ವಿಧಿ ಎಲ್ಲರನ್ನು ಸಮಾನವಾಗಿ ನೋಡುತ್ತದೆ . ಅದು ಸಾಮಾನ್ಯ ಪ್ರಜೆ ಆಗಿರಬಹುದು ಅಥವಾ ಸೆಲೆಬ್ರೆಟಿ ಯು ಆಗಿರಬಹುದು. ಹಾಗೆಯೇ ಆ ವಿಧಿಯ ಆಟಕ್ಕೆ ಸಿಲುಕಿರುವಂತಹ ನಟಿ ಕೆಟ್ಟ ದಾರಿಯನ್ನು ತುಳಿಯದೇ ಬಂದಂತಹ ಕಷ್ಟಗಳನ್ನು ಎದುರಿಸಿ ಬೆವರು ಸುರಿಸಿ ದುಡಿದು ಬದುಕು ನಡೆಸುತ್ತಿದ್ದಾರೆ. ಮಲೆಯಾಳಂನ ಕಿರುತೆರೆ, ಬೆಳ್ಳಿತೆರೆ ಹಾಗೂ ಸೂಪರ್ ಸ್ಟಾರ್ ಮುಮ್ಮಟ್ಟಿ ಅವರ ಜೊತೆಗೆ ಕೂಡ ನಟಿಸಿರುವಂತಹ ನಟಿ ಕವಿತಾ ಲಕ್ಷ್ಮಿ. ಕೆಲವು ವರ್ಷಗಳ ಹಿಂದೆ ಈಕೆ ಬಾರಿ ಬೇಡಿಕೆಯಲ್ಲಿ ಇದ್ದರು. ಆದರೆ ಕಾಲ ಕಳೆದಂತೆ ಅವಕಾಶಗಳು ಕಡಿಮೆಯಾದವು. ಸಿನಿಮಾಗಳಲ್ಲಿ ಅವಕಾಶಗಳು ಇದ್ದ ಕಾರಣ ಧೈರ್ಯವಾಗಿ ಮಗನನ್ನು ವಿದ್ಯಾಭ್ಯಾಸಕ್ಕೆಂದು ಇಂಗ್ಲೆಂಡಿಗೆ ಕಳುಹಿಸಿದರು. ಆದರೆ ಬರುಬರುತ್ತಾ ಅವಕಾಶಗಳು ಕಡಿಮೆಯಾದಾಗ ಆರ್ಥಿಕವಾಗಿ ತುಂಬಾ ಸಂಕಷ್ಟಕ್ಕೆ ಒಳಗಾದರು. ಒಂದು ಕಡೆ ಮಗನಿಗೆ ವಿದ್ಯಾಭ್ಯಾಸದ ಸಲುವಾಗಿ ಪ್ರತಿ ತಿಂಗಳು ಹಣವನ್ನು ಗಳಿಸಬೇಕು ಆದರೆ ಈ ಕಡೆ ಕೈಯಲ್ಲಿ ಕಾಸಿಲ್ಲ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೆಲವು ಜನ ದಿಕ್ಕುತೋಚದೆ ಕೆಟ್ಟ ದಾರಿಯನ್ನು ಹಿಡಿಯುವುದು ಉಂಟು. ಆದರೆ ಈ ನಟಿ ಮಾಡಿದ್ದಾದರೂ ಏನು?

ಗಂಡನಿಂದ ಬೇರ್ಪಟ್ಟ ಕವಿತಾ ಲಕ್ಷ್ಮಿ ಅವರಿಗೆ ಒಬ್ಬಳು ಮಗಳು ಕೂಡ ಇದ್ದಾಳೆ. ತನಗೆ ಒದಗಿದ ಆರ್ಥಿಕ ಸಂಕಷ್ಟದಿಂದ ಹೊರಬರಲು ಈ ನಟಿಗೆ ಒಂದು ಆಲೋಚನೆ ಹೊಳೆಯಿತು. ಕಷ್ಟಪಟ್ಟು ಶ್ರಮವಹಿಸಿ ದುಡಿಯೋದಕ್ಕೆ ಯಾವ ಕೆಲಸ ಆದರೆ ಏನು ಎಂದು ಆಲೋಚಿಸಿದ ನಟಿ ಹೈವೆಯ ಪಕ್ಕದಲ್ಲಿ ಒಂದು ಚಿಕ್ಕ ದೋಸೆ ಅಂಗಡಿಯನ್ನು ಆರಂಭಿಸಿ ಮಧ್ಯರಾತ್ರಿಯವರೆಗೂ ದೋಸೆಯನ್ನೂ ಮಾರುತ್ತಿದ್ದಾರೆ. ಹಗಲಲ್ಲಿ ಎರಡು ದಾರವಾಹಿಗಳಲ್ಲಿ ನಟಿಸುತ್ತಿರುವ ಕವಿತಾ ಅವರು ರಾತ್ರಿ ತನ್ನ ಕೈಯಾರೆ ತಾನೆ ದೋಸೆಯನ್ನು ಮಾಡಿ ಎಲ್ಲರಿಗೂ ಮಾರಾಟ ಮಾಡುತ್ತಾರೆ. ಇವರ ಈ ಕೆಲಸಕ್ಕೆ ಮಗಳು ಸಹಕವಿತಾ ಅವರಿಗೆ ಸಹಾಯ ಮಾಡುತ್ತಿದ್ದು ಬಂದ ಹಣದಲ್ಲಿ ಪ್ರತಿತಿಂಗಳು ಮಗನ ವಿದ್ಯಾಭ್ಯಾಸಕ್ಕೆ ಎಂದು ಕಳುಹಿಸುತ್ತಿದ್ದಾರೆ.

ಮನೆಯಲ್ಲಿ ಹೇಗೆ ನನ್ನ ಮಕ್ಕಳಿಗೆ ಅಡುಗೆಯನ್ನು ಮಾಡುತ್ತೇನೆ ಹಾಗೆ ಇಲ್ಲಿ ಕೂಡಾ ಅಡುಗೆಯನ್ನು ಮಾಡುತ್ತೇನೆ ಈ ಕೆಲಸ ನನಗೆ ತುಂಬಾ ಸಂತೋಷ ನೀಡಿದೆ ಎಂದು ಕವಿತಾ ಲಕ್ಷ್ಮಿ ಅವರು ಮೀಡಿಯ ಮುಂದೆ ತಿಳಿಸಿದ್ದಾರೆ. ಈಗಾಗಲೇ ಎರಡು ವರ್ಷಗಳಿಂದ ಈ ಕೆಲಸವನ್ನು ಆರಂಭಿಸಿದ್ದು ಮಗನಿಗೆ ಹಣವನ್ನು ಸಹ ಕಳಿಸುತ್ತಿದ್ದಾರೆ. ಮಗನ ವಿದ್ಯಾಭ್ಯಾಸ ಕೂಡ ಕೊನೆಯ ಹಂತದಲ್ಲಿ ಬಂದು ತಲುಪಿದೆ. ಸ್ಟಾರ್ ಗಿರಿಯನ್ನು ಪಕ್ಕಕ್ಕೆ ಇಟ್ಟು ಹಗಲು ರಾತ್ರಿ ಎನ್ನದೇ ಕಷ್ಟಪಟ್ಟು ಮಗನನ್ನು ಓದಿಸುತ್ತಿರುವ ಕವಿತಾ ಲಕ್ಷ್ಮಿಯವರ ಜೀವನ ಒಳ್ಳೆಯದಾಗಿರಲಿ.

By

Leave a Reply

Your email address will not be published. Required fields are marked *