ಇವರು ಜೀವನದಲ್ಲಿ ಕನಸನ್ನು ಕಂಡವರು ಆ ಕನಸನ್ನು ನನಸು ಮಾಡುವುದಕ್ಕಾಗಿ ಗುರಿಯನ್ನು ಬೆನ್ನಟ್ಟಿ ಸಾಧಿಸಿ ತೋರಿಸಿದವರು ಸಾಕಷ್ಟು ಜನರಿಗೆ ಮಾದರಿಯಾಗಿರುವಂತಹ ವ್ಯಕ್ತಿ ಅವರೇ ಅಮೃತ್ ಸಾವಯವ ಗೊಬ್ಬರ ಕಂಪನಿಯ ಮಾಲೀಕರು ನಾಗರಾಜ್. ಇವರು ಬಂದಿರುವಂಥದ್ದು ಬಡಕುಟುಂಬದಿಂದ ಒಬ್ಬ ರೈತ ಮನಸ್ಸು ಮಾಡಿದರೆ ಯಶಸ್ವಿ ಉದ್ಯಮಿ ಆಗಬಹುದು ಎಂಬುದನ್ನು ತೋರಿಸಿಕೊಟ್ಟವರು ಇವರು. ಇವರ ಯಶಸ್ವಿ ಜೀವನದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ.

ಮಲ್ಲಾಡಿಹಳ್ಳಿಯಲ್ಲಿ ಇವರು ಎರಡು ಸಾವಿರದ ಹತ್ತರಲ್ಲಿ ಶ್ರೀ ರಾಘವೇಂದ್ರ ಸ್ವಾಮಿಯ ಆಶೀರ್ವಾದದೊಂದಿಗೆ ಡೈರಿಯನ್ನು ಪ್ರಾರಂಭಿಸುತ್ತಾರೆ. ಅನಾಥ ಸೇವಾಶ್ರಮದಲ್ಲಿ ಓದಿರುವಂತಹ ಒಬ್ಬ ಬಡ ರೈತರ ಮಗ ಇಂದು ಕೋಟ್ಯಂತರ ರೂಪಾಯಿ ವ್ಯವಹಾರವನ್ನು ಮಾಡುತ್ತಿದ್ದಾರೆ.

ಇವರ ಗುರುಗಳು ಆಶ್ರಮದಲ್ಲಿ ಧ್ಯಾನ ಮತ್ತು ಯೋಗದ ಮೂಲಕ ಲಕ್ಷಾಂತರ ಜನರಿಗೆ ಉಪಯೋಗವಾಗುವ ಹಾಗೆ ಆಶ್ರಮವನ್ನು ಕಟ್ಟಿದ್ದರು ಅವರ ಶಿಷ್ಯನಾಗಿ ತಾನು ಏನಾದರೂ ಮಾಡಬೇಕು ಎಂಬ ಉದ್ದೇಶದಿಂದ ಸುತ್ತಮುತ್ತಲಿನ ರೈತರಿಗೆ ಸಹಾಯವಾಗುವ ಉದ್ದೇಶದಿಂದ ಮತ್ತು ಪರಿಸರವನ್ನು ಕಾಪಾಡಿ ಕೊಳ್ಳುವ ಉದ್ದೇಶದಿಂದ ಜೊತೆಗೆ ನೂರಾರು ಜನರಿಗೆ ಕೆಲಸವನ್ನು ಕೊಡುವ ಉದ್ದೇಶದಿಂದ ಸಾವಯವ ಗೊಬ್ಬರವನ್ನು ತಯಾರಿಸುವ ಸಂಸ್ಥೆಯನ್ನು ನಿರ್ಮಾಣ ಮಾಡುತ್ತಾರೆ.

ಇವರು ಮೂಲತಹ ಚಿಕ್ಕಬಳ್ಳಾಪುರದ ಗೌರಿಬಿದನೂರು ತಾಲೂಕಿನ ರೈತ ಕುಟುಂಬದಿಂದ ಬಂದಿರುವಂತವರು. ಇವರ ತಂದೆಯವರು ಚಿತ್ರದುರ್ಗದ ಮಲ್ಲಾಡಿಹಳ್ಳಿಯಲ್ಲಿ ಒಳ್ಳೆಯ ಶಿಕ್ಷಣ ಸಿಗುತ್ತದೆ ಎಂಬ ಕಾರಣಕ್ಕೆ ಚಿಕ್ಕಬಳ್ಳಾಪುರದಿಂದ ಚಿತ್ರದುರ್ಗಕ್ಕೆ ಬರುತ್ತಾರೆ. ಬಡತನದ ಕಾರಣದಿಂದಾಗಿ ತಮ್ಮ ಶಿಕ್ಷಣವನ್ನು ಅರ್ಧದಲ್ಲಿಯೇ ನಿಲ್ಲಿಸುತ್ತಾರೆ ತಮ್ಮ ಗುರುಗಳನ್ನು ಆದರ್ಶವಾಗಿಟ್ಟುಕೊಂಡು ಸಾವಯವ ಗೊಬ್ಬರವನ್ನು ತಯಾರಿಸುವ ಉದ್ಯಮವನ್ನು ಪ್ರಾರಂಭಿಸುತ್ತಾರೆ.

ಪ್ರಾರಂಭದಲ್ಲಿ ಎರಡು ಸಾವಿರದ ಹತ್ತರಲ್ಲಿ ಡೈರಿಯನ್ನು ಪ್ರಾರಂಭಿಸುತ್ತಾರೆ ಆದರೆ ಹಸುಗಳಿಗೆ ಮೇವನ್ನು ಉತ್ಪಾದಿಸುವುದಕ್ಕೆ ಕಷ್ಟವಾಗುತ್ತದೆ ಕಾರಣ ಇವರ ಸುತ್ತಮುತ್ತ ಇರುವಂಥದ್ದು ಚವಳು ಭೂಮಿ ಪ್ರದೇಶ. ಇದರಿಂದ ರೈತರಿಗೆ ಸಮಸ್ಯೆಯಾಗುತ್ತಿತ್ತು ಅದಕ್ಕಾಗಿ ಇವರು ಸಂಶೋಧನೆಯನ್ನ ಮಾಡಿ ಭೂಮಿಗೆ ಏನನ್ನ ಒದಗಿಸಿದರೆ ಬೆಳೆಗಳನ್ನು ಬೆಳೆಯುವುದಕ್ಕೆ ಸಾಧ್ಯ ಎಂಬುದನ್ನು ತಿಳಿದುಕೊಳ್ಳುತ್ತಾರೆ.

ಪ್ರಾರಂಭದಲ್ಲಿ ಹತ್ತು ಹಸುಗಳಿಂದ ಆರಂಭವಾದ ಡೈರಿ ನಂತರದಲ್ಲಿ ಇಪ್ಪತ್ತರಿಂದ ಎಂಬತ್ತು ಹಸುಗಳಾಗುತ್ತವೆ ಹಾಲಿನ ಉತ್ಪನ್ನದ ಜೊತೆಗೆ ಇತರ ಉತ್ಪನ್ನಗಳಲ್ಲೂ ಲಾಭ ಬರುತ್ತದೆ ಅದರ ಕಡೆ ಹೆಚ್ಚಿನ ಗಮನ ಹರಿಸುತ್ತಾರೆ. ಸಾವಯವ ಗೊಬ್ಬರ ಎರೆಹುಳು ಗೊಬ್ಬರ ಗೋಬರ್ ಗ್ಯಾಸ್ ಉತ್ಪಾದನೆ ಮಾಡುತ್ತಾರೆ. ಅನೇಕ ಪ್ರದೇಶಗಳಿಗೆ ಭೇಟಿ ನೀಡಿ ರೈತರ ಜೊತೆ ಬೆರೆಯುತ್ತಾರೆ ರೈತರು ಉತ್ಪಾದಿಸುವ ಗೊಬ್ಬರಗಳು ಬೆಳೆಗಳು ತರಕಾರಿಗಳು ಇವುಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳುತ್ತಾರೆ

ನಂತರ ತಾವು ಸಾವಯವ ಗೊಬ್ಬರಗಳನ್ನು ತಯಾರಿಸುತ್ತಾರೆ ಅದನ್ನು ರೈತರಿಗೆ ಕೊಡುವ ಯೋಚನೆಯನ್ನು ಮಾಡುತ್ತಾರೆ. ಬ್ಯಾಂಕ್ ಇಂದ ಸಾಲ ತೆಗೆದುಕೊಂಡು ತಮ್ಮದೇ ಆದ ಒಂದು ಉದ್ಯಮವನ್ನು ಪ್ರಾರಂಭಿಸುತ್ತಾರೆ. ಅಂದು ತಮ್ಮ ಉದ್ಯಮವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಸಂಸ್ಥೆಯನ್ನು ಬೆಳೆಸಬೇಕು ಎಂಬ ಆಸೆಯನ್ನುಇಟ್ಟುಕೊಂಡ ಇವರು ಇಂದು ಅದನ್ನ ಸಾಧಿಸಿದ್ದಾರೆ.

ಹಿಂದಿನ ಕಾಲದಲ್ಲಿ ರೈತರು ಬೆಳೆಗಳನ್ನು ಬೆಳೆಯುವುದಕ್ಕೆ ಸಾವಯವ ಗೊಬ್ಬರವನ್ನು ಬಳಸುತ್ತಿದ್ದರು ಅದರಿಂದ ಯಾವುದೇ ರೀತಿಯ ತೊಂದರೆಗಳು ಆಗುತ್ತಿರಲಿಲ್ಲ ಆರೋಗ್ಯದ ಮೇಲೆ ಯಾವುದೇ ರೀತಿಯ ಪರಿಣಾಮ ಉಂಟಾಗುತ್ತಿರಲಿಲ್ಲ ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ರಾಸಾಯನಿಕಗಳನ್ನು ಬಳಸುವುದರಿಂದ ಬೆಳೆಗಳಲ್ಲಿ ರೋಗಗಳ ಕಾಣಿಸಿಕೊಳ್ಳುತ್ತದೆ ಆಹಾರ ಪದಾರ್ಥಗಳು ರಾಸಾಯನಿಕಯುಕ್ತ ಆಗುತ್ತಿದೆ ಹಾಗಾಗಿ ಮತ್ತೆ ಮೊದಲಿನ ಹಾಗೆ ಸಾವಯವ ಗೊಬ್ಬರದ ಬಳಕೆಯನ್ನು ಹೆಚ್ಚು ಮಾಡುವ ಉದ್ದೇಶದಿಂದ ಮೊದಲು ಅದನ್ನು ತಮ್ಮ ತೋಟದಲ್ಲಿ ಪರೀಕ್ಷಿಸಿ ಅದರಿಂದ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳುತ್ತಾರೆ.

ಇದನ್ನ ರೈತರಿಗೆ ಮನದಟ್ಟು ಮಾಡುವ ಉದ್ದೇಶದಿಂದ ನಿರಂತರವಾಗಿ ಅನೇಕ ಡೆಮೋ ಗಳನ್ನ ಮಾಡಿ ಅದರಿಂದ ಬೆಳೆಗಳನ್ನು ಬೆಳೆದು ರೈತರಿಗೆ ತೋರಿಸುವ ಮುಖಾಂತರ ಇದರಿಂದ ಉತ್ಪನ್ನ ಯಾವ ರೀತಿಯಾಗಿ ಹೆಚ್ಚಾಗುತ್ತದೆ ಮತ್ತು ಖರ್ಚು ಯಾವ ರೀತಿಯಾಗಿ ಕಡಿಮೆಯಾಗುತ್ತದೆ ಈ ಎಲ್ಲ ಮಾಹಿತಿಯನ್ನು ರೈತರಿಗೆ ನೀಡಿ ಅವರಿಗೆ ಪ್ರೇರಣೆಯನ್ನು ನೀಡುವ ಮೂಲಕ ತಮ್ಮ ಕಂಪನಿಯನ್ನು ಬೆಳೆಸುತ್ತಾರೆ.

ಕೆಲವು ಸಂಸ್ಥೆಗಳಲ್ಲಿ ಶೇಕಡ ತೊಂಬತ್ತರಷ್ಟು ರೈತರಿಗೆ ಒಳಗೆ ಬಿಡುವುದಿಲ್ಲ. ಆದರೆ ಇವರ ಸಂಸ್ಥೆ ರೈತರ ಉದ್ದೇಶಕ್ಕಾಗಿ ಮಾಡಿರುವುದರಿಂದ ಶನಿವಾರ ಮತ್ತು ಭಾನುವಾರ ರಾಜ್ಯಾದ್ಯಂತ ಎಲ್ಲಾ ಎನ್ ಜಿ ಒ ನಬಾರ್ಡ್ಸ್ ಕೃಷಿ ಸಂಸ್ಥೆಗಳು ಮುಂತಾದ ಹಲವಾರು ಸಂಘ-ಸಂಸ್ಥೆಗಳಿಂದ ವೀಕ್ಷಣೆಗಾಗಿ ಬರುತ್ತಾರೆ. ನಾಲ್ಕು ಜನ ರೈತರಿಗೆ ಸಹಾಯವಾಗುವ ಉದ್ದೇಶದಿಂದ ಉದ್ಯಮವನ್ನು ಪ್ರಾರಂಭಿಸಿದ ಇವರು ರೈತರಿಗೆ ಯಾವ ಯಾವ ಮಣ್ಣಿನಲ್ಲಿ ಯಾವ ಯಾವ ರೀತಿಯ ಬೆಳೆಗಳನ್ನು ಬೆಳೆದರೆ ಹೆಚ್ಚು ಫಸಲನ್ನು ಪಡೆಯಬಹುದು ಎಂಬುದರ ಬಗ್ಗೆ ತಿಳಿಸಿಕೊಡುತ್ತಾರೆ.

ನಾಡಿನಾದ್ಯಂತ ಇರುವಂತಹ ರೈತರಿಗೆ ಸಣ್ಣಪುಟ್ಟ ಉದ್ಯಮಿಗಳಿಗೆ ಆಶಾಕಿರಣವಾಗಿ ತಮ್ಮ ಸಂಸ್ಥೆಯನ್ನು ಬೆಳೆಸಿದ್ದಾರೆ. ರಾಜ್ಯದಲ್ಲಿ ರೈತರು ಬೆಳೆಯುವಂತಹ ಪ್ರತಿಯೊಂದು ಬೆಳೆಗೂ ಇವರ ಬಳಿ ಸಾವಯವ ಗೊಬ್ಬರಗಳಿವೆ ಕೀಟನಾಶಕಗಳಿಗೆ ಇವರ ಸಂಸ್ಥೆಯಲ್ಲಿ ಸುಮಾರು ನೂರಾ ಇಪ್ಪತ್ತು ವಿಧವಾದ ಉತ್ಪನ್ನಗಳು ಉತ್ಪಾದನೆಯಾಗುತ್ತವೆ ಇವರ ಉತ್ಪಾದನೆಯು ಕೂಡ ಉತ್ತಮ ಗುಣಮಟ್ಟದ್ದಾಗಿರುತ್ತದೆ.

ಇವರು ತಮ್ಮ ಉದ್ಯಮದಲ್ಲಿ ಎರಡು ನೂರಾ ಎಂಬಟ್ಟರಿಂದ ಎರಡು ನೂರಾ ತೊಂಬತ್ತು ಗ್ರಾಮೀಣ ಜನರಿಗೆ ಉದ್ಯೋಗವನ್ನು ನೀಡಿದ್ದಾರೆ ಎಂಟು ತಾಸುಗಳ ಅವಧಿಗೆ ಮೂರು ಶಿಫ್ಟ್ ನಲ್ಲಿ ಕೆಲಸ ನಡೆಯುತ್ತದೆ. ಜೊತೆಗೆ ಹೊರಗಡೆ ಮಾರ್ಕೆಟಿಂಗ್ ಮಾಡುವ ಉದ್ದೇಶದಿಂದ ಅರವತ್ತರಿಂದ ಅರವತ್ತೈದು ಜನ ಕೆಲಸ ಮಾಡುತ್ತಿದ್ದಾರೆ. ಇವರು ತಮ್ಮ ಉದ್ಯಮದಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದ್ದಾರೆ ಇವರು ಉತ್ಪನ್ನಗಳಿಗೆ ಅನೇಕ ಕಡೆಗಳಿಂದ ಬೇಡಿಕೆ ಬರುತ್ತಿದೆ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇರುವ ಪ್ಲಾಂಟ್ ಗಳಿಗೂ ಇವರ ಉದ್ಯಮದಿಂದ ಸಾವಯವ ಗೊಬ್ಬರ ಪೂರೈಕೆ ಆಗುತ್ತದೆ.

ಸುಮಾರು ಇಪ್ಪತ್ತರಿಂದ ಇಪ್ಪತ್ತೆಳು ಜಿಲ್ಲೆಗಳಿಗೆ ಕೃಷಿ ಇಲಾಖೆಯ ಮೂಲಕ ರೈತ ಸಂಪರ್ಕ ಕೇಂದ್ರಕ್ಕೆ ಇವರ ಸಾವಯವ ಗೊಬ್ಬರ ಪೂರೈಕೆ ಆಗುತ್ತದೆ. ಇವರು ತಮ್ಮ ಉದ್ಯಮಕ್ಕೆ ಕಚ್ಚಾವಸ್ತುವನ್ನು ಸುತ್ತಮುತ್ತಲ ಜಿಲ್ಲೆಗಳಿಂದ ತರಿಸಿಕೊಳ್ಳುತ್ತಾರೆ ಬಿಜಾಪುರ ಕಡೆಗಳಿಂದ ಬೇವಿನ ಬೀಜದ ಉತ್ಪನ್ನಗಳು, ಕೋಳಿ ಉದ್ಯಮದಿಂದ ಕೋಳಿ ಗೊಬ್ಬರಗಳನ್ನು ತರಿಸಿಕೊಳ್ಳುತ್ತಾರೆ ಗುಡ್ಡಗಾಡು ಪ್ರದೇಶಗಳಲ್ಲಿ ಕುರಿಸಾಕಣಿಕೆ ಮಾಡುವವರ ಬಳಿಯಿಂದ ಕುರಿ ಗೊಬ್ಬರಗಳನ್ನು ತರಿಸಿಕೊಳ್ಳುತ್ತಾರೆ ಕೆಲವು ಕಡೆಗಳಿಂದ ಸಗಣಿ ಗೊಬ್ಬರವನ್ನು ತರಿಸಿಕೊಳ್ಳುತ್ತಾರೆ ದೊಡ್ಡ ದೊಡ್ಡ ವಿಶ್ವವಿದ್ಯಾಲಯಗಳಿಂದ ಬ್ಯಾಕ್ಟೀರಿಯಾ ಉತ್ಪನ್ನಗಳನ್ನು ತರಿಸಿಕೊಂಡು ಅದನ್ನು ಅಭಿವೃದ್ಧಿಪಡಿಸುತ್ತಾರೆ.

ನೂರಾ ಇಪ್ಪತ್ತು ಉತ್ಪನ್ನಗಳಲ್ಲಿ ರೈತರಿಗೆ ಎಲ್ಲ ಬೆಳೆಗಳಿಗೆ ಬೇಕಾದ ಸಾವಯವ ಗೊಬ್ಬರ ಕಡಿಮೆ ದರದಲ್ಲಿ ಪ್ರತಿಯೊಬ್ಬ ರೈತರಿಗೂ ಕೈಗೆಟುಕುವ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ ಇದರಿಂದ ರೈತರಿಗೂ ತೃಪ್ತಿ ಇದೆ. ಇವರು ಒಂದು ವರ್ಷಕ್ಕೆ ಅರವತ್ತರಿಂದ ಎಪ್ಪತ್ತು ಕೋಟಿಯವರೆಗೆ ವ್ಯವಹಾರವನ್ನು ಮಾಡುತ್ತಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಜನರಿಗೆ ಕೆಲಸವನ್ನು ನೀಡುವುದರ ಜೊತೆಗೆ ಇನ್ನೂ ಹೆಚ್ಚಿನ ವ್ಯವಹಾರವನ್ನು ಮಾಡುವ ಉದ್ದೇಶವನ್ನು ಹೊಂದಿದ್ದಾರೆ. ಇವರು ಹೇಳುವ ಪ್ರಕಾರ ನಾವು ಮಾಡುವ ಸಣ್ಣಪುಟ್ಟ ಕೆಲಸದಲ್ಲಿ ಗುರಿ ಇದ್ದಾಗ ಶ್ರಮ ಇದ್ದಾಗ ಅದರಿಂದ ಲಾಭ ಬಂದೇ ಬರುತ್ತದೆ.

ನೋಡಿದಿರಲ್ಲ ಸ್ನೇಹಿತರೆ ಯಾವ ರೀತಿಯಾಗಿ ಕೃಷಿ ಕುಟುಂಬದಲ್ಲಿ ಬೆಳೆದ ಇವರು ಇಂದು ದೊಡ್ಡ ಉದ್ಯಮಿಯಾಗಿ ರಾಜ್ಯದಾದ್ಯಂತ ಹೆಸರನ್ನು ಗಳಿಸಿದ್ದಾರೆ ಇವರು ತಮ್ಮ ಉದ್ಯಮದಲ್ಲಿ ರೈತರಿಗೆ ಉಪಯೋಗವಾಗುವಂತಹ ಸಾವಯವ ಗೊಬ್ಬರವನ್ನು ಒದಗಿಸುವುದರ ಜೊತೆಗೆ ರೈತರಿಗೆ ಬೆಳೆಗಳನ್ನು ಯಾವ ರೀತಿಯಾಗಿ ಬೆಳೆಯಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ಕೊಡುತ್ತಾರೆ. ಈ ರೀತಿಯಾಗಿ ರೈತರಿಗೆ ಉಪಯೋಗವಾಗುವ ಉದ್ದೇಶದಿಂದ ತಮ್ಮ ಉದ್ಯಮವನ್ನು ಪ್ರಾರಂಭಿಸಿ ಅದರಲ್ಲಿ ಯಶಸ್ಸನ್ನು ಸಾಧಿಸಿದ್ದಾರೆ. ಅವರ ಉದ್ಯಮ ಇನ್ನೂ ಹೆಚ್ಚಿನ ರೀತಿಯಲ್ಲಿ ಬೆಳೆದು ರಾಷ್ಟ್ರ ಅಂತ ರಾಷ್ಟ್ರಮಟ್ಟದಲ್ಲಿ ಹೆಸರನ್ನು ಗಳಿಸಲಿ ಎಂದು ನಾವೆಲ್ಲರೂ ಹಾರೈಸೋಣ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!