ಇವತ್ತಿನ ದಿನದಲ್ಲಿ ರೈತರುಗಳು ಹೆಚ್ಚಾಗಿ ಟ್ರ್ಯಾಕ್ಟರ್ ಗಳನ್ನು ಅವಲಂಬಿಸಿರುತ್ತಾರೆ ವಾಣಿಜ್ಯ ವ್ಯವಹಾರಗಳಿಗೆ ಟ್ರ್ಯಾಕ್ಟರ್ ತುಂಬಾ ಉಪಯೋಗಕಾರಿಯಾಗಿದೆ. ನೀವೇನಾದರೂ ಟ್ರ್ಯಾಕ್ಟರ್ ಖರೀದಿಸಬೇಕು ಎಂಬ ಆಸೆಯನ್ನು ಹೊಂದಿದ್ದರೆ ನಾವಿಂದು ನಿಮಗೆ ಸೆಕೆಂಡ್ ಹ್ಯಾಂಡ್ ಶೋರೂಮ್ ಗಳಲ್ಲಿ ಸೆಕೆಂಡ್ ಹ್ಯಾಂಡ್ ಟ್ರ್ಯಾಕ್ಟರ್ ಗಳು ಯಾವ ಬೆಲೆಗೆ ಸಿಗುತ್ತವೆ ಯಾವ ಯಾವ ಟ್ಯಾಕ್ಟರ್ ಗಳು ಸಿಗುತ್ತವೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿಕೊಡುತ್ತೇವೆ.
ನಾವು ನಿಮಗೆ ತಿಳಿಸುತ್ತಿರುವ ಮೊದಲನೇ ಟ್ರ್ಯಾಕ್ಟರ್ ಸೋನಾಲಿಕ ಆರ್ ಎಕ್ಸ್ 42 ಈ ಗಾಡಿ ಎರಡು ಸಾವಿರದ ಹದಿನೆಂಟರ ಮಾಡೆಲ್ ಇದರ ಇಂಜಿನ್ ಮತ್ತು ಗೇರ್ ಬಾಕ್ಸ್ ಒಳ್ಳೆಯ ಸ್ಥಿತಿಯಲ್ಲಿದೆ ಗಾಡಿಯ ಎಲ್ಲಾ ದಾಖಲೆಗಳು ಸರಿಯಾಗಿವೆ ಇನ್ನು ಟೈಯರ್ ಗಳು ಕೂಡ ಒಳ್ಳೆಯ ಸ್ಥಿತಿಯಲ್ಲಿದೆ
ಈ ಟ್ರ್ಯಾಕ್ಟರಿಗೆ ಮೂರು ಲಕ್ಷದ ಅರವತ್ತು ಸಾವಿರ ರೂಪಾಯಿ ಬೆಲೆಯನ್ನು ನಿಗದಿ ಮಾಡಲಾಗಿದೆ ಬೆಲೆಯನ್ನು ಸ್ವಲ್ಪ ಕಡಿಮೆ ಮಾಡಬಹುದು. ನಾವು ನಿಮಗೆ ತಿಳಿಸುತ್ತಿರುವ ಎರಡನೇ ಟ್ರ್ಯಾಕ್ಟರ್ ಸೋನಾಲಿಕಾ ಆರ್ ಎಕ್ಸ್ 35 ಇದು ಎರಡು ಸಾವಿರದ ಹತ್ತೊಂಬತ್ತರ ಮಾಡೆಲಾಗಿದೆ ಇಂಜಿನ್ ಮತ್ತು ಗೇರ್ ಬಾಕ್ಸ್ ಒಳ್ಳೆಯ ಸ್ಥಿತಿಯಲ್ಲಿದೆ.
ಇದರ ದಾಖಲೆಗಳಿಗೆ ಸಂಬಂಧಿಸಿದಂತೆ ಯಾವುದೇ ತೊಂದರೆ ಇಲ್ಲ ಎಲ್ಲವೂ ಸರಿಯಾಗಿದೆ. ಇದರ ಮುಂದಿನ ಟೈಯರ್ ಗಳು ಶೇಕಡಾ ಐವತ್ತರಷ್ಟು ಹಿಂದಿನ ಟೈಯರ್ ಗಳು ಶೇಕಡಾ ನೂರಷ್ಟು ಬಟನ್ಸ್ ಗಳನ್ನು ಹೊಂದಿದೆ ಇದಕ್ಕೂ ಕೂಡ ಮೂರು ಲಕ್ಷದ ಅರವತ್ತು ಸಾವಿರ ರೂಪಾಯಿ ಬೆಲೆಯನ್ನು ನಿಗದಿ ಮಾಡಲಾಗಿದೆ.
ನಾವು ನಿಮಗೆ ತಿಳಿಸುತ್ತಿರುವ ಮುಂದಿನ ಟ್ರ್ಯಾಕ್ಟರ್ ಮಹಿಂದ್ರಾ 415 ಇದು ಎರಡು ಸಾವಿರದ ಹತ್ತೊಂಬತ್ತರ ಮಾಡೆಲ್ ಇದರ ಇಂಜಿನ್ ಮತ್ತು ಗೇರ್ ಬಾಕ್ಸ್ ಕೂಡ ಒಳ್ಳೆಯ ಸ್ಥಿತಿಯಲ್ಲಿದೆ. ಇದರ ದಾಖಲೆಗಳು ಕೂಡ ಸರಿಯಾಗಿವೆ. ಇದರ ಮುಂದಿನ ಟೈಯರ್ ಗಳು ಶೇಕಡಾ ತೊಂಬತ್ತರಷ್ಟು ಹಿಂದಿನ ಟೈಯರ್ ಗಳು ಶೇಕಡಾ ನೂರರಷ್ಟು ಬಟನ್ಸ್ ಗಳನ್ನು ಹೊಂದಿದೆ. ಈ ಗಾಡಿಗೆ ನಾಲ್ಕು ಲಕ್ಷ ರೂಪಾಯಿ ಬೆಲೆ ಹೇಳುತ್ತಿದ್ದಾರೆ ಇದನ್ನು ಕಡಿಮೆ ಕೂಡ ಮಾಡಬಹುದು.
ನಾವು ನಿಮಗೆ ತಿಳಿಸುತ್ತಿರುವ ಮುಂದಿನ ಟ್ರ್ಯಾಕ್ಟರ್ ಸ್ವರಾಜ್ 742 ಇದು ಎರಡು ಸಾವಿರದ ಹತ್ತೊಂಬತ್ತರ ಮಾಡೆಲ್ ಇದರ ಇಂಜಿನ್ ಮತ್ತು ಗೇರ್ ಬಾಕ್ಸ್ ಕೂಡ ಒಳ್ಳೆಯ ಸ್ಥಿತಿಯಲ್ಲಿದೆ. ಇದರ ದಾಖಲೆಗಳು ಕೂಡ ಸರಿಯಾಗಿವೆ ಯಾವುದೇ ತೊಂದರೆ ಇಲ್ಲ. ಇದರ ಮುಂದಿನ ಟೈಯರ್ ಗಳು ಹಿಂದಿನ ಟೈಯರ್ ಗಳು ಶೇಕಡಾ ಮೂವತ್ತರಷ್ಟು ಬಟನ್ಸ್ ಗಳನ್ನು ಹೊಂದಿದೆ. ಈ ಟ್ರ್ಯಾಕ್ಟರ್ ಗೆ ನಾಲ್ಕು ಲಕ್ಷ ರೂಪಾಯಿ ಬೆಲೆ ಹೇಳುತ್ತಿದ್ದಾರೆ ಇದನ್ನು ಕಡಿಮೆ ಕೂಡ ಮಾಡಬಹುದು.
ನಾವು ನಿಮಗೆ ತಿಳಿಸುತ್ತೀರುವ ಮುಂದಿನ ಟ್ರ್ಯಾಕ್ಟರ್ ಸ್ವರಾಜ್ 742. ಇದು ಎರಡು ಸಾವಿರದ ಇಪ್ಪತ್ತರ ಮಾಡೆಲ್ ಇದರ ಇಂಜಿನ್ ಮತ್ತು ಗೇರ್ ಬಾಕ್ಸ್ ಕೂಡ ಒಳ್ಳೆಯ ಕಂಡೀಶನ್ ನಲ್ಲಿ ಇದೆ ಇದರ ದಾಖಲೆಗಳು ಕೂಡ ಕ್ಲಿಯರ್ ಆಗಿದೆ ಇದರ ಮುಂದಿನ ಟೈಯರ್ ಗಳು ಶೇಕಡಾ ಎಂಬತ್ತರಷ್ಟು ಹಿಂದಿನ ಟೈಯರ್ ಗಳು ಶೇಕಡಾ ತೊಂಬತ್ತರಷ್ಟು ಬಟನ್ಸ್ ಗಳನ್ನು ಹೊಂದಿದೆ. ಈ ಟ್ಯಾಕ್ಟರ್ ಗೇಮ್ ನಾಲ್ಕು ಲಕ್ಷದ ಎಂಬತ್ತು ಸಾವಿರ ರೂಪಾಯಿ ಹೇಳುತ್ತಿದ್ದಾರೆ.
ಮುಂದಿನ ಗಾಡಿ ಸೋನಾಲಿಕ ಆರ್ ಎಕ್ಸ್ 35 ಇದು ಎರಡು ಸಾವಿರದ ಹತ್ತೊಂಬತ್ತರ ಮಾಡೆಲ್ ಇದರ ಇಂಜಿನ್ ಮತ್ತು ಗೇರ್ ಬಾಕ್ಸ್ ಕೂಡ ಒಳ್ಳೆಯ ಸ್ಥಿತಿಯಲ್ಲಿದೆ. ಇದರ ದಾಖಲೆಗಳು ಕೂಡ ಸರಿಯಾಗಿದೆ ಇದರ ಮುಂದಿನ ಟೈಯರ್ ಗಳು ಶೇಕಡಾ ಎಂಬತ್ತರಷ್ಟು ಹಿಂದಿನ ಟೈಯರ್ ಗಳು ಶೇಕಡಾ ತೊಂಬತ್ತರಷ್ಟು ಬಟನ್ಸ್ ಗಳನ್ನು ಹೊಂದಿದೆ. ಈ ಗಾಡಿಗೆ ಮೂರು ಲಕ್ಷದ ಅರವತ್ತು ಸಾವಿರ ರೂಪಾಯಿ ನಿಗದಿ ಮಾಡಲಾಗಿದೆ. ಎಲ್ಲಾ ಗಾಡಿಗಳಿಗೆ ನಿಗದಿಮಾಡಿರುವ ಬೆಲೆ ನಿಖರವಾದದ್ದಲ್ಲ ಅದನ್ನು ಕಡಿಮೆ ಮಾಡಬಹುದು ಎಂದು ಅದರ ಮಾಲೀಕರು ಹೇಳಿದ್ದಾರೆ.
ಇನ್ನು ಈ ಶೋರೂಮ್ ಎಲ್ಲಿದೆ ಎಂದರೆ ದಾವಣಗೆರೆ ಜಿಲ್ಲೆಯ ಉಚ್ಚಂಗಿದುರ್ಗದಲ್ಲಿ ಇರುವ ಸೆಕೆಂಡ್ ಹ್ಯಾಂಡ್ ಶೋರೂಮ್. ನೀವು ಕೂಡ ಅಲ್ಲಿಗೆ ಭೇಟಿ ನೀಡಿ ನಿಮಗೆ ಇಷ್ಟವಾಗುವಂತಹ ಟ್ರ್ಯಾಕ್ಟರ್ ಅನ್ನು ಕೊಂಡುಕೊಳ್ಳಬಹುದು ಈ ಮಾಹಿತಿಯನ್ನು ನಿಮ್ಮ ಪರಿಚಿತರಿಗು ಸ್ನೇಹಿತರಿಗು ತಿಳಿಸಿರಿ.