ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚಾರ ಮಾಡುತ್ತವೆ. ವೈದಿಕ ಜ್ಯೋತಿಷ್ಯದ ಪ್ರಕಾರ ರಾಶಿಗಳು ನಿರ್ದಿಷ್ಟ ಸಮಯದಲ್ಲಿ ಗ್ರಹಗಳನ್ನು ಪ್ರವೇಶ ಮಾಡಿದರೆ ಅದರಿಂದ ಶುಭಫಲಗಳು ದೊರಕುತ್ತದೆ. ಇದು ಎಲ್ಲಾ 12 ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ.
ನಾವು ಈ ದಿನ ವೃಶ್ಚಿಕ ರಾಶಿಯವರ ಭವಿಷ್ಯ, ಜೀವನ ಶೈಲಿ, ಗುಣ ಮತ್ತು ಸ್ವಭಾವದ ಬಗ್ಗೆ ತಿಳಿಯೋಣ :-
ವೃಶ್ಚಿಕ ರಾಶಿಯವರು ನಂಬಿಕೆಗೆ ಅರ್ಹತೆ ಇಲ್ಲದ ವ್ಯಕ್ತಿಗಳು. ಈ ರಾಶಿಯ ಜನರು ಹೆಚ್ಚು ರಹಸ್ಯವಾಗಿ ಇರುವರು. ವಿಷಯವನ್ನು ಮರೆಮಾಚುವ ಇಲ್ಲ ರಹಸ್ಯವಾಗಿ ಇಡುವ ಗುಣ ವೃಶ್ಚಿಕ ರಾಶಿಯವರದ್ದು ಎಂದು ಸಾಮಾನ್ಯವಾಗಿ ಎಲ್ಲರು ಮಾತಾಡುವರು.ನಿಜವಾಗಲೂ ವೃಶ್ಚಿಕ ರಾಶಿಯವರು ಮಾತಿನ ಮಲ್ಲರು. ಅವರು ಏನೇ ನಿರ್ಧಾರ ಕೈಗೊಂಡರೆ ಅದಕ್ಕೆ ಬದ್ಧರಾಗಿ ಇರುವರು. ಈ ರಾಶಿ ಜಲ ತತ್ವ ರಾಶಿ. ಇದರ ಅಧಿಪತಿ ಮಂಗಳ ಗ್ರಹ. ವೃಶ್ಚಿಕ ರಾಶಿ ಜನರು ಹಠವಾದಿಗಳು ಮತ್ತು ಸಾಹಸಿಗಳು.
ಇವರ ವ್ಯಕ್ತಿತ್ವ ಸುಂದರಾಗಿ ಇರುತ್ತದೆ. ಅವರಿಗೆ ಸರಿ ಎನಿಸುವ ದಾರಿಯಲ್ಲಿ ಹೋಗುವರು ಮತ್ತು ಅದನ್ನೇ ಆಯ್ಕೆ ಮಾಡಿಕೊಳ್ಳುವರು ಅದರಲ್ಲಿ ಬೇರೆಯವರು ಹಸ್ತಕ್ಷೇಪ ಮಾಡಿದರೆ ಅದು ಇವರಿಗೆ ಇಷ್ಟ ಆಗುವುದಿಲ್ಲ. ಇವರು ಹೆಚ್ಚು ಶ್ರಮ ಜೀವಿಗಳು. ಯಾವುದೇ ಕೆಲಸ ಆದರೂ ಅದನ್ನು, ಹೆಚ್ಚು ಗಮನಕೊಟ್ಟು ಮಾಡುವರು. ಈ ರಾಶಿಯವರು ಹೆಚ್ಚು ಬಿಝಿ ಮತ್ತು ನಿಷ್ಠಾವಂತ ವ್ಯಕ್ತಿಗಳು. ಕೊಟ್ಟ ಮಾತುಗಳನ್ನು ನಿಭಾಯಿಸುವ ಗುಣ ವೃಶ್ಚಿಕ ರಾಶಿಯ ಜನರಲ್ಲಿ ಇರುತ್ತದೆ.
ಈ ರಾಶಿಯವರಿಗೆ ಬೇಗ ಕೋಪ ಬರುತ್ತದೆ. ಸಿಟ್ಟು ಬಂದರೆ ಯಾರು ಏನು ಎಂದು ಯೋಚಿಸದೆ ನೇರವಾಗಿ ಮುಖಕ್ಕೆ ಹೊಡೆದಂತೆ ಮಾತನಾಡುವರು. ವೃಶ್ಚಿಕ ರಾಶಿಯ ಜನರ ವಿರುದ್ಧ ಮಾತನಾಡಿದರೆ ಅದರ ಪರಿಣಾಮದ ಅರಿವಿಲ್ಲದೆ ಸುಮ್ಮನೆ ವಾದ ಮಾಡುವರು. ಹೊರಗಿನಿಂದ ನೋಡಲು ಈ ರಾಶಿಯವರು ಕಠೋರವಾಗಿ ಕಂಡರು ಹೆಚ್ಚು ಮೃದು ಸ್ವಭಾವದ ಜನ. ಅವರ ಭಾವನೆಗಳನ್ನು ಬಚ್ಚಿಟ್ಟುಕೊಳ್ಳುವರು. ಬೇರೆಯವರಲ್ಲಿ ದೋಷ ಹುಡುಕುವ ಸ್ವಭಾವ ಇರುತ್ತದೆ ಇವರಲ್ಲಿ. ಈ ರಾಶಿಯವರಿಗೆ ತಾಯಿಯ ಜೊತೆ ಹೆಚ್ಚಿನ ಬಾಂಧವ್ಯ ಇರುತ್ತದೆ.
ಇವರು ಜನರ ಜೊತೆ ಬೇಗ ಬೇರೆಯುವರು ಹಾಗು ಇವರ ಬುದ್ಧಿಶಕ್ತಿ ಚುರುಕ್ಕಾಗಿ ಇರುತ್ತದೆ. ಈ ರಾಶಿಯವರು ಯಾವುದನ್ನು ಸುಲಭವಾಗಿ ಮರೆಯುವುದಿಲ್ಲ. ನಿಯಮಗಳನ್ನು ಅಡವಳಿಸಿಕೊಂಡು ಪಾಲನೆ ಮಾಡುವ ವೃಶ್ಚಿಕ ರಾಶಿಯವರಿಗೆ ನಿಯಮ ಮುರಿಯುವ ಜನರನ್ನು ಕಂಡರೆ ಆಗುವುದಿಲ್ಲ.
ಧಾರ್ಮಿಕ ವಿಚಾರದಲ್ಲಿ ಇವರಿಗೆ ಹೆಚ್ಚಿನ ಆಸಕ್ತಿ ಇರುತ್ತದೆ. ಪ್ರೀತಿಪಾತ್ರರಿಗೆ, ಸ್ನೇಹಿತರು ಮತ್ತು ಕುಟುಂಬದವರಿಗೆ ಎಲ್ಲವನ್ನು ತ್ಯಾಗ ಬೇಕಾದರೂ ಮಾಡುವರು. ಈ ರಾಶಿಯವರು ಹೆಚ್ಚಿನ ಶ್ರಮದಿಂದ ಅವರ ಜೀವನದಲ್ಲಿ ಅಭಿವೃದ್ದಿ ಹೊಂದುತ್ತಾರೆ. ವಸ್ತುಗಳ ಸಂಗ್ರಹಣೆ ಮಾಡುವುದರಲ್ಲಿ ಈ ರಾಶಿಯ ಜನರಿಗೆ ಹೆಚ್ಚು ಒಲವು ಇರುತ್ತದೆ. ಹಣ ಗಳಿಕೆ ಮತ್ತು ಸಂಪತ್ತು ಸಂಗ್ರಹ ಮಾಡುವುದರಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವರು. ಈ ರಾಶಿಯವರು ಪ್ರೀತಿಯ ವಿಚಾರದಲ್ಲಿ ತುಂಬ ಭಾವ ಜೀವಿಗಳು. ವೃಶ್ಚಿಕ ರಾಶಿಯವರು ಹೆಚ್ಚು ಒಳ್ಳೆಯ ಸಂಗಾತಿಯಾಗಿ ಇರುವರು ಮತ್ತು ಪ್ರಾಮಾಣಿಕ ಹಾಗೂ ಬುದ್ಧಿವಂತ ಸಂಗಾತಿಯನ್ನು ಬಯಸುವರು.
ಪರಿವಾರದ ಜನರ ಬಗ್ಗೆ ಹೆಚ್ಚಿನ ಕಾಳಜಿ ಮಾಡುವ ಈ ಜನರು ಹೆಚ್ಚು ಉದಾರ ಮನಸ್ಸು ಉಳ್ಳವರು. ಏಕಾಗ್ರತೆ ಹೆಚ್ಚಿಗೆ ಇರುವ ಈ ರಾಶಿಯವರು ಸ್ವಲ್ಪ ಮೂಡಿಯಾಗಿ ಇರುವರು. ಇವರಿಗೆ ಎಲ್ಲರ ಮೇಲೆ ಹೆಚ್ಚು ಅನುಮಾನ ಪಡುವ ಗುಣ ಹೊಂದಿರುವರು. ವೃಶ್ಚಿಕ ರಾಶಿಯವರು ಹೆಚ್ಚು ಪೊಸೆಸಿವ್.
ಈ ರಾಶಿಯವರು ಜನರನ್ನು ನಂಬುವುದಕ್ಕೆ ಸ್ವಲ್ಪ ಅವಧಿ ತೆಗೆದುಕೊಳ್ಳುವರು. ಇವರು ಯಾರನ್ನು ಬೇಗ ನಂಬುವುದಿಲ್ಲ ಮತ್ತು ಎಚ್ಚರಿಕೆ ವಹಿಸುವರು. ಇವರು ಯಾರಿಂದಲೂ ಬೇಗ ಮೋಸ ಹೋಗುವುದಿಲ್ಲ. ರಾಜನೀತಿಯಲ್ಲಿ ಚತುರತೆ ಹೊಂದಿರುವರು ಈ ಜನರು ಯಾರಿಗೂ ಎದರುವುದಿಲ್ಲ. ಈ ರಾಶಿಯವರು ಪ್ರಕೃತಿಯನ್ನು ಹೆಚ್ಚು ಪ್ರೀತಿ ಮಾಡುವರು. ಯಾವುದೇ ವಿಷಯವಾದರೂ ಅದನ್ನು ಆಳವಾಗಿ ಯೋಚನೆ ಮಾಡಿ ಮುಂದುವರೆಯುವರು. ವೃಶ್ಚಿಕ ರಾಶಿಯವರು ಅವರಿಗೆ ಸಿಗುವ ಅವಕಾಶವನ್ನು ಚೆನ್ನಾಗಿ ಬಳಕೆ ಮಾಡಿಕೊಳ್ಳುವರು.
ಈ ರಾಶಿಯವರು ಬಹಳ ಯೋಚನೆ ಮಾಡಿ ಖರ್ಚು ಮಾಡುವರು. ಅವರ ರಹಸ್ಯವನ್ನು ಯಾರಿಗೂ ಬಿಟ್ಟುಕೊಡದ ಇವರು ಒಂದು ವೇಳೆ ಹೇಳಿದರೆ ಎಲ್ಲವನ್ನು ಹೇಳಿಬಿಡುವರು. ಈ ರಾಶಿಯವರು ಯಾವುದೇ ರೀತಿಯ ಸಮಸ್ಯೆಗಳು ಬಂದರು ಅದನ್ನು ಮೆಟ್ಟಿ ನಿಲ್ಲುವರು.
ಧೈರ್ಯವಂತ ವ್ಯಕ್ತಿಗಳಾಗಿ ಇರುವ ಇವರು ಅವರ ಗುರಿಯನ್ನು ಸಾಧಿಸೆ ತಿರುವರು. ರಾಜನೀತಿ, ಸಮಾಜ ಸೇವೆ, ಪೊಲೀಸ್, ಮಿಲಿಟರಿ, ಡಾಕ್ಟರ್, ಟೀಚರ್ ಈ ರೀತಿಯ ಕೆಲಸಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ರಾಶಿಯ ಜನರು ಸಮಾಗ್ರತೆ ಕಾಪಾಡಿಕೊಳ್ಳುವರು.
ಹೆಚ್ಚಿನ ಸವಾಲು ನೀಡುವ ಕೆಲಸ ಎಂದರೆ ಅವರ ನಿರ್ಧಾರಗಳನ್ನು ಬದಲಾವಣೆ ಮಾಡುವುದು. ಇನ್ನು ಈ ರಾಶಿಯವರು ಅವರ ತಪ್ಪುಗಳನ್ನು ಒಪ್ಪಿಕೊಳ್ಳಲು ನಿಜವಾಗಿ ಹೋರಾಟ ಮಾಡುವರು. ವೃಶ್ಚಿಕ ರಾಶಿಯವರು ಅವರಿಗೆ ನೋವು ನೀಡಿದ ಜನರನ್ನು ದ್ವೇಷ ಮಾಡಬಹುದು. ವೈಫಲ್ಯವನ್ನು ಗಂಭೀರವಾಗಿ ಮತ್ತು ವೈಯಕ್ತಿಕವಾಗಿ ಪರಿಗಣಿಸುವರು.
ವೃಶ್ಚಿಕ ರಾಶಿಯ ಜೊತೆ ಹೊಂದಾಣಿಕೆ ಆಗುವ ರಾಶಿಗಳು :-
ಕಟಕ ರಾಶಿ :-
ವೃಶ್ಚಿಕ ರಾಶಿ ಮತ್ತು ಕಟಕ ರಾಶಿಯ ಜನರದ್ದು ಭಾವೋದ್ರಿಕ್ತ ಸ್ವಭಾವ ಇಬ್ಬರಿಗೂ ಹೊಂದಾಣಿಕೆ ತರುತ್ತದೆ.
ಮಕರ ರಾಶಿ :-
ಮಕರ ರಾಶಿ ವೃಶ್ಚಿಕ ರಾಶಿಯವರ ಕಲ್ಪನೆಯನ್ನು ಅಭಿನಂದಿಸುತ್ತದೆ.
ಮೀನ ರಾಶಿ :-
ವೃಶ್ಚಿಕ ರಾಶಿಯ ಜನ ಮೀನ ರಾಶಿಯವರನ್ನು ಹೆಚ್ಚು ಪ್ರೀತಿ ಮಾಡುವರು ಹಾಗು ರಕ್ಷಣೆ ಮಾಡುವರು.
ವೃಶ್ಚಿಕ ರಾಶಿಯ ಜೊತೆ ಹೊಂದಾಣಿಕೆ ಆಗದ ರಾಶಿಗಳು :-
ತುಲಾ ರಾಶಿ :-ವೃಶ್ಚಿಕ ರಾಶಿಯವರ ಸ್ವಭಾವ ತುಲಾ ರಾಶಿಯ ಜನರಿಗೆ ಕಿರಿಕಿರಿ ಉಂಟು ಮಾಡುತ್ತದೆ ಮತ್ತು ಮೋಸ ಮಾಡುವಂತೆ ಪ್ರಚೋದನೆ ನೀಡುತ್ತದೆ.
ಸಿಂಹ ರಾಶಿ :-ತಿಳಿ ಮನಸಿನ ನೇರ ಸ್ವಭಾವದ ಸಿಂಹ ರಾಶಿಯವರಿಗೆ ವೃಶ್ಚಿಕ ರಾಶಿಯ ವರ್ತನೆ ಹಿಂಸೆ ಎನಿಸುತ್ತದೆ.
ಮಿಥುನ ರಾಶಿ :-ಬೆರೆಯುವ ಮಿಥುನ ರಾಶಿಗೆ ಖಾಸಗಿ ಆಗಿರುವ ವೃಶ್ಚಿಕ ರಾಶಿ ವಿರುದ್ಧವಾಗಿ ಇದೆ. ಮಿಥುನ ರಾಶಿಯವರ ಸ್ವಭಾವ ಅಸೂಯೆ ಪಡುವ ವೃಶ್ಚಿಕ ರಾಶಿಯನ್ನು ಪ್ರಚೋದಿಸುತ್ತದೆ.ಇವರಿಗೆ ಅಸಿಡಿಟಿ, ಕತ್ತು ಮತ್ತು ಕರುಳಿಗೆ ಸಂಬಂಧಪಟ್ಟ ನೋವು, ಪೈಲ್ಸ್, ಜನನಾಂಗಕ್ಕೆ ಸಂಬಂಧಪಟ್ಟ ಖಾಯಿಲೆ ಹಾಗು ಅಲ್ಸರ್ ಖಾಯಿಲೆಗಳು ಕಾಡಬಹುದು.ಇವರು ಹೆಚ್ಚಿನ ಕೋಪವನ್ನು ಕಂಟ್ರೋಲ್ ಮಾಡಿಕೊಳ್ಳಬೇಕು. ಖಾರದ ಪದಾರ್ಥಗಳನ್ನು ಸೇವನೆ ಮಾಡಬಾರದು, ಮಂಗಳವಾರ ಸಾಲ ಪಡೆಯಬಾರದು.
ಪರಿಹಾರ :-ಆಂಜನೇಯನ ದೇವಸ್ಥಾನದಲ್ಲಿ ” ಹನುಮನ್ ಚಾಲಿಸಾ ” ಅಂತ ಜಪ ಮಾಡಬೇಕು ಮತ್ತು ” ಓಂ ಮಂಗಳಾಯ ನಮಃ ” ಮಂತ್ರವನ್ನು 108 ಬಾರಿ ಜಪ ಮಾಡಬೇಕು ಅದರಿಂದ ಒಳ್ಳೆಯ ಫಲ ಸಿಗುತ್ತದೆ.ವ್ಯಕ್ತಿಯ ಗುಣ ಸ್ವಭಾವ ಅವರ ಸುತ್ತ ಇರುವ ಜನ ಮತ್ತು ಬೆಳೆದು ಬಂದ ಪರಿಸರದ ಮೇಲೆ ಅವಲಂಬಿತವಾಗಿ ಇರುತ್ತದೆ.
ನಿಮ್ಮ ಭವ್ಯ ಭವಿಷ್ಯದ ದಾರಿದೀಪಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್: ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು 9606655519 ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ 9606655519