ಶನಿ ಗ್ರಹದ ಸಂಚಾರದಿಂದ ಮೂರು ರಾಶಿಯವರ ಜೀವನದಲ್ಲಿ ಹೆಚ್ಚು ಬದಲಾವಣೆ ತರುತ್ತದೆ. ಗ್ರಹಗಳ ಸ್ಥಾನ ಬದಲಾವಣೆ ಎಲ್ಲ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಜೋತಿಷ್ಯದ ಶಾಸ್ತ್ರದ ಪ್ರಕಾರ ಶನಿ ಗ್ರಹವೂ 30 ವರ್ಷದ ನಂತರ ಜನವರಿ ತಿಂಗಳಿನಲ್ಲಿ ಕುಂಭ ರಾಶಿಗೆ ಪ್ರವೇಶ ಮಾಡುತ್ತಾನೆ. ಫೆಬ್ರವರಿ ತಿಂಗಳಿನಲ್ಲಿ ಸೂರ್ಯ ಗ್ರಹ ಕುಂಭ ರಾಶಿಯನ್ನು ಪ್ರವೇಶ ಮಾಡುತ್ತಾನೆ. ಮಾರ್ಚ್ 7ರಂದು ಶುಕ್ರ ಗ್ರಹ ಕುಂಭ ರಾಶಿಗೆ ಪ್ರವೇಶ ಮಾಡುತ್ತಾನೆ. ಮೂರು ಗ್ರಹಗಳು ಶನಿ ಗ್ರಹ, ಸೂರ್ಯ ಗ್ರಹ ಮತ್ತು ಶುಕ್ರ ಗ್ರಹ ಒಂದೇ ರಾಶಿಗೆ ಪ್ರವೇಶ ಮಾಡುವುದರಿಂದ ಇದನ್ನು ತ್ರಿವಳಿ ಗ್ರಹ ಯೋಗ ಎಂದು ಅಥವಾ ತ್ರಿಗ್ರಾಹಿ ಕೂಟ ಎಂದು ಹೇಳಲಾಗುತ್ತದೆ. ಇದರಿಂದ ಮೂರು ರಾಶಿಯ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ.
ಆ ಅದೃಷ್ಟ ರಾಶಿಗಳು ಯಾವುದು ಎಂದು ತಿಳಿಯೋಣ :-
ಮೇಷ ರಾಶಿ :ಈ ತ್ರಿವಳಿ ಯೋಗದಿಂದ ಮೇಷ ರಾಶಿಗೆ ಒಳ್ಳೆಯ ಕಾಲ ಪ್ರಾರಂಭವಾಗಿದೆ. ಈ ರಾಶಿಯವರ ಬಹಳ ಹಿಂದಿನಿಂದ ನನಸಾಗದ ಕನಸು ಈ ಕಾಲದಲ್ಲಿ ನೆರವೇರುತ್ತದೆ. ಆರ್ಥಿಕ ಸ್ಥಿತಿ ಉತ್ತಮವಾಗಿ ಇರುತ್ತದೆ.ವೃತ್ತಿ ಜೀವನದಲ್ಲಿ ಹೆಚ್ಚು ಪ್ರಗತಿ ಸಾಧಿಸುವ ಸಾಧ್ಯತೆ ಇದೆ. ಇನ್ನು ಚಿನ್ನದ ಮೇಲೆ ಹೂಡಿಕೆ ಮಾಡುವುದು ಹೆಚ್ಛಿನ ಲಾಭ ತರುತ್ತದೆ. ಒಟ್ಟಾರೆಯಾಗಿ ಒಳ್ಳೆಯದ್ದೆ ಆಗುತ್ತದೆ ಮೇಷ ರಾಶಿಯವರಿಗೆ.
ವೃಷಭ ರಾಶಿ :ಈ ರಾಶಿಯವರಿಗೆ ತ್ರಿಗ್ರಾಹಿ ಕೂಟ ಹೆಚ್ಚಿನ ಹಣವನ್ನು ತಂದು ಕೊಡುತ್ತದೆ. ಯಾವುದೇ ಕೆಲಸ ಮಾಡಿದರು ಅದರಲ್ಲಿ, ಮೇಲುಗೈ ಸಾಧಿಸಲು ಸಾಧ್ಯ ಆಗುತ್ತದೆ. ನೂತನ ಮನೆ ಮತ್ತು ವಾಹನವನ್ನು ಖರೀದಿ ಮಾಡುವ ಅವಕಾಶ ಇದೆ ಮತ್ತು ಅದಕ್ಕೆ ಸಕಾಲ.ಕುಟುಂಬದಲ್ಲಿ ಮತ್ತು ಪರಿವಾರದಲ್ಲಿ ಹೆಚ್ಚಿನ ಮಟ್ಟದಲ್ಲಿ ಸುಖ, ಸಂತೋಷ ಮತ್ತು ನೆಮ್ಮದಿ ಬಂದು ನೆಲೆಸುತ್ತದೆ.
ಮಕರ ರಾಶಿ : ಮಕರ ರಾಶಯವರಿಗೆ ಮೂರು ಗ್ರಹಗಳ ಒಕ್ಕೂಟದಿಂದ ಗೌರವ ಹೆಚ್ಚಾಗುತ್ತದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಭಾಗವಹಿಸುವ ಅವಕಾಶ ಇದೆ. ದೇವಸ್ಥಾನಗಳಿಗೆ ಭೇಟಿ ನೀಡುವುದು. ಹೆಚ್ಚು ಪೂಜೆ ಪುನಸ್ಕಾರದಲ್ಲಿ ಪಾಲುಗೊಳ್ಳುವುದು. ಅವರು ಮಾಡುವ ಕೆಲಸದಲ್ಲಿ ಹೆಚ್ಚಿನ ಪ್ರಗತಿ ಸಾಧಿಸುವರು. ಜೀವನ ಎಂಬ ಪಾಠದಲ್ಲಿ ಎಲ್ಲಾ ರೀತಿಯ ಯಶಸ್ಸು ಸಿಗುತ್ತದೆ ಅದಕ್ಕೆ ಹೆಚ್ಚು ಶ್ರಮ, ಕಾರ್ಯ ನಿಷ್ಠೆ, ಪ್ರಾಮಾಣಿಕತೆ ಪ್ರಬುದ್ಧತೆ ಬೇಕು ಅಷ್ಟೇ.