ಆರ್ ಟಿಐ ಎಂಬ ಪದ ಜನಪ್ರಿಯತೆ ಗಳಿಸಿದ್ದರೂ, ಆರ್ ಟಿಐ ಕಾಯಿದೆ ಬಗ್ಗೆ ಹೆಚ್ಚು ಜನರಿಗೆ ಅರಿವಿಲ್ಲ. ಮಾಹಿತಿ ಹಕ್ಕು ಕಾಯಿದೆ 2005 ಮೂಲಕ ಮಾಹಿತಿಯನ್ನು ಕೇಳಿ ಪಡೆಯುವುದು ಪ್ರತಿಯೊಬ್ಬ ಭಾರತೀಯ ನಾಗರೀಕರ ಮೂಲಭೂತ ಹಕ್ಕಾಗಿದೆ. ಕೇಂದ್ರ ಸರ್ಕಾರ ಅಕ್ಟೊಬರ್ 12, 2005ರಲ್ಲಿ ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೆ ತಂದಿತು. ಸರ್ಕಾರಿ ಕಾರ್ಯಗಳಲ್ಲಿ ಪಾರದರ್ಶಕತೆ ತರುವುದು ಈ ಕಾಯಿದೆಯ ಮೂಲ ಉದ್ದೇಶ. ಇದರಲ್ಲಿ ಅರ್ಜಿ ಸಲ್ಲಿಸುವುದೇಗೆ ಎಂದು ತಿಳಿಯೋಣ.

ಸರ್ಕಾರದಿಂದ ಮಾಹಿತಿ ಹಾಗೂ ಕಾಮಗಾರಿಗಳಿಗೆ ಸಂಬಂಧಿತ ಪ್ರಶ್ನೆಗೆ ಉತ್ತರಗಳನ್ನು ಪಡೆಯಬಹುದು. ಸರ್ಕಾರ ಹೊರಡಿಸಿದ ನಕಲು ಪ್ರತಿಯನ್ನು ಕೇಳಿ ಪಡೆದುಕೊಳ್ಳಬಹುದು. ಸರ್ಕಾರಿ ದಾಖಲೆ, ಕಡತಗಳ ಪರಿಶೀಲನೆಗೂ ಅವಕಾಶ ಕಲ್ಪಿಸಲಾಗಿದೆ.ಯಾವುದೇ ಸರ್ಕಾರದ ಯಾವುದೇ ಕಾರ್ಯವಾದರೂ ಆರ್ ಟಿಐ ವ್ಯಾಪ್ತಿಗೆ ಒಳಪಡುತ್ತದೆ.

ಒಂದು ಕಾಮಗಾರಿಯ ಪ್ರತಿ ಹಂತದ ಮಾಹಿತಿಯನ್ನು ಪಡೆಯಬಹುದು. ರಸ್ತೆ ಕಾಮಗಾರಿಯಾದರೆ, ಟೆಂಡರ್, ಗುತ್ತಿಗೆ ಪಡೆದವರು, ಜಲ್ಲಿ, ಡಾಂಬರು ಕೊಂಡುಕೊಂಡ ಸಂಸ್ಥೆ, ಕಾಮಗಾರಿ ಅವಧಿ ಈ ರೀತಿ ಪ್ರತಿ ಹಂತದಲ್ಲೂ ಪ್ರಶ್ನಿಸುವ ಹಕ್ಕು ನಾಗರಿಕರಿಗೆ ನೀಡಲಾಗಿದೆ. ಪ್ರತಿಯೊಂದು ಸರ್ಕಾರದಲ್ಲಿ ಸಾರ್ವಜನಿಕ ಮಾಹಿತಿ ನೀಡಲು ಸಂಪರ್ಕಾಧಿಕಾರಿಯಾಗಿ ಕೆಲ ಅಧಿಕಾರಿಗಳನ್ನು ನೇಮಿಸಿರಲಾಗಿರುತ್ತದೆ. ಈ ಅಧಿಕಾರಿಗಳು ಆರ್ ಟಿಐ ಅರ್ಜಿಗಳನ್ನು ಸ್ವೀಕರಿಸಿ ವಿವಿಧ ಇಲಾಖೆಗಳಿಗೆ ತಲುಪಿಸಿ ನಂತರ ಅಲ್ಲಿಂದ ಮಾಹಿತಿ ಪಡೆದು ಅರ್ಜಿದಾರರಿಗೆ ಒದಗಿಸುತ್ತಾರೆ.

ಆರ್ ಟಿ ಐ ಅರ್ಜಿ ಸಲ್ಲಿಸುವುದು ತುಂಬಾ ಕಷ್ಟವೇನಲ್ಲ. ಒಂದು ಬಿಳಿ ಹಾಳೆಯಲ್ಲಿ ನಿಮ್ಮ ಹೆಸರು, ವಿಳಾಸ ಸರಿಯಾಗಿ ಬರೆದು ನಿಮ್ಮ ಸಮಸ್ಯೆಯನ್ನು ಅಥವಾ ನೀವು ಪಡೆಯಬಯಸುವ ಮಾಹಿತಿಯನ್ನು ಕೇಳಿ ಅರ್ಜಿ ಸಲ್ಲಿಸಬಹುದು. 10ರೂ ಶುಲ್ಕ ನೀಡಿ ಆರ್ ಟಿಐ ಅರ್ಜಿ ದಾಖಲಿಸಬಹುದು. ಒಂದಕ್ಕಿಂತ ಹೆಚ್ಚು ಅರ್ಜಿ ಸಲ್ಲಿಸಬೇಕಾದರೆ ಪ್ರತಿ ಅರ್ಜಿಗೂ 10 ರೂ ಶುಲ್ಕ ಪಾವತಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಾಹಿತಿಯನ್ನು ಪಡೆಯಲು ಪ್ರತಿ ಪುಟಕ್ಕೆ 2 ರು ನಂತೆ ಪ್ರತ್ಯೇಕ ಶುಲ್ಕ ನೀಡಬೇಕು.

ಕೆಲ ರಾಜ್ಯಗಳಲ್ಲಿ ಶುಲ್ಕದಲ್ಲಿ ವ್ಯತ್ಯಾಸ ಕಾಣಬಹುದು.ಮೊದಲ ಅವಧಿಯ ಪರಿಶೀಲನೆ ಉಚಿತವಾಗಿದ್ದು, ನಂತರ ಪ್ರತಿ ಅವಧಿಗೂ ರು 5 ನಂತೆ ಹಣ ಪಡೆಯಲಾಗುತ್ತದೆ. ಅರ್ಜಿಯನ್ನು ಅಂಚೆ ಕಚೇರಿ, ಆರ್ ಟಿಐ ಕೌಂಟರ್ ಗಳಲ್ಲಿ ನೀಡಬಹುದು. ಅಥವಾ ಅನ್ ಲೈನ್ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದು.

http://www.righttoinformation.gov.in/ ಅಥವಾ
http://www.rtiindia.org.
http://www.rtination.com/.
ಡ್ರೈವಿಂಗ್ ಲೈಸನ್ಸ್, ರಸ್ತೆ ಕಾಮಗಾರಿ, ಮೂಲ ಸೌಕರ್ಯ ಅಭಿವೃದ್ಧಿ, ಇಪಿಎಫ್ ವರ್ಗಾವಣೆ, ಪೊಲೀಸ್ ತಪಾಸಣೆ, ಆದಾಯ ತೆರಿಗೆ ಹಿಂಪಡೆಯುವುದು ಹಾಗೂ ಭ್ರಷ್ಟಾಚಾರ ಸಂಬಂಧಿತ ಎಲ್ಲಾ ದೂರುಗಳು ಆರ್ ಟಿ ಐನಿಂದ ಪಡೆಯಬಹುದಾಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!