ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯವು ಅತ್ಯಂತ ಪವಿತ್ರವಾದುದು ಇದು ದಕ್ಷಿಣ ಭಾರತದ ಪವಿತ್ರ ತೀರ್ಥಕ್ಷೇತ್ರಗಳಲ್ಲಿ ಒಂದು. ಈ ಪುಣ್ಯಕ್ಷೇತ್ರಕ್ಕೆ ಕೇವಲ ದೇಶದ ಮೂಲೆಮೂಲೆಗಳಿಂದ ಮಾತ್ರವಲ್ಲದೆ ವಿದೇಶದಿಂದಲೂ ಸಾವಿರಾರು ಭಕ್ತರು ಭೇಟಿ ಕೊಡುತ್ತಾರೆ. ಶಬರಿಮಲೆ ಕೇರಳ ರಾಜ್ಯದ ಪಶ್ಚಿಮ ಘಟ್ಟ ಪರ್ವತ ಶ್ರೇಣಿಯಲ್ಲಿರುವ ಪತ್ತನಂತಿಟ್ಟ ಜಿಲ್ಲೆಯಲ್ಲಿದೆ. ಈ ದೇವಾಲಯವು ಕೂಡ ಅಪಾರ ಭಕ್ತರನ್ನು ಹೊಂದಿರುವ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ. ಇಲ್ಲಿಗೆ ವರ್ಷಕ್ಕೆ ಸುಮಾರು ನಲವತ್ತೈದರಿಂದ ಐವತ್ತು ಮಿಲಿಯನ್ ಭಕ್ತರು ಭೇಟಿ ನೀಡುತ್ತಾರೆ ಎಂದು ಅಂದಾಜು ಮಾಡಲಾಗಿದೆ. ಈ ದೇವಾಲಯದಲ್ಲಿ ಒಂದು ವಿಸ್ಮಯ ನಡೆಯುವುದು ಎಲ್ಲರಿಗೂ ಸಾಮಾನ್ಯವಾಗಿ ತಿಳಿದಿರುವ ಸಂಗತಿ ಅದು ಮಕರಜ್ಯೋತಿ.

ಪ್ರತಿವರ್ಷ ಮಕರ ಸಂಕ್ರಾಂತಿಯ ದಿನ ನಮಗೆಲ್ಲರಿಗೂ ಮಕರಜ್ಯೋತಿಯ ದರ್ಶನವಾಗುತ್ತದೆ. ಈ ವಿಸ್ಮಯವನ್ನು ನೋಡುವುದಕ್ಕೆ ದೇಶ-ವಿದೇಶಗಳಿಂದ ಭಕ್ತರು ಭೇಟಿ ನೀಡಿ ದರ್ಶನ ಪಡೆದು ಪುನೀತರಾಗುತ್ತಾರೆ. ಈ ಮಕರಜ್ಯೋತಿಯ ಬಗ್ಗೆ ವಿಭಿನ್ನವಾದ ಅಭಿಪ್ರಾಯಗಳು ಕೂಡ ಇದೆ. ಒಬ್ಬರು ಇದನ್ನ ವಿಸ್ಮಯವೆಂದರೆ ಇನ್ನೊಬ್ಬರು ಇದು ಮೋಸ ಎಂದು ವಾದಿಸುತ್ತಾರೆ. ಇದಕ್ಕೆ ದೇವಾಲಯದ ಕಮಿಟಿಯವರು ಉತ್ತರವನ್ನು ನೀಡಿದ್ದಾರೆ ಉತ್ತರ ಏನು ಎಂಬುದನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯವು ಒಂದು ತೀರ್ಥ ಕ್ಷೇತ್ರವಾಗಿದ್ದು ಸ್ವಾಮಿ ಅಯ್ಯಪ್ಪ ಹದಿನೆಂಟು ಬೆಟ್ಟಗಳ ನಡುವೆ ನೆಲೆಸಿದ್ದಾನೆ. ಶಬರಿಮಲೆಯು ಸಮುದ್ರಮಟ್ಟದಿಂದ ಸುಮಾರು ಸಾವಿರದ ಎರಡುನೂರಾ ಅರವತ್ತು ಮೀಟರ್ ಎತ್ತರದಲ್ಲಿದೆ. ಈ ಸುಂದರವಾದ ದೇವಾಲಯ ಭವ್ಯವಾದ ಬೆಟ್ಟಗಳು ಹಾಗೂ ದಟ್ಟವಾದ ಅರಣ್ಯ ಗಳಿಂದ ಆವೃತವಾಗಿದೆ.

ಈ ದೇವಾಲಯದ ಸುತ್ತ ಪ್ರಾಕೃತಿಕ ಸೌಂದರ್ಯ ಕಾಣಸಿಗುತ್ತದೆ. ಶಬರಿಮಲೆ ದೇವಾಲಯವು ಅತ್ಯಂತ ಪುರಾತನವಾದ ದೇವಾಲಯವಾಗಿದ್ದು ಹನ್ನೆರಡನೇ ಶತಮಾನದಲ್ಲಿ ಪಂಡಲಂ ಎಂಬ ರಾಜವಂಶದ ರಾಜಕುಮಾರನಾದ ಮಣಿಕಂಠನ ದೇವಾಲಯವಾಗಿದೆ. ಇದನ್ನು ಸಸ್ಥ ಮತ್ತು ಧರ್ಮಸಸ್ಥ ಎಂದು ಕರೆಯುತ್ತಾರೆ. ಮಹಿಷಿ ಎಂಬ ರಾಕ್ಷಸಿಯು ನನ್ನ ಸಹೋದರನ ಸಾವಿಗೆ ದೇವತೆಗಳೇ ಕಾರಣ ಎಂದು ದೇವತೆಗಳ ಮೇಲೆ ದ್ವೇಷ ಸಾಧಿಸುವ ಸಲುವಾಗಿ ಘೋರವಾದ ತಪಸ್ಸನ್ನು ಮಾಡುತ್ತಾಳೆ. ಆಕೆಯ ತಪಸ್ಸಿಗೆ ಮೆಚ್ಚಿದ ಬ್ರಹ್ಮದೇವನ ಆಕೆಗೆ ವರವನ್ನು ನೀಡುತ್ತಾನೆ ತನಗೆ ಮರಣವೇ ಬಾರದಂತೆ ಆತನಿಂದ ವರವನ್ನು ಪಡೆದುಕೊಳ್ಳುತ್ತಾಳೆ ಆ ವರವನ್ನು ಪಡೆದುಕೊಂಡ ನಂತರ ಆಕೆ ಅತ್ಯಂತ ಅಹಂಕಾರದಿಂದ ದೇವತೆಗಳಿಗೆ ಉಪಟಳವನ್ನು ಕೊಡುತ್ತಿರುತ್ತಾಳೆ. ಇದರಿಂದ ಕಂಗಾಲಾದ ದೇವತೆಗಳು ಹರಿಹರರನ್ನು ಪ್ರಾರ್ಥನೆ ಮಾಡುತ್ತಾರೆ.

ಇದಕ್ಕೆ ಹರಿಹರರು ಸಂಗಮವಾಗಿ ಒಂದು ಮಗುವನ್ನು ಸೃಷ್ಟಿ ಮಾಡುತ್ತಾರೆ ಆ ಮಗುವನ್ನು ಕಾಡಿನಲ್ಲಿ ಕಂಡ ರಾಜನು ತನ್ನ ಸ್ವಂತ ಮಗನಂತೆ ಸಲಹುತ್ತಾನೆ ಆತನೇ ಮಣಿಕಂಠ. ದೊಡ್ಡವನಾದಮೇಲೆ ಮಹಿಷಿಯನ್ನು ಸಂಹಾರ ಮಾಡುತ್ತಾನೆ ಅದಾದಮೇಲೆ ಆತನು ಜಿಲ್ಲೆಯ ಪಶ್ಚಿಮ ಘಟ್ಟದ ಪರ್ವತಶ್ರೇಣಿಗಳಲ್ಲಿ ವಾಸಿಸುತ್ತಾನೆ. ಸಾವಿರದ ಒಂಬೈನೂರಾ ತೊಂಬತ್ತೊಂದರಲ್ಲಿ ಕೇರಳ ಹೈಕೋರ್ಟ್ ಹತ್ತು ವರ್ಷಕ್ಕಿಂತ ಮೇಲ್ಪಟ್ಟ ಮತ್ತು ಐವತ್ತು ವರ್ಷಕ್ಕಿಂತ ಒಳಗಿನ ಮಹಿಳೆಯರ ಪ್ರವೇಶವನ್ನು ನಿರ್ಬಂಧಿಸಿತು.

ದಕ್ಷಿಣ ಭಾರತದಲ್ಲಿ ಅನೇಕ ಶಾಸ್ತ್ರಗಳನ್ನು ಒಳಗೊಂಡಿರುವ ದೇವಾಲಯಗಳು ಇವೆ ಈ ದೇವಾಲಯದ ಇತಿಹಾಸದ ಪ್ರಕಾರ ಶಬರಿಮಲೆ ಶಾಸ್ತ್ರ ದೇವಾಲಯವಾಗಿದ್ದು ಪರಶುರಾಮನಿಂದ ನಿರ್ಮಿಸಲ್ಪಟ್ಟ ಐದನೇ ಶಾಸ್ತ್ರದಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತದೆ. ಇಲ್ಲಿ ಅಯ್ಯಪ್ಪ ಸ್ವಾಮಿಯು ಬಾಲಕನ ವೇಷದಲ್ಲಿ ಭಕ್ತರಿಗೆ ದರ್ಶನವನ್ನು ಕೊಡುತ್ತಾನೆ.

ಇನ್ನೂ ಶಬರಿಮಲೆ ಎಂಬ ಹೆಸರು ಕೇಳಿದ ತಕ್ಷಣ ಎಲ್ಲರಿಗೂ ನೆನಪಿಗೆ ಬರುವುದು ಮಕರಜ್ಯೋತಿ. ಮಕರ ಸಂಕ್ರಾಂತಿಯ ದಿನ ಮಕರಜ್ಯೋತಿಯನ್ನು ನೋಡಲು ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನರು ಸೇರುತ್ತಾರೆ ಮಕರಜ್ಯೋತಿಯನ್ನು ಅಯ್ಯಪ್ಪನ ಸ್ವರೂಪವೇ ಎಂದು ಭಕ್ತರು ನಂಬುತ್ತಾರೆ. ಆದರೆ ಕೆಲವರು ಮಕರಜ್ಯೋತಿಯನ್ನು ಮೂಢನಂಬಿಕೆ ಎಂದು ಭಕ್ತರನ್ನು ಮೋಸ ಮಾಡುವುದಕ್ಕೆ ಮನುಷ್ಯರೇ ಅದನ್ನು ಮಾಡುತ್ತಾರೆ ಎಂದು ವಾದಿಸುತ್ತಾರೆ.

ಮಕರ ಸಂಕ್ರಾಂತಿಯ ದಿನ ಸ್ವಾಮಿಯು ಜ್ಯೋತಿರೂಪದಲ್ಲಿ ದರ್ಶನವನ್ನು ನೀಡುತ್ತಾನೆ ಎಂದು ಭಕ್ತರು ನಂಬುತ್ತಾರೆ. ಇಲ್ಲಿ ಇನ್ನೊಂದು ವಾದವು ಕೇಳಿಬರುತ್ತದೆ ಅದೇನೆಂದರೆ ಪೂರ್ವ ದಿಕ್ಕಿನಲ್ಲಿರುವ ಒಂದು ಬೆಟ್ಟದ ಮೇಲೆ ಗಿರಿಜನರು ಹಬ್ಬವನ್ನು ಮಾಡಿಕೊಳ್ಳುತ್ತಾರೆ. ಅಯ್ಯಪ್ಪಸ್ವಾಮಿಯು ಮಹಿಷಿಯನ್ನು ಕೊಂದು ಗಿರಿಜನರನ್ನು ಕಾಪಾಡಿದೆ ಸಲುವಾಗಿ ಬೆಟ್ಟದ ಮೇಲೆ ದೊಡ್ಡದಾದ ಜ್ಯೋತಿಯನ್ನು ಬೆಳಗಿ ಆ ರಾತ್ರಿಯನ್ನು ಮಾಡುತ್ತಿದ್ದರಂತೆ.

ಆ ಜ್ಯೋತಿಯನ್ನು ಕಂಡ ನಂತರವೇ ಪಂಡಲ ರಾಜವಂಶಸ್ಥರು ಅಯ್ಯಪ್ಪ ಸ್ವಾಮಿಗೆ ಬಂಗಾರದ ಆಭರಣವನ್ನು ಕಳಿಸುತ್ತಿದ್ದರು ಎಂದು ಹೇಳಲಾಗುತ್ತದೆ ಇದನ್ನು ಅಯ್ಯಪ್ಪ ಸ್ವಾಮಿ ಜ್ಯೋತಿ ಅಥವಾ ಮಕರಜ್ಯೋತಿ ಎಂದು ಹೇಳುತ್ತಾರೆ. ಇದನ್ನು ದೇವಾಲಯದ ಆಡಳಿತ ಮಂಡಳಿಯವರು ಹಾಗೂ ಪಂಡಲಂ ರಾಜವಂಶಸ್ಥರು ಸಮರ್ಥಿಸಿಕೊಳ್ಳುತ್ತಾರೆ. ಮಕರ ಜ್ಯೋತಿ ಎನ್ನುವುದು ಭಕ್ತಿ ಭಾವದಿಂದ ಕೂಡಿದ ಸಂಪ್ರದಾಯವಾಗಿದೆ ಅಂತಹ ಸಂಪ್ರದಾಯಗಳಿಗೆ ಯಾವುದೇ ರೀತಿಯ ಅಡ್ಡಿ-ಆತಂಕಗಳು ಬಾರದಿರುವ ರೀತಿಯಲ್ಲಿ ಮುಂದುವರಿಸಿಕೊಂಡು ಹೋಗಲಿ ಎಂದು ನಾವೆಲ್ಲರೂ ಆಶಿಸೋಣ. ಈ ರೀತಿಯಾಗಿ ಶಬರಿಮಲೆ ದೇವಸ್ಥಾನದ ಮಕರಜ್ಯೋತಿಯ ಕುರಿತಾಗಿ ಹಲವಾರು ವಾದ-ವಿವಾದಗಳು ಕೇಳಿಬರುತ್ತವೆ ಆದರೂ ಕೂಡ ಜನರು ಈಗಲೂ ಅದನ್ನು ಭಕ್ತಿಯಿಂದ ನಂಬುತ್ತಾರೆ ಹೋಗಿ ದರ್ಶನವನ್ನು ಮಾಡಿಕೊಂಡು ಬರುತ್ತಾರೆ.

Leave a Reply

Your email address will not be published. Required fields are marked *