Shani Daily Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದು ಗ್ರಹದ ಸ್ಥಾನ ಬದಲಾವಣೆಗೆ ವಿಶೇಷವಾದ ಸ್ಥಾನ ಮತ್ತು ಪ್ರಾಮುಖ್ಯತೆ ಇದೆ. ಪ್ರತಿ ಗ್ರಹ ಕೂಡ ಒಂದು ನಿರ್ದಿಷ್ಟ ಸಮಯದಲ್ಲಿ ಸ್ಥಾನ ಬದಲಾವಣೆ ಮಾಡುತ್ತದೆ. ಪ್ರಸ್ತುತ ಶನಿದೇವರು ಕುಂಭ ರಾಶಿಯಲ್ಲಿ ಹಿಮ್ಮುಖ ಚಲನೆಯಲ್ಲಿದ್ದಾರೆ ಇದರಿಂದ ಕೇಂದ್ರ ತ್ರಿಕೋನ ರಾಜಯೋಗ ಶುರುವಾಗಲಿದೆ. ಈ ರಾಜಯೋಗ 3 ರಾಶಿಗಳ ಜೀವನವನ್ನೇ ಬದಲಾಯಿಸಲಿದೆ. ಅಷ್ಟೇ ಅಲ್ಲದೆ ನವೆಂಬರ್ ತಿಂಗಳಿನಲ್ಲಿ ಶನಿದೇವರು ನೇರ ಸಂಚಾರ ಶುರು ಮಾಡಲಿದ್ದಾನೆ. ಇದರಿಂದಾಗಿ ಶಶ ರಾಜಯೋಗ ರೂಪುಗೊಳ್ಳಲಿದ್ದು, ಈ ವರ್ಷ ಮುಗಿಯುವ ವೇಳೆಗೆ ಎರಡು ರಾಜಯೋಗಗಳ ಕಾರಣದಿಂದ ಎಲ್ಲಾ ರಾಶಿಗಳಿಗೆ ಉತ್ತಮ ಫಲ ಸಿಗುತ್ತದೆ.

ತ್ರಿಕೋನ ರಾಜಯೋಗ ಬಹಳ ವಿಶೇಷವಾದ ಯೋಗ ಎಂದು ಪರಿಗಣಿಸಲಾಗುತ್ತದೆ. ಕೇಂದ್ರದ ಮನೆ ಆಗಿರುವ 3, 4, 7, 10 ಮತ್ತು 1, 5 ಮತ್ತು 9 ಜಾತಕಗಳಲ್ಲಿ ಸಂಯೋಜನೆ ರೂಪುಗೊಂಡ ನಂತರ ರಾಶಿ ಬದಲಾವಣೆ ಮಾಡಿದಾಗ ಕೇಂದ್ರ ತ್ರಿಕೋನ ರಾಜಯೋಗ ರೂಪುಗೊಳ್ಳುತ್ತದೆ. 9ನೇ ಮನೆಯ ಮಧ್ಯದಲ್ಲಿ ಕೇಂದ್ರ ತ್ರಿಕೋನ ರಾಜಯೋಗವು ಉತ್ತಮ ಸ್ಥಾನದಲ್ಲಿದ್ದರೆ ಅಂಥ ರಾಶಿಯವರಿಗೆ ಒಳ್ಳೆಯ ಸುದ್ದಿ ಕೇಳಿಬರುತ್ತದೆ. ಜೊತೆಗೆ ಶುಭಲಕ್ಷ್ಮೀ ಯೋಗ ಕೂಡ ಸೃಷ್ಟಿಯಾಗುತ್ತದೆ..ಈ ಯೋಗದಿಂದ ಆರೋಗ್ಯ, ಹಣದ ಹೂಡಿಕೆ, ಕೆಲಸದ ಪ್ರಯೋಜನ ಎಲ್ಲವೂ ಸಿಗುತ್ತದೆ.

ಶಶ ರಾಜಯೋಗ ಕೂಡ ಇದೇ ರೀತಿ ವಿಶೇಷವಾದದ್ದು, ಈ ರಾಜಯೋಗವು ಶಶ ಮಹಾಪುರುಷ, ಪಂಚ ಮಹಾಪುರುಷದಲ್ಲಿ ಬರುತ್ತದೆ. ಶನಿದೇವರು ಲಗ್ನ ಮತ್ತು ಚಂದ್ರನ ಮನೆಯಲ್ಲಿದ್ದಾಗ, ಶನಿದೇವರು ಚಂದ್ರನಿಂದ 1, 4, 7 ಅಥವಾ 10ನೇ ಸ್ಥಾನದಲ್ಲಿ ತುಲಾ, ಮಕರ ಅಥವಾ ಕುಂಭ ರಾಶಿಯಲ್ಲಿ ಪ್ರವೇಷ ಮಾಡಿದರೆ ಆ ಥರದ ಜಾತಕಗಳಲ್ಲಿ ಶಶ ರಾಜಯೋಗ ರೂಪುಗೊಳ್ಳುತ್ತದೆ. ಯಾರ ಜಾತಕದಲ್ಲಿ ಈ ಯೋಗ ರೂಪುಗೊಳ್ಳುತ್ತದೆಯೋ ಅಂಥವರ ಬದುಕಿನಲ್ಲಿ ಅದೃಷ್ಟ ಬೆಳಗುತ್ತದೆ. ಇದರಿಂದ ಅವರ ಖ್ಯಾತಿ ಮತ್ತು ಹಣ ಎರಡು ಕೂಡ ಹೆಚ್ಚಾಗುತ್ತದೆ. ರಾಜರಂತೆ ಬದುಕುತ್ತಾರೆ, ಬಡತನದಲ್ಲಿ ಇರುವವರು ಕೂಡ ಶ್ರೀಮಂತರಾಗುತ್ತಾರೆ. ಹಾಗಿದ್ದಲ್ಲಿ ಈ ಎರಡು ಯೋಗಗಳ ವಿಶೇಷ ಪ್ರಯೋಜನ ಪಡೆಯುವ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಕುಂಭ ರಾಶಿ :- ಶಶ ರಾಜಯೋಗ ಮತ್ತು ತ್ರಿಕೋನ ರಾಜಯೋಗ ನಿಮಗೆ ಉತ್ತಮ ಫಲ ನೀಡುತ್ತದೆ, ಉದ್ಯೋಗದಲ್ಲಿ ಲಾಭ ತರುತ್ತದೆ. ಪಾರ್ಟ್ನರ್ಶಿಪ್ ನಲ್ಲಿ ಕೆಲಸ ಮಾಡುವವರಿಗೆ ಇದು ಅತ್ಯುತ್ತಮ ಸಮಯ. ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ, ದೊಡ್ಡವರ ಜೊತೆಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿರುತ್ತೀರಿ. ಯಾವುದೇ ಕೆಲಸಕ್ಕೂ ಇದು ಉತ್ತಮ ಸಮಯ, ಶುರು ಮಾಡುವ ಎಲ್ಲಾ ಕೆಲಸದಲ್ಲಿ ಯಶಸ್ಸು ನಿಮ್ಮದಾಗುತ್ತದೆ..ಸಂಗಾತಿಯ ಬದುಕಿನಲ್ಲಿ ಏಳಿಗೆ ಇರುತ್ತದೆ, ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗುತ್ತದೆ. ಕೆಲಸದಲ್ಲಿ ನಿಮ್ಮ ಸಾಮರ್ಥ್ಯ ಮತ್ತು ವಿಶ್ವಾಸ ಹೆಚ್ಚಾಗುತ್ತದೆ. ದಾಂಪತ್ಯ ಜೀವನದಲ್ಲಿ ಇದ್ದ ಸಮಸ್ಯೆ ದೂರವಾಗುತ್ತದೆ.

ವೃಷಭ ರಾಶಿ :- ಶಶ ರಾಜಯೋಗದ ರಚನೆ ನಿಮಗೆ ಹೆಚ್ಚು ಅನುಕೂಲ ತರಲಿದೆ. ಅದೃಷ್ಟ ನಿಮ್ಮ ಜೊತೆಗಿರುತ್ತದೆ. ನಿಮ್ಮ ಎಲ್ಲಾ ಆಸೆಗಳು ನೆರವೇರುತ್ತದೆ. ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲು ಏಳಿಗೆ ಕಾಣುತ್ತೀರಿ. ಬ್ಯುಸಿನೆಸ್ ಮಾಡುವವರಿಗೆ ಇದು ಒಳ್ಳೆಯ ಸಮಯ, ಆದಾಯಕ್ಕೆ ಹೊಸ ಮೂಲಗಳು ಸೃಷ್ಟಿಯಾಗುತ್ತದೆ. ಕೆಲಸ ಮಾಡಲು ಒಳ್ಳೆಯ ಅವಕಾಶಗಳನ್ನು ನೀಡುತ್ತದೆ. ಕೆಲಸದಲ್ಲಿ ಬಡ್ತಿ ಮತ್ತು ಇನ್ಕ್ರಿಮೆಂಟ್ ಸಿಗುತ್ತದೆ. ಒಳ್ಳೆಯ ಸುದ್ದಿ ಕೇಳುತ್ತೀರಿ, ಮದುವೆ ಆಗದೆ ಇರುವವರಿಗೆ ಒಳ್ಳೆಯ ಸಂಬಂಧ ಕೂಡಿ ಬರುತ್ತದೆ. ಈ ರಾಜಯೋಗವು ನಿಮ್ಮ ಆದಾಯ ಜಾಸ್ತಿ ಮಾಡುತ್ತದೆ, ಉದ್ಯೋಗದಲ್ಲಿ ಬೆಳವಣಿಗೆ ಆಗುವ ಹಾಗೆ ಮಾಡುತ್ತದೆ, ಹೆಚ್ಚಿನ ಸಂಪತ್ತು ಸಿಗುವ ಹಾಗೆ ಮಾಡುತ್ತದೆ. ಕೆಲಸದಲ್ಲಿ ಬಡ್ತಿ, ಕೆಲಸ ಇಲ್ಲದೆ ಇರುವವರಿಗೆ ಒಳ್ಳೆಯ ಕೆಲಸ, ದಿಢೀರ್ ಧನಲಾಭ, ಹಾಗೂ ಒಳ್ಳೆಯ ಅವಕಾಶಗಳು ಸಿಗುತ್ತದೆ.

ತುಲಾ ರಾಶಿ :- ಕೇಂದ್ರ ತ್ರಿಕೋನ ರಾಜಯೋಗದ ಶುಭಫಲ ನಿಮಗೆ ಸಿಗುತ್ತದೆ. ಮಕ್ಕಳ ವಿಚಾರದಲ್ಲಿ ಒಳ್ಳೆಯ ಸುದ್ದಿ ಕೇಳುತ್ತೀರಿ. ವಿದ್ಯಾರ್ಥಿಗಳಿಗೆ ಇದು ಅನುಕೂಲಕರ ಸಮಯ, ಹೊಸ ಬ್ಯುಸಿನೆಸ್ ಪ್ಲಾನ್ ಶುರು ಮಾಡಲು ಇದು ಸರಿಯಾದ ಸಮಯ ಆಗಿರುತ್ತದೆ. ಎಕ್ಸಾಂ ಗಳಲ್ಲಿ ಒಳ್ಳೆಯ ರಿಸಲ್ಟ್ ಬರುತ್ತದೆ. ಹೊಸ ಕೋರ್ಸ್ ಗೆ ಪ್ರವೇಶ ಮಾಡಬಹುದು.. ದಿಢೀರ್ ಹಣ ಪಡೆಯುತ್ತೀರಿ, ಶೇರ್ ಮಾರ್ಕೆಟ್, ಬೆಟ್ಟಿಂಗ್, ಲಾಟರಿ ಇವುಗಳಲ್ಲಿ ಲಾಭ ಸಿಗುತ್ತದೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಇರುವವರಿಗೆ ಹೆಚ್ಚು ಲಾಭ ಸಿಗುತ್ತದೆ. ಹೊಸ ಕಾರ್ ಅಥವಾ ಮನೆ ಖರೀದಿ ಮಾಡುತ್ತೀರಿ.

ಸಿಂಹ ರಾಶಿ :- ಶಶ ರಾಜಯೋಗ ನಿಮಗೆ ಹೆಚ್ಚು ಅನುಕೂಲ ತರುತ್ತದೆ. ದಾಂಪತ್ಯ ಜೀವನ ಉತ್ತಮವಾಗಿರುತ್ತದೆ, ಸೌಕರ್ಯಗಳು ಜಾಸ್ತಿಯಾಗುತ್ತದೆ. ಕೋರ್ಟ್ ಕೇಸ್ ಗಳಿದ್ದರೆ ಜಯ ನಿಮ್ಮದಾಗುತ್ತದೆ. ಈ ವೇಳೆ ನಿಮ್ಮ ಸಂಗಾತಿ ಏಳಿಗೆ ಕಾಣುತ್ತಾರೆ. ನಿಮ್ಮ ಆದಾಯ ಜಾಸ್ತಿಯಾಗುತ್ತದೆ. ಸಾಲದ ಮರುಪಾವತಿ ಮಾಡುತ್ತೀರಿ. ನಿಮ್ಮ ಅದೃಷ್ಟ ಬೆಳಗುತ್ತದೆ, ಬ್ಯುಸಿನೆಸ್ ಮತ್ತು ಕೆಲಸ ಎರಡರಲ್ಲೂ ಏಳಿಗೆ ಕಾಣುತ್ತೀರಿ. ಆದಾಯ ಜಾಸ್ತಿಯಾಗಿ, ಹೊಸ ಮೂಲಗಳು ಶುರುವಾಗುತ್ತದೆ. ಕೆಲಸ ಮಾಡುತ್ತಿರುವವರಿಗೆ ಬಡ್ತಿ ಸಿಗುತ್ತದೆ. ಇನ್ನು ಮದುವೆ ಆಗದೆ ಇರುವವರಿಗೆ ಒಳ್ಳೆಯ ಸಂಬಂಧ ಕೂಡಿಬರುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By

Leave a Reply

Your email address will not be published. Required fields are marked *