ಮೈ ಮೇಲೆ ದೇವರು ದೆವ್ವ ಬರೋದು ನಿಜಾನಾ? ಇದರ ಹಿಂದಿರುವ ಸತ್ಯಾಸತ್ಯತೆ ಇಲ್ಲಿದೆ

0 148

ಬಹಳಷ್ಟು ಜನರು ದೇವರನ್ನು ನಂಬುತ್ತಾರೆ ಕೆಲವರು ಮಾತ್ರ ದೇವರನ್ನು ನಂಬುವುದಿಲ್ಲ. ಮೈಮೇಲೆ ದೇವರು ಅಥವಾ ದೆವ್ವ ಬರುವುದನ್ನು ನಾವೆಲ್ಲರೂ ಸಾಮಾನ್ಯವಾಗಿ ಕೇಳಿರುತ್ತೇವೆ. ಮೈಮೇಲೆ ದೇವಿ ಅಥವಾ ದೆವ್ವ ಬರುವುದನ್ನು ಹೇಗೆ ಕಂಡುಹಿಡಿಯಲಾಗುತ್ತದೆ ಹಾಗೂ ಈ ಸಂಗತಿಯ ಬಗ್ಗೆ ಪುರಾಣಗಳಲ್ಲಿ ಏನೆಂದು ಉಲ್ಲೇಖವಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಮೈಮೇಲೆ ದೆವ್ವ ಬರುವುದು, ದೇವರು ಬರುವುದನ್ನು ಸುತ್ತಮುತ್ತಲಿನ ಜಾತ್ರೆ, ದೇವಸ್ಥಾನ, ದರ್ಗಾಗಳಲ್ಲಿ ನೋಡಬಹುದು. ಸಾಮಾನ್ಯವಾಗಿ ಹೆಣ್ಣು ಮಕ್ಕಳು ಅಥವಾ ಮಹಿಳೆಯರ ಮೇಲೆ ದೆವ್ವ ಬರುವುದು, ದೇವಿ ಬರುವುದನ್ನು ನೋಡುತ್ತೇವೆ. ಕೆಲವರು ಮನುಷ್ಯರ ಮೈಮೇಲೆ ದೇವಿ ಅಥವಾ ದೆವ್ವ ಬರುವುದು ಸತ್ಯ ಎಂದು ನಂಬುತ್ತಾರೆ, ಇನ್ನು ಕೆಲವರು ಧಾರ್ಮಿಕ ಮೂಢನಂಬಿಕೆ ಎನ್ನುತ್ತಾರೆ,

ಕೆಲವರು ನಾಟಕ ಎನ್ನುತ್ತಾರೆ. ಮೈಮೇಲೆ ದೆವ್ವ ಅಥವಾ ದೇವಿ ಬರುವುದು ಅವರ ಮಾನಸಿಕ ಒತ್ತಡದಿಂದ ಎಂದು ವೈಜ್ಞಾನಿಕ ದೃಷ್ಟಿಯಿಂದ ನೋಡುವವರು ಹೇಳುತ್ತಾರೆ. ಮೈಮೇಲೆ ದೆವ್ವ ಅಥವಾ ದೇವಿ ಬಂದರೆ ತಾಸುಗಟ್ಟಲೆ ತನ್ನ ದೇಹವನ್ನು ದಂಡಿಸುತ್ತಾರೆ ಚಿತ್ರ ವಿಚಿತ್ರವಾಗಿ ವರ್ತಿಸುತ್ತಾರೆ. ಮಹಿಳೆಯು ಚಿತ್ರವಿಚಿತ್ರವಾಗಿ ಕುಣಿಯುತ್ತಿದ್ದರೆ, ನರ್ತನ ಮಾಡುತ್ತಿದ್ದರೆ ದೇವಿ ದುರ್ಗೆ ಮೈಮೇಲೆ ಬಂದಿದ್ದಾಳೆ ಎಂದು ನಂಬುತ್ತಾರೆ.

ಹಿಂದೂ ಧರ್ಮದಲ್ಲಿ ದೇವರ ಮೇಲೆ ನಂಬಿಕೆ ಇದ್ದಂತೆ ದುಷ್ಟ ಆತ್ಮಗಳ ಮೇಲೆ ನಂಬಿಕೆ ಇದೆ. ಮೈಮೇಲೆ ದೆವ್ವ ಬಂದಾಗ ಭಯಂಕರವಾಗಿ ವರ್ತಿಸುತ್ತಾರೆ. ಒಬ್ಬ ವ್ಯಕ್ತಿ ಚಿತ್ರ ವಿಚಿತ್ರವಾಗಿ ವರ್ತಿಸಿದಾಗ ಅವನ ಮೈಮೇಲೆ ಬಂದಿರುವುದು ದೇವರು ಅಥವಾ ದೆವ್ವ ಎಂಬುದನ್ನು ಕಂಡು ಹಿಡಿಯುವುದು ಆಶ್ಚರ್ಯದ ಸಂಗತಿಯಾಗಿದೆ, ಕೆಲವು ಪುರಾಣಗಳಲ್ಲಿ ಕಂಡು ಹಿಡಿಯುವುದು ಸುಲಭ ಎಂದು ಉಲ್ಲೇಖಿಸಲಾಗಿದೆ. ಪುರಾಣಗಳ ಪ್ರಕಾರ ವ್ಯಕ್ತಿಯ ದೇಹದಲ್ಲಿ ಶಕ್ತಿ ದೇವತೆ ಮಾತ್ರ ಪ್ರವೇಶ ಮಾಡಬಹುದು ಅಂದರೆ ದುರ್ಗಿ ರೂಪದಲ್ಲಿ ಅಥವಾ ಕಾಳಿ ರೂಪದಲ್ಲಿ ದೇವಿ ಮನುಷ್ಯನ ದೇಹವನ್ನು ಪ್ರವೇಶಿಸುತ್ತಾಳೆ ಎಂದು ನಂಬಲಾಗಿದೆ. ಕೆಟ್ಟ ಆತ್ಮ ಅಥವಾ ಕೆಟ್ಟ ಶಕ್ತಿ ದೇಹದ ಒಳಗೆ ಪ್ರವೇಶಿಸಿದರೆ ಕಂಡುಹಿಡಿಯಲು ಕೆಲವು ಉಪಾಯಗಳಿವೆ, ವ್ಯಕ್ತಿಯ ವರ್ತನೆಯಿಂದ ಕಂಡುಹಿಡಿಯಬಹುದು.

ಪುರಾಣದ ಪ್ರಕಾರ ವ್ಯಕ್ತಿಯ ದೇಹದಲ್ಲಿ ದೇವಿ ಪ್ರವೇಶಿಸಿದರೆ ತನ್ನ ದೇಹಕ್ಕೆ ಯಾವುದೆ ರೀತಿಯಲ್ಲಿ ಹಾನಿ ಮಾಡಿಕೊಳ್ಳುವುದಿಲ್ಲ ಆದರೆ ಕೆಟ್ಟ ಶಕ್ತಿ ವ್ಯಕ್ತಿಯ ದೇಹವನ್ನು ಪ್ರವೇಶಿಸಿದರೆ ತನ್ನ ದೇಹವನ್ನು ದಂಡಿಸಿಕೊಳ್ಳುತ್ತಾನೆ ಜೊತೆಗೆ ಬೇರೆಯವರ ಮೇಲೆ ಆಕ್ರಮಣ ಮಾಡಿರುವ ಉದಾಹರಣೆಗಳಿವೆ. ದೇವರ ಧ್ಯಾನದಲ್ಲಿ ಅತಿಯಾಗಿ ಮಗ್ನರಾಗಿದ್ದಾಗ ದೇವಿಯು ಮನುಷ್ಯನ ದೇಹದಲ್ಲಿ ಪ್ರವೇಶಿಸುವ ಸಾಧ್ಯತೆ ಇರುತ್ತದೆ ಹಾಗೂ ಮಾನಸಿಕ ಅಸ್ವಸ್ಥರಾದಾಗ ದೇವರ ಧ್ಯಾನದಲ್ಲಿ ಮಗ್ನರಾಗಿದ್ದಾಗ ತಮ್ಮ ದೇಹವನ್ನು ಸಂಪೂರ್ಣವಾಗಿ ದೇವರಿಗೆ ಅರ್ಪಿಸುತ್ತಾರೆ

ಈ ಸಂದರ್ಭದಲ್ಲಿ ದೇವಿ ಮನುಷ್ಯನ ದೇಹವನ್ನು ಪ್ರವೇಶಿಸುವ ಸಾಧ್ಯತೆಗಳಿವೆ ಎಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ. ದೇವಿ ಮನುಷ್ಯನ ದೇಹವನ್ನು ಪ್ರವೇಶಿಸಿದಾಗ ದೇಹ ಕಂಪಿಸಲು ಪ್ರಾರಂಭಿಸುತ್ತದೆ ಆಗ ವ್ಯಕ್ತಿ ತನಗೆ ಗೊತ್ತಿಲ್ಲದ ಹಾಗೆ ಕುಣಿಯಲು, ವಿಚಿತ್ರವಾಗಿ ವರ್ತಿಸಲು, ದೇವರಿಗೆ ಹಲವಾರು ಭಂಗಿಗಳಲ್ಲಿ ನಮಸ್ಕರಿಸಲು ಪ್ರಾರಂಭಿಸುತ್ತಾನೆ. ಸಾಮಾನ್ಯವಾಗಿ ಮಹಿಳೆಯರ ಮೈಮೇಲೆ ದೇವಿ ಬಂದಾಗ ತನ್ನ ತಲೆಯನ್ನು ಸುತ್ತಿ ಕೂದಲನ್ನು ಹರಡಿಸಿಕೊಳ್ಳುತ್ತಾರೆ.

ಹೆಣ್ಣುಮಕ್ಕಳಲ್ಲಿ ದೇವಿ ಬರಲು ಕಾರಣ ಹಿಂದಿನ ಕಾಲದಲ್ಲಿ ನಡೆಯುತ್ತಿದ್ದ ಬಾಲ್ಯವಿವಾಹ, ಸಣ್ಣವಯಸ್ಸಿನಲ್ಲಿ ಮಕ್ಕಳಾಗುವುದು, ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ, ಬಂಜೆತನ ಈ ಸಮಸ್ಯೆಗಳಿಂದ ಮಹಿಳೆಯರು ಮಾನಸಿಕ ಒತ್ತಡಕ್ಕೆ ಒಳಗಾಗಿ ಖಾಯಿಲೆಗೆ ಒಳಗಾಗುತ್ತಿದ್ದಾರೆ ಇದನ್ನು ದೆವ್ವ ಅಥವಾ ದೇವಿ ಬರುವುದೆಂದು ನಂಬಲಾಗುತ್ತದೆ. ಹಿಂದಿನ ಕಾಲದಲ್ಲಿ ಮದುವೆಯಾದ ಹೆಣ್ಣು ಮಕ್ಕಳಿಗೆ ಹಿಂಸೆ ಕೊಡುತ್ತಿರುವುದರಿಂದ ಮೈ ಮೇಲೆ ದೆವ್ವ ಬಂದಿದೆ ದೇವರು ಬಂದಿದೆ ಎಂದು ಹೇಳಿಕೊಂಡು ವಿಚಿತ್ರವಾಗಿ ವರ್ತಿಸುತ್ತಿದ್ದರು.

ಬಹಳಷ್ಟು ವರ್ಷಗಳ ಹಿಂದೆ ಮೆಡಿಕಲ್ ಸೈನ್ಸ್ ಮುಂದುವರೆದಿರಲಿಲ್ಲ ಆದ್ದರಿಂದ ಈ ರೀತಿ ಮೈಮೇಲೆ ದೆವ್ವ ಬಂದಿದೆ, ದೇವರು ಬಂದಿದೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದರು. ದುರ್ಬಲ ಮನಸ್ಸು ಹೊಂದಿರುವವರು ಚಿತ್ರವಿಚಿತ್ರವಾಗಿ ವರ್ತಿಸುತ್ತಿದ್ದರು. ಮೈಮೇಲೆ ದೆವ್ವ ಅಥವಾ ದೇವಿ ಬಂದಿರುವ ವ್ಯಕ್ತಿಗಳನ್ನು ದೇವಸ್ಥಾನ ಅಥವಾ ದರ್ಗಾಗಳಿಗೆ ಕರೆದುಕೊಂಡು ಹೋಗಿ ಬಿಡಿಸುವ ಹಳೆಯ ಕಾಲದ ಪದ್ಧತಿಯಿತ್ತು ಹೀಗೆ ದೆವ್ವ ಅಥವಾ ದೇವರನ್ನು ಬಿಡಿಸುವ ದೇವಸ್ಥಾನಗಳು ಕೂಡ ನಮ್ಮ ಕರ್ನಾಟಕದಲ್ಲಿ ಸಾಕಷ್ಟಿವೆ.

ಇಂದಿನ ಆಧುನಿಕ ಯುಗದಲ್ಲಿಯೂ ಮೈಮೇಲೆ ದೆವ್ವ ಬರುವುದು, ದೇವಿ ಬರುವ ಘಟನೆಗಳನ್ನು ನಾವು ನೋಡುತ್ತೇವೆ. ಒಟ್ಟಿನಲ್ಲಿ ಮೈಮೇಲೆ ದೆವ್ವ ಅಥವಾ ದೇವಿ ಬರುವುದು ಸತ್ಯವೇ ಸುಳ್ಳು ಎನ್ನುವುದರ ಬಗ್ಗೆ ಸರಿಯಾದ ಮಾಹಿತಿ ಇಲ್ಲ ವೈಜ್ಞಾನಿಕತೆಯ ದೃಷ್ಟಿಯಲ್ಲಿ ಸುಳ್ಳು ಧಾರ್ಮಿಕತೆಯ ದೃಷ್ಟಿಯಲ್ಲಿ ಅದು ನಿಜವಾಗಿದೆ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.