ಮಳೆಗಾಲದಲ್ಲಿ ಅಕ್ಕಿಯನ್ನು ಸರಿಯಾಗಿಟ್ಟುಕೊಳ್ಳುವುದು ಕಷ್ಟ. ಎಷ್ಟೋ ಮನೆಗಳಲ್ಲಿ ಈ ಸಮಸ್ಯೆ ಇರುತ್ತದೆ ಅಕ್ಕಿಯನ್ನು ವರ್ಷಾನುಗಟ್ಟಲೆ ಹಾಳಾಗದಂತೆ, ಹುಳುಗಳಾಗದಂತೆ ಇಡುವುದು ಹೇಗೆಂದು ಈ ಲೇಖನದ ಮೂಲಕ ತಿಳಿಯೋಣ.
ಅಕ್ಕಿಯಲ್ಲಿ ಹುಳುಗಳಾಗುತ್ತವೆ ಅಲ್ಲದೆ ಇಟ್ಟಲ್ಲೆ ಬೂಷ್ಟ ಅಥವಾ ಹಾಳಾಗುತ್ತದೆ. ಅಕ್ಕಿಯಲ್ಲಿ ಹುಳುಗಳಾಗದಂತೆ ಕಾಪಾಡಿಕಳ್ಳಬೇಕಾದರೆ ಅಕ್ಕಿಗೆ ಖಾರ ಇರುವ ಎರಡು ಒಣಮೆಣಸನ್ನು ಹಾಕಿಡಬೇಕು. ಇನ್ನೊಂದು ವಿಧಾನವೆಂದರೆ ಕಹಿಬೇವಿನ ಸೊಪ್ಪನ್ನು ಒಂದು ಹೆಣೆಯನ್ನು ಅಕ್ಕಿಯಲ್ಲಿ ಹುದುಗಿಸುಡುವುದರಿಂದ ಮತ್ತು ಬೆಳ್ಳುಳ್ಳಿ ಗಡ್ಡೆಯನ್ನು ಅಕ್ಕಿಯಲ್ಲಿ ಹುದುಗಿಸಿಡುವುದರಿಂದ ಅಕ್ಕಿಯಲ್ಲಿ ಹುಳುಗಳಾಗದಂತೆ, ಹಾಳಾಗದಂತೆ ಅಕ್ಕಿ ಚೆನ್ನಾಗಿರುತ್ತದೆ.
ಅಕ್ಕಿಯನ್ನು ವರ್ಷಾನುಗಟ್ಟಲೆ ಸುರಕ್ಷಿತವಾಗಿ ಇಡಲು ಪ್ರಮುಖ ವಿಧಾನವೆಂದರೆ 10-15 ಕಾಳುಮೆಣಸು, 5-6ಎಸಳು ಬೆಳ್ಳುಳ್ಳಿ ಮತ್ತು 7-8 ಲವಂಗ, ಒಂದು ಮುಷ್ಟಿಗಿಂತ ಜಾಸ್ತಿ ಕಹಿಬೇವಿನ ಸೊಪ್ಪು ಇದರಲ್ಲಿ ಎಂಟಿ ಬ್ಯಾಕ್ಟೀರಿಯಾ ಗುಣವಿರುವುದರಿಂದ ಅಕ್ಕಿ ಚೆನ್ನಾಗಿರುತ್ತದೆ. ಇವೆಲ್ಲವನ್ನು ಕುಟ್ಟಿಕೊಳ್ಳಬೇಕು ಅಥವಾ ಮಿಕ್ಸಿಯಲ್ಲಿ ಸ್ವಲ್ಪ ನೀರು ಹಾಕಿ ರುಬ್ಬಬೇಕು ಸ್ವಲ್ಪ ತರಿತರಿಯಾಗಿದ್ದರು ನಡೆಯುತ್ತದೆ. ಇದನ್ನು ಸಂಡಿಗೆಯ ಹಾಗೆ ರೌಂಡ್ ಶೇಪ್ ಮಾಡಿಕೊಂಡು ಬಿಸಿಲಿಗೆ ಅಥವಾ ಫ್ಯಾನ್ ಕೆಳಗೆ ಇಟ್ಟು 1-2 ದಿನ ಒಣಗಿಸಿ ಪ್ರತಿದಿನ ಉಪಯೋಗಿಸುವ ಅಕ್ಕಿಯಲ್ಲಿ ಇಟ್ಟು ಪ್ಯಾಕ್ ಮಾಡುವುದರಿಂದ ಅಕ್ಕಿಯನ್ನು ವರ್ಷಾನುಗಟ್ಟಲೆ ಸುರಕ್ಷಿತವಾಗಿ ಇಟ್ಟುಕೊಳ್ಳಬಹುದು ಹುಳುಗಳಾಗುವುದಿಲ್ಲ ಇದನ್ನು ಹಳ್ಳಿಗಳಲ್ಲಿ ಮಾಡುತ್ತಾರೆ. ಒಂದು ವೇಳೆ ಹುಳುಗಳಾಗಿದ್ದರೆ ಹೀಗೆ ಮಾಡಿದ್ದನ್ನು ( ಕಹಿಬೇವಿನ ಸೊಪ್ಪಿನ ಉಂಡೆ) ಅಕ್ಕಿಯಲ್ಲಿ ಇಟ್ಟು ಮುಚ್ಚಳವನ್ನು ಅರ್ಧ ಮುಚ್ಚಿಡುವುದರಿಂದ ಹುಳುಗಳು ಹೋಗುತ್ತದೆ. ಮನೆಯಲ್ಲಿ ಅಕ್ಕಿಯೆ ಸರಿಯಾಗಿರದಿದ್ದರೆ ಊಟ ಮಿಡುವುದೇ ಕಷ್ಟವಾಗುತ್ತದೆ ಹೀಗಾಗಿ ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.