ಇತ್ತೀಚಿನ ದಿನಗಳಲ್ಲಿ ಮದುವೆಯಾಗಿ ಕೆಲವೆ ವರ್ಷಗಳಲ್ಲಿ ದಂಪತಿಗಳು ಜಗಳವಾಡಿ ವಿಚ್ಛೇದನ ಪಡೆದುಕೊಳ್ಳುತ್ತಿರುವ ಘಟನೆಗಳು ಸಾಮಾನ್ಯವಾಗಿದೆ. ಹೊಂದಾಣಿಕೆಯ ಕೊರತೆಯಿಂದಲೊ ಅಥವಾ ಅರಿತು ಕೊಳ್ಳುವಿಕೆಯ ಸಮಸ್ಯೆಯಿಂದಲೊ ವಿಚ್ಛೇದನ ಹೆಚ್ಚಾಗಿದೆ. ಮದುವೆಯಾದ ದಂಪತಿಗಳು ಹೇಗಿರಬೇಕು ಎಂದು ಚಾಣಕ್ಯ ಹೇಳಿದ ಮಾತುಗಳನ್ನು ಈ ಲೇಖನದ ಮೂಲಕ ತಿಳಿಯೋಣ.

ಮದುವೆಯ ನಂತರ ದಂಪತಿಗಳು ಕೆಲವು ಬದಲಾವಣೆಗಳನ್ನು ಮಾಡಿಕೊಂಡಾಗ ಅವರ ಜೀವನ ಸುಖಮಯವಾಗಿರುತ್ತದೆ. ಮದುವೆಯಾದ ಬಳಿಕ ಉತ್ತಮ ದಾಂಪತ್ಯ ಜೀವನ ಸಾಗಿಸಲು ಪತಿ ಮತ್ತು ಪತ್ನಿ ಇಬ್ಬರ ನಡವಳಿಕೆ ಉತ್ತಮವಾಗಿರಬೇಕು. ಪತ್ನಿಯ ಕೆಲವು ಗುಣಗಳು ಕುಟುಂಬದವರಿಗೆ ಸಂತೋಷದ ಜೀವನವನ್ನು ನೀಡುತ್ತದೆ

ಜೊತೆಗೆ ಅವರನ್ನು ಅನೇಕ ತೊಂದರೆಗಳಿಂದ ರಕ್ಷಿಸುತ್ತದೆ. ಸದ್ಗುಣಶೀಲ ಹೆಂಡತಿಯನ್ನು ಪಡೆಯುವ ಪುರುಷರು ಯಶಸ್ವಿ ಮತ್ತು ಸಂತೋಷದ ಜೀವನವನ್ನು ಪಡೆಯುತ್ತಾರೆ.  ಪ್ರತಿಯೊಬ್ಬ ಯಶಸ್ವಿ ವ್ಯಕ್ತಿಯ ಹಿಂದೆ ಮಹಿಳೆ ಇರುತ್ತಾಳೆ ಎನ್ನಲಾಗುತ್ತದೆ. ಮಹಿಳೆ ತನ್ನ ಗಂಡನನ್ನು ಮಾತ್ರವಲ್ಲದೆ ಇಡಿ ಕುಟುಂಬದವರ ನೆಮ್ಮದಿ ಹಾಳುಮಾಡಬಹುದು ಅಥವಾ ಬೆಳವಣಿಗೆಗೆ ಕಾರಣವಾಗಬಹುದು.

ಆಚಾರ್ಯ ಚಾಣಕ್ಯ ಸ್ತ್ರೀ ಪುರುಷರ ಗುಣ ಮತ್ತು ದುರ್ಗುಣಗಳ ಬಗ್ಗೆ ಸಾಕಷ್ಟು ಪ್ರಸ್ತಾಪಿಸಿದ್ದಾರೆ. ಕೆಲವೊಂದು ವಿಷಯಗಳನ್ನು ಅಳವಡಿಸಿಕೊಂಡರೆ ವೈವಾಹಿಕ ಜೀವನವು ಅತ್ಯುತ್ತಮವಾಗಿರುತ್ತದೆ. ಚಾಣಕ್ಯನ ನೀತಿಯಲ್ಲಿ ಮಹಿಳೆಯರ ಗುಣಗಳ ಬಗ್ಗೆ ಉಲ್ಲೇಖಿಸಿದ್ದಾನೆ. ಅಂತಹ ಗುಣ ನಡತೆ ಹೊಂದಿರುವ ಹೆಂಡತಿಯನ್ನು ಪಡೆದ ಪುರುಷರು ಅದೃಷ್ಟಶಾಲಿಗಳು ಎಂದು ಹೇಳಲಾಗುತ್ತದೆ. 

ಮಹಿಳೆಯರು ಇಡಿ ಕುಟುಂಬದಲ್ಲಿ ಪ್ರಮುಖರಾಗಿದ್ದಾರೆ. ಅವಳು ವಿದ್ಯಾವಂತೆ, ಸುಸಂಸ್ಕೃತೆ ಮತ್ತು ಪ್ರತಿಭಾವಂತೆಯಾಗಿದ್ದರೆ ಇಡಿ ಕುಟುಂಬವು ಬಹಳ ಸಂತೋಷದ ಜೀವನವನ್ನು ನಡೆಸುತ್ತದೆ. ಆಚಾರ್ಯ ಚಾಣಕ್ಯನ ಪ್ರಕಾರ ತಮ್ಮ ಹೆಂಡತಿಯಲ್ಲಿ ಕೆಲವು ಗುಣಗಳನ್ನು ಹೊಂದಿದ್ದರೆ ಅಂತಹ ಪುರುಷರು ಅತ್ಯಂತ ಅದೃಷ್ಟವಂತರು.

ಸದ್ಗುಣಶೀಲ ಪತ್ನಿ ಜೀವನದಲ್ಲಿ ಮುಂದೆ ಸಾಗಲು ಪ್ರೇರೇಪಿಸುವುದಲ್ಲದೆ, ಪ್ರತಿಯೊಂದು ಕಷ್ಟದಿಂದ ಹೊರಬರಲು ಸಹಾಯ ಮಾಡುತ್ತಾಳೆ, ಈ ಗುಣ ಮುಖ್ಯವಾಗಿ ಬೇಕಾಗಿರುವುದು ಆದರೆ ಹೆಂಡತಿ ತಾಳ್ಮೆಯಿಂದಿಲ್ಲದಿದ್ದರೆ ತೊಂದರೆಗಳು ಹೆಚ್ಚಾಗುತ್ತವೆ. ಹೆಂಡತಿಯು ತನ್ನ ಗಂಡನನ್ನು ಪ್ರತಿಯೊಂದು ತೊಂದರೆಯಿಂದ ಹೊರಗಿಡಲು ಸಹಾಯ ಮಾಡುವ ಶಕ್ತಿ ಹೊಂದಿದ್ದಾಳೆ.

ಅವಳು ಪ್ರತಿಯೊಂದು ಸನ್ನಿವೇಷದಲ್ಲೂ ತನ್ನ ಕುಟುಂಬವನ್ನು ಕಾಪಾಡಿಕೊಳ್ಳುತ್ತಾಳೆ ಇಂತಹ ಪತ್ನಿ ಸಿಕ್ಕವರು ಪುಣ್ಯವಂತರು. ಜೀವನದಲ್ಲಿ ತೃಪ್ತಿಯು ಬಹಳ ಮುಖ್ಯ ಇಲ್ಲದಿದ್ದರೆ ದುರಾಸೆಯು ವ್ಯಕ್ತಿಯನ್ನು ಹಾಳು ಮಾಡುತ್ತದೆ. ಹೆಂಡತಿ ಸಂತೃಪ್ತಳಾಗಿದ್ದರೆ ಅವಳು ತನ್ನ ಗಂಡನಿಗೆ ದೊಡ್ಡ ಶಕ್ತಿ ಎಂದು ಸಾಬೀತು ಪಡಿಸುತ್ತಾಳೆ ಮತ್ತು ಅತ್ಯಂತ ಕಷ್ಟದ ಸಮಯಗಳನ್ನು ಸಹ ಸುಲಭವಾಗಿ ಜಯಿಸುತ್ತಾಳೆ. 

ಮಹಿಳೆಯ ಕೋಪಕ್ಕೆ ಎಲ್ಲವನ್ನು ಸುಟ್ಟು ಬೂದಿ ಮಾಡುವ ಶಕ್ತಿಯಿದ್ದರೆ, ಶಾಂತ ಸ್ವಭಾವದ ಮಹಿಳೆಯನ್ನು ಲಕ್ಷ್ಮೀಯ ರೂಪವೆಂದು ಪರಿಗಣಿಸಲಾಗುತ್ತದೆ. ಹೆಂಡತಿ ಶಾಂತ ಸ್ವಭಾವ ಹೊಂದಿದ್ದರೆ ಅಂತಹ ಪುರುಷ ಅದೃಷ್ಟಶಾಲಿ, ಹೆಂಡತಿ ಮನೆಯಲ್ಲಿ ಶಾಂತಿ ಮತ್ತು ಸಂತೋಷವನ್ನು ಕಾಪಾಡಿಕೊಳ್ಳುವುದಷ್ಟೆ ಅಲ್ಲ ತನ್ನ ಮತ್ತು ತನ್ನ ಕುಟುಂಬದ ಹಿತದೃಷ್ಟಿಯಿಂದ ಪ್ರತಿಯೊಂದು ನಿರ್ಧಾರವನ್ನು ಉದ್ದೇಶಪೂರ್ವಕವಾಗಿ ತೆಗೆದುಕೊಳ್ಳುತ್ತಾಳೆ.

ಸಿಹಿಯಾಗಿ ಮಾತನಾಡುವ ಮೂಲಕವೆ ಪ್ರತಿಯೊಬ್ಬರೂ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಆದರೆ ಹೆಂಡತಿ ಮಧುರವಾಗಿ ಮಾತನಾಡಿದರೆ ಜೀವನ ಸುಖಕರವಾಗಿರುತ್ತದೆ. ಪತ್ನಿ ಕುಟುಂಬದವರು, ನೆರೆಹೊರೆಯವರು, ಸಂಬಂಧಿಕರೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳುತ್ತಾಳೆ ಇದರಿಂದ ದಾಂಪತ್ಯ ಜೀವನವು ಸುಖಕರವಾಗಿರುತ್ತದೆ. ಒಟ್ಟಿನಲ್ಲಿ ಒಳ್ಳೆಯ ಮನಸ್ಸಿರುವ ಹೆಂಡತಿ ಸಿಕ್ಕರೆ ಅಂತಹ ಪುರುಷರು ಅದೃಷ್ಟವಂತರು. ಒಂದು ಸಂಸಾರದ ಸುಖ, ದುಃಖ, ನೆಮ್ಮದಿ ಹೆಂಡತಿಯ ಮೇಲೆ ನಿಂತಿರುತ್ತದೆ ಎಂದು ಹೇಳಿದರೆ ತಪ್ಪಾಗಲಾರದು.

Leave a Reply

Your email address will not be published. Required fields are marked *