Ultimate magazine theme for WordPress.

SBI ನೇಮಕಾತಿ 2056 ಹುದ್ದೆಗಳ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ, ಆಸಕ್ತರು ಅರ್ಜಿ ಸಲ್ಲಿಸಿ

0 2

ಭಾರತೀಯ ಸ್ಟೇಟ್‌ ಬ್ಯಾಂಕ್‌ 2056 ಪ್ರೊಬೇಷನರಿ ಆಫೀಸರ್ ಹುದ್ದೆಗೆ ಅಧಿಸೂಚನೆ ಬಿಡುಗಡೆ ಮಾಡಿದ್ದು, ಅರ್ಜಿ ಆಹ್ವಾನಿಸಿದೆ. ಆಸಕ್ತರು ಈ ಕೆಳಗಿನ ವಿವರಗಳನ್ನು ತಿಳಿದು ಅರ್ಜಿ ಸಲ್ಲಿಸಬಹುದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಟ್ಟು 2056 ಪ್ರೊಬೇಷನರಿ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಬಹುದಾಗಿದೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಹುದ್ದೆಯ ಹೆಸರು ಪ್ರೊಬೇಷನರಿ ಆಫೀಸರ್ ಖಾಲಿ ಇರುವ ಒಟ್ಟೂ ಹುದ್ದೆಗಳ ಸಂಖ್ಯೆ 2056 ಆಗಿರುತ್ತದೆ. ಇನ್ನು ವರ್ಗವಾರು ಪ್ರೊಬೇಷನರಿ ಆಫೀಸರ್ ಖಾಲಿ ಹುದ್ದೆಗಳ ವಿವರಗಳನ್ನು ನೋಡುವುದಾದರೆ, ಪ್ರೊಬೇಷನರಿ ಆಫೀಸರ್ ಸಾಮಾನ್ಯ ವರ್ಗ 810 ಹುದ್ದೆಗಳು, ಪ್ರೊಬೇಷನರಿ ಆಫೀಸರ್ ಒಬಿಸಿ 560 ಹುದ್ದೆಗಳು ಹಾಗೂ ಪ್ರೊಬೇಷನರಿ ಆಫೀಸರ್ ಎಸ್‌ಸಿ 324 ಹುದ್ದೆಗಳು ಪ್ರೊಬೇಷನರಿ ಆಫೀಸರ್ ಎಸ್‌ಟಿ 162 ಮತ್ತು ಪ್ರೊಬೇಷನರಿ ಆಫೀಸರ್ EWS 200 ಹುದ್ದೆಗಳು ಖಾಲಿ ಇರುತ್ತವೆ. ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳು ಎಸ್‌ಬಿಐ ನೇಮಕಾತಿ ನಿಯಮಗಳ ಅನ್ವಯ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದಿರಬೇಕು.

ನೇಮಕಾತಿ ನಿಯಮಗಳ ಅನ್ವಯ ವೇತನವನ್ನು ನಿಗದಿ ಮಾಡಲಾಗಿದೆ. ಇನ್ನೂ ಪ್ರಮುಖ ದಿನಾಂಕಗಳನ್ನು ನೋಡುವುದಾದರೆ, ಆನ್‌ಲೈನ್‌ ಅರ್ಜಿ ಸಲ್ಲಿಸಲು ಆರಂಭದ ದಿನಾಂಕ 05/10/2021 ಆಗಿರುತ್ತದೆ. ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25/10/2021 ಆಗಿರುತ್ತದೆ. ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ 25/10/2021 ಆಗಿರುತ್ತದೆ. ಪ್ರಿಲಿಮ್ಸ್‌ ಪರೀಕ್ಷೆಗೆ ಪ್ರವೇಶ ಪತ್ರ ಡೌನ್‌ಲೋಡ್‌ ಆರಂಭ 2021 ರ ನವೆಂಬರ್ ಮೊದಲನೇ ವಾರ / ಎರಡನೇ ವಾರ ಆಗಿರುತ್ತದೆ.

ಮೊದಲನೇ ಹಂತದ ಆನ್‌ಲೈನ್‌ ಪ್ರಿಲಿಮ್ಸ್‌ ಪರೀಕ್ಷೆ ದಿನಾಂಕ 2021 ನವೆಂಬರ್ / ಡಿಸೆಂಬರ್. ಪ್ರಿಲಿಮ್ಸ್ ಪರೀಕ್ಷೆ ಫಲಿತಾಂಶ 2021, ಡಿಸೆಂಬರ್. ಮುಖ್ಯ ಪರೀಕ್ಷೆ ಪ್ರವೇಶ ಪತ್ರ ಡೌನ್‌ಲೋಡ್ ಆರಂಭ ದಿನಾಂಕ 2021 ರ ಡಿಸೆಂಬರ್ 2 / 3ನೇ ವಾರದ ವೇಳೆಗೆ. ಆನ್‌ಲೈನ್‌ ಮುಖ್ಯ ಪರೀಕ್ಷೆ ದಿನಾಂಕ : 2021 ರ ಡಿಸೆಂಬರ್ ವೇಳೆಗೆ . ಮುಖ್ಯ ಪರೀಕ್ಷೆ ಫಲಿತಾಂಶ ದಿನಾಂಕ 2022 ರ ಜನವರಿ ವೇಳೆಗೆ. ಸಂದರ್ಶನ ಪರೀಕ್ಷೆಗೆ ಪ್ರವೇಶ ಪತ್ರ ಡೌನ್‌ಲೋಡ್‌ ಆರಂಭ ದಿನಾಂಕ 2022 ರ ಫೆಬ್ರವರಿ 1 / 2ನೇ ವಾರ. ಸಂದರ್ಶನ ದಿನಾಂಕ 2022 ರ ಫೆಬ್ರವರಿ 2 / 3ನೇ ವಾರ ಅಂತಿಮ ಫಲಿತಾಂಶ ದಿನಾಂಕ 2022 ರ ಫೆಬ್ರವರಿ ಅಥವಾ ಮಾರ್ಚ್‌.

ಇನ್ನೂ ಅಭ್ಯರ್ಥಿಗಳ ವಯೋಮಿತಿ ಎಷ್ಟು ಇರಬೇಕು ಎಂದು ನೋಡುವುದಾದರೆ, ಎಸ್‌ಬಿಐ ನೇಮಕಾತಿ ನಿಯಮಗಳ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಕನಿಷ್ಠ ವಯೋಮಿತಿ 21 ವರ್ಷ. ಏಪ್ರಿಲ್ 1, 2021ಕ್ಕೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿ 30 ವರ್ಷಗಳು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ಹಾಗೂ ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷದ ವಯೋಮಿತಿ ಸಡಿಲಿಕೆ ಇದೆ. ಅರ್ಜಿಗಳನ್ನು ಸಲ್ಲಿಕೆ ಮಾಡುವ ಸಾಮಾನ್ಯ/ ಒಬಿಸಿ ವರ್ಗದ ಅಭ್ಯರ್ಥಿಗಳು 750 ರೂಪಾಯಿ ಶುಲ್ಕವನ್ನು ಪಾವತಿ ಮಾಡಬೇಕಿದೆ.

ಎಸ್‌ಸಿ/ ಎಸ್‌ಟಿ ವರ್ಗದ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. ಆಸಕ್ತ ಅಭ್ಯರ್ಥಿಗಳು sbi.co.in ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿಗಳನ್ನು ಸಲ್ಲಿಸಬೇಕಿದೆ. ಅರ್ಜಿ ಸಲ್ಲಿಕೆ ಮಾಡುವಾಗ ಮುಂದಿನ ಸಂಪರ್ಕಕ್ಕಾಗಿ ಸರಿಯಾದ ಇ-ಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲ ಲಿಖಿತ ಪರೀಕ್ಷೆ ಆನ್‌ಲೈನ್ ಮೂಲಕ ನವೆಂಬರ್/ ಡಿಸೆಂಬರ್‌ನಲ್ಲಿ ನಡೆಸಲಾಗುತ್ತದೆ. ಡಿಸೆಂಬರ್‌ನಲ್ಲಿ ಫಲಿತಾಂಶ ಪ್ರಕಟಿಸಲಾಗುತ್ತದೆ. ಆನ್‌ಲೈನ್ ಮೂಲಕ ಮುಖ್ಯ ಪರೀಕ್ಷೆ ಡಿಸೆಂಬರ್‌ನಲ್ಲಿ ನಡೆಯಲಿದೆ.

ಅರ್ಜಿ ಸಲ್ಲಿಕೆ ಹೇಗೆ? ಎಂದು ನೋಡುವುದಾದರೆ, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಎಸ್‌ಬಿಐ ಅಫೀಶಿಯಲ್ ವೆಬ್‌ಸೈಟ್‌ https://www.sbi.co.in/web/careers ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.