ವೃಶ್ಚಿಕ ರಾಶಿಯವರ ವಾರಭವಿಷ್ಯ ಜನವರಿ 17 ರಿಂದ 23ರವರೆಗೆ ಹೇಗಿರತ್ತೆ? ತಿಳಿದುಕೊಳ್ಳಿ

0 2

Scorpio astrology on weekly predictions: ಪ್ರತೀ ವಾರ ಆರಂಭವಾಗುತ್ತಿದ್ದಂತೆ ಪ್ರತಿಯೊಬ್ಬರಿಗೂ ಈ ವಾರ ಹೇಗಿರುತ್ತದೆ ಎನ್ನುವ ಬಗ್ಗೆ ತಿಳಿದುಕೊಳ್ಳಲು ಕುತೂಹಲವಿರುತ್ತದೆ. ವೃಶ್ಚಿಕ ರಾಶಿಯವರಿಗೆ ಈ ವಾರ ಹೊಸ ಯೋಜನೆಗಳು ಶಿಕ್ಷಣ ವಿದೇಶ ಪ್ರವಾಸ ಹಣಕಾಸು ಆಸ್ತಿ-ಅಂತಸ್ತು ವಿಚಾರದಲ್ಲಿ ಭವಿಷ್ಯ ಹೇಗಿದೆ ಎನ್ನುವುದರ ಬಗ್ಗೆ ವಿಸ್ತಾರವಾಗಿ ತಿಳಿಯೋಣ.

ಶುಭಕೃತ್ ನಾಮ ಸಂವತ್ಸರ ಉತ್ತರಾಯಣ ಹೇಮಂತ ಋತು ಪುಷ್ಯಮಾಸ ಕೃಷ್ಣ ಪಕ್ಷ ತಾ 17.01.23 to 23.01.23 ರವರೆಗೆ 15.01.23. ಮಕರ ಸಂಕ್ರಾಂತಿ ಮಕರರಾಶಿಗೆ ಸೂರ್ಯನ ಪ್ರವೇಶ ತಾ 17.01.23 ಮಕರದಿಂದ ಕುಂಭರಾಶಿ ಗೆ ಶನಿ ಪ್ರವೇಶ ಈ ವಾರ ಚಿತ್ತಾ ನಕ್ಷತ್ರದಿಂದ ಶ್ರವಣಾ ನಕ್ಷತ್ರ ದವರೆಗೆ ಚಂದ್ರನ ಸಂಚಾರ ಇರಲಿದೆ. ನಿಮ್ಮ ಸಮಯ ಈಗ ಚೆನ್ನಾಗಿದೆ ಅದರೆ ಮೂರನೇ ಮನೆ ಪರಾಕ್ರಮ ಸ್ಥಾನದಲ್ಲಿ ಇದ್ದ ಶನಿ ಈಗ ನಾಲ್ಕನೇ ಮನೆ ಸುಖಸ್ಥಾನಕ್ಕೆ ಬರುತ್ತಾನೆ.

ನಾಲ್ಕರ ಶನಿ ಕೆಡುಕು ಮಾಡದಿದ್ದರೂ ಲಾಭವನ್ನೂ ಕೊಡುವುದಿಲ್ಲ. ತಟಸ್ಥನಾಗಿರುತ್ತಾನೆ. ಆದರೆ ಈಗ ನಿಮಗೆ ಗುರು ಹಾಗೂ ರಾಹುಬಲ ಚೆನ್ನಾಗಿದೆ. ನಿಮಗೆ ಸಂಬಂಧ ಪಟ್ಟ ಶುಭಕಾರ್ಯಗಳು ನಡೆಯುವ ಸಮಯ. ನಿಮ್ಮ ಪ್ರಯತ್ನದಲ್ಲಿ ಹೆಚ್ಚಿನ ನಂಬಿಕೆ ಇಡಿರಿ. ಧನಾದಾಯವು ನಿಮ್ಮ ನಿರೀಕ್ಷೆಯಷ್ಟಿರುತ್ತದೆ. ನಿಮ್ಮ ಶತ್ರುಗಳನ್ನು ಅವರದೇ ತಂತ್ರಗಳಿಂದ ಮಣಿಸುವಿರಿ. ಕುಲುಮೆ ಕೆಲಸ ಮಾಡುವವರಿಗೆ ಹೆಚ್ಚು ಕೆಲಸ ದೊರೆಯುತ್ತದೆ.

ವಿದ್ಯಾರ್ಥಿಗಳು ಅಪೇಕ್ಷಿತ ವಿಷಯಗಳ ಬಗ್ಗೆ ಅಭ್ಯಾಸ ಮುಂದುವರಿಸಬಹುದು. ವಿದೇಶದಲ್ಲಿ ವೈದ್ಯರಾಗಿರುವವರಿಗೆ ಬೇಡಿಕೆ ಬರುತ್ತದೆ. ಬಂಧುಗಳಲ್ಲಿ ವಿವಾಹ ಸಂಬಂಧ ಬೆಳೆಯುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ಅನಿರೀಕ್ಷಿತ ತಿರುವು ಪಡೆದು ಹೆಚ್ಚು ಸಂಪಾದನೆ ಮಾಡುವ ಯೋಗವಿದೆ. ಮನೆಯ ಅಲಂಕಾರಿಕ ವಸ್ತುಗಳಿಗಾಗಿ ಹೆಚ್ಚು ಹಣ ಖರ್ಚು ಮಾಡುವಿರಿ. ವೃತ್ತಿಯಲ್ಲಿ ಹಿತಶತ್ರುಗಳು ಬೆಳೆಯುವ ಸಾಧ್ಯತೆಗಳಿವೆ.

ಇದನ್ನೂ ಓದಿ..ಕಟಕರಾಶಿ: ಒಬ್ಬ ವ್ಯಕ್ತಿಯಿಂದ ನಿಮ್ಮ ಜೀವನವೇ ಬದಲಾಗಲಿದೆ

ಬೇಕರಿ ಪದಾರ್ಥಗಳನ್ನು ತಯಾರಿಸಿ ಮಾರುವವರಿಗೆ ಹೆಚ್ಚಿನ ಲಾಭವಿರುತ್ತದೆ ಅವಿವಾಹಿತರಿಗೆ ವಿವಾಹ ಆಗುವ ಸಮಯ ನೀವು ಯಾವುದೇ ಕೆಲಸ ಮಾಡಿದರೂ ಅದರಲ್ಲಿ ವಿಜಯಿಯಾಗುತ್ತೀರಿ ಶತ್ರುಗಳು ದೂರವಾಗುತ್ತಾರೆ. ಶೇರ್ಸ್ನಲ್ಲಿ ಹಣ ಹೂಡಿದರೆ ಲಾಭ ಇದೆ. ಮಕ್ಕಳಿಗೆ ಸಂಬಂಧಪಟ್ಟಹಾಗೆ ಶುಭಸುದ್ದಿ‌ ಇದೆ ಕುಟುಂಬದಲ್ಲಿ ನೆಮ್ಮದಿ ಇದೆ. ಉನ್ನತ ವ್ಯಾಸಂಗಕ್ಕೆ ಅವಕಾಶ ಇದೆ. ಹಣಕಾಸು ಸ್ಥಿತಿ ಉತ್ತಮವಾಗಿದೆ.

Leave A Reply

Your email address will not be published.