ಆತ್ಮೀಯ ಓದುಗರೇ ಈ ಲೇಖನದ ಮೂಲಕ ದೇವರು ದೇವಾಲಯ ಕುರಿತು ಒಂದಿಷ್ಟು ಮಹಿಟೋಲಿಯನ್ನು ತಿಳಿದುಕೊಳ್ಳೋಣ ತ್ರಿಲೋಕಗಳನ್ನು ಪಾಲಿಸಿ ರಕ್ಷಿಸುತ್ತಿರುವ ತ್ರಿಮೂರ್ತಿಗಳಲ್ಲಿ ಲಯಕಾರನಾದ ಮಹಾದೇವನನ್ನು ಅದೆಷ್ಟೋ ಕೋಟಿ ಸಂವತ್ಸರಗಳಿಂದ ಭಕ್ತರು ಶ್ರದ್ಧಾಭಕ್ತಿಯಿಂದ ಆರಾಧಿಸಿಕೊಂಡು ಬಂದಿದ್ದಾರೆ. ಸಾಮಾನ್ಯವಾಗಿ ಶಿವ ಎಂದ ಕೂಡಲೇ ನಮ್ಮ ಮನಸ್ಸಿಗೆ ಬರುವುದು ಲಿಂಗರೂಪಿಯಾದ ಶಿವ ಇಲ್ಲವೇ ನಟರಾಜನ ರೂಪ ಇವೆರಡನ್ನು ಬಿಟ್ಟರೆ ಅಪರೂಪಕ್ಕೆ ಎಂಬಂತೆ ನಿಂತಿರುವ ಅಥವಾ ತಪೋ ಭಂಗಿಯಲ್ಲಿರುವ ಈಶ್ವರನ ದೇವಾಲಯಗಳನ್ನು ನಾವು ನೋಡಿರುತ್ತೇವೆ. ಆದರೆ ನಮ್ಮ ದಕ್ಷಿಣಭಾರತದಲ್ಲಿ ಒಂದು ಅತಿ ಅಪರೂಪವಾದ ವಿಶಿಷ್ಟವಾದ ಶಿವನ ಆಲಯವಿದೆ.ಇಲ್ಲಿ ಮಹಾಶಿವ ತಲೆಕೆಳಗಾಗಿ ಅಂದರೆ ಶೀರ್ಷಾಸನ ಹಾಕಿರುವಂತೆ ದರ್ಶನವನ್ನು ನೀಡುತ್ತಿದ್ದಾನೆ.

ಈ ವಿಶಿಷ್ಟವಾದ ಆಲಯದಲ್ಲಿ ಶಿವನ ತಲೆಯು ಭೂಮಿಯ ಕಡೆ ಮುಖ ಮಾಡಿದ್ದರೆ ಆತನ ಪಾದಗಳು ಆಕಾಶದ ಕಡೆ ಮುಖ ಮಾಡಿದೆ ಇಂತಹ ವಿಸ್ಮಯಕಾರಿ ದೇವಾಲಯವಿರುವುದು ನಮ್ಮ ನೆರೆಯ ರಾಜ್ಯ ಆಂಧ್ರಪ್ರದೇಶದ ಭೀಮಾವರಂನ ಯನಮದುರು ಎಂಬಲ್ಲಿ. ಈ ದೇವರನ್ನು ನೋಡಲು ಭಕ್ತಾದಿಗಳು ಕೂಡ ಹರಸಾಹಸ ಪಡಬೇಕಾಗುತ್ತದೆ ಈಶ್ವರ ನನ್ನ ಶಕ್ತೇಶ್ವರ ಎಂದು ಕರೆಯಲಾಗುತ್ತದೆ. ಈ ಶೀರ್ಷಾಸನದ ಪರಮೇಶ್ವರನ ಪಕ್ಕದಲ್ಲಿಯೆ ಪಾರ್ವತಿಯ ವಿಗ್ರಹವಿದ್ದು ಆಕೆಯ ಮಡಿಲಲ್ಲಿ ಹಸುಗೂಸ ಕಾರ್ತಿಕೇಯನನ್ನು ಕಾಣಬಹುದಾಗಿದೆ. ಶಕ್ತಿ ಮತ್ತು ಈಶ್ವರ ಜೊತೆಯಾಗಿ ನೆಲೆಸಿರುವುದರಿಂದ ಈ ದೇವಾಲಯಕ್ಕೆ ಶಕ್ತೇಶ್ವರ ಎನ್ನುವ ಹೆಸರು ಬಂದಿದೆ. ಈ ದೇವಾಲಯದ ಹೊರಗೆ ಪರಮಪವಿತ್ರ ಕಲ್ಯಾಣಿಯ ಸಹ ಇದೆ.

ಶಿವ-ಪಾರ್ವತಿಯರು ಅನೇಕ ಯುಗಗಳಿಂದ ಇಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗುತ್ತದೆ. ಈ ಊರಿಗೆ ಯನಮದುರು ಎಂಬ ಹೆಸರು ಬರಲು ಒಂದು ಪುರಾಣ ಕಥೆಯಿದೆ. ಹಿಂದೆ ಶಂಭೂರಾ ಎಂಬ ರಾಕ್ಷಸನು ಶಿವನನ್ನು ತನ್ನ ತಪಸ್ಸಿನಿಂದ ಒಲಿಸಿಕೊಂಡು ತನಗೆ ಯಮಧರ್ಮ ನಿಂದ ಮಾತ್ರವೇ ಮರಣ ಸಂಭವಿಸಬೇಕು ಎಂಬ ವರವನ್ನು ಪಡೆದುಕೊಳ್ಳುತ್ತಾನೆ. ವರದ ಪರಿಣಾಮ ಕೊಬ್ಬಿದ ಈತನು ಋಷಿಮುನಿಗಳಿಗೆ ಉಪಟಳವನ್ನು ಕೊಡುವುದಕ್ಕೆ ಪ್ರಾರಂಭಿಸುತ್ತಾನೆ. ಆಗ ಋಷಿಮುನಿಗಳು ಯಮಧರ್ಮರಾಯನಿಗೆ ಈ ರಾಕ್ಷಸನನ್ನು ಸಂಹರಿಸಬೇಕು ಎಂದು ಪ್ರಾರ್ಥನೆಯನ್ನು ಮಾಡಿಕೊಳ್ಳುತ್ತಾರೆ. ಆಗ ಯಮಧರ್ಮರಾಯನು ರಾಕ್ಷಸರ ಮೇಲೆ ಯುದ್ಧವನ್ನು ಸಾರುತ್ತಾನೆ. ಯುದ್ಧದಲ್ಲಿ ಯಮಧರ್ಮರಾಯನಿಗೆ ಸೋಲು ಉಂಟಾಗುತ್ತದೆ ಸೋಲಿನಿಂದ ಕಂಗೆಟ್ಟ ಯಮಧರ್ಮರಾಯನು ಶಿವನನ್ನು ಸಹಾಯಕ್ಕಾಗಿ ಯಾಚಿಸುತ್ತಾನೆ.

ಆ ಸಮಯದಲ್ಲಿ ಶಿವನು ಕೈಲಾಸದಲ್ಲಿ ಶೀರ್ಷಾಸನ ಭಂಗಿಯಲ್ಲಿ ಧ್ಯಾನದಲ್ಲಿ ಮಗ್ನನಾಗಿರುತ್ತಾನೆ. ಎಷ್ಟು ಹೊತ್ತಾದರೂ ಶಿವನು ಯಮಧರ್ಮರಾಯನ ಮುಂದೆ ಪ್ರತ್ಯಕ್ಷವಾಗುವುದಿಲ್ಲ ವಿಷಯದ ತೀವ್ರತೆಯನ್ನು ಅರಿತ ಪಾರ್ವತಿದೇವಿಯು ತನ್ನ ಶಕ್ತಿಯಿಂದ ಧ್ಯಾನ ಸ್ಥಿತಿಯಲ್ಲಿದ್ದ ಶಿವನನ್ನ ಭೂಮಿಗೆ ಕರೆತರುತ್ತಾಳೆ. ರಾಕ್ಷಸನ ಸಂಹಾರಕ್ಕಾಗಿ ಯಮನಿಗೆ ವಿಶೇಷ ಅಸ್ತ್ರವೊಂದನ್ನು ನೀಡುತ್ತಾಳೆ ಈ ಅಸ್ತ್ರದಿಂದ ಯಮನು ರಾಕ್ಷಸನನ್ನು ಸಂಹರಿಸುತ್ತಾನೆ. ನಂತರ ಶಿವನು ಧ್ಯಾನಸ್ಥ ಸ್ಥಿತಿಯಲ್ಲಿ ಇದೇ ಸ್ಥಳದಲ್ಲಿ ನೆಲೆನಿಲ್ಲುತ್ತಾನೆ ಆತನ ರಕ್ಷಣೆಗಾಗಿ ಶಕ್ತಿಯು ತನ್ನ ಪುತ್ರನೊಂದಿಗೆ ಅಲ್ಲಿಯೇ ನೆಲೆ ನಿಲ್ಲುತ್ತಾಳೆ. ಯಮರಾಯನು ಶಂಭೂರನನ್ನು ಸಂಹರಿಸಿದ ಈ ಸ್ಥಳ ಯಮನಾಪುರಿ ಎಂದು ಹೆಸರಾಗುತ್ತದೆ. ಕಾಲಾನಂತರದಲ್ಲಿ ಜನರ ಆಡು ಭಾಷೆಯಲ್ಲಿ ಯನಮದುರು ಎಂದು ಪ್ರಖ್ಯಾತ ವಾಗುತ್ತದೆ.

ಪಾರ್ವತಿದೇವಿಯು ಯಮನಿಗೆ ಅಸ್ತ್ರವನ್ನು ನೀಡಿದ ಈ ಸ್ಥಳದಲ್ಲಿ ಪವಿತ್ರ ಕಲ್ಯಾಣಿ ಒಂದು ಉದ್ಭವವಾಗುತ್ತದೆ ಈ ಕಲ್ಯಾಣಿಯು ದೇವಸ್ಥಾನದ ಹೊರಗಿದ್ದು ದೇವರ ಪೂಜೆ ಹಾಗೂ ಪ್ರಸಾದ ತಯಾರಿಕೆಗೆ ಈ ಕಲ್ಯಾಣಿಯ ನೀರನ್ನು ಬಳಸಲಾಗುತ್ತದೆ. ಮಹಾಕವಿ ಕಾಳಿದಾಸನು ಸಹ ಈ ದೇವಾಲಯಕ್ಕೆ ಭೇಟಿ ನೀಡಿ ಶಿವಶಕ್ತಿಯನ್ನು ಆರಾಧಿಸಿದ್ದಾರೆ ಎಂದು ಹೇಳಲಾಗುತ್ತದೆ. ಅತ್ಯಂತ ಪುರಾತನವಾದ ಶಿಥಿಲಗೊಂಡಿದ್ದ ದೇವಾಲಯವನ್ನು ಕೆಲ ವರ್ಷಗಳ ಹಿಂದೆಯಷ್ಟೇ ಪುನರುಜ್ಜೀವನಗೊಳಿಸಲಾಗಿದೆ.

ದೇವಾಲಯಕ್ಕೆ ಭೇಟಿ ನೀಡಿ ಭಕ್ತರು ಭಕ್ತಿಯಿಂದ ದೇವರನ್ನು ಆರಾಧಿಸಿದರೆ ಸಕಲ ಬೇಡಿಕೆಗಳು ಈಡೇರುತ್ತವೆ ಎಂಬ ಅಚಲವಾದ ನಂಬಿಕೆ ಭಕ್ತರಲ್ಲಿದೆ. ನಮ್ಮ ದಕ್ಷಿಣ ಭಾರತದ ಅತಿ ಅಪರೂಪದ ವಿಶಿಷ್ಟವಾದ ದೇವಾಲಯ ಇದಾಗಿದೆ. ಇದಿಷ್ಟು ನಾವಿಂದು ನಿಮಗೆ ತಿಳಿಸುತ್ತಿರುವ ಶಿವನ ವಿಶಿಷ್ಟ ದೇವಾಲಯದ ಕುರಿತಾದ ಮಾಹಿತಿಯಾಗಿದೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರೊಂದಿಗೆ ನಿಮ್ಮ ಸ್ನೇಹಿತರು ಹಾಗೂ ಪರಿಚಿತರೊಂದಿಗೆ ಹಂಚಿಕೊಳ್ಳಿರಿ.

Leave a Reply

Your email address will not be published. Required fields are marked *