Success Story: ಮನಸಿದ್ದರೆ ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಹಲವಾರು ಸಾಧಕರು ನಿದರ್ಶನರಾಗಿದ್ದಾರೆ. ಬಡತನದಿಂದ ಬಂದು ಸಾಧನೆ ಮಾಡಿದವರನ್ನು ನಾವು ನೋಡಬಹುದು. ಹಳ್ಳಿಯ ಬಡ ಕುಟುಂಬದಿಂದ ಬಂದು ಐಪಿಎಸ್ ಅಧಿಕಾರಿಯಾದ ಹಸನ್ ಅವರ ಸಾಧನೆಯ ಬಗ್ಗೆ ಈ ಲೇಖನದಲ್ಲಿ ನೋಡೋಣ.
ಮನಸ್ಸಿದ್ದರೆ ಮಾರ್ಗ, ಗುರಿಯೊಂದಿದ್ದರೆ ಎಂತಹ ಕಷ್ಟದ ಜೀವನವಾದರೂ, ಅದೆಷ್ಟೆ ಹಸಿವಿನಿಂದ ಬಳಲಿದರೂ ಕನಸು ನನಸು ಮಾಡುವತ್ತ ಮನಸ್ಸು ಇರುತ್ತದೆ. ಗುಜರಾತ್ ಮೂಲದ ಖನೋದರ್ ಗ್ರಾಮದ ಬಡ ಕುಟುಂಬದ 22 ವರ್ಷದ ಕುಡಿ ಮೀಸೆ ಚೆಲುವ ಈಗ ಐಪಿಎಸ್ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಭಾರತದ ಅತ್ಯಂತ ಕಿರಿಯ ವಯಸ್ಸಿನ ಐಪಿಎಸ್ ಅಧಿಕಾರಿ ಎಂಬ ಕೀರ್ತಿ ಹಸನ್ ಅವರಿಗೆ ಸಲ್ಲುತ್ತದೆ. ಗ್ರಾಮಸ್ಥರು ಹಸನ್ ಅವರನ್ನು ವಾತ್ಸಲ್ಯದಿಂದ ನೋಡಿಕೊಂಡಿದ್ದಾರೆ. ಹಸನ್ ಅವರ ತಂದೆಯ ಹೆಸರು ಮುತ್ತಪ್ಪ ತಾಯಿಯ ಹೆಸರು ನಶಿಮಾ ಬಾನು. ಹಸನ್ ಅವರ ತಂದೆ ತಾಯಿ ವಜ್ರ ಖನಿಜ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಹಸನ್ ಚಿಕ್ಕವಯಸ್ಸಿನಲ್ಲಿಯೆ ಬುದ್ದಿವಂತನಾಗಿದ್ದ. ಆತನ ಓದಿಗೆ ಅವರ ತಂದೆ ತಾಯಿ ಬೆಂಬಲ ನೀಡಿದರು.
ಹಸನ್ ಅವರ ತಾಯಿ 200 ಕಿಮೀ ದೂರ ಹೋಗಿ ಗೋಧಿ ಹಿಟ್ಟು ತಂದು ಹಗಲು ರಾತ್ರಿ ಚಪಾತಿ ಮಾಡಿ ಮಾರಾಟ ಮಾಡುತ್ತಿದ್ದರು. ಒಮ್ಮೆ ಹಸನ್ ಅವರ ಹಳ್ಳಿಗೆ ಜಿಲ್ಲಾಧಿಕಾರಿ ಅವರು ಬಂದಿದ್ದರು. ಅವರಿಗೆ ಪೊಲೀಸ್ ಮತ್ತು ಪಿಎ ಬೆಂಗಾವಲಾಗಿ ಇದ್ದರು ಹಳ್ಳಿಯ ಸಮಸ್ಯೆಯ ಬಗ್ಗೆ ಬಹು ಬೇಗ ಪರಿಹಾರ ನೀಡುವ ಬಗೆಯನ್ನು ಪೋಲಿಸ್ ಅಧಿಕಾರಿಗಳು ವಿವರಿಸಿದರು. ಆಗ ಅಧಿಕಾರಿಗಳ ಪವರ್, ಆಡಳಿತ ವೈಖರಿ ನೋಡಿ ಹಸನ್ ಅವರಂತೆ ನಾನು ಒಬ್ಬ ಉನ್ನತ ಅಧಿಕಾರಿ ಆಗಬೇಕು ಎಂದು ಜಿಲ್ಲಾಧಿಕಾರಿ ಆಗಬೇಕಾದರೆ ಏನು ಮಾಡಬೇಕು ಎಂದು ಹಸನ್ ಅವರು ಡಿಸಿ ಅವರ ಬಳಿ ಕೇಳಿದರು. ನಂತರ ಹಸನ್ ಅವರು ಹಲವರ ಮಾರ್ಗದರ್ಶನದಲ್ಲಿ ಪರಿಶ್ರಮದಿಂದ ಓದಿದರು. ಹಸನ್ ಅವರ ಕನಸನ್ನು ನನಸು ಮಾಡಿಕೊಳ್ಳಲು ಶಿಕ್ಷಕರು, ಸ್ನೇಹಿತರು, ಪೋಷಕರು ಇನ್ನೂ ಅನೇಕರು ಸಹಾಯ ಮಾಡಿದ್ದಾರೆ. ಹಸನ್ ಅವರು ಓದಿದ ಹೈಸ್ಕೂಲ್ ನ ಮುಖ್ಯೋಪಾಧ್ಯಾಯರು ದೆಹಲಿಯಲ್ಲಿ ಐಎಎಸ್ ಕೋಚಿಂಗ್ ಪಡೆಯಲು 80,000 ರೂಪಾಯಿ ಸಹಾಯ ಮಾಡಿದ್ದಾರೆ.
ಗುಜರಾತ್ ನ ಒಂದು ಕುಟುಂಬದವರು ಹಸನ್ ಅವರನ್ನು ಎರಡು ವರ್ಷ ಸಾಕಿದ್ದು ಹಣ ಸಹಾಯ ಮಾಡಿದ್ದಾರೆ. ಹಸನ್ ಅವರು ಐಎಎಸ್ ಅಧಿಕಾರಿ ಆಗಲು ಬಯಸಿದ್ದರು ನಂತರ ಅವರು ಐಪಿಎಸ್ ಪರೀಕ್ಷೆ ಬರೆದರು. ಹಸನ್ ಅವರು ಮೊದಲ ಬಾರಿ ಐಪಿಎಸ್ ಪರೀಕ್ಷೆ ಬರೆಯಲು ಹೋಗುವಾಗ ಅಪಘಾತಕ್ಕೀಡಾಗಿ ಗಂಭೀರ ಸಮಸ್ಯೆಯನ್ನು ಎದುರಿಸಿದ್ದರು ಆದರೂ ಹಸನ್ ಅವರು ಧೈರ್ಯಗೆಡದೆ ಎರಡನೇ ಬಾರಿ ಓದಿ ಐಪಿಎಸ್ ಪರೀಕ್ಷೆಯನ್ನು ಪಾಸು ಮಾಡಿದ್ದಾರೆ. ಮೊದಲ ಬಾರಿ 570 ನೇ ರ್ಯಾಂಕ್ ಬಂದಿರುವ ಕಾರಣ ಅವರು ಐಪಿಎಸ್ ಅಧಿಕಾರಿ ಆಗುವ ಕನಸು ನನಸಾಗಲಿಲ್ಲ. ನಂತರ ಎರಡನೇ ಬಾರಿ ಉತ್ತಮ ರ್ಯಾಂಕ್ ಬಂದ ಕಾರಣ ಐಪಿಎಸ್ ಅಧಿಕಾರಿ ಆದರು. ಹಸನ್ ಅವರ ಮುಂದಿನ ಭವಿಷ್ಯ ಉಜ್ವಲವಾಗಲಿ, ಅವರಿಂದ ಅನೇಕ ಜನಪರ ಕೆಲಸಗಳು ಕೈಗೊಳ್ಳಲಿ ಎಂದು ಆಶಿಸೋಣ.