ದೇಹದ ಆರೋಗ್ಯ ಕಾಪಾಡಿಕೊಳ್ಳಲು, ನಮ್ಮನ್ನು ನಾವು ರೋಗಗಳಿಂದ ದೂರವಿರಲು ಪೌಷ್ಟಿಕ ಆಹಾರದ ಜೊತೆಗೆ ವ್ಯಾಯಾಮಗಳು, ಯೋಗಗಳು ಸಹಾಯ ಮಾಡುತ್ತದೆ. ಯೋಗಗಳು ಆರೋಗ್ಯ ಕಾಪಾಡುವುದಲ್ಲದೆ, ಮನಸ್ಸಿನ ಏಕಾಗ್ರತೆಯ ಕ್ಷಮತೆ ಹೆಚ್ಚಿಸಿಕೊಳ್ಳಲು ಸಹಾಯಕವಾಗಿದೆ. ನಮ್ಮ ಪರಮಸ್ಥಿತಿ ಕಂಡುಕೊಳ್ಳಲು, ಯೋಗ ಮಾಡಲು ಸಾಧನ ಆಸನಗಳಾಗಿರುತ್ತವೆ. ಹಾಗಾದರೆ ಯೋಗ ಸಾಧಿಸುವುದು ಹೇಗೆ? ಏನು ಮಾಡಬೇಕು ಎಂಬುದನ್ನು ಸದ್ಗುರು ಜೀ ವಿವರಿಸಿದ್ದಾರೆ. ಅದೇನು ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.

ಯೋಗಾಸನದಲ್ಲಿ ಮೂಲಭೂತ ಆಸನಗಳು ಎಂದು ಕರೆಯಲ್ಪಡುವ ಎಂಬತ್ನಾಲ್ಕು ಆಸನಗಳಿವೆ. ಇವುಗಳು ಮುಕ್ತಿಯ ಎಂಬತ್ನಾಲ್ಕು ದಾರಿಗಳಾಗಿವೆ. ಮುಕ್ತಿಗಾಗಿ ಎಲ್ಲಾ ಆಸನಗಳು ಮಾಡುತ್ತಿರುವ ಪ್ರಮೇಯವಿಲ್ಲ. ಕೇವಲ ಒಂದು ಆಸನದಲ್ಲಿಯೆ ಮುಕ್ತಿಗೆ ದಾರಿ ಕಂಡುಕೊಳ್ಳಬಹುದಾಗಿದೆ. ಉದಾಹರಣೆಗೆ ಹಟಯೋಗಿಗಳು ಒಂದೆ ಆಸನವನ್ನು ತಮ್ಮ ಮುಕ್ತಿಗಾಗಿ ಮಾಡುತ್ತಾರೆ. ಇದನ್ನು ತಾರ್ಕಿಕವಾಗಿ ಅರ್ಥೈಸಲು ಕಷ್ಟಕರವಾಗಬಹುದು. ನಾವೂ ಮೊದಲು ಕಲಿಯಬೇಕಾಗಿರುವುದು ಸರಿಯಾಗಿ ಕುಳಿತುಕೊಳ್ಳಲು ಹಾಗೂ ಸರಿಯಾಗಿ ದೇಹ ನಿಯಂತ್ರಣ ಮಾಡುವುದು ಇದನ್ನು ಕಲಿತಲ್ಲಿ ತುಂಬಾ ವಿಷಯಗಳ ಅರಿವು ಸಿಗುತ್ತದೆ. ಇದನ್ನೆ ಆಸನ ಸಿದ್ಧಿ ಎಂದು ಕರೆಯಲಾಗುತ್ತದೆ. ಆಸನ ಸಿದ್ಧಿ ಹೇಗೆ ತಿಳಿಯುತ್ತದೆ ಎಂದರೆ ಒಂದು ಆಸನದಲ್ಲಿ ಎರಡು ಅರ್ಧ ತಾಸಿನವರೆಗೂ ಆರಾಮವಾಗಿ ಕುಳಿತರೆ ಆ ಆಸನ ಸಿದ್ಧಿಸಿದೆ ಎಂದು ಅರ್ಥ. ಇದು ಹೇಗೆ ಸಾಧ್ಯವೆಂದರೆ ಇಲೆಕ್ಟ್ರಾನಿಕ್ ವಸ್ತುಗಳನ್ನು ಬಳಸಿ

ಮಾಡಲಾದ ಟಿವಿಯು ಒಂದೆ ಕಡೆ ಇದ್ದರೂ ಒಂದು ಜಗತ್ತಾಗಿ ಬಿಡುತ್ತದೆ. ಎಲ್ಲವೂ ಇದರಲ್ಲಿ ಜಗತ್ತಿನ ಮಾಹಿತಿ ಹರಿವು ಉಂಟಾಗುತ್ತದೆ. ಹಾಗೆಯೆ ದೇಹವೆಂಬ ಪೆಟ್ಟಿಗೆ ಸರಿಯಾಗಿ ಕುಳಿತರೆ ಜಗತ್ತಿನ ಎಷ್ಟೋ ವಿಷಯಗಳ ಅರಿವಿನ ಹರಿವು ನಮ್ಮಲ್ಲಿ ಉಂಟಾಗುತ್ತದೆ.

ಮಾನವ ಏನಾದರೊಂದು ಸಾಧನೆ ಮಾಡುತ್ತಾನೆಂದರೆ ಅವನ ಗ್ರಹಿಕೆಯ ಅರಿವು ಎಷ್ಟಿರುತ್ತದೆಯೋ ಅಷ್ಟೇ ಸಾಧಿಸಲು ಸಾಧ್ಯ. ಮುಂದಿನ ಭವಿಷ್ಯದ ನಿರ್ಧಾರ ಇವತ್ತಿನ ನಿಮ್ಮ ಗ್ರಹಿಕೆಯ ಆಧಾರದ ಮೇಲೆ ನಿಂತಿರುತ್ತದೆ. ಗ್ರಹಣದ ಶಕ್ತಿಯ ಹೆಚ್ಚಳವು ಯೋಗದ ಆಸನಗಳ ಆಸಕ್ತಿಯಾಗಿದೆ. ಹಾಗಾಗಿ ಆಸನ ಸರಿಯಾಗಿರುವುದು ಅವಶ್ಯಕ ಯಾಕೆಂದರೆ ಈ ಎಂಬತ್ನಾಲ್ಕು ಆಸನಗಳು ಸರಿಯಾಗಿದ್ದಲ್ಲಿ ಬ್ರಹ್ಮಾಂಡದ ಜೊತೆ ಜೋಡಣೆಗೊಳ್ಳುತ್ತದೆ. ಎಂಬತ್ನಾಲ್ಕು ಆಸನಗಳು ಆಗದಿದ್ದರೂ ಒಂದು ಆಸನವನ್ನು ಸಾಧಿಸಿ, ಈ ಒಂದು ಆಸನದ ಮೂಲಕ ಉಳಿದ ಎಂಬತ್ಮೂರು ಆಸನಗಳನ್ನು ಸಾಧಿಸಬಹುದು. ಹೀಗೆ ಆಸನಗಳಷ್ಟನ್ನು ಸಾಧಿಸಿದಾಗ ನಡೆದ ಎಲ್ಲಾ ವಿಷಯಗಳ ಬಗೆಗೂ ತಿಳಿಯಬಹುದು ಯಾಕೆಂದರೆ ಎಲ್ಲವೂ ಮಾನವನ ಮೆದುಳಿನಲ್ಲಿ ಕಂಪ್ಯೂಟರ್ ನ ಕೋಡ್ ಗಳಂತೆ ಶೇಖರಿಸಲ್ಪಟ್ಟಿರುತ್ತದೆ. ಹೀಗೆ ಶೇಖರಣೆ ಇರುವ ಆಯಾಮವು ಹೊರಗಿನ ಅಂದರೆ ಬಾಹ್ಯ ಆಯಾಮಕ್ಕೆ ಸ್ಪಂದಿಸುವಂತೆ ಆದರೆ ಆ ಆಯಾಮದೊಳಗಿನ ಎಲ್ಲಾ ವಿಷಯಗಳ ಹರಿವು ತಿಳಿಯುತ್ತದೆ.

ಯೋಗ ಎಂದರೆ ಕೂಡುವುದು ಎಂದು ಅರ್ಥ. ಆದ್ದರಿಂದಲೆ ಆಂತರಿಕ ಆಯಾಮಕ್ಕೆ ಜೋಡಣೆಯಾಗಲು ಯೋಗವೊಂದು ಪ್ರಬಲ ಸಾಧನ. ಕೂಡುವಿಕೆಗೆ ಎರಡು ಎಂಬುದು ಅಸ್ತಿತ್ವದಲ್ಲಿರಬೇಕು. ಆ ಎರಡು ಸೂಚಿಸುವುದು ನಾವು ಮತ್ತೆ ಜಗತ್ತು ಅಂದರೆ ಆಂತರಿಕ ಹಾಗೂ ಬಾಹ್ಯ. ಆಂತರಿಕ ಸ್ವಲ್ಪ ಗೊತ್ತಿರುತ್ತದೆ ಆದರೆ ಬಾಹ್ಯವಾಗಿ ನಾವು ಸೃಷ್ಟಿಸಿದ ಜಗತ್ತಿನ ಹೊರತಾಗಿಯೂ ಬೇರೆ ಜಗತ್ತು ಇದೆ. ಆಂತರಿಕ ಹಾಗೂ ಬಾಹ್ಯ ಇವೆರಡು ಅನುಭವವಾಗುಗುವ ವಾಸ್ತವತೆಗಳು. ಯಾವಾಗ ಆಂತರಿಕ ಹಾಗೂ ಬಾಹ್ಯಗಳು ಒಂದುಗೂಡುತ್ತವೆ ಅದು ಯೋಗ ಎಂದು ಕರೆಯಲ್ಪಡುತ್ತದೆ. ಭೌತಿಕವಾಗಿ ನಾವು ಏನನ್ನಾದರೂ ಸಾಧಿಸಬಹುದು ಆದರೆ ಮನಸ್ಸು ನಿಗ್ರಹಿಸುವುದು ಕಷ್ಟ ಸಾಧ್ಯ. ಮನಸ್ಸು ಚಂಚಲಗೊಳ್ಳುತ್ತದೆ ಆದರೆ ಶರೀರದ ಆಗು ಹೋಗು ನಮ್ಮ ಅರಿವಿಗೆ ಬರುತ್ತದೆ. ಯೋಗಗಳ ಮೂಲಕ ದೇಹದ ಮೇಲೆ ಹಿಡಿತ ಸಾಧಿಸಿ ಪರಮಸ್ಥಿತಿ ತಲುಪಬಹುದು. ಇದರಿಂದ ಶರೀರ ಉತ್ಸಾಹ, ಸಂತೋಷ, ಸಮತೋಲನ ಹಾಗೂ ಚಟುವಟಿಕೆಯಿಂದ ತುಂಬಿರುತ್ತದೆ. ಸಮತೋಲನದ ಮೇಲಿನ ಅಸಡ್ಡೆಯ ಕಾರಣ ಈಗಿನ ಸಂತತಿ ದೊಡ್ಡ ಬೆಲೆ ತೆರುತ್ತಿದೆ. ಯಾವುದೆ ಬುದ್ದಿವಂತಿಕೆ, ವಿದ್ಯಾರ್ಹತೆ ಇದ್ದರೂ ಸಮತೋಲನ ಇಲ್ಲದಿದ್ದರೆ ಸಾಮರ್ಥ್ಯವನ್ನು ಸರಿಯಾಗಿ ಉಪಯೋಗಿಸಬಹುದು. ಹಠಯೋಗದಿಂದ ಅಂದರೆ ಸಮತೋಲನದಿಂದ ಯಾವುದೆ ಕೆಲಸಗಳಲ್ಲಿಯೂ ಗೆಲುವು ಸಾಧಿಸಬಹುದು.

ಶ್ರೀ ಸದ್ಗುರು ಜೀ ಹೇಳಿದ ಮಾರ್ಗವನ್ನು ನಾವು ಅನುಸರಿಸಿದರೆ, ಅವರ ತೋರಿಸಿಕೊಟ್ಟ ಮಾರ್ಗದಲ್ಲಿ ನಡೆದರೆ ಆಸನಗಳನ್ನು ಸಿದ್ದಿಸಿಕೊಳ್ಳಬಹುದು‌. ಯೋಗದಿಂದ ಆಂತರಿಕ ಹಾಗೂ ಬಾಹ್ಯದ ಅರಿವು ನಮಗಾಗುವುದು. ಯಾವುದೇ ಕ್ಷೇತ್ರದಲ್ಲಿ ಗೆಲುವು ಹಾಗೂ ಸಮತೋಲನ ಸಾಧಿಸಬಹುದು.

Leave a Reply

Your email address will not be published. Required fields are marked *