ಕನ್ನಡ ಚಿತ್ರರಂಗದ ಭರವಸೆಯ ನಾಯಕ ನಟರ ಸಾಲಿನಲ್ಲಿ ದುನಿಯಾ ವಿಜಯ್ ಕೂಡ ಒಬ್ಬರು ಒಳ್ಳೊಳ್ಳೆ ಸಿನಿಮಾಗಳಲ್ಲಿ ನಟಿಸುವ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು. ಇದುವರೆಗೆ ನಟನಾಗಿ ಪರಿಚಿತರಾಗಿದ್ದವರು ಮೊದಲ ಬಾರಿಗೆ ಅಭಿಮಾನಿಗಳ ಎದುರು ನಿರ್ದೇಶಕರಾಗಿ ಗೆಲುವನ್ನ ಕಂಡಿದ್ದಾರೆ. ಅವರು ಮೊದಲ ಬಾರಿ ನಿರ್ದೇಶನ ಮಾಡಿದಂತಹ ಸಲಗ ಸಿನಿಮಾ ಅವರಿಗೆ ಭರ್ಜರಿ ಆದಂತಹ ಜಯವನ್ನು ತಂದುಕೊಟ್ಟಿದೆ ಎರಡನೇ ಲಾಕ್ ಡೌನ್ ಮುಗಿದ ನಂತರ ಬಿಡುಗಡೆಯಾದಂತಹ ಸಲಗ ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಂಡಿತು.

ಚಿತ್ರದ ಯಶಸ್ಸನ್ನು ಸಂಭ್ರಮಿಸಲು ಅದ್ದೂರಿಯಾಗಿ ಕಾರ್ಯಕ್ರಮವನ್ನು ನಡೆಸಲಾಯಿತು ಈ ಕಾರ್ಯಕ್ರಮದಲ್ಲಿ ಕನ್ನಡದ ಗಣ್ಯಾತಿ ಗಣ್ಯರು ಪಾಲ್ಗೊಂಡಿದ್ದರು ಶಿವರಾಜ್ ಕುಮಾರ್ ಗೋಲ್ಡನ್ ಸ್ಟಾರ್ ಗಣೇಶ್ ನೆನಪಿರಲಿ ಪ್ರೇಮ್ ಶ್ರೀನಗರ ಕಿಟ್ಟಿ ಸೇರಿದಂತೆ ಅನೇಕ ನಟರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ನಿರೂಪಕಿ ಅವರು ದುನಿಯಾ ವಿಜಯ್ ಅವರನ್ನು ಮಾತನಾಡಿಸಿದಾಗ ಅವರು ತುಂಬಾ ಭಾವುಕರಾಗಿದ್ದರು ಅವರು ಕಣ್ಣೀರು ಹಾಕಿದ್ದನ್ನು ನೋಡಿ ಎಲ್ಲರಿಗೂ ಆಶ್ಚರ್ಯವಾಯಿತು. ಸಲಗ ಸಿನಿಮಾ ಯಶಸ್ವಿಯಾಗಿದೆ ಆದರೆ ಅದರ ಯಶಸ್ಸಿನ ಹಿಂದೆ ಒಂದಿಷ್ಟು ಕಷ್ಟದ ಹಾದಿ ಇತ್ತು. ಸಲಗ ಚಿತ್ರ ಇಷ್ಟೊಂದು ಯಶಸ್ಸನ್ನು ಕಾಣುವುದಕ್ಕೆ ದುನಿಯಾ ವಿಜಯ್ ಅವರು ಅದರ ಹಿಂದೆ ಬಹಳ ಪರಿಶ್ರಮವನ್ನು ಪಟ್ಟಿದ್ದರು ಅದನ್ನು ನೆನೆದು ಅವರಿಗೆ ಕಣ್ಣೀರು ಬಂದಿತು.

ಸಲಗ ಸಿನಿಮಾ ಗೆದ್ದ ಖುಷಿಗಾಗಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಈ ಕಾರ್ಯಕ್ರಮಕ್ಕೆ ಸಲಗ ಚಿತ್ರತಂಡ ನನ್ನ ಕುಟುಂಬ ನನ್ನ ಚಿತ್ರರಂಗದ ಸ್ನೇಹಿತರು ಎಲ್ಲರೂ ಬಂದಿದ್ದಾರೆ ಇದು ನನಗೆ ಎಮೋಷನಲ್ ವಿಷಯ. ಸಲಗ ಶುರುವಾಗುವುದಕ್ಕಿಂತ ಮೊದಲು ನಿರ್ಮಾಪಕ ಶ್ರೀಕಾಂತ್ ಅವರು ಎಸ್ಎಲ್ ವಿ ಮುಂದೆ ಇರುತ್ತಾರೆ ಅಂತ ಗೊತ್ತಿತ್ತು ನಾನು ಅಲ್ಲಿಗೆ ನನ್ನ ಸಿನಿಮಾ ನಿರ್ಮಾಣ ಮಾಡಿ ಕೊಡಿ ಎಂದು ಕೇಳಿಕೊಳ್ಳುವುದಕ್ಕೆ ಹೋಗಿದ್ದೆ. ದೇವರಾಣೆ ಅಂದು ನನ್ನ ಜೇಬಿನಲ್ಲಿ ಇದ್ದಿದ್ದು ಕೇವಲ ನಲವತ್ತು ರೂಪಾಯಿ ಮಾತ್ರ ಆ ನಲವತ್ತು ರೂಪಾಯಿಯ ಫೋಟೋ ತೆಗೆದು ಇಟ್ಟಿದ್ದೇನೆ ಎಂದು ಹೇಳುತ್ತಾ ವಿಜಯ್ ಅವರು ಕಣ್ಣೀರನ್ನು ಹಾಕಿದರು. ನಾನು ನಡೆಯುವುದಕ್ಕೆ ಸಾಧ್ಯವಿಲ್ಲದಂತಹ ಪರಿಸ್ಥಿತಿಯಲ್ಲಿ ನಾನು ಗೆಲ್ಲುವಂತೆ ಮಾಡಿದ್ದು ಕೆಪಿ ಶ್ರೀಕಾಂತ್ ಅವರು.

ನನ್ನ ಬದುಕಿನಲ್ಲಿ ಒಂದಷ್ಟು ವಿಷಯಗಳು ನಡೆದುಹೋದವು ನಮ್ಮ ಅಮ್ಮ ತೀರಿ ಹೋಗುವುದಕ್ಕಿಂತ ಮುಂಚೆ ಕೀರ್ತಿಗೆ ಒಂದು ಮಾತು ಹೇಳಿದ್ದರು ಮನೆಯಲ್ಲಿ ಒಂದು ಶಿವ ಲಿಂಗ ಇದೆ ಅದಕ್ಕೆ ಪೂಜೆ ಮಾಡು ತುಂಬಾ ಒಳ್ಳೆಯದಾಗುತ್ತದೆ ಎಂದು ಹೇಳಿದ್ದರು. ಶಿವಣ್ಣನ ಮೂಲಕವೇ ನನಗೆ ಒಳ್ಳೆಯದಾಗಿರಬಹುದು ನಾನು ಎರಡು ವರ್ಷ ಎಲ್ಲಿಯೂ ಮಾತನಾಡಿರಲಿಲ್ಲ ಈಗ ಸಿಕ್ಕಿರುವ ಯಶಸ್ಸನ್ನು ಅಪ್ಪ-ಅಮ್ಮ ಅಪ್ಪು ಮತ್ತು ಅಭಿಮಾನಿಗಳಿಗೆ ಸಲ್ಲಿಸುತ್ತೇನೆ ಎಂದು ದುನಿಯಾ ವಿಜಯ್ ಅವರು ಭಾವುಕರಾದರು. ದುನಿಯಾ ವಿಜಯ್ ಅವರಿಗೆ ಇದೇ ರೀತಿ ಆದಂತಹ ಯಶಸ್ಸು ಇನ್ನು ಮುಂದಿನ ಸಿನಿಮಾಗಳಲ್ಲಿ ಸಿಗಲಿ ಅವರ ಸಿನಿ ಜೀವನ ಯಶಸ್ವಿದಾಯಕವಾಗಿರಲಿ ಎಂದು ನಾವು ದೇವರಲ್ಲಿ ಕೇಳಿಕೊಳ್ಳೋಣ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!