ಸಾಮಾನ್ಯವಾಗಿ ಕೆಲವು ಮಕ್ಕಳಲ್ಲಿ ಈ ತೊದಲು ನಾಲಿಗೆ ಸಮಸ್ಯೆ ಅನ್ನೋದು ಚಿಕ್ಕವರಿಂದಲೂ ಬಂದಿರುತ್ತದೆ ಇದು ದೊಡ್ಡವರಾಗುತ್ತಾ ಬದಲಾವಣೆಯಾಗುತ್ತದೆ ಆದ್ರೆ ಮಕ್ಕಳು ದೊಡ್ಡವರಾದ್ರು ಕೂಡ ಕೆಲವೊಮ್ಮೆ ತೊದಲು ಮಾತಾಡುತ್ತಾರೆ ಇದಕ್ಕೆ ಒಂದಿಷ್ಟು ಮನೆಮದ್ದನ್ನು ತಿಳಿಸಲು ಬಯಸುತ್ತವೆ ನಿಮಗೆ ಇಷ್ಟವಾದ್ರೆ ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ.
ಅಡುಗೆ ಮನೆಯಲ್ಲಿ ಬಳಸುವಂತ ಈ ಉಪ್ಪು ಹಾಗೂ ಜೇನುತುಪ್ಪವನ್ನು ತಗೆದುಕೊಂಡು ಬೆಳಗ್ಗೆ ಎಡ್ಡಾ ತಕ್ಷಣ ನಾಲಿಗೆ ತಿಕ್ಕುವುದರಿಂದ ಈ ಸಮಸ್ಯೆಗೆ ಪರಿಹಾರ ಕಾಣಬಹುದು, ಉಪ್ಪು ಹಾಗು ಜೇನು ತುಪ್ಪವನ್ನು ಒಂದೊಂದು ಚಮಚ ತಗೆದುಕೊಂಡು ಮಿಶ್ರಣ ಮಾಡಿ, ಈ ಮಿಶ್ರಣವನ್ನು ಬೆಳಗ್ಗೆ ಎಡ್ಡಾ ತಕ್ಷಣ ನಾಲಿಗೆ ತಿಕ್ಕಿದರೆ ಪರಿಹಾರವಿದೆ.
ಮಕ್ಕಳು ತೊದಲು ಮಾತನಾಡುತಿದ್ರೆ ನಾಟಿ ಹಸು ತುಪ್ಪವನ್ನು ಊಟದಲ್ಲಿ ೨-೩ ಚಮಚ ಹಾಕಿ ಊಟ ಮಾಡಿಸಿದರು ಕೂಡ ಕಾಲಾನುಕ್ರಮೇಣ ತೊದಲು ಮಾತಾಡುವುದು ಕಡಿಮೆಯಾಗುತ್ತದೆ. ಇನ್ನು ಕೆಲವರ ನಾಲಿಗೆ ದಪ್ಪ ಇರೋದ್ರಿಂದ ನಾಲಿಗೆಯಲ್ಲಿ ಉಚ್ಚಾರಣೆ ಮಾಡಲು ಆಗೋದಿಲ್ಲ ಅದರಿಂದ ನಾಲಿಗೆ ತೊದಲು ಆಗುತ್ತದೆ ಇದಕ್ಕೆ ಸ್ವಲ್ಪ ಸಕ್ಕರೆ ಜೊತೆಗೆ ಬಜೆ ಪುಡಿಗೆ ಏಲಕ್ಕಿ ಪುಡಿ, ಲವಂಗದ ಪುಡಿ, ವಿಳ್ಯೆದೆಲೆ ಬೇರಿನ ಪುಡಿಯನ್ನು ಬೆರಸಿ ಪ್ರತಿದಿನ ಬೆಳಗ್ಗೆ ಇದರಿಂದ ನಾಲಿಗೆ ತಿಕ್ಕುವುದರಿಂದ ನಾಲಿಗೆ ತೆಳುವಾಗಿ ತೊದಲು ಮಾತಾಡೋದಿಲ್ಲ.