ಸಪೋಟಗೆ ವಿವಿಧ ರೀತಿಯ ಹೆಸರುಗಳು ಕೂಡ ಇದೆ. ಇದನ್ನು ಚಿಕ್ಕ, ಚಿಕ್ಕೂ, ಲಮೂತ್, ಸಪೊಡಿಲ್ಲಾ, ನೋಸ್ ಬೆರ್ರಿ ಮತ್ತು ಸಪೋಟಿ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ಭಾರತದಲ್ಲಿ ಸಪೋಟ ಹಣ್ಣನ್ನು ಹೆಚ್ಚಾಗಿ ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಬೆಳೆಯುತ್ತಾರೆ. ಸಪೋತ ಹಣ್ಣಿನ ಜ್ಯೂಸ್, ಜಾಮ್, ಸ್ಮೂಥಿ, ಸಿಹಿ ತಿಂಡಿಗಳು ಇತ್ಯಾದಿಗಳನ್ನು ತಯಾರಿಸುತ್ತಾರೆ. ಜ್ಯೂಸ್ ಕುಡಿಯಲು ಹೋದರೆ ಹೆಚ್ಚಾಗಿ ಜನರು ಇಷ್ಟಪಡುವಂತಹ ಜ್ಯೂಸ್ ಎಂದರೆ ಅದು ಚಿಕ್ಕು ಅಥವಾ ಸಪೋಟ ಜ್ಯೂಸ್ ಎಂದು ಹೇಳಬಹುದು. ಯಾಕೆಂದರೆ ಈ ಹಣ್ಣು ತುಂಬಾ ರುಚಿಕರ ಹಾಗೂ ಸಿಹಿ ಹೊಂದಿರುವುದು. ಇದರಿಂದಾಗಿ ಹೆಚ್ಚಿನವರಿಗೆ ಇದು ಇಷ್ಟವಾಗುತ್ತದೆ. ಸಪೋಟ ಹಣ್ಣನ್ನು ಇಷ್ಟೊಂದು ಬಗೆ ಬಗೆಯ ಅಡುಗೆ ಮಾಡಿ ತಿನ್ನುವ / ಕುಡಿಯುವ ನಮಗೆ ಇದರಿಂದ ನಮ್ಮ ದೇಹಕ್ಕೆ ಎಷ್ಟು ಆರೋಗ್ಯಕರ ಲಾಭಗಳು ಇವೆ ಅನ್ನೋದರ ಬಗ್ಗೆ ತಿಳಿದಿರುವುದು ಬಹಳ ಕಡಿಮೆ. ಹಾಗಾಗಿ ಈ ಲೇಖನದಲ್ಲಿ ನಾವು ಸಪೋಟ ಅಥವಾ ಚಿಕ್ಕು ಹಣ್ಣಿನ ಆರೋಗ್ಯಕರ ಲಾಭಗಳ ಬಗ್ಗೆ ತಿಳಿದುಕೊಳ್ಳೋಣ.

ಸಪೋಟ ಹಣ್ಣು ಒಂದು ಮಧುರಸ ಇದು ರಕ್ತಪ್ರಸಾದಕ. ಇದರಲ್ಲಿ ನಮ್ಮ ದೇಹಕ್ಕೆ ಬೇಕಾದ ಕಬ್ಬಿಣದ ಅಂಶವನ್ನು ಹೆಚ್ಚುಗೊಳಿಸಿವ ಶಕ್ತಿ ಇದರಲ್ಲಿದೆ. ಕಬ್ಬಿಣದ ಅಂಶದ ಕೊರತೆಯಿಂದ ಬಳಲುತ್ತಾ ಇರುವ ಜನರು ಸಪೋಟ ಹಣ್ಣನ್ನು ಹೇರಳವಾಗಿ ಬಳಕೆ ಮಾಡಬಹುದು. ರಕ್ತ ಶುದ್ಧಿ ಆಗುವುದಕ್ಕೂ ಸಹ ಸಪೋಟ ಅಥವಾ ಚಿಕ್ಕು ಹಣ್ಣಿನ ಸೇವನೆ ಅತ್ಯುತ್ತಮ. ಇದರಿಂದ ಯಾವುದೇ ರೀತಿಯ ಚರ್ಮ ರೋಗಗಳು ಬರುವುದಿಲ್ಲ ಹಾಗೂ ಚರ್ಮ ರೋಗ ಇದ್ದರೂ ಸಹ ಕಡಿಮೆ ಆಗುತ್ತದೆ ಹಾಗಾಗಿ ಯಥೇಚ್ಚವಾಗಿ ಸಪೋಟ ಹಣ್ಣಿನ ಸೇವನೆ ಮಾಡಬೇಕು. ಇನ್ನು ಹಣ್ಣು ಮಾತ್ರ ಅಲ್ಲದೆ ಇದರ ಬಿಳಿಯ ಅಂಟು ಅದೂ ಕೂಡಾ ನಮಗೆ ಪ್ರಯೋಜನಕಾರಿ. ಕಾಲಿಗೆ ಆಣೆ ಎಂಬ ರೋಗ ಉಂಟಾಗುತ್ತದೆ. ಇದಕ್ಕೆ ಈ ಸಪೋಟ ಹಣ್ಣಿನ ಅಂಟನ್ನು ಹಚ್ಚುವುದರಿಂದ ಆಣೆ ಆದ ಜಾಗದ ಚರ್ಮ ಮೃದುವಾಗಿ ಬೀಳುತ್ತದೆ. ಗಟ್ಟಿ ಚರ್ಮ ಉದುರಿ ಹೋದ ನಂತರ ಹೊಸದಾಗಿ ಚರ್ಮ ಹುಟ್ಟಿಬಂದು ನೋವನ್ನು ಕಡಿಮೆ ಮಾಡುತ್ತದೆ. ದಿನಕ್ಕೆ ಒಮ್ಮೆ ಈ ಸಪೋಟ ಹಣ್ಣಿನ ಅಂಟನ್ನು ಕಾಲಿಗೆ ಹಚ್ಚುವುದರಿಂದ ಕಾಲಿಗೆ ಆದ ಆಣೆ ಕಡಿಮೆ ಆಗುವುದರ ಜೊತೆಗೆ ಎದ್ದು ನಡೆದಾಡಲೂ ಯಾವುದೇ ಸಮಸ್ಯೆ ಆಗುವುದಿಲ್ಲ ಶಕ್ತಿ ದೊರೆಯುತ್ತದೆ. ಇನ್ನು ಹಣ್ಣಿನ ಸೇವನೆ ಮಾಡುವುದರಿಂದ ಅಂತೂ ಕಬ್ಬಿಣದ ಅಂಶ ಹೆಚ್ಚಾಗಿಯೇ ದೊರೆಯುತ್ತದೆ.

ಹಾಗಾದರೆ ಸಪೋಟ ಹಣ್ಣಿನಲ್ಲಿ ಯಾವ ಯಾವ ಪೋಷಕಾಂಶಗಳು ಇವೆ ಎಂದು ನಾವು ನೋಡುವುದಾದರೆ 100 ಗ್ರಾಂ ಸಪೋಟಹಣ್ಣಿನಲ್ಲಿ 83 ಕ್ಯಾಲರಿ ಇದೆ. ಆಹಾರದ ನಾರಿನಾಂಶವನ್ನು ಹೊಂದಿರುವಂತಹ ಇದು ವಿರೇಚಕ ಗುಣವನ್ನು ಹೊಂದಿದೆ. ಈ ಹಣ್ಣಿನಲ್ಲಿ ವಿಟಮಿನ್ ಸಿ, ಎ, ನಿಯಾಸಿನ್, ಫಾಲಟೆ ಮತ್ತು ಖನಿಜಾಂಶ ಗಳಾಗಿರುವಂತಹ ಕಬ್ಬಿನಾಂಶ, ಪೊಟಾಶಿಯಂ ಮತ್ತು ತಾಮ್ರವಿದೆ. ಆಂಟಿಆಕ್ಸಿಡೆಂಟ್, ಉರಿಯೂತ ಶಮನಕಾರಿ, ವೈರಲ್ ವಿರೋಧಿ, ಬ್ಯಾಕ್ಟೀರಿಯಾ ವಿರೋಧಿ ಮತ್ತು ನಂಜುನಿರೋಧಕ ಗುಣಗಳು ಕೂಡ ಇದರಲ್ಲಿ ಇದೆ. ಚಿಕ್ಕುವಿನಲ್ಲಿ ಇರುವಂತಹ ಕೆಲವೊಂದು ಖನಿಜಾಂಶಗಳಾಗಿರುವ ಕ್ಯಾಲ್ಸಿಯಂ, ಪೋಸ್ಪರಸ್ , ತಾಮ್ರ ಮತ್ತು ಕಬ್ಬಿಣದ ಅಂಶವು ಮೂಳೆಗಳನ್ನು ಬಲಗೊಳಿಸುವುದು. ನಿಯಮಿತವಾಗಿ ಚಿಕ್ಕು ಹಣ್ಣನ್ನು ತಿಂದರೆ ಅದರಿಂದ ಮೂಳೆಗಳ ಗುಣಮಟ್ಟವು ಸುಧಾರಣೆ ಆಗುವುದು. ತಾಮ್ರದ ಕೊರತೆ ಇದ್ದರೆ ಆಗ ಅಸ್ಥಿರಂಧ್ರತೆ ಸಮಸ್ಯೆ ಕಾಡುವುದು. ಸಪೋತ ಹಣ್ಣು ಮೂಳೆಗಳು, ಸ್ನಾಯುಗಳ ಮತ್ತು ಅಂಗಾಂಶಗಳನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು.

ಚಿಕ್ಕು ಹಣ್ಣು ಕ್ಯಾನ್ಸರ್‌ ಬರುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ. ಇದರಲ್ಲಿರುವ ಹೇರಳ ಪೌಷ್ಟಿಕಾಂಶದಿಂದಾಗಿ ಸೂಪರ್‌ ಫುಡ್‌ ಎಂಬ ಪಟ್ಟಿಯಲ್ಲಿ ಇದನ್ನು ಸೇರಿಸಲಾಗಿದೆ. ಈ ಹಣ್ಣಿನಲ್ಲಿ ನಾರಿನಂಶ, ಆ್ಯಂಟಿ ಆಕ್ಸಿಡೆಂಟ್‌ ಹಾಗೂ ಕ್ಯಾನ್ಸರ್‌ ನಿರೋಧಕ ಗುಣ ಕೂಡ ಇದೆ. ಆದ್ದರಿಂದ ಹಲವು ಬಗೆಯ ಕ್ಯಾನ್ಸರ್‌ಗಳಿಂದ ರಕ್ಷ ಣೆ ನೀಡುತ್ತದೆ. ಮೂತ್ರಪಿಂಡದಲ್ಲಿ ಕಲ್ಲುಗಳಾಗಿದ್ದರೆ ಶಸ್ತ್ರ ಚಿಕಿತ್ಸೆ ಇಂದಲೇ ನಿವಾರಿಸಬೇಕು ಎಂದೇನೂ ಇಲ್ಲ. ಬದಲಿಗೆ ಚಿಕ್ಕು ಹಣ್ಣಿನ ಬೀಜಗಳನ್ನು ಚೆನ್ನಾಗಿ ಒಣಗಿಸಿ ಕುಟ್ಟಿ ಪುಡಿ ಮಾಡಿ ಒಂದು ಲೋಟ ನೀರಿನೊಂದಿಗೆ ಬೆರೆಸಿ ನಿಯಮಿತವಾಗಿ ಕುಡಿಯಬೇಕು. ಈ ಬೀಜಗಳು ಕಲ್ಲುಗಳನ್ನು ಕರಗಿಸಿ ಮೂತ್ರದ ಮೂಲಕ ವಿಸರ್ಜನೆಯಾಗಲು ನೆರವಾಗುತ್ತದೆ. ಇನ್ನು ಸಪೋಟ ಅಥವಾ ಚಿಕ್ಕು ಹಣ್ಣನ್ನು ಗರ್ಭಿಣಿಯರು ಬಾಳಂತಿಯರು ತಿನ್ನಬಾರದು ನೆಗಡಿ ಆಗುತ್ತದೆ ಎಂದು ಹೇಳುತ್ತಾರೆ ಆದರೆ ಸಪೋಟ ತಿನ್ನುವುದರಿಂದ ಕಬ್ಬಿಣದ ಶ ಸಿಗುತ್ತದೆ ಹಾಗಾಗಿ ಇದನ್ನು ವಯಸ್ಸು ಹಾಗೂ ಲಿಂಗ ಬೇಧ ಇಲ್ಲದೆಯೇ ಯಾರು ಬೇಕಾದರೂ ಯಾವ ವಯಸ್ಸಿನವರು ಬೇಕಾದರೂ ಎಷ್ಟು ಬೇಕಾದ್ರೂ ಸೇವಿಸಬಹುದು.

Leave a Reply

Your email address will not be published. Required fields are marked *