ಪ್ರತಿಯೊಂದು ಹಣ್ಣಿನ ಸೇವನೆಯಿಂದ ನಮ್ಮ ಆರೋಗ್ಯ ವೃದ್ಧಿಯಾಗುತ್ತದೆ. ಎಲ್ಲಾ ಹಣ್ಣುಗಳಲ್ಲಿ ದೇಹಕ್ಕೆ ಬೇಕಾದ ವಿಟಮಿನ್ಸ್, ಪೋಷಕಾಂಶಗಳು ಇರುತ್ತದೆ. ಅವುಗಳಲ್ಲಿ ಚಿಕ್ಕು ಹಣ್ಣು ಪ್ರಮುಖ ಆರೋಗ್ಯಕರ ಹಣ್ಣುಗಳಲ್ಲಿ ಒಂದಾಗಿದೆ. ಚಿಕ್ಕು ಹಣ್ಣಿನ ಸೇವನೆಯಿಂದ ಆಗುವ ಆರೋಗ್ಯಕರ ಪ್ರಯೋಜನಗಳನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಚಿಕ್ಕು, ಸಪೋಟ ಎಂದೆಲ್ಲಾ ಕರೆಯುವ ಈ ಹಣ್ಣು ಆರೋಗ್ಯಕ್ಕೆ ಬಹಳ ಉತ್ತಮ. ಕಂದು ಬಣ್ಣದಲ್ಲಿ ಇರುವ ಈ ಹಣ್ಣಿನ ಹೊರಪದರ ತೆಳುವಾಗಿದ್ದು, ಒಳಗಡೆ ಕಪ್ಪು ಬಣ್ಣದ ಬೀಜಗಳು ಇರುತ್ತದೆ. ಚಿಕ್ಕು ಹಣ್ಣು ಸಿಹಿಯಾಗಿದ್ದು ಕೊಂಚವೂ ಹುಳಿ ಅಂಶ ಇರುವುದಿಲ್ಲ. ಆಯುರ್ವೇದದ ಪ್ರಕಾರ ಚಿಕ್ಕು ಹಣ್ಣು ಮಧುರ ರಸವನ್ನು ಹೊಂದಿದ್ದು ಇದು ಜೀವನಿಯ, ಭ್ರೂಮಣಿಯ, ರಕ್ತ ಪ್ರಸಾದಕವಾಗಿದೆ. ಚಿಕ್ಕು ಹಣ್ಣಿನ ಸೇವನೆಯಿಂದ ದೇಹದಲ್ಲಿ ಕಬ್ಬಿಣ ಅಂಶ ಹೆಚ್ಚಾಗುತ್ತದೆ. ಕಬ್ಬಿಣ ಅಂಶದ ಕೊರತೆಯಿಂದ ಬಳಲುತ್ತಿರುವವರು ಚಿಕ್ಕು ಹಣ್ಣನ್ನು ಹೆಚ್ಚು ಸೇವಿಸಬೇಕು. ಚಿಕ್ಕು ಹಣ್ಣಿನ ಸೇವನೆಯಿಂದ ಕಬ್ಬಿಣ ಅಂಶ ಹೆಚ್ಚಾಗುವುದಲ್ಲದೆ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಹೆಚ್ಚಾಗುತ್ತದೆ. ಅಲ್ಲದೆ ಕೆಲವರಿಗೆ ರಕ್ತ ಅಶುದ್ಧಿ ಆಗಿರುವುದರಿಂದ ಚರ್ಮ ರೋಗಗಳು ಬರುತ್ತದೆ, ರಕ್ತ ಶುದ್ಧಿಯಾಗಿ ಚರ್ಮ ರೋಗಗಳು ಬರದಂತೆ ತಡೆಯಲು ಚಿಕ್ಕು ಹಣ್ಣನ್ನು ಯಥೇಚ್ಛವಾಗಿ ಸೇವಿಸಬೇಕು. ಚಿಕ್ಕು ಹಣ್ಣಿನಲ್ಲಿ ವಿಟಮಿನ್ ಬಿ ಹೆಚ್ಚಿರುವುದರಿಂದ ಇದರ ಸೇವನೆಯಿಂದ ದೇಹಕ್ಕೆ ವಿಟಮಿನ್ ಬಿ ಸಿಗುತ್ತದೆ. ಚಿಕ್ಕು ಹಣ್ಣಿನ ಸೇವನೆಯಿಂದ ಹೃದಯ ಸಂಬಂಧಿ ಸಮಸ್ಯೆಗಳು ನಿವಾರಣೆಯಾಗುತ್ತದೆ ಹಾಗೂ ಹೃದಯದ ಆರೋಗ್ಯಕ್ಕೆ ಉತ್ತಮ.
ಚಿಕ್ಕು ಹಣ್ಣು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಚಿಕ್ಕು ಹಣ್ಣನ್ನು ಅತಿ ಪ್ರಬಲ ಆಹಾರ ಪಟ್ಟಿಗಳಲ್ಲಿ ಸೇರಿಸಲಾಗಿದೆ. ಕ್ಯಾನ್ಸರ್ ನಿವಾರಣೆಯಲ್ಲಿ ಚಿಕ್ಕು ಹಣ್ಣು ಪ್ರಮುಖವಾಗಿದೆ. ಚಿಕ್ಕು ಕಾಯಿ ಅಥವಾ ಎಲೆಯ ಒಳಗೆ ಒಂದು ರೀತಿಯ ಅಂಟು ಇರುತ್ತದೆ. ಈ ಅಂಟನ್ನು ಕಾಲಿನ ಚರ್ಮ ದಪ್ಪವಾಗಿ ಒತ್ತುತ್ತಿದ್ದು ನೋವು ಕಾಣಿಸಿಕೊಂಡರೆ ಅದಕ್ಕೆ ಅಂಟನ್ನು ಹಚ್ಚಿಕೊಂಡರೆ ಚರ್ಮ ಸಾಫ್ಟ್ ಆಗುತ್ತದೆ, ನೋವು ನಿವಾರಣೆಯಾಗುತ್ತದೆ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಚಿಕ್ಕು ಹಣ್ಣಿನ ಸೇವನೆಯನ್ನು ಮಾಡಬಹುದು ಬಾಣಂತಿಯರು ಚಿಕ್ಕು ಹಣ್ಣಿನ ಸೇವನೆಯನ್ನು ಮಾಡಬಾರದು ಎಂದು ಹೇಳುತ್ತಾರೆ ಆದರೆ ಚಿಕ್ಕು ಹಣ್ಣಿನ ಸೇವನೆಯಿಂದ ಯಾವುದೇ ಸಮಸ್ಯೆ ಇಲ್ಲ. ಚಿಕ್ಕು ಜ್ಯೂಸನ್ನು ಚಿಕ್ಕ ಮಕ್ಕಳಿಂದ ಹಿಡಿದು ವೃದ್ದರವರೆಗೂ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ ಚಿಕ್ಕು ಹಣ್ಣಿನ ಸೇವನೆಯನ್ನು ಇಂದೇ ಪ್ರಾರಂಭಿಸಿ.