ಬಹಳಷ್ಟು ಜನರು ಕೊರೋನ ವೈರಸ್ ಕಾರಣದಿಂದ ಸಾವನ್ನಪ್ಪಿದ್ದಾರೆ ಅವರ ಮಕ್ಕಳು ಅನಾಥರಾಗಿದ್ದಾರೆ. ಕೊರೋನ ವೈರಸ್ ನಿಂದ ತಂದೆ ತಾಯಿಯನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗಾಗಿ ಒಂದು ಹೊಸ ಸ್ಕಾಲರ್ ಶಿಪ್ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಎಸ್ ಬಿಐ ಸುರಕ್ಷಾ ಸಪೋರ್ಟ್ ಸ್ಕಾಲರ್ ಶಿಪ್ ಗೆ ಅರ್ಜಿ ಹೇಗೆ ಸಲ್ಲಿಸಬಹುದು, ಯಾವೆಲ್ಲಾ ದಾಖಲಾತಿಗಳು ಬೇಕು ಎಂಬೆಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ವಿದ್ಯಾರ್ಥಿಗಳಿಗೆ ಹೊಸದಾಗಿ ಸ್ಕಾಲರ್ ಶಿಪ್ ಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಎಸ್ ಬಿಐ ಜನರಲ್ ಸುರಕ್ಷಾ ಸಪೋರ್ಟ್ ಸ್ಕಾಲರ್ ಶಿಪ್ ಈ ಸ್ಕಾಲರ್ ಶಿಪ್ ಗೆ ಒಂಭತ್ತನೆ ತರಗತಿಯಿಂದ ದ್ವಿತೀಯ ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಸ್ಕಾಲರ್ ಶಿಪ್ ಅಡಿಯಲ್ಲಿ ವಿದ್ಯಾರ್ಥಿಗಳಿಗೆ 29,500 ರೂಪಾಯಿ ದೊರೆಯಲಿದೆ.
ಡಿಗ್ರಿ ಓದುತ್ತಿರುವ ವಿದ್ಯಾರ್ಥಿಗಳು, ಟೆಕ್ನಿಕಲ್ ಮತ್ತು ಪ್ರೊಫೆಷನಲ್ ಕೋರ್ಸ್ ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ 38,500 ರೂಪಾಯಿ ದೊರೆಯಲಿದೆ. ಕಂಪ್ಯೂಟರ್ ನಲ್ಲಿ ಆಫೀಷಿಯಲ್ ವೆಬ್ಸೈಟ್ ಓಪನ್ ಮಾಡಿ ಅಲ್ಲಿ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೊಡಲಾಗಿದೆ. ಯೋಜನೆಗೆ ಕೋವಿಡ್ 19 ವೈರಸ್ ಗೆ ಬಲಿಯಾದವರ ಮಕ್ಕಳು ಅರ್ಜಿ ಸಲ್ಲಿಸಬಹುದು. ಸ್ಕಾಲರ್ ಶಿಪ್ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 31.
ಅರ್ಜಿ ಸಲ್ಲಿಸುವ ವಿದ್ಯಾರ್ಥಿ ಭಾರತ ದೇಶದ ವಿದ್ಯಾರ್ಥಿಯಾಗಿರಬೇಕು. ಕೊರೋನ ವೈರಸ್ ನಿಂದ ತಂದೆ, ತಾಯಿ ಅಥವಾ ಕುಟುಂಬದಲ್ಲಿ ಸಂಪಾದನೆ ಮಾಡುತ್ತಿರುವವರು ಮರಣ ಹೊಂದಿದರೆ ಅಂಥವರ ಮಕ್ಕಳು ಅರ್ಜಿ ಸಲ್ಲಿಸಬಹುದು. ಒಂಭತ್ತನೆ ತರಗತಿಯಿಂದ ದ್ವಿತೀಯ ಪಿಯುಸಿ, ಡಿಗ್ರಿ ಪ್ರೊಫೆಷನಲ್ ಕೋರ್ಸ್ ಮತ್ತು ಟೆಕ್ನಿಕಲ್ ಕೋರ್ಸ್ ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಮಾತ್ರ ಸ್ಕಾಲರ್ ಶಿಪ್ ಪಡೆಯಬಹುದು.
ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ವರಮಾನ 6 ಲಕ್ಷ ರೂಪಾಯಿ ಒಳಗಿರಬೇಕು. ವಿದ್ಯಾರ್ಥಿಗಳ ಪಾಸ್ ಪೋರ್ಟ್ ಸೈಜ್ ಫೋಟೊ, ಆಧಾರ್ ಕಾರ್ಡ್, ವಿದ್ಯಾರ್ಥಿಯ ಕುಟುಂಬದ ಆದಾಯ ಪ್ರಮಾಣ ಪತ್ರ, ವಿದ್ಯಾರ್ಥಿಯ ಹಿಂದಿನ ಮಾರ್ಕ್ಸ್ ಕಾರ್ಡ್, ವಿದ್ಯಾರ್ಥಿಯು ಮುಂದಿನ ತರಗತಿಗೆ ದಾಖಲಿಸಿದ ಬಗ್ಗೆ ಪ್ರೂಫ್, ಕೊರೋನ ವೈರಸ್ ಕಾರಣದಿಂದ ಮರಣ ಹೊಂದಿದ ತಂದೆ-ತಾಯಿಯರ ಮರಣ ಪ್ರಮಾಣ ಪತ್ರ, ವಿದ್ಯಾರ್ಥಿಯ ಅಥವಾ ಪಾಲಕರ ಪಾಸ್ ಬುಕ್ ಪ್ರತಿ ಬೇಕಾಗುತ್ತದೆ.
ಕಂಪ್ಯೂಟರ್ ನಲ್ಲಿ ಅಪ್ಲೈ ಮಾಡುವುದಾದರೆ ಕೆಳಗಡೆ ಅಪ್ಲೈ ನೌ ಎಂಬ ಆಪ್ಷನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿದಾಗ ಈಗಾಗಲೆ ರಿಜಿಸ್ಟ್ರೇಷನ್ ಮಾಡಿಕೊಂಡಿದ್ದರೆ ಲಾಗಿನ್ ಆಗಬೇಕು ಒಂದು ವೇಳೆ ಮೊದಲ ಬಾರಿ ಓಪನ್ ಮಾಡುತ್ತಿರುವುದಾದರೆ ರಿಜಿಸ್ಟ್ರೇಷನ್ ಮಾಡಿಸಬೇಕು. ನಂತರ ಲಾಗಿನ್ ಆಗಬೇಕು ಕೆಳಗಡೆ ಸ್ಟಾರ್ಟ್ ಅಪ್ಲಿಕೇಷನ್ ಎಂಬ ಆಪ್ಷನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಬೇಕು
ಆಗ ಸ್ಟೂಡೆಂಟ್ಸ್ ಪರ್ಸನಲ್ ಡಿಟೇಲ್ಸ್ ಎಂದು ಕೇಳುತ್ತದೆ ಆದರೆ ಈ ಫಾರ್ಮ್ ಅನ್ನು ತುಂಬುವುದು ಅವಶ್ಯಕತೆ ಇರುವುದಿಲ್ಲ. ಎರಡನೆಯದಾಗಿ ಎಜುಕೇಶನ್ ಡಿಟೇಲ್ಸ್ ಎಂದು ಕೇಳುತ್ತದೆ ಅದನ್ನು ಕ್ಲಿಕ್ ಮಾಡಿ ಓದುತ್ತಿರುವ ಕೋರ್ಸ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹಾಕಬೇಕು ನಂತರ ಫ್ಯಾಮಿಲಿ ಮೆಂಬರ್ ಎಂಬ ಆಪ್ಷನ್ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ವಿದ್ಯಾರ್ಥಿಯ ಕುಟುಂಬದಲ್ಲಿ ಆದಾಯ ಸಂಪಾದನೆ ಮಾಡುವವರ ಹಾಗೂ ಕುಟುಂಬದ ಇತರೆ ಸದಸ್ಯರ ಬಗ್ಗೆ ಮಾಹಿತಿ ಹಾಕಬೇಕು.
ಮೂರನೆಯದಾಗಿ ಡಾಕ್ಯೂಮೆಂಟ್ಸ್ ಎಂಬ ಆಪ್ಶನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ ದಾಖಲಾತಿಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ. ನಂತರ ಬ್ಯಾಂಕ್ ಡಿಟೇಲ್ಸ್ ಎಂಬ ಆಪ್ಷನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ ವಿದ್ಯಾರ್ಥಿಯ ಅಥವಾ ವಿದ್ಯಾರ್ಥಿಯ ಕುಟುಂಬದವರ ಬ್ಯಾಂಕ್ ಡಿಟೇಲ್ಸ್ ಕೊಡಬೇಕು, ಹೆಸರು, ಅಕೌಂಟ್ ನಂಬರ್ ಇತ್ಯಾದಿ ಮಾಹಿತಿಯನ್ನು ಹಾಕಬೇಕು. ನಂತರ ಮೋರ್ ಅಬೌಟ್ ಯುವರ್ ಸೆಲ್ಫ್ ಎಂಬ ಆಪ್ಷನ್ ಕಾಣಿಸುತ್ತದೆ ಆಪ್ಷನ್ ಅನ್ನು ಕ್ಲಿಕ್ ಮಾಡಿ ಅಲ್ಲಿ ಕೇಳಿದ ಪ್ರಶ್ನೆಗಳಿಗೆ ಈ ಸ್ಕಾಲರ್ ಶಿಪ್ ಬಗ್ಗೆ ನಿಮಗೆ ಗೊತ್ತಿರುವ ಉತ್ತರವನ್ನು ನೀಡಬೇಕು.
ನಂತರ ಸಣ್ಣ ಬಾಕ್ಸ್ ಬರುತ್ತದೆ ಅದನ್ನು ಕ್ಲಿಕ್ ಮಾಡಿ ಪ್ರಿವ್ಯೂ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ಆಗ ನೀವು ತುಂಬಿದ ಕಾಲಮ್ ಗಳು, ಯಾವೆಲ್ಲಾ ದಾಖಲಾತಿಗಳನ್ನು ಅಪ್ ಲೋಡ್ ಮಾಡಿದ್ದಾರೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ತೋರಿಸುತ್ತದೆ. ನಂತರ ಫೈನಲ್ ಸಬ್ಮಿಟ್ ಮಾಡಬೇಕು ಅದಾದ ನಂತರ ಪ್ರಿಂಟೌಟ್ ಬರುತ್ತದೆ ಅದನ್ನು ತೆಗೆದಿಟ್ಟುಕೊಳ್ಳಬೇಕು. ಸ್ವಲ್ಪ ದಿನಗಳ ನಂತರ ಶಾರ್ಟ್ ಲೀಸ್ಟ್ ಬಿಡುಗಡೆ ಮಾಡುತ್ತಾರೆ ಶಾರ್ಟ್ ಲೀಸ್ಟ್ ನಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳ ಹೆಸರು ಇರುತ್ತದೆ ನಂತರ ಫೋನ್ ಕಾಲ್ ಮೂಲಕ ವೆರಿಫೈ ಮಾಡಲಾಗುತ್ತದೆ ನಂತರ ಸ್ಕಾಲರ್ ಶಿಪ್ ಹಣ ವಿದ್ಯಾರ್ಥಿಯ ಬ್ಯಾಂಕ್ ಅಕೌಂಟ್ ಗೆ ನೇರವಾಗಿ ಬರುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲಾ ವಿದ್ಯಾರ್ಥಿಗಳಿಗೆ ತಿಳಿಸಿ.
ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430