ಕೆಲವೊಮ್ಮೆ ಮನೆಯಲ್ಲಿ ಇಂತಹ ಸಂಗತಿ ನಡೆದಂತ ಸಂದರ್ಭದಲ್ಲಿ ಏನು ಮಾಡಬೇಕು ಅನ್ನೋದು ತಿಳಿಯುವುದಿಲ್ಲ ಹಾಗಾಗಿ ಇಂತಹ ಕೆಲವೊಂದು ಸೂಕ್ತ ಮನೆಮದ್ದು ತಿಳಿಯುವುದು ಉತ್ತಮ. ಯಾವುದೇ ಸಂದರ್ಭದಲ್ಲಿ ಆಕಸ್ಮಿಕವಾಗಿ ಚೇಳು ಏನಾದ್ರು ಕಚ್ಚಿದರೆ ಅಂತಹ ಸಂದರ್ಭದಲ್ಲಿ ಏನು ಮಾಬೇಕು ಅನ್ನೋದಾದರೆ ಮನೆಯಲ್ಲಿ ಬಳಸುವಂತ ನಿಂಬೆಹಣ್ಣು ಕಾರ್ಯ ರೂಪಕ್ಕೆ ಬರುತ್ತದೆ. ಹೌದು ನಿಂಬೆ ಹಣ್ಣು ಬರಿ ಅಡುಗೆಗೆ ಮಾತ್ರವಲ್ಲದೆ ಹಲವಾರು ಔಷಧಿ ಗುಣಗಳನ್ನು ಹೊಂದಿದೆ ಹಾಗೂ ಸಾಮಾನ್ಯ ದೈಹಿಕ ಸಮಸ್ಯೆಗಳನ್ನು ನಿವಾರಿಸುತ್ತದೆ.
ನಿಂಬೆ ಗಾತ್ರದಲ್ಲಿ ಚಿಕ್ಕದಾದ್ರು ಕೆಲ್ಸದಲ್ಲಿ ದೊಡ್ಡ ಗುಣಗಳನ್ನು ಹೊಂದಿದೆ, ಯಾವುದೇ ವಿಷ ಜಂತುಗಳು ಕಚ್ಚಿದಾದ ಮನುಷ್ಯ ಹೆಚ್ಚು ಭಯ ಪಡದೆ ಸರಿಯಾದ ಚಿಕಿತ್ಸೆಯನ್ನು ತಗೆದುಕೊಳ್ಳಬೇಕಾಗುತ್ತದೆ. ಯಾಕೆಂದರೆ ವಿಷ ಜಂತುಗಳನ್ನು ಕಡಿದು ಸಾವನ್ನಪ್ಪುವದಕಿಂತ ಅದರ ಭಯದಲ್ಲೇ ಹೆಚ್ಚು ಮಂದಿ ಸಾವನ್ನಪ್ಪಿರುವಂತ ಉದಾಹರಣೆಗಳು ಸಾಕಷ್ಟಿವೆ, ಆಗಾಗಿ ಯಾವುದೇ ಸಂದರ್ಭದಲ್ಲಿ ಹೆಚ್ಚು ಭಯ ಪಡದೆ ಸರಿಯಾದ ಸಮಯಕ್ಕೆ ಸರಿಯಾದ ಚಿಕಿತ್ಸೆಯನ್ನು ತಗೆದುಕೊಳ್ಳುವುದು ಉತ್ತಮ.
ವಿಷ್ಯಕ್ಕೆ ಬರೋಣ ಚೇಳು ಕಚ್ಚಿದಾದ ನಿಂಬೆ ರಸವನ್ನು ಯಾವ ರೀತಿ ಬಳಸಬೇಕು ಅನ್ನೋದನ್ನ ಹೇಳುವುದಾದರೆ, ನಿಂಬೆ ರಸದಲ್ಲಿ ಒಂದೆರಡು ಕರಿಮೆಣಸು ಕಾಳನ್ನು ಅರೆದು ಆ ರಸವನ್ನು ಚೇಳು ಕುಟುಕಿದ ಜಾಗಕ್ಕೆ ಹಚ್ಚುವುದರಿಂದ ವಿಷ ಇಳಿಯುವುದು. ಈ ಮನೆಮದ್ದು ಉತ್ತಮ ಪರಿಹಾರವನ್ನು ನೀಡಬಲ್ಲದು. ನಂತರ ನಿಮ್ಮ ಹತ್ತಿರದ ವೈದ್ಯರನ್ನು ಕೂಡ ಭೇಟಿನೀಡಬಹುದು.