ಜೀವನ ಎನ್ನುವುದನ್ನು ಪ್ರತಿಯೊಬ್ಬರು ಬೇರೆ ಬೇರೆ ರೀತಿಯಲ್ಲಿ ನೋಡುತ್ತಾರೆ. ಜೀವನವನ್ನು ಹೇಗೆ ಸುಂದರವಾಗಿ ಮಾಡಿಕೊಳ್ಳಬೇಕು ಎನ್ನುವುದನ್ನು ಸದ್ಗುರು ಅವರು ಸರಳವಾಗಿ ಹೇಳಿದ್ದಾರೆ. ಅದು ಹೇಗೆ ಎನ್ನುವ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಆಧುನಿಕ ವಿಜ್ಞಾನ ಇಂದು ಆಕಾಶಿಕ ಬುದ್ಧಿವಂತಿಕೆ ಎಂದು ಒಪ್ಪಿಕೊಂಡಿದೆ. ಖಾಲಿ ಆಕಾಶ ಬುದ್ಧಿವಂತಿಕೆ ಹೊಂದಿದೆ. ಈ ಬುದ್ಧಿವಂತಿಕೆ ನಮ್ಮ ಪರವಾಗಿ ಕೆಲಸ ಮಾಡುತ್ತದೋ, ಅಥವಾ ವಿರುದ್ಧವಾಗಿ ಕೆಲಸ ಮಾಡುತ್ತದೋ ಎಂಬುದು ನಮ್ಮ ಜೀವನದ ಸ್ವರೂಪವನ್ನು ನಿರ್ಧರಿಸುತ್ತದೆ.
ನಾವು ಅನುಗ್ರಹಿಯ ಜೀವಿಯೋ ಅಥವಾ ಜೀವನ ಪರ್ಯಂತ ಹೊಡೆದಾಡಿಕೊಂಡು ಜೀವನ ನಡೆಸಬೇಕೋ, ಆಕಾಶಿಕ ಬುದ್ಧಿವಂತಿಕೆ ಏನು ಕೆಲಸ ಮಾಡುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಯಾವುದೇ ಕಾರಣವಿಲ್ಲದೆ ಕೆಲವರು ಎಲ್ಲದರಿಂದ ಅನುಗ್ರಹಿತರಾಗುತ್ತಾರೆ ಕೆಲವರು ಜೀವನದಲ್ಲಿ ಹೊಡೆತ ಅನುಭವಿಸುತ್ತಾರೆ. ಇದೆಲ್ಲ ಕಾರಣ ಇಲ್ಲದೇ ಆಗುತ್ತಿಲ್ಲ ಅವರ ಸಾಮರ್ಥ್ಯಕ್ಕೆ ತಕ್ಕಂತೆ ಆಗುತ್ತದೆ.
ಮೂಲಭೂತ ಘಟಕ ಆಕಾಶ ಆಗಿದ್ದು ಅದನ್ನು ಅವಲಂಬಿಸಿ ಉಳಿದ ನಾಲ್ಕು ಭಾಗಗಳು ಕೆಲಸ ಮಾಡುತ್ತದೆ. ಭೂಮಿ ತಿರುಗುವುದು, ಸೌರ ಮಂಡಲ ಇವುಗಳನ್ನು ಆಕಾಶ ಹಿಡಿದಿಟ್ಟಿದೆ. ನಾವು ಕುಳಿತುಕೊಂಡಿರುವುದು ಸಹ ಆಕಾಶ ಹಿಡಿದಿಟ್ಟಿರುವುದರಿಂದ. ಇಡೀ ಬ್ರಹ್ಮಾಂಡವನ್ನು ಅದರ ಸ್ಥಳದಲ್ಲಿ ಹಿಡಿದಿಟ್ಟಿದೆ. ಜೀವನದಲ್ಲಿ ಆಕಾಶದ ಸಹಕಾರ ಪಡೆಯುವುದು ಹೇಗೆ ಎಂದು ಗೊತ್ತಿದ್ದರೆ ಅದು ಅನುಗ್ರಹಿಯ ಜೀವನ.
ಸೂರ್ಯೋದಯ ಆದ ಮೇಲೆ ಸೂರ್ಯ 30 ಡಿಗ್ರಿ ದಾಟುವ ಮುನ್ನ ಆಕಾಶದ ಕಡೆ ಒಮ್ಮೆ ನೋಡಿ ನಮಸ್ಕರಿಸಿ, ಸೂರ್ಯ 30ಡಿಗ್ರಿ ದಾಟಿದ ಮೇಲೆ ಆಕಾಶದ ಕಡೆ ನೋಡಿ ನಮಸ್ಕರಿಸಿ, ಸೂರ್ಯ ಮುಳುಗಿದ ಮೇಲೆ ಮತ್ತೆ ಆಕಾಶ ನೋಡಿ ನಮಸ್ಕರಿಸಿ. ಹೀಗೆ ಮಾಡುವುದರಿಂದ ಜೀವನ ಬದಲಾಗುತ್ತದೆ. ಪುರಾತನ ಕಾಲದಿಂದಲೂ ಮನುಷ್ಯರು ಏನಾದರೂ ಸಾಧಿಸಿದಾಗ, ಯುದ್ದದಲ್ಲಿ ಗೆದ್ದಾಗ ಗೊತ್ತಿಲ್ಲದೆ ಸಾಕ್ಷಾತ್ಕಾರ ಆಗುತ್ತದೆ ಆಗ ಮೇಲೆ ನೋಡುತ್ತಾರೆ. ಸಾಮಾನ್ಯವಾಗಿ ಎಲ್ಲರೂ ನೋಡಿರುತ್ತೀರಿ ಹಿಮಾಲಯ ತಲುಪಿದ ವ್ಯಕ್ತಿ ಮೇಲೆ ನೋಡುತ್ತಾನೆ. ಅನುಭವದ ಉತ್ತುಂಗ ಮುಟ್ಟಿದಾಗ ದೇಹ ಕೃತಜ್ಞತೆ ಸಲ್ಲಿಸುತ್ತದೆ.
ಪ್ರತಿಯೊಬ್ಬರು ದಿನಕ್ಕೆ ಮೂರು ಸಲ ಆಕಾಶವನ್ನು ನೋಡಿ ಧನ್ಯತಾ ಭಾವದಿಂದ, ಆಕಾಶದ ಸಹಕಾರ ಸಿಕ್ಕರೆ ಜೀವನ ಪವಾಡದಂತೆ ನಡೆಯುತ್ತದೆ. ಯೋಚಿಸದೆ ಇರುವ ಅಸಾಧ್ಯ ಬುದ್ಧಿವಂತಿಕೆ ನಮ್ಮದಾಗುತ್ತದೆ. ಆ ಬುದ್ಧಿವಂತಿಕೆ ಇಡೀ ಬ್ರಹ್ಮಾಂಡವನ್ನು ಒಟ್ಟಾಗಿ ಹಿಡಿದಿದೆ. ಈ ಬುದ್ಧಿವಂತಿಕೆಯು ಸೃಷ್ಟಿಯ ಗರ್ಭ, ಗರ್ಭದಲ್ಲಿ ಎಲ್ಲ ಸೃಷ್ಟಿ ನಡೆಯುತ್ತದೆ. ಅದು ಯಾರನ್ನು ನಿರಾಕರಿಸುವುದಿಲ್ಲ, ಪ್ರವೇಶವನ್ನು ನಿರ್ಬಂಧಿಸಿಲ್ಲ. ನಮ್ಮ ಯೋಚನೆ, ದೇಹ, ಭಾವನೆಗೆ ಮೇಲೆ ನೋಡಬೇಕು ಎನ್ನುವುದು ಹೊಳೆಯುವುದಿಲ್ಲ. ನಾವು ಯಾರೂ ನಮ್ಮನ್ನು ಮೀರಿ ಇರುವ ವಿಷಯದ ಬಗ್ಗೆ ಗಮನ ಕೊಡುವುದಿಲ್ಲ. ಅಸಾಧಾರಣ ವಿಷಯ ನಡೆಯುತ್ತಿರುತ್ತದೆ ಆದರೂ ಯಾವುದೋ ಸಣ್ಣ ವಿಷಯಗಳು ನಮ್ಮನ್ನು ಬ್ಯೂಸಿಯಾಗಿ ಇಡುತ್ತವೆ ಅದು ಮಾಯೆ ಎಂದು ಸದ್ಗುರು ಅವರು ಜೀವನದ ಮೌಲ್ಯವನ್ನು ತಿಳಿಸಿದ್ದಾರೆ. ಅವರು ಹೇಳಿದ ಮಾತುಗಳನ್ನು ಅನುಸರಿಸಿದರೆ ಜೀವನ ಪಾವನ.