾನೆ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಶನಿ ಸ್ಥಾನ ಬದಲಾಯಿಸುವುದಕ್ಕೆ ತುಂಬಾ ಸಮಯ ತೆಗೆದುಕೊಳ್ಳುತ್ತಾನೆ. ಹೀಗಿರುವಾಗ ಸಾಡೇಸಾತಿ ಪಂಚಮ ಶನಿ ಅಷ್ಟಮ ಶನಿ ಕುಟುಂಬ ಶನಿ ಮತ್ತು ಅರ್ಧಾಷ್ಟಮ ಶನಿ ಇತ್ಯಾದಿ ಶನಿ ಇಂದ ಬರುವಂತಹ ಬಾಧೆಗಳಿಂದ ಮನುಷ್ಯನು ತತ್ತರಿಸಿ ಹೋಗುತ್ತಾನೆ.

ಕೆಲವರು ಉದ್ಯೋಗವನ್ನು ಕಳೆದುಕೊಳ್ಳುತ್ತಾರೆ. ಕೆಲವೊಮ್ಮೆ ಉದ್ಯಮ ವ್ಯಾಪಾರವನ್ನು ನಡೆಸುತ್ತಿರುತ್ತಾರೆ ಅಂತವರಿಗೆ ತುಂಬಾ ನಷ್ಟವಾಗುತ್ತದೆ. ಕೆಲವೊಮ್ಮೆ ಶನಿಯ ಪ್ರಭಾವ ಉಂಟಾದಲ್ಲಿ ಅನೇಕ ರೀತಿಯ ಕಷ್ಟಗಳು ಉಂಟಾಗುತ್ತದೆ ಹಾಗಾಗಿ ಶನಿಯ ಭಕ್ತರು ಜಾಗೃತರಾಗಿರಬೇಕು. ಶನಿಯ ದೋಷದಿಂದ ಪಾರಾಗುವುದಕ್ಕೆ ಸದಾ ಯೋಚಿಸುತ್ತಿರಬೇಕು.

ರತ್ನ ರಹಸ್ಯ ತಿಳಿದಿರುವವರು ಜಲಜ ಅಥವಾ ನೀಲ ಮಣಿಯನ್ನು ಧಾರಣೆ ಮಾಡುವುದರಿಂದ ಶನಿ ದೋಷದಿಂದ ಮುಕ್ತರಾಗಬಹುದು. ಶನಿ ಎಲ್ಲಿ ಕ್ರೂರವಾಗುತ್ತಾನೆ ಎಂದರೆ ಶನಿಯ ಉಚ್ಚಸ್ಥಾನ ತುಲಾ ರಾಶಿ ಸ್ವಕ್ಷೇತ್ರ ಮಕರ ಕುಂಭ ರಾಶಿಗಳು ನೀಚಸ್ಥಾನ ಮೇಷ ರಾಶಿ ಮೂಲತ್ರಿಕೋನ ಸ್ಥಾನ ಕುಂಭ ರಾಶಿ ಎಂದು ಹೇಳಲಾಗಿದೆ ಹೀಗಿರುವಾಗ ಶನಿ ಚೆನ್ನಾಗಿದ್ದಾಗ ತುಲಾ ರಾಶಿಯಲ್ಲಿ ಒಳ್ಳೆಯ ಫಲವನ್ನು ಕೊಡುತ್ತಾನೆ.

ಉದಾರಣೆಗೆ ನೋಡುವುದಾದರೆ ಶ್ರೀರಾಮನ ಜಾತಕದಲ್ಲಿ ಶನಿ ಉಚ್ಚ ಸ್ಥಾನದಲ್ಲಿದ್ದು ಉನ್ನತ ಸ್ಥಾನದಲ್ಲಿದ್ದ ರಾವಣನನ್ನು ಬಗ್ಗು ಬಡಿಯುವುದರ ಜೊತೆಗೆ ರಾಮ ಲಂಕೆಯನ್ನು ವಶಪಡಿಸಿಕೊಳ್ಳುತ್ತಾನೆ. ಅದೇ ರೀತಿ ಯಾವುದೇ ರೀತಿಯ ತೊಂದರೆಗಳಿದ್ದರೂ ಅವುಗಳೆಲ್ಲವನ್ನು ದೂರಮಾಡಿ ಅದ್ವಿತೀಯವನ್ನು ಕಾಣಬೇಕಾಗಿರುವುದು ಶನಿಮಹಾತ್ಮನಿಂದ.

ಶನಿದೇವನನ್ನು ಶನಿರಾಯರ ಶನಿಮಹಾತ್ಮ ಎಂದು ಕರೆಯಲಾಗುತ್ತದೆ. ಯಾಕೆ ಆತನಿಗೆ ಮಹಾತ್ಮ ಎಂದು ಕರೆಯುತ್ತಾರೆ ಎಂದರೆ ಒಂಬತ್ತು ಗ್ರಹಗಳಲ್ಲಿ ಯಾರಿಗೂ ಮಹಾತ್ಮ ಎಂಬ ಹೆಸರು ಇಲ್ಲ ಮಹಾತ್ಮ ಎಂದು ಕರೆಯುವುದು ಕೇವಲ ಶನಿಗೆ ಮಾತ್ರ. ಕಾರಣ ಅವನು ಅಧ್ಯಾಪಕ ಸ್ಥಾನದಲ್ಲಿ ಇರುವವನು ಕಾನೂನಿಗೆ ಒಡೆಯನಾಗಿರುವವನು

ಕಾನೂನಿನ ಚೌಕಟ್ಟಿನಲ್ಲಿ ಏನನ್ನು ಮಾಡುತ್ತೀರಿ ಅದೆಲ್ಲವೂ ಶನಿಗೆ ಸಂಬಂಧಪಟ್ಟಿರುವಂತದ್ದು. ಕಾನೂನಿನ ಮೂಲಕವಾಗಿ ನಿಮಗೆ ಯಾವ ರೀತಿಯ ದಂಡನೆಯನ್ನು ಕೊಡಬೇಕು ಆ ರೀತಿಯ ದಂಡನೆಯನ್ನು ಕೊಡುವಂತಹ ಸಾಮರ್ಥ್ಯವು ಇರುವುದು ಶನಿಯಲ್ಲಿ ಆದ್ದರಿಂದ ಅವನಿಗೆ ಅಧ್ಯಾಪಕ ಎನ್ನುವ ಹೆಸರಿದೆ. ಶನಿಮಹಾತ್ಮನಿಗೆ ಸಾಕಷ್ಟು ಶಕ್ತಿ ಇದೆ.

ಇನ್ನು ಶನಿದೇವನಿಗೆ ಯಾವ ರೀತಿಯಾಗಿ ನಮಸ್ಕಾರ ಮಾಡಿದರೆ ಒಳ್ಳೆಯದು ಯಾವ ರೀತಿ ನಮಸ್ಕಾರವನ್ನ ಮಾಡಬಾರದು ಎಂಬುದನ್ನು ನೋಡುವುದಾದರೆ ಶನಿದೇವನಿಗೆ ಬಗ್ಗಿ ನಮಸ್ಕಾರ ಮಾಡಬಾರದು ಉದ್ದಂಡ ನಮಸ್ಕಾರ ಮಾಡಬಾರದು ಶನಿದೇವನಿಗೆ ಕೈಮುಗಿ ನೇರವಾಗಿ ನಮಸ್ಕಾರ ಮಾಡಬೇಕು ಕಾರಣ ಶನಿ ಯಾವ ಸಮಯದಲ್ಲಿ ಹಗಲಿರಲಿ ಎಂದು ಕಾಯುತ್ತಿರುತ್ತಾನೆ. ಶನಿ ಸಾಮಾನ್ಯವಾಗಿ ಹತ್ತೊಂಬತ್ತು ವರ್ಷಗಳ ಕಾಲ ಪೀಡೆಯನ್ನು ಕೊಡುತ್ತಾನೆ.

ಅವನು ನೀಚನಾಗಿದ್ದರೆ ತುಂಬಾ ತೊಂದರೆಯನ್ನು ಕೊಡುತ್ತಾನೆ ಎಂತಹ ಸಂಪತ್ತನ್ನು ಹೊಂದಿದ್ದರು ಏನು ಇಲ್ಲದೆ ದಾರಿದ್ರ ಅವಸ್ಥೆಗೆ ಹೋಗುವ ಹಾಗು ಮಾಡುತ್ತಾನೆ. ನಿಮ್ಮ ಗಳಿಕೆಯನ್ನು ಹೆಚ್ಚು ಮಾಡಿಕೊಳ್ಳುವುದಕ್ಕೆ ಕೊಡುವುದಿಲ್ಲ ನಿಮ್ಮ ಸಂಪತ್ತನ್ನು ಹೆಚ್ಚಿಸಿಕೊಳ್ಳುವುದಕ್ಕೆ ಬಿಡುವುದಿಲ್ಲ. ಗ್ರಹಬಲ ಚೆನ್ನಾಗಿದ್ದು ಶನಿ ಉತ್ತಮ ಸ್ಥಾನದಲ್ಲಿದ್ದರೆ ಯಾವುದೇ ರೀತಿಯ ತೊಂದರೆ ಇರುವುದಿಲ್ಲ. ಶನಿಗೆ ಒಂದು ರೀತಿಯಲ್ಲಿ ಕರುಣೆಯು ಇದೆ ಒಂದು ರೀತಿಯಲ್ಲಿ ಉಗ್ರತ್ವವು ಇದೆ. ಉಗ್ರತ್ವ ಇರುವಾಗ ಸಾಕಷ್ಟು ತೊಂದರೆಯನ್ನು ಕೊಡುತ್ತಾನೆ.

ಹಾಗಾದರೆ ಶನಿಯ ದೋಷಗಳಿಂದ ಪಾರಾಗುವುದಕ್ಕೆ ಯಾವ ರೀತಿಯಾಗಿ ಪರಿಹಾರವನ್ನು ಮಾಡಿಕೊಳ್ಳಬಹುದು ಎಂದರೆ ಭೂತನಾಥನ ಆರಾಧನೆಯನ್ನು ಮಾಡಬೇಕು. ಭೂತನಾಥ ಎಂದರೆ ಪರಮೇಶ್ವರ ಭೂತನಾಥನ ಆರಾಧನೆಯನ್ನು ಮಾಡುವುದರಿಂದ ಅವನ ಸನ್ನಿಧಾನಕ್ಕೆ ಹೋಗಿ ಪೂಜೆಯನ್ನು ಮಾಡುವುದರಿಂದ ಕಷ್ಟಗಳೆಲ್ಲವನ್ನು ಪರಿಹರಿಸಿಕೊಳ್ಳಬಹುದು.

ಜೊತೆಗೆ ನಾವು ನೆಮ್ಮದಿಯಿಂದ ಇರಬೇಕು ಆರೋಗ್ಯವಂತರಾಗಿರಬೇಕು ಎಂದರೆ ಮಾಡುವಂತಹ ಕೆಲಸದಲ್ಲಿ ಅಭಿವೃದ್ಧಿಯಾಗಬೇಕು ಎಂದರೆ ಶನಿಮಹಾತ್ಮನ ಪೂಜೆ-ಪುನಸ್ಕಾರಗಳನ್ನು ಓದಬೇಕು ಕೇಳಬೇಕು ಮಾಡಬೇಕು. ಶನಿಯ ಗಾಯತ್ರಿ ಮಂತ್ರವನ್ನ ಹೇಳುವುದರಿಂದ ನಿಮ್ಮ ಕಷ್ಟಕಾರ್ಪಣ್ಯಗಳು ದೂರವಾಗುತ್ತವೆ ಈ ರೀತಿಯಾಗಿ ಶನಿಯ ತೊಂದರೆಗಳಿಂದ ದೂರ ವಾಗುವುದಕ್ಕೆ ನಾವು ಹೇಳುವ ಪರಿಹಾರೋಪಾಯಗಳನ್ನು ಮಾಡಿಕೊಳ್ಳಿ ಜೀವನದಲ್ಲಿ ಅಭಿವೃದ್ಧಿಯನ್ನು ಸಾಧಿಸಬಹುದು. ಈ ಮಾಹಿತಿಯನ್ನು ನೀವು ತಿಳಿಯುವುದರ ಜೊತೆಗೆ ನಿಮ್ಮ ಪರಿಚಿತರಿಗೂ ಸ್ನೇಹಿತರಿಗೂ ತಿಳಿಸಿರಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *