ಈಗಾಗಲೇ ಬೇಸಿಗೆಗಾಲ ಶುರುವಾಗಿದೆ ದೇಹಕ್ಕೆ ತಂಪು ನೀಡುವಂತ ನೈಸರ್ಗಿಕ ಮನೆಮದ್ದು ಹಾಗೂ ಎಳನೀರು ಹಣ್ಣು ತರಕಾರಿಗಳ ಸೇವನೆ ಮಾಡುವದು ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ಇನ್ನು ಬಿಸಿಲಿನ ತಾಪದಿಂದ ದೇಹದ ಉಷ್ಣವನ್ನು ಹೇಗೆ ನಿಯಂತ್ರಿಸಿಕೊಳ್ಳಬಹದು ಅನ್ನೋದನ್ನ ಈ ಮೂಲಕ ತಿಳಿದುಕೊಳ್ಳೋಣ.

ಬೇಸಿಗೆಯಲ್ಲಿ ದೇಹದ ಉಷ್ಣಾಂಶ ಹೆಚ್ಚಿರುವುದರಿಂದ ದೇಹದಲ್ಲಿ ಹಲವಾರು ಸಮಸ್ಯೆಗಳು ಕಂಸಿಕೊಳ್ಳುತ್ತವೆ ಹಾಗೂ ಕಣ್ಣು ಉರಿ, ಮೂತ್ರ ಸಮಸ್ಯೆ ಬಾಯಿಹುಣ್ಣು ಇತ್ಯಾದಿಗಳು ಕಂಸಿಕೊಳ್ಳುತ್ತವೆ ಆದ್ದರಿಂದ ಇವುಗಳನ್ನು ನಿಯಂತ್ರಸಲು ಹಾಗೂ ದೇಹದ ಉಷ್ಣಾಂಶವನ್ನು ನಿವಾರಿಸಲು ಮನೆಯಲ್ಲಿಯೇ ಈ ಜ್ಯುಸ್ ಮಾಡಿ ಕುಡಿಯಿರಿ.

ಜ್ಯುಸ್ ತಯಾರಿಸುವ ವಿಧಾನ: ಅಡುಗೆಗೆ ಬಳಸುವಂತ ಅಕ್ಕಿಯನ್ನು ೫೦ ಗ್ರಾಂ ತಗೆದುಕೊಂಡು ಅದನ್ನು ಚನ್ನಾಗಿ ತೊಳೆಯಿರಿ, ನಂತರ ಆ ಅಕ್ಕಿಯನ್ನು ತರಿ ತರಿಯಾಗಿ ಪುಡಿಮಾಡಿಕೊಂಡು ಅದಕ್ಕೆ ನೀರನ್ನು ಹಾಕಿ ಮಿಕ್ಸ್ ಮಾಡಿ ಒಂದು ಗಂಟೆಗಳವರೆಗೆ ನೆನೆಸಿಡಿ. ಇನ್ನು ಇದಾದ ಮೇಲೆ ಈ ನೀರಿಗೆ ಬೆಲ್ಲ ಅಥವಾ ಮಜ್ಜಿಗೆ ಹಾಕಿ ದಿನಕ್ಕೆ ಮೂರೂ ಹೊತ್ತು ಕುಡಿಯಬೇಕು. ಈ ವಿಧಾನವನ್ನು ಒಂದು ವಾರಗಳ ಕಾಲ ಮಾಡಿದರೆ ಫಲಿತಾಂಶವನ್ನು ಕಾಣಬಹುದಾಗಿದೆ.

By

Leave a Reply

Your email address will not be published. Required fields are marked *