ಗ್ರಹಗಳು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಚಾರ ಮಾಡುವ ಪರಿಣಾಮ ಅದು ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳ ಚಲನೆ ಫೆಬ್ರವರಿ ತಿಂಗಳಿನಲ್ಲಿ ವಿಶೇಷವಾಗಿ ಗಮನಾರ್ಹವಾಗಿದೆ. ಈ ಮಾಸದಲ್ಲಿ, ರವಿ ಗ್ರಹ, ಶುಕ್ರ ಗ್ರಹ, ಬುಧ ಗ್ರಹ ಮತ್ತು ಚಂದ್ರ ಗ್ರಹ ಈ ಎಲ್ಲಾ ಗ್ರಹಗಳ ಸಂಯೋಗದಿಂದ ಚತುರ್ಗ್ರಾಹಿ ಯೋಗ ಸೃಷ್ಟಿ ಆಗುತ್ತದೆ. 2024ರ ಫೆಬ್ರವರಿ ತಿಂಗಳಿನಲ್ಲಿ ರವಿ ಗ್ರಹ ಶುಕ್ರ ಗ್ರಹ, ಬುಧ ಗ್ರಹ ಮತ್ತು ಚಂದ್ರ ಗ್ರಹ ಈ ಎಲ್ಲಾ ನಾಲ್ಕು ಗ್ರಹಗಳ ಸಂಯೋಜನೆ ಮಕರ ರಾಶಿಯಲ್ಲಿ ಸೃಷ್ಟಿಯಾಗುತ್ತದೆ. ಇದರಿಂದ ಚತುರ್ಗ್ರಾಹಿ ಯೋಗದ   ರೂಪುಗೊಳ್ಳುತ್ತದೆ.

ರವಿ ಗ್ರಹ ಫೆಬ್ರವರಿ ತಿಂಗಳಿನ 13ನೇ ತಾರೀಖು ಮಧ್ಯಾಹ್ನ 03:31ಕ್ಕೆ ಮಕರ ರಾಶಿಗೆ ಪ್ರವೇಶ ಮಾಡುತ್ತದೆ. ಶುಕ್ರ ಗ್ರಹ ಫೆಬ್ರವರಿ ತಿಂಗಳಿನ 12ನೇ ತಾರೀಖು ಬೆಳಿಗ್ಗೆ 04:41ಕ್ಕೆ ಮಕರ ರಾಶಿಗೆ ಪ್ರವೇಶ  ಮಾಡುತ್ತದೆ. ಫೆಬ್ರವರಿ ತಿಂಗಳಿನಲ್ಲಿ 1ನೇ ತಾರೀಖು ಮಧ್ಯಾಹ್ನ 02:08ಕ್ಕೆ ಬುಧ ಗ್ರಹ ಅದೇ ರಾಶಿಗೆ ಪ್ರವೇಶ ಮಾಡಿ ದ್ದಾನೆ. ಚಂದ್ರ ಗ್ರಹ ಫೆಬ್ರವರಿ ತಿಂಗಳಿನ 11ನೇ ತಾರೀಖು ಮಕರ ರಾಶಿಯನ್ನು ಪ್ರವೇಶ ಮಾಡಿದ್ದಾನೆ. ಈ ಯೋಗವು ಎಲ್ಲಾ 12 ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಈ ಸಮಯದಲ್ಲಿ 3 ರಾಶಿಗಳು ತುಂಬ ಅದೃಷ್ಟವನ್ನು ಪಡೆಯುವರು. ಆ ಅದೃಷ್ಟವಂತ ರಾಶಿಗಳು ಯಾವುದು ಎಂದು ನೋಡೋಣ.

ಮೇಷ ರಾಶಿ :– ಈ ಚತುರ್ಗ್ರಾಹಿ ಯೋಗದ ಪರಿಣಾಮ ವೃತ್ತಿಜೀವನ ಮತ್ತು ವ್ಯವಹಾರ ಹೆಚ್ಚಿನ ಗೆಲುವು ಮತ್ತು ಪ್ರಗತಿ ತಂದುಕೊಡುತ್ತದೆ. ವೃತ್ತಿಪರರು ಮೇಲಿನ ಸ್ಥಾನಕ್ಕೆ ಹೆಚ್ಚಿನ ಬಡ್ತಿ ಪಡೆಯುವರು. ಉದ್ಯಮಿಗಳು ಅವರ ಕ್ಷೇತ್ರಗಳಲ್ಲಿ ಯಶಸ್ಸನ್ನು ಅಪೇಕ್ಷಿಸಬಹುದು. ಪ್ರತಿಸ್ಪರ್ಧಿಗಳ ಜೊತೆಗೆ ಸ್ಪರ್ಧಿಸುವ ಸಾಮರ್ಥ್ಯ ಹೊಂದಿರುವರು ಮತ್ತು ಅದು ಹೆಚ್ಚಿನ ಲಾಭ ತರುತ್ತದೆ. ಉದ್ಯೋಗ ಆಕಾಂಕ್ಷಿಗಳು ಈ ಸಮಯದಲ್ಲಿ ನಿರೀಕ್ಷಿತ ಉದ್ಯೋಗ ಅವಕಾಶಗಳನ್ನು ಕಾಣಬಹುದು, ಇದರ ಕಾರಣ ತೃಪ್ತಿ ಮತ್ತು ಸಂತೃಪ್ತಿಯ ಭಾವನೆ ಮೂಡುತ್ತದೆ. ಆದಾಯವನ್ನು ಅಧಿಕ ಮಾಡಲು ಬೇರೆ ಬೇರೆ ರೀತಿಯ ದಾರಿಗಳು ಸೃಷ್ಟಿ ಆಗುತ್ತವೆ. ಇದು ಜೀವನಶೈಲಿಯನ್ನು ಗಮನಾರ್ಹವಾಗಿ ಹೆಚ್ಚು ಮಾಡುತ್ತದೆ. ದೃಢವಾದ ಆರ್ಥಿಕ ಸ್ಥಿತಿಯ ಜೊತೆಗೆ, ಸಂಸಾರದ ಎಲ್ಲಾ ಅಗತ್ಯಗಳನ್ನು ಪೂರೈಕೆ ಮಾಡಲು ಸಜ್ಜಾಗುವರು, ಆ ಮೂಲಕ ಅವರ ತೃಪ್ತಿ ಮತ್ತು ಅನುಮೋದನೆ ಹೆಚ್ಚಾಗುತ್ತದೆ.

ವೃಷಭ ರಾಶಿ :-ವೃಷಭ ರಾಶಿಯವರಿಗೆ, ಚತುರ್ಗ್ರಾಹಿ ಯೋಗ ಹೆಚ್ಚು ಪ್ರಭಾವ ಬೀರುವ ಸಾಧ್ಯತೆ ಇದೆ. ಗಳಿಕೆಯಲ್ಲಿ ಹೆಚ್ಚಳವನ್ನು ಕಾಣುವ ಸಾಧ್ಯತೆ ಇರುತ್ತದೆ, ವಿಶೇಷವಾಗಿ ಈ ಹಿಂದೆ ಮಾಡಿದ ಹೂಡಿಕೆಯಲ್ಲಿ, ಈಗ ಲಾಭಗಳನ್ನು ಪಡೆಯುವ ಸಂಭವ ಇದೆ. ಈ ಯೋಗದಿಂದ ಗಳಿಕೆ ಹೆಚ್ಚಾಗುವ ಕಾರಣ, ಈ ಸಮಯದಲ್ಲಿ ಶುಭ ಫಲಗಳು ಲಭಿಸಿ ಆರ್ಥಿಕವಾಗಿ ಸಮೃದ್ದಿ ತರುತ್ತದೆ. ನೂತನ ಉದ್ಯಮವನ್ನು ಆರಂಭಿಸುವ ಎಲ್ಲಾ ಅನುಕೂಲ ಆಗುತ್ತದೆ ಮತ್ತು ಅದರಿಂದ ಹೆಚ್ಚು ಲಾಭ ಮತ್ತು ಪ್ರಗತಿ ದೊರಕುತ್ತದೆ. ಮಾಡುವ ಎಲ್ಲ ಕೆಲಸದಲ್ಲಿ ಗೆಲುವು ಸಿಗುತ್ತದೆ, ವೃತ್ತಿಪರ ಕೆಲಸ ಮಾಡುವ ಜನರಿಗೆ ಪ್ರಶಂಸೆಗಳು ಪ್ರಾಪ್ತಿಯಾಗುತ್ತದೆ ಹಾಗೂ ಮೇಲಿನ ಅಧಿಕಾರಿಗಳು ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತ ಪಡಿಸುವರು. ಸಹೋದ್ಯೋಗಿಗಳಿಂದ ಹೆಚ್ಚಿನ ಬೆಂಬಲ ಸಿಗುತ್ತದೆ ಹಾಗೂ ಮೇಲಿನ ಸ್ಥಾನಕ್ಕೆ ಬಡ್ತಿ ಪಡೆಯುವ ಸಾಧ್ಯತೆ ಇದೆ. ವೃತ್ತಿಜೀವನದಲ್ಲಿ ಯಶಸ್ಸು ಸಿಗುತ್ತದೆ ಈ ಅವಧಿ ಷೇರು ಮಾರುಕಟ್ಟೆಗೆ ಪ್ರವೇಶ ಮಾಡುವವರಿಗೆ ಮತ್ತು ಲಾಟರಿ ಖರೀದಿ ಮಾಡುವ ಜನರಿಗೆ ಕೂಡ ಒಳ್ಳೆಯ ಫಲ ತರುತ್ತದೆ.

ಧನಸ್ಸು ರಾಶಿ :-ಧನು ರಾಶಿಯವರಿಗೆ ಚತುರ್ಗ್ರಾಹಿ ಯೋಗ ಸಂಪತ್ತು ತಂದುಕೊಡುತ್ತದೆ, ಇದು ಹೆಚ್ಚಿನ ಲಾಭಗಳನ್ನು ಕೊಡುತ್ತದೆ. ಕೆಲಸಗಳನ್ನು ಕೈಗೊಳ್ಳುವ ಎಲ್ಲಾ ಪ್ರಯತ್ನಗಳಲ್ಲಿ ಗೆಲುವು ನಿಶ್ಚಿತವಾಗಿ ಸಿಗುತ್ತದೆ. ಈ ತಿಂಗಳು ಅನಿರೀಕ್ಷಿತ ಧನ ಆಗಮನವಾಗುತ್ತದೆ. ಅದರಿಂದ, ಆರ್ಥಿಕ ಸ್ಥಿತಿ ಉತ್ತಮವಾಗುವ ಸಾಧ್ಯತೆ ಇರುತ್ತದೆ. ವೃತ್ತಿಜೀವನದಲ್ಲಿ ಹೂಡಿಕೆ ಮಾಡಿದ ಪ್ರಯತ್ನಗಳು ಫಲ ಕೊಡುವ ಹಾದಿಯಲ್ಲಿ ಇವೆ. ಕೆಲಸ ಮಾಡುವ ಕ್ಷೇತ್ರದ ಪ್ರಭಾವಿ ವ್ಯಕ್ತಿಗಳ ಜೊತೆ ಒಳ್ಳೆಯ ಬಾಂಧವ್ಯ ಬೆಳೆಸಲು ಇದು ಸಕಾಲ.

ಈ ತಿಂಗಳು ವ್ಯಕ್ತಿತ್ವದ ಬೆಳವಣಿಗೆಗೆ ಸಾಕ್ಷಿಯಾಗಿ ಇರುತ್ತದೆ. ಇದು ವೈಯಕ್ತಿಕ ಅಭಿವೃದ್ದಿಯನ್ನು ಸಹ ಸಮೃದ್ದಿ ಮಾಡುತ್ತದೆ. ಆರ್ಥಿಕ ಸ್ಥಿರತೆ ಜೀವನದ ಸೌಕರ್ಯಗಳನ್ನು ಸಂಪೂರ್ಣವಾಗಿ ಅನುಭವಿಸಲು ಸಹಾಯ ಮಾಡುತ್ತದೆ. ಈ ಅವಧಿ ಹೆಚ್ಚಿನ ಸಂತೃಪ್ತಿಯನ್ನು ಕೊಡುತ್ತದೆ. ಈ ರಾಶಿಯವರ ಆರೋಗ್ಯ ಕೂಡ ಉತ್ತಮವಾಗಿ ಇರುತ್ತದೆ. ಇವು ರಾಶಿಗಳ ಗೋಚಾರ ಫಲಗಳು ಅಷ್ಟೇ, ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

By

Leave a Reply

Your email address will not be published. Required fields are marked *