Scorpio Horoscope April Month 2023: ಏಪ್ರಿಲ್ ತಿಂಗಳಿನಲ್ಲಿ ವೃಶ್ಚಿಕ ರಾಶಿಯವರ (Scorpio) ಮಾಸ‌ಭವಿಷ್ಯವು ಯಾವ ರೀತಿಯದ್ದಾಗಿದೆ ಎಂದು ತಿಳಿಯೋಣ ಬನ್ನಿ. ವೃಷಭರಾಶಿಗೆ ವೃಶ್ಚಿಕ ರಾಶಿಯ (Scorpio) ಶುಕ್ರನು 6 ಏಪ್ರಿಲ್’ನಂದು ಪ್ರವೇಶ ಮಾಡುತ್ತಾನೆ. ಇದೇ ಏಪ್ರಿಲ್ ತಿಂಗಳ ( April Month) 14ನೇ ತಾರೀಕಿನಂದು ರವಿಯು ಮೇಷ ರಾಶಿಗೆ (Aries) ಬರಲಿದ್ದಾನೆ. ಹಾಗೆ 22ನೇ ತಾರೀಕಿನಂದು ಗುರುವು ಸಹ ಮೇಷ (Aries) ರಾಶಿಯನ್ನು ಪ್ರವೇಶ ಮಾಡುತ್ತಾನೆ. ಇವು ವೃಶ್ಚಿಕ (Scorpio) ರಾಶಿಯ ಗ್ರಹ ಸಂಚಾರಗಳಾಗಿದ್ದು ಇದರಿಂದಾಗಿ ಯಾವ ಫಲಗಳು ಸಿಗುತ್ತದೆ ಎಂದು ನೋಡೊಣ.

Scorpio Horoscope April Month

ಏಪ್ರಿಲ್ ತಿಂಗಿನಲ್ಲಿ ವೃಶ್ಚಿಕ ರಾಶಿಯಲ್ಲಿ‌ ಗುರುವು ಅಷ್ಟಮದಲ್ಲಿ ಬರಲಿದ್ದಾನೆ . ಇದರಿಂದ ಕೆಟ್ಟದ್ದಾಗುವುದರ ಜೊತೆಗೆ ಒಂದಷ್ಟು ಒಳ್ಳೆಯ ಫಲಗಳನ್ನು ಸಹ ತರಲಿದ್ದಾನೆ ಗುರು. ಈ ಏಪ್ರಿಲ್ ತಿಂಗಳಿನಲ್ಲಿ ಒಂದು ಸುಯೋಗವನ್ನು ವೃಶ್ಚಿಕ ರಾಶಿಯವರು ಪಡೆಯಲಿದ್ದಾರೆ. ಜನವರಿ 2023ರಿಂದ ಪ್ರಾರಂಭವಾದ ಅರ್ಧಾಷ್ಟಮ ಶನಿಯಿಂದಾಗಿ ಇಷ್ಟು ದಿನ ಒಂದಷ್ಟು ಕೆಟ್ಟ ಪರಿಣಾಮಗಳನ್ನು ಈ ರಾಶಿಯವರು ಅನುಭವಿಸಿದ್ದಾರೆ.

ಇದಲ್ಲದೆ ವೃಶ್ಚಿಕ ರಾಶಿಯವರು ಏಪ್ರಿಲ್ ತಿಂಗಳಿನಲ್ಲಿಯೂ ಸಹ ಒಂದಷ್ಟು ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಸ್ವಾಭಿಮಾನದ ಪ್ರಶ್ನೆ ಏಳುವ ಸಾಧ್ಯತೆಗಳಿದ್ದು, ಈ ರಾಶಿಯವರ ಧೈರ್ಯ ಕುಸಿಯುವ ಸಾಧ್ಯತೆಯಿದೆ. ಜೀವನದ ಪರೀಕ್ಷೆಗಳಲ್ಲಿ ಮುಖ್ಯವಾದ ಒಳ ಏಟುಗಳು ಹೆಚ್ಚಾಗುತ್ತವೆ. ಒಳ ಏಟುಗಳು ಎಂದರೆ ನಿಮಗೆ ಅತಿಪ್ರಿಯವಾದ ಹಿತಶತ್ರುಗಳು ನಿಮ್ಮ‌ ಮನಸ್ಸಿನ ಮೇಲೆ ಒತ್ತಡ ತರುವುದರಿಂದ ಅಥವಾ ನಿಮಗೆ ಸಣ್ಣದಾಗಿ ಮೋಸ ಮಾಡುವುದರಂದ ಉಂಟಾಗುವ ಮಾನಸಿಕ ಹಿಂಸೆಗಳನ್ನು ಒಳ ಏಟುಗಳು ಎಂದು ಕರೆಯಲಾಗುತ್ತದೆ. ಇದು ಈ ತಿಂಗಳಲ್ಲಿ ವೃಶ್ಚಿಕ ರಾಶಿಯವರನ್ನು ಕಾಡಲಿದೆ‌.

ಏಪ್ರಿಲ್ 22ರಂದು ಗುರುವು ಆರನೇ ಮನೆಯನ್ನು ಪ್ರವೇಶಿಸುತ್ತಾನೆ. ಇದರ ನಂತರ ಗುರುಬಲವು ಕುಗ್ಗುತ್ತದೆ. ಇಲ್ಲಿಯ ತನಕ ಗುರುವಿನ ಬಲ ನಿಮ್ಮ ಜೊತೆಯಲ್ಲಿ ಇದ್ದೆ ಇರುತ್ತದೆ. ತದನಂತರ ಕೊನೆಯ ಒಂದು ವಾರ ಮಾತ್ರ ಗುರುವಿನ ಕೆಲವು ಬಾಧೆಗಳು ತಾಕಬಹುದು. ಗುರುಬಲ ಕಡಿಮೆಯಾದ ನಂತರ ವ್ಯವಹಾರಗಳಲ್ಲಿ ತೊಡಕುಗಳು ಬಾಧಿಸುತ್ತವೆ. ಕುಟುಂಬದ ಗುರು ಹಿರಿಯರ ಆಶೀರ್ವಾದ ಬಲವು ನಿಮ್ಮ ಜೊತೆಯಲ್ಲಿ ಇರುವುದಿಲ್ಲ. ಗುರು ಸಮಾನರಲ್ಲಿ ವೈಮನಸ್ಸು ಉಂಟಾಗಬಹುದು. ಮಾತಿನಲ್ಲಿ ಎಚ್ಚರಿಕೆ ಅಗತ್ಯ.

ಏಪ್ರಿಲ್ ತಿಂಗಳಿನಲ್ಲಿ ಪ್ರಮುಖವಾಗಿ ವೃಶ್ಚಿಕ ರಾಶಿಯಲ್ಲಿ ಗುರುವಿನ ಸ್ಥಾನ ಬದಲಾಗಲಿದ್ದು ಇದರಿಂದಾಗಿ ಒಂದಷ್ಟು ಶುಭ ಫಲಗಳನ್ನು ಈ ತಿಂಗಳಿನಲ್ಲಿ ನಿರೀಕ್ಷಿಸಬಹುದು. ರವಿಯು ಐದು ಹಾಗೂ ಆರನೇ ಮನೆಯಲ್ಲಿ ಸಂಚಾರ ಮಾಡುತ್ತಾನೆ. ಇದು ರವಿಯ ಉಚ್ಛಕ್ಷೇತ್ರವಾದರು ಸಹ ಷಷ್ಟ ಸ್ಥಾನವು ವೃಶ್ಚಿಕ ರಾಶಿಗೆ ಅಷ್ಟೊಂದು ಉತ್ತಮಫಲಗಳನ್ನು ನೀಡಲಾರದು. ಇನ್ನೇನು ಕೈಗೆ ಸಿಗಬೇಕು ಎನ್ನುವಷ್ಟರಲ್ಲಿ ನಿಮ್ಮ ವಸ್ತುವು ಜಾರಿ ಹೋಗಬಹುದು. ಆಗಬೇಕಾದ ಕೆಲಸಗಳು ಆಗದೆ ಹೋಗಬಹುದು.

ಕುಜನು ವೃಶ್ಚಿಕ ರಾಶಿಯಲ್ಲಿ ಎಂಟನೇ ಮನೆಯಲ್ಲಿ ಸಂಚಾರ ಮಾಡುತ್ತಿದ್ದು, ಅನಾರೋಗ್ಯಗಳನ್ನು ತರುತ್ತಾನೆ. ದೇಹಕ್ಕೆ ಪೆಟ್ಟುಗಳು ಬೀಳುವ ಸಾಧ್ಯತೆಯಿದ್ದು, ಆದಷ್ಟು ವಾಹನ ಸವಾರರು ಎಚ್ಚರಿಕೆಯಿಂದ ಇರಿ. ಮಾನಸಿಕವಾಗಿ ಸಹ ಈ ಸಮಯವು ಜರ್ಜರ ಸ್ಥಿತಿಯನ್ನು ತಂದೊಡ್ಡಲಿದ್ದು ಜಾಗರೂಕತೆಯಿಂದ ಇರುವುದು ಅನಿವಾರ್ಯವಾಗುತ್ತದೆ. ಇಲ್ಲವಾದಲ್ಲಿ ವೃಥಾ ಅಪವಾದಕ್ಕೆ ಗುರಿಯಾಗಬೇಕಾದಿತು. ಇನ್ನು ಬುಧನು ಆರನೇ ಮನೆಯಲ್ಲಿ ಸಂಚರಿಸಿದ್ದು ಬಹಳ ಶುಭವು ಅಲ್ಲದ, ಕೆಟ್ಟದ್ದನ್ನು ಮಾಡದ ಸಮಸ್ಥಿತಿಯನ್ನು ತರಲಿದ್ದಾನೆ. ಆಗಬೇಕಾದ ಕೆಲಸಗಳಲ್ಲಿ ಹಿನ್ನಡೆ ಉಂಟಾಗುವ ಸಾಧ್ಯತೆಗಳೆ ಹೆಚ್ಚಿವೆ.

ಶುಕ್ರ ಸ್ಥಾನವು ಬದಲಾಗಲಿದ್ದು, ಒಂದಷ್ಟು ಒಳ್ಳೆಯ ಫಲಗಳನ್ನು ಶುಕ್ರನಿಂದ ನಿರೀಕ್ಷಿಸಬಹುದು. ಮದುವೆಯ ಕಾರ್ಯಗಳು ನಿಶ್ಚಯವಾಗಲಿದ್ದು, ಮನೆಯಲ್ಲಿ ಮಂಗಳಕಾರ್ಯಕ್ಕೆ ಮುನ್ನುಡಿ ಬರೆಯುತ್ತಿರಿ. ಹಣಕಾಸಿನ ವ್ಯವಸ್ಥೆಯಲ್ಲಿ ಒಳಿತಾಗಲಿದೆ. ಶನಿಯು ನಾಲ್ಕನೆ ಮನೆಯಲ್ಲಿ ಇರುವುದರಿಂದ ಮೂಳೆ ಸಂಬಂಧಿತ ಖಾಯಿಲೆಗಳಲ್ಲಿ ಕೊಂಚ ಬಳಲಲಿದ್ದಿರಿ. ಅನಾನುಕೂಲ ಉಂಟಾಗಲಿದೆ. ರಾಹು ಆರನೇ ಮನೆಯಲ್ಲಿ ಇರುವುದರಿಂದ ಭೂ ವ್ಯವಹಾರಗಳನ್ನು ಮಾಡುತ್ತಿರುವವರಿಗೆ ಶುಭವಾಗುತ್ತದೆ. ಇದು ಏಪ್ರಿಲ್ 2023ರ ವೃಶ್ಚಿಕ ರಾಶಿಯವರ ಮಾಸ ಭವಿಷ್ಯವಾಗಿದೆ.

ಇದನ್ನೂ ಓದಿ..Leo Women Horoscope: ಸಿಂಹ ರಾಶಿಯ ಸ್ತ್ರೀ ರಹಸ್ಯ, ಈ ರಾಶಿಯ ಹುಡುಗಿಯರು ಯಾಕೆ ಹೀಗೆ?

By

Leave a Reply

Your email address will not be published. Required fields are marked *