Shani and Guru Sanchara 2024: ಗುರು ಮತ್ತು ಶನಿ ಇವೆರಡು ಕೂಡ ಜ್ಯೋತಿಷ್ಯ ಶಾಸ್ತ್ರದಲ್ಲಿ ಬಹಳ ಪ್ರಾಮುಖ್ಯತೆ ಹೊಂದಿರುವ ಗ್ರಹಗಳು. ಮುಂದಿನ ವರ್ಷ ಮೇ ತಿಂಗಳಿನಲ್ಲಿ ಗುರುದೇವ ವೃಷಭ ರಾಶಿಗೆ ಪ್ರವೇಶ ಮಾಡಲಿದ್ದಾನೆ, ಹಾಗೆಯೇ ಶನಿದೇವರು ಮತ್ತು ಗುರುದೇವನ ಸಂಚಾರದಿಂದ ಕೆಲವು ರಾಶಿಗಳ ಮೇಲೆ ವಿಶೇಷ ಫಲ ಸಿಗಲಿದೆ. ಈ ಎರಡು ಗ್ರಹಗಳ ಸಂಚಾರ 4 ರಾಶಿಗಳ ಮೇಲೆ ವಿಶೇಷ ಪರಿಣಾಮ ಬೀರುತ್ತದೆ. ಶನಿದೇವರು ಈಗ ಕುಂಭ ರಾಶಿಯಲ್ಲಿದ್ದು, ರಾಹು ಮೀನ ರಾಶಿಯಲ್ಲಿ, ಕೇತು ಕನ್ಯಾ ರಾಶಿಯಲ್ಲಿದ್ದಾರೆ. ಮುಂದಿನ ವರ್ಷ ಶನಿ ಮತ್ತು ಗುರು ವೃಷಭ ರಾಶಿಯಲ್ಲಿ ಸಂಚರಿಸುವ ಮೂಲಕ 4 ರಾಶಿಗಳಿಗೆ ವಿಶೇಷ ಫಲ ನೀಡಲಿದ್ದಾರೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಗುರು ಮತ್ತು ಶನಿದೇವರ ಸಂಚಾರದಿಂದ ಈ ರಾಶಿಯವರಿಗೆ ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಮುಂದಿನ ವರ್ಷ ಅತ್ಯಂತ ಯಶಸ್ಸು ಗಳಿಸುತ್ತೀರಿ. ಗುರುದೇವನ ಸ್ಥಾನ ಬದಲಾವಣೆ ಇಂದ ನಿಮಗೆ ಹಣಕಾಸಿನ ಅನುಕೂಲ ಸಿಗುತ್ತದೆ. ಹೊಸ ಉದ್ಯೋಗ ಶುರು ಮಾಡುವುದಕ್ಕೆ ಇದು ಒಳ್ಳೆಯ ಸಮಯ. ಈ ವೇಳೆ ಅದೃಷ್ಟ ಹೆಚ್ಚಾಗುತ್ತದೆ.

ಕರ್ಕಾಟಕ ರಾಶಿ :- ಗುರು ಮತ್ತು ಶನಿದೇವರ ಸಂಚಾರ ಈ ರಾಶಿಯವರಿಗೆ ಶುಭ ಸಮಯ ತರುತ್ತದೆ. ಸಾಲದ ಸಮಸ್ಯೆಗಳು ಸರಿ ಹೋಗುತ್ತದೆ. ಉದ್ಯೋಗದಲ್ಲಿ ಹೆಚ್ಚು ಗೌರವ ಪಡೆಯುತ್ತೀರಿ. ನಿಮ್ಮ ಆಸೆಗಳು ಈ ವೇಳೆ ನೆರವೇರುತ್ತದೆ.

ವೃಶ್ಚಿಕ ರಾಶಿ :- ಗುರು ಮತ್ತು ಶನಿದೇವರ ಸಂಚಾರದಿಂದ ಹಿರಿಯರ ಆಸ್ತಿ ವಿಚಾರದಲ್ಲಿ ಒಳ್ಳೆಯ ಸುದ್ದಿ ಕೇಳುತ್ತೀರಿ. ಕೆಲಸ ಮಾಡುತ್ತಿರುವವರಿಗೆ ಬಡ್ತಿ ಸಿಗುತ್ತದೆ. ಸಂಗಾತಿಯ ಜೊತೆಗೆ ಸಂತೋಷದ ಕ್ಷಣ ಕಳೆಯುತ್ತೀರಿ. ಇದರಿಂದ ಒಳ್ಳೆಯ ಅನುಭವ ಸಿಗುತ್ತದೆ..

ಮೀನಾ ರಾಶಿ :- ಶನಿ ಮತ್ತು ಗುರುದೇವನ ಕೃಪೆಯಿಂದ ಹೆಚ್ಚಿನ ಅನುಕೂಲ ಪಡೆಯುತ್ತೀರಿ, ನಿಮ್ಮ ಎಲ್ಲಾ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ನಿಮ್ಮ ನಿರ್ಧಾರಗಳು ಯಶಸ್ಸು ತರುತ್ತದೆ. ಉದ್ಯೋಗದಲ್ಲಿ ಗುರಿ ತಲುಪುತ್ತೀರಿ.

By AS Naik

Leave a Reply

Your email address will not be published. Required fields are marked *