ಚಂದನವನದಲ್ಲಿ ಮದುವೆ ಪರ್ವ ಮುಂದುವರಿದಿದೆ. ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಹಾಗೂ ನಾಯಕ ನಟ ಎಸ್ ನಾರಾಯಣ್ ಅವರ ಪುತ್ರ ಪವನ್ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟದ್ದಾರೆ. ಅವರಿಗೆ ಚಿತ್ರರಂಗ, ರಾಜಕೀಯ ಸೇರಿದಂತೆ ಹಲವು ಕ್ಷೇತ್ರದ ಗಣ್ಯರು ಶುಭ ಕೋರುತ್ತಿದ್ದಾರೆ. ಯಾರೆಲ್ಲಾ ಈ ಮದುವೆಗೆ ಹಾಜರಾಗಿದ್ದರು ಎನ್ನುವುದರ ಕುರಿತಾಗಿ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್ ನಾರಾಯಣ್ ಅವರ ಪುತ್ರ ಪವನ್ ಅವರು ಸೋಮವಾರ ಫೆಬ್ರವರಿ22 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪವಿತ್ರಾ ಎಂಬ ವಧುವಿನ ಜೊತೆ ಅವರ ಮದುವೆ ಸಮಾರಂಭ ನೆರವೇರಿದೆ. ಈ ಶುಭಕಾರ್ಯಕ್ಕೆ ಸಿಎಂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆಗಮಿಸಿ ನವಜೋಡಿಗೆ ಆಶೀರ್ವಾದ ಮಾಡಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಪವನ್-ಪವಿತ್ರಾ ಮದುವೆ ನಡೆದಿದೆ. ಸಿಎಂ ಯಡಿಯೂರಪ್ಪ ಮಾತ್ರವಲ್ಲದೆ ಅನೇಕ ರಾಜಕೀಯ ಹಾಗೂ ಚಿತ್ರರಂಗದ ಗಣ್ಯರು ಆಗಮಿಸಿ ವಧು-ವರನನ್ನು ಹರಸಿದ್ದಾರೆ. ಸಂಸದೆ ಸುಮಲತಾ ಅಂಬರೀಶ್, ನಟರಾದ ಶರಣ್, ಶ್ರೀಮುರಳಿ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಎಸ್.ಎ. ಚಿನ್ನೇಗೌಡ, ನಟಿ ಅಮೂಲ್ಯ ಶೃತಿ, ಸುಧಾರಾಣಿ ಸೇರಿದಂತೆ ಹೇಗೆ ಅನೇಕ ಸೆಲೆಬ್ರಿಟಿಗಳು ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದರು.
ಸೋಮವಾರ ಬೆಳಗ್ಗೆ 7.30ರಿಂದ 8.30ರವರೆಗೆ ಮದುವೆ ಶಾಸ್ತ್ರಗಳು ನಡೆದವು. ಕುಟುಂಬಸ್ಥರು, ಸ್ನೇಹಿತರು ಮತ್ತು ಆಪ್ತರ ಸಮ್ಮುಖದಲ್ಲಿ ಪವನ್-ಪವಿತ್ರಾ ಸಪ್ತಪದಿ ತುಳಿದರು. 10 ಗಂಟೆ ಬಳಿಕ ಶುರುವಾದ ಆರತಕ್ಷತೆ ಕಾರ್ಯಕ್ರಮಕ್ಕೆ ಹಲವು ಗಣ್ಯರು ಆಗಮಿಸಿ ಶುಭ ಕೋರಿದರು. ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ನಟ ಆದಿತ್ಯ, ಸುಂದರ್ ರಾಜ್, ಪ್ರಮಿಳಾ ಜೋಶಾಯ್ ಹಾಗೂ ಹಿರಿಯ ನಟ ದೇವರಾಜ್ ಸೇರಿದಂತೆ ಹಲವರು ಎಸ್ ನಾರಾಯಣ್ ಪುತ್ರನ ಮದುವೆಯಲ್ಲಿ ಪಾಲ್ಗೊಂಡಿದ್ದರು. ಅಂದಹಾಗೆ ಪವನ್ ಕುಮಾರ್ ರತ್ನ ಎಂಬ ಸಿನಿಮಾದಲ್ಲಿ ನಾಯಕನಟನಾಗಿ ನಟಿಸಿದ್ದರು. ಅದಾದ ಬಳಿಕ ನವಮಿ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು.
ರಂಗಭೂಮಿಯಲ್ಲಿ ತೊಡಗಿಕೊಂಡು ಅಭಿನಯದ ಪಾಠ ಕಲಿತುಕೊಂಡಿರುವ ಪವನ್ ಅವರು 2019ರಲ್ಲಿ ‘ಚಿ.ರಾ. ಮುತ್ತು ಚಿ.ಸೌ. ರತ್ನಾ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದರು. ‘ನವಮಿ 9.9.1999’ ಸಿನಿಮಾ ಮೂಲಕ ನಿರ್ದೇಶನದ ಪ್ರಯತ್ನಕ್ಕೂ ಪವನ್ ಕೈ ಹಾಕಿದ್ದಾರೆ. ಆ ಸಿನಿಮಾದಲ್ಲಿ ಎಸ್. ನಾರಾಯಣ್ ಕೂಡ ನಟಿಸುತ್ತಿರುವುದು ವಿಶೇಷ.