ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಕುಂಭ ರಾಶಿಯಲ್ಲಿ ಶನಿ ಗ್ರಹ ಅಸ್ತಮನಾಗಲಿದ್ದಾನೆ. ಈ ಬದಲಾವಣೆ ಫೆಬ್ರವರಿ ತಿಂಗಳಿನಲ್ಲಿ 11ನೇ ತಾರೀಖು ನಡೆಯುತ್ತದೆ. ಶನಿ ಗ್ರಹದ ಅಸ್ತಮದಿಂದ ಯಾವ ರಾಶಿಯವರಿಗೆ ಶುಭ ಮತ್ತು ಅಶುಭ ಫಲ ಸಿಗುತ್ತದೆ. ಯಾವ ಅದೃಷ್ಟವಂತ ರಾಶಿಗೆ ಏನು ಫಲ ಸಿಗುತ್ತದೆ ತಿಳಿಯೋಣ. ಶನಿ ದೇವರನ್ನು ಕರ್ಮಕ್ಕೆ ಸಂಬಂಧ ಪಟ್ಟ ಗ್ರಹವೆಂದು ಪರಿಗಣಿಸಲಾಗಿದೆ ಆದ್ದರಿಂದ ಶನಿ ಮಹಾತ್ಮನನ್ನು ಕರ್ಮ ಫಲ ದಾತ ಎಂದು ಹೇಳುವರು.

ಜನರು ಮಾಡುವ ಕೆಲಸಗಳಿಗೆ ಅನುಗುಣವಾಗಿ ಫಲಗಳು ಲಭಿಸುತ್ತದೆ. ಕುಂಭ ರಾಶಿಯಲ್ಲಿ ಶನಿ ಅಸ್ತಮನಾಗಲಿದ್ದಾನೆ. ಈ ಬದಲಾವಣೆ ಫೆಬ್ರವರಿ ತಿಂಗಳಿನ 11ನೇ ತಾರೀಖು ನಡೆಯುತ್ತದೆ. ಶನಿಯ ಅಸ್ತಮದಿಂದ, ಧನು ರಾಶಿಯ ಜನರು ಸಾಡೇಸಾತಿ ಪ್ರಭಾವದಿಂದ ಹೊರ ಬರುವರು. ಮಕರ ರಾಶಿಯ ಜನರಿಗೆ ಸಾಡೇಸಾತಿ ಎರಡನೇ ಹಂತ ಕೊನೆಯಾಗುತ್ತದೆ.

ಮೀನ ರಾಶಿಯ ಮೇಲೆ ಶನಿಗ್ರಹದ ಸಾಡೇಸಾತಿ ಮೊದಲ ಹಂತ ಪ್ರಾರಂಭ ಆಗುತ್ತದೆ. ಶನಿ ಗ್ರಹದ ಅಸ್ತಮ 12 ಗ್ರಹಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ತಿಳಿಯೋಣ.

ಮೇಷ ರಾಶಿ :-ಈ ಸಮಯಲ್ಲಿ ಹಣ ಪಡೆದುಕೊಳ್ಳುವುದಕ್ಕೆ ಅಡ್ಡಿಗಳು ಸೃಷ್ಟಿಯಾಗುತ್ತದೆ. ವೃತ್ತಿಜೀವನದಲ್ಲಿ ಅಧಿಕ ಆದಾಯ ಗಳಿಕೆ ಮಾಡಬಹುದು, ಆದರೆ ಹೆಚ್ಚಿನ ತೃಪ್ತಿ ಸಿಗುವುದಿಲ್ಲ. ನೂತನ ಉದ್ಯೋಗಕ್ಕೆ ಸಂಬಂಧ ಪಟ್ಟಂತೆ ನಿರ್ಧಾರಗಳು ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಶನಿ ಗ್ರಹದ ಅಸ್ತಮದಿಂದ, ಸಂಗಾತಿ ಜೊತೆಗಿನ ಸಂಬಂಧ ಸಂತೋಷದಿಂದ ಸುಗಮವಾಗಿ ಸಾಗುತ್ತದೆ. ಕಾಲುಗಳಲ್ಲಿ ನೋವು ಕಾಣಿಸುವ ಅವಕಾಶ ಇರುತ್ತದೆ.

ವೃಷಭ ರಾಶಿ :-ಈ ಶನಿ ಗ್ರಹದ ಅಸ್ತಮದಿಂದ ಕೆಲಸದಲ್ಲಿ ಹೆಚ್ಚಿನ ಏರಿಳಿತವನ್ನು ಸಾಮಾನ್ಯವಾಗಿ ಕಾಣಬಹುದು. ಹೊಸ ಕೆಲಸವನ್ನು ಆಯ್ಕೆ ಮಾಡಲು ಈ ಸಮಯ ಅನುಕೂಲಕರ. ಹೊಸ ಕೆಲಸದ ಆಯ್ಕೆ ಹೆಚ್ಚು ತೃಪ್ತಿಯನ್ನು ತರುತ್ತದೆ. ವೃತ್ತಿಜೀವನದಲ್ಲಿ ತೊಂದರೆಗಳು ಎದುರಾಗುವ ಸಂಭವವಿದೆ. ಕೆಲಸದಲ್ಲಿ ಕಠಿಣ ಪರಿಶ್ರಮಕ್ಕೆ ತಕ್ಕಂತೆ ಹೆಚ್ಚಿನ ಆದ್ಯತೆ ಮತ್ತು ಮನ್ನಣೆ ಸಿಗುವುದಿಲ್ಲ. ಸಹೋದ್ಯೋಗಿಗಳಿಂದ ಕೂಡ ವಿರೋಧ ವ್ಯಕ್ತವಾಗುವ ಸಾಧ್ಯತೆ ಇರುತ್ತದೆ.

ಮಿಥುನ ರಾಶಿ :-ಶನಿ ಗ್ರಹದ ಅಸ್ತಮದ ಸಮಯದಲ್ಲಿ ಪ್ರಯಾಣ, ವಿದೇಶಿ ಮೂಲಗಳಿಂದ ಪ್ರಯೋಜನಗಳು ಮತ್ತು ಉತ್ತಮ ಅವಕಾಶಗಳು ಸಿಗುತ್ತದೆ. ಜೀವನದಲ್ಲಿ ಹೆಚ್ಚಿನ ಗೆಲುವು ಸಾಧಿಸುವ ಅವಕಾಶ ಒದಗಿ ಬರುತ್ತದೆ. ಕೆಲಸಕ್ಕೆ ಸಂಬಂಧ ಪಟ್ಟಂತೆ ಹೆಚ್ಚಿನ ಆದಾಯ ಗಳಿಕೆ ಮಾಡಬಹುದು. ಮಾಡುವ ಕೆಲಸವನ್ನು ಗುರುತಿಸಿ ಪುರಸ್ಕಾರ ನೀಡುವರು. ಈ ಸಮಯದಲ್ಲಿ ಆತ್ಮವಿಶ್ವಾಸ ಹೆಚ್ಚಾಗಿ ಹೊಸ ಶಕ್ತಿ ಮತ್ತು ಚೈತನ್ಯವನ್ನು ಕೊಡುತ್ತದೆ. ಉದ್ಯೋಗದ ಬಗ್ಗೆ ಉತ್ಸಾಹ ಹೆಚ್ಚಾಗುತ್ತದೆ. ಹಣದ ಗಳಿಗೆ ಉತ್ತಮವಾಗುತ್ತದೆ ಮತ್ತು ಅರ್ಥಿಕ ಸ್ಥಿತಿ ಅಭಿವೃದ್ಧಿ ಆಗುತ್ತದೆ.

ಕಟಕ ರಾಶಿ :-ಪಿತ್ರಾರ್ಜಿತ ಆಸ್ತಿಯ ಮೂಲಕ ಹಣ ಲಭಿಸುತ್ತದೆ. ಉದ್ಯೋಗದಲ್ಲಿ ಬದಲಾವಣೆ ಎದುರಿಸುವ ಸಾಧ್ಯತೆ ಇದೆ. ಈ ಸಮಯದಲ್ಲಿ ಮೇಲಿನ ಸ್ಥಾನಕ್ಕೆ ಬಡ್ತಿ ಪಡೆಯುವ ಅವಕಾಶ ಇರುತ್ತದೆ. ಈ ಅವಧಿಯಲ್ಲಿ ಸಂಗಾತಿ ಜೊತೆಗೆ ಸೌಹಾರ್ದಯುತ ಸಂಬಂಧವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಕಾಲುಗಳಲ್ಲಿ ನೋವು, ಗ್ಯಾಸ್ ಸಮಸ್ಯೆ ಕಾಡಬಹುದು.

ಸಿಂಹ ರಾಶಿ :– ಈ ಕಾಲದಲ್ಲಿ ಸಿಂಹ ರಾಶಿಯವರ ಗೆಳೆಯರು ಮಾಡುವ ಕೆಲಸಕ್ಕೆ ಬೆಂಬಲವಾಗಿ ನಿಲ್ಲುವರು. ಈ ಸಮಯದಲ್ಲಿ ಬಂಡವಾಳವನ್ನು ಹೂಡಿಕೆ ಮಾಡಿ ಅದರಿಂದ ಲಾಭವನ್ನು ಪಡೆಯುವ ಅವಕಾಶ ಇದೆ. ಈ ಸಮಯದಲ್ಲಿ ದೂರದ ಪ್ರಯಾಣ ಮಾಡವ ಸಾಧ್ಯತೆ ಇದೆ. ಕೆಲಸದ ಸ್ಥಳದಲ್ಲಿ ಕಾರ್ಯಕ್ಷಮತೆ ಕುಸಿಯುವ ಭೀತಿ ಎದುರಾಗಬಹುದು. ಆರೋಗ್ಯ ಉತ್ತಮವಾಗಿ ಇರುತ್ತದೆ.

ಕನ್ಯಾ ರಾಶಿ :- ಶನಿಯ ಅಸ್ತಮದಿಂದ ಕನ್ಯಾ ರಾಶಿಯವರಿಗೆ ಗೆಲುವು ಸಾಧಿಸಲು ವಿಳಂಬ ಅಗುತ್ತದೆ. ಮಕ್ಕಳು ಮತ್ತು ಹಣದ ಬಗ್ಗೆ ಕಾಳಜಿ ಇರುತ್ತದೆ. ಈ ಸಮಯದಲ್ಲಿ ಸಾಲವನ್ನು ಪಡೆಯುವ ಸಾಧ್ಯತೆ ಹೆಚ್ಚು ಇರುತ್ತದೆ. ಕೆಲಸದಲ್ಲಿ ಗುರಿಯ ಒತ್ತಡ ಇರುತ್ತದೆ. ಸಹೋದ್ಯೋಗಿಗಳ ಜೊತೆ ಭಿನ್ನಾಭಿಪ್ರಾಯ ಎದುರಾಗುತ್ತದೆ. ವ್ಯವಹಾರ ಕ್ಷೇತ್ರದಲ್ಲಿ ಇದ್ದವರಿಗೆ ಲಾಭವನ್ನು ಗಳಿಸಲು ಕಷ್ಟವಾಗುತ್ತದೆ ಮತ್ತು ನಷ್ಟವನ್ನು ಅನುಭವಿಸುವ ಸಾಧ್ಯತೆ ಇದೆ.

ತುಲಾ ರಾಶಿ :-ತುಲಾ ರಾಶಿಯವರಿಗೆ ಈ ಸಮಯದಲ್ಲಿ ಭವಿಷ್ಯದ ಕುರಿತು ಹೆಚ್ಚು ಕಾಳಜಿ ಇರುತ್ತದೆ. ವ್ಯವಹಾರದ ಕುರಿತು ಯೋಚನೆಯಲ್ಲಿ ಇದ್ದರೆ ಉತ್ತಮ ಫಲ ಮತ್ತು ಗೆಲುವು ಸಿಗುತ್ತದೆ. ಪ್ರೀತಿಯಲ್ಲಿ ಕೊರತೆಯನ್ನು ಅನುಭವಿಸುವ ಸಾಧ್ಯತೆ ಇದೆ.ಉದ್ಯೋಗವನ್ನು ಬದಲಾವಣೆ ಮಾಡುವ ಯೋಚನೆ ಮನಸ್ಸಿಗೆ ಬರುತ್ತದೆ. ಕಾಲುಗಳಲ್ಲಿ ನೋವು ಕಾಣಿಸಿಕೊಳ್ಳಬಹುದು.

ವೃಶ್ಚಿಕ ರಾಶಿ :– ಈ ಕಾಲದಲ್ಲಿ ವೃಶ್ಚಿಕ ರಾಶಿಯವರ ಜೀವನದಲ್ಲಿ ನೆಮ್ಮದಿಗೆ ಕೊರತೆ ಎದುರಾಗುವ ಸಂಭವವಿದೆ. ಮನೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ತಾಯಿಯ ಆರೋಗ್ಯದ ಸಲುವಾಗಿ ಸ್ವಲ್ಪ ಹಣವನ್ನು ಖರ್ಚು ಮಾಡುವ ಸಾಧ್ಯತೆ ಇದೆ.ಕಚೇರಿಯಲ್ಲಿ ಹೆಚ್ಚಿನ ಕೆಲಸದ ಒತ್ತಡ ಇರುತ್ತದೆ. ಹಿರಿಯರ ಕೋಪವನ್ನು ಎದುರಿಸುವ ಸಂಭವ ಹೆಚ್ಚಾಗಿರುತ್ತದೆ. ಬೆನ್ನು ನೋವಿನ ಸಮಸ್ಯೆ ಕಾಡಬಹುದು.

ಧನಸ್ಸು ರಾಶಿ :-ಈ ಸಮಯದಲ್ಲಿ ಧನು ರಾಶಿಯವರು ಮಾಡುವ ಪ್ರಯತ್ನಗಳಲ್ಲಿ ವಿಳಂಬವನ್ನು ಎದುರಿಸ ಬೇಕಾಗುತ್ತದೆ. ಸಂವಹನ ಸಂಬಂಧಿತ ಸಮಸ್ಯೆಗಳನ್ನು ಎದುರಾಗಬಹುದು.ಕೆಲಸದ ಒತ್ತಡವು ಹೆಚ್ಚು ಭರವಾಗಬಹುದು. ವಿದೇಶದಲ್ಲಿ ವ್ಯವಹಾರ ಮಾಡುವ ಜನರು ಹೆಚ್ಚಿನ ಲಾಭವನ್ನು ಗಳಿಕೆ ಮಾಡಿ ಪ್ರಗತಿ ಹೊಂದಬಹುದು. ಸಂಗಾತಿ ಜೊತೆಗಿನ ಸಂಬಂಧ ಹೆಚ್ಚು ಸುಖಕರವಾಗಿ ಇರುವುದಿಲ್ಲ.

ಮಕರ ರಾಶಿ :-ಸಂಸಾರದಲ್ಲಿ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಅಭದ್ರತೆಯ ಭಾವನೆ ಮೂಡುತ್ತದೆ. ಉದ್ಯೋಗದಲ್ಲಿ ಬದಲಾವಣೆ ಕಾಣಬಹುದು. ಸಂಗಾತಿ ಜೊತೆಗೆ ವಿವಾದಗಳು ಮತ್ತು ವಾದಗಳು ನಡೆಯುವ ಸಂಭವ ಇದೆ. ಕಣ್ಣಿನ ಕಿರಿಕಿರಿ ಮತ್ತು ಹಲ್ಲು ನೋವು ಕಾಡಬಹುದು.

ಕುಂಭ ರಾಶಿ :-ಶನಿಯ ಅಸ್ತಮದ ಪ್ರಭಾವದಿಂದ, ಆರೋಗ್ಯದ ಕಡೆ ಗಮನ ಕೊಡುವುದು ಮತ್ತು ಕಾಳಜಿ ವಹಿಸುವ ಅನಿವಾರ್ಯತೆ ಇರುತ್ತದೆ. ವ್ಯವಹಾರಕ್ಕೆ ಸಂಬಂಧ ಪಟ್ಟಂತೆ ಸವಾಲುಗಳು ಎದುರಾಗಬಹುದು. ಕೆಲಸವನ್ನು ಬದಲಾವಣೆ ಮಾಡುವ ಸಾಧ್ಯತೆ ಇರುತ್ತದೆ. ಈ ಅವಧಿಯಲ್ಲಿ ಹಣದ ನಷ್ಟವನ್ನು ಅನುಭವಿಸುವ ಸಂಭವ ಹೆಚ್ಚಾಗಿರುತ್ತದೆ. ಪ್ರಯಾಣದ ಸಮಯದಲ್ಲಿ ನಷ್ಟ ಆಗುವ ಸಾಧ್ಯತೆ ಇದೆ. ಸಂಗಾತಿ ಜೊತೆಗೆ ಸಂಘರ್ಷ ಎದುರಿಸಬೇಕಾಗುತ್ತದೆ.

ಮೀನ ರಾಶಿ :-ಈ ಸಮಯದಲ್ಲಿ ಮೀನ ರಾಶಿಯವರಿಗೆ ತಾಳ್ಮೆ ಕಡಿಮೆ ಇರುತ್ತದೆ. ಅದರಿಂದ ಹೆಚ್ಚು ಉತ್ತಮ ಅವಕಾಶಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಈ ಸಮಯದಲ್ಲಿ ಹೆಚ್ಚು ಶ್ರಮಪಟ್ಟು ಕೆಲಸ ಮಾಡಿದರು ಅದರಲ್ಲಿ ಗೆಲವು ಸಾಧಿಸಲು ಆಗುವುದಿಲ್ಲ. ಭವಿಷ್ಯದ ಬಗ್ಗೆ ಹೆಚ್ಚಿನ ಚಿಂತೆ ಕಾಡುತ್ತದೆ. ವ್ಯವಹಾರದಲ್ಲಿ ನಷ್ಟ ಆಗುವ ಸಾಧ್ಯತೆ ಇರುತ್ತದೆ. ಶನಿಯ ಅಸ್ತಮ ಅವಧಿ ಈ ರಾಶಿಯವರ ರೋಗ ನಿರೋಧಕ ಶಕ್ತಿಯ ಮೇಲೆ ಹೆಚ್ಚು ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ. ಇವು ರಾಶಿಗಳ ಗೋಚಾರ ಫಲಗಳು ಅಷ್ಟೇ, ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!