ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗದ ಮೇರು ನಟ ರಾಜ್ ಕುಮಾರ್ ಅವರ ಮಗನಾಗಿದ್ದರು. ತಮ್ಮ ತಂದೆಗೆ ತಕ್ಕಂತೆ ವ್ಯಕ್ತಿತ್ವದ ವಿಚಾರದಲ್ಲಾಗಲಿ ಅಥವಾ ಸಿನಿಮಾ ವಿಚಾರದಲ್ಲಾಗಲಿ ಚಿನ್ನದಂತೆ ಬಾಳಿ ಬದುಕಿದವರು ನಮ್ಮೆಲ್ಲರ ನೆಚ್ಚಿನ ಪವರ್ ಸ್ಟಾರ್ ಪುನೀತ್ ರಾಜಕುಮಾರ್. ಆರು ತಿಂಗಳ ಮಗುವಾಗಿದ್ದಾಗಲೇ ನಮ್ಮೆಲ್ಲರ ನೆಚ್ಚಿನ ಅಪ್ಪು ಸಿನಿಮಾಗೆ ಬಾಲ ನಟನಾಗಿ ಪ್ರವೇಶಿಸುತ್ತಾರೆ.

ಕನ್ನಡ ಚಿತ್ರರಂಗದಲ್ಲಿ ಯಾವುದೇ ಬೇಡದ ಸುದ್ದಿಗಳಿಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸುದ್ದಿ ಆದವರಲ್ಲ. ಕನ್ನಡ ಚಿತ್ರರಂಗದ ಅಜಾತಶತ್ರು ಸೂಪರ್ ಸ್ಟಾರ್ ಯಾರು ಎಂಬುದಾಗಿ ಕೇಳಿದರೆ ಖಂಡಿತವಾಗಿ ಕೇಳಿಬರುವಂತಹ ಒಂದೇ ಒಂದು ಹೆಸರೆಂದರೆ ಅದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಎಂದು. ಸಾಮಾಜಿಕ ಕಾರ್ಯಗಳಲ್ಲಿ ಕೂಡ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡು ಯಾರಿಗೂ ತಿಳಿಯದಂತೆ ಯಾವ ಪ್ರಚಾರದ ಅವಶ್ಯಕತೆಯೂ ಇಲ್ಲದಂತೆ ಎಲ್ಲಾ ನಿಸ್ಸಹಾಯಕರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಿ ಅವರಿಗೆ ಸ್ವಾವಲಂಬಿ ಜೀವನವನ್ನು ಕಟ್ಟಿಕೊಳ್ಳುವಂತೆ ಮಾಡಿಕೊಟ್ಟವರು ಅಪ್ಪು.

ನಮ್ಮ ಅಣ್ಣಾವ್ರಿಗೆ 5 ಜನ ಮಕ್ಕಳು. ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜಕುಮಾರ್ ಅವರು ಹಿರಿಯ ಗಂಡು ಮಕ್ಕಳಾದರೆ, ಪೂರ್ಣಿಮ ಹಾಗೂ ಲಕ್ಷ್ಮಿ ಹೆಣ್ಣು ಮಕ್ಕಳಾಗಿದ್ದರು. ನಮ್ಮೆಲ್ಲರ ನೆಚ್ಚಿನ ಅಪ್ಪು ಕೊನೆಯವರಾಗಿ ಜನಿಸುತ್ತಾರೆ. ಆರು ತಿಂಗಳ ಮಗುವಾಗಿದ್ದರೆ ಪ್ರೇಮದ ಕಾಣಿಕೆ ಎನ್ನುವ ಸಿನಿಮಾದಲ್ಲಿ ಅಣ್ಣಾವ್ರ ಜೊತೆಗೆ ನಟಿಸುವ ಮೂಲಕ ಅಷ್ಟು ಚಿಕ್ಕವಯಸ್ಸಿನಲ್ಲಿ ಮುಂದೊಂದು ದಿನ ಕನ್ನಡ ಚಿತ್ರರಂಗದಲ್ಲಿ ತಾನೊಬ್ಬ ದೊಡ್ಡ ಸೂಪರ್ ಸ್ಟಾರ್ ಆಗಿ ಮಿಂಚಿ ಮರೆಯುತ್ತೇನೆ ಎಂಬುದಾಗಿ ಸೂಚನೆಯನ್ನು ನೀಡಿದರು.

ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಶಿವಣ್ಣ ಶಿವಣ್ಣ ಅವರ ಹೆಂಡತಿಯಾಗಿರುವ ಗೀತಾ ಶಿವರಾಜ್ ಕುಮಾರ್ ಹಾಗೂ ತಮ್ಮ ಪತ್ನಿ ಆಗಿರುವ ಅಶ್ವಿನಿ ಪುನೀತ್ ರಾಜಕುಮಾರ್ ಸೇರಿದಂತೆ ಇಡೀ ಕುಟುಂಬದ ಜೊತೆಗೆ ರಾಯರ ಸನ್ನಿಧಿಗೆ ಹೋಗಿರುವಂತಹ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಕುಟುಂಬದ ಸದಸ್ಯರೆಲ್ಲರೂ ಕೂಡ ಜೊತೆಯಾಗಿ ಕಾಣಿಸಿಕೊಂಡಿರುವ ದೃಶ್ಯ ಅಭಿಮಾನಿಗಳಿಗೆ ಕಾಣುವಂತಹ ಭಾಗ್ಯ ದೊರಕಿದೆ ಎಂದು ಹೇಳಬಹುದಾಗಿದೆ. ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!