ಅಕ್ಕಿ ದವಸ ದಾನ್ಯಗಳಲ್ಲಿ ವರ್ಷಗಟ್ಟಲೆ ಹುಳಗಳಾಗದಂತೆ ತಡೆಯುವ ಸುಲಭ ಉಪಾಯ

0 1

ಒಂದು ಮನೆ ಅಂದಮೇಲೆ ದಿನನಿತ್ಯದ ಅವಶ್ಯಕತೆಗೆ ಬೇಕಾಗಿರುವ ಎಲ್ಲ ಸಾಮಗ್ರಿಗಳು, ಬೇಳೇ ಕಾಳುಗಳು ಇದ್ದೆ ಇರುತ್ತವೆ. ಕೆಲವರು ಮನೆಯಲ್ಲಿ ಎಲ್ಲವನ್ನೂ ಹೆಚ್ಚಾಗಿಯೇ ತಂದಿಟ್ಟುಕೊಳ್ಳುವ ಅಭ್ಯಾಸ ಇರತ್ತೆ. ಆದರೆ ಕೆಲವೊಮ್ಮೆ ಹೆಚ್ಚು ತಂದಿಟ್ಟುಕೊಂಡಾಗ ಮಳೆಗಾಲ , ಚಳಿಗಾಲದ ಸಮಯದಲ್ಲಿ ತಂಡಿ ಹಿಡಿದು ಬೇಳೆ ಕಾಳುಗಳು ಹಾಳಾಗುವ ಸಂಭವ ಇರುತ್ತದೆ. ಒಂದು ವಾರದ ಒಳಗೆ ಅಕ್ಕಿ ಬೇಳೆಗಳಲ್ಲಿ ಸಣ್ಣ ಸಣ್ಣ ಕಪ್ಪು ಹುಳಗಳು ಉಂಟಾಗುವುದನ್ನ ನಾವು ಗಮನಿಸಿ ಇರುತ್ತೇವೆ. ಈ ರೀತಿ ಹುಳಗಳು ಆದಾಗ ತಿನ್ನೋಕು ಆಗಲ್ಲ ಅದನ್ನ ಬಿಸಾಡೋಕೂ ಆಗಲ್ಲ. ಹಾಗಾಗಿ ತುಂಬಾ ದಿನಗಳವರೆಗೂ ಅಕ್ಕಿ ಹಾಳಾಗದಂತೆ ವರ್ಷಾನುಗಟ್ಟಲೇ ಹೇಗೆ ಶೇಖರಿಸಿ ಇಟ್ಟುಕೊಳ್ಳಬಹುದು ಅನ್ನೋದನ್ನ ನೋಡೋಣ.

ಅಕ್ಕಿ ಹಾಳು ಆಗದಂತೆ ನೋಡಿಕೊಳ್ಳಲು ಅಕ್ಕಿಯನ್ನ ತಂದು ಒಂದು ಡಬ್ಬದಲ್ಲಿ ಹಾಕಿಟ್ಟರೆ ಆ ಅಕ್ಕಿಯಲ್ಲಿ ಒಂದೆರಡು ಖಾರ ಇರುವಂತಹ ಒಣಮೆಣಸಿನಕಾಯಿಯನ್ನು ಹಾಕಿ ಇಡಬೇಕು. ಅಥವಾ ಅಕ್ಕಿಯ ಪ್ರಮಾಣವನ್ನು ನೋಡಿಕೊಂಡು ಒಣಮೆಣಸಿನ ಕಾಯಿಯನ್ನು ಹಾಕಿ ಇಡಬೇಕು. ಈ ವಿಧಾನ ಬಿಟ್ಟು ಇನ್ನೊಂದು ವಿಧಾನ ನೋಡುವುದಾದರೆ, ಅಕ್ಕಿಯಲ್ಲಿ ಕಹಿಬೇವಿನ ಸೊಪ್ಪನ್ನು (ಒಣಗಿದ್ದು / ಹಸಿಯಾಗಿರುವುದು ಯಾವುದಾದರೂ ಸರಿ) ಆಳವಾಗಿ ಹುದುಗಿಸಿ ಇಡಬೇಕು.

ಈ ರೀತಿ ಮಾಡುವುದರಿಂದಲೂ ಅಕ್ಕಿಯಲ್ಲಿ ಹುಳ ಆಗದಂತೆ ತಡೆಯಬಹುದು. ಹಾಗೆ ಒಂದು ಇಡೀ ಬೆಳ್ಳುಳ್ಳಿ ಗಡ್ಡೆಯನ್ನು ಅಕ್ಕಿಯಲ್ಲಿ ಹಾಕಿ ಇಡಬೇಕು. ಬೆಳ್ಳುಳ್ಳಿಯ ವಾಸನೆಗೆ ಅಕ್ಕಿಯಲ್ಲಿ ಹುಳಗಳು ಆದ್ರೆ ಅಲ್ಲೇ ಸತ್ತು ಹೋಗುತ್ತವೆ ಅಥವಾ ಹುಳಗಳು ಹೊರಗೆ ಬರುತ್ತವೆ. ಇವಿಷ್ಟು ಒಂದು ಸುಲಭವಾದ ವಿಧಾನ ಆಗಿದ್ದರೆ ಇನ್ನೊಂದು ಉತ್ತಮ ವಿಧಾನವನ್ನು ನೋಡೋಣ.

ಈ ಒಂದು ವಿಧಾನವನ್ನು ಒಂದು ಸಲ ಅನುಸರಿಸಿದರೆ ಅಕ್ಕಿ ಹಾಳೆ ಆಗಲ್ಲ. 7-8 ಲವಂಗ, 5-6 ಬೆಳ್ಳುಳ್ಳಿ 10-12 ಕಾಳು ಮೆಣಸು , ಒಂದು ಮುಷ್ಟಿಗಿಂತ ಜಾಸ್ತಿ ಕಹಿಬೇವಿನ ಎಲೆಗಳು ಇವಿಷ್ಟು ಬೇಕು ಇದನ್ನ ಮಾಡೋಕೆ ಹಾಗೆ ಈ ಅಳತೆ 25 ಕೆಜಿ ಯ ಅಕ್ಕಿ ಪ್ಯಾಕ್ ಗೆ ಬರತ್ತೆ. ಹಳ್ಳಿಗಳಲ್ಲಿ ರೈತರು ಬೆಳೆದ ಅಕ್ಕಿಯನ್ನು ಶೇಕರಿಸಿ ಇಡೋಕೆ ಈ ವಿಧಾನವನ್ನು ಅನುಸರಿಸುತ್ತಾರೆ ಆದರೆ ಬಹಳ ಅಕ್ಕಿ ಇರುವವರು ಈ ಮೂರು ವಸ್ತುಗಳನ್ನೂ ಕಾಲು ಕಾಲು ಕೆಜಿ ಅಷ್ಟು ಬಳಸುತ್ತಾರೆ.

ಕಹಿಬೇವಿನ ಸೊಪ್ಪನ್ನು ಎಲೆ ಬಿಡಿಸಿಕೊಂಡು ಒಂದು ಕುಟ್ಟುವ ಕಲ್ಲಿಗೆ ಬೇವಿನ ಸೊಪ್ಪು, ಬೆಳ್ಳುಳ್ಳಿ , ಲವಂಗ ಹಾಗೂ ಕಾಳುಮೆಣಸು ಇವೆಲ್ಲವನ್ನೂ ಸೆರಿಸಿ ಸ್ವಲ್ಪ ನೀರು ಸೇರಿಸಿ ಪೇಸ್ಟ್ ತರ ಮಾಡಿಕೊಳ್ಳಬೇಕು. ನಂತರ ರೌಂಡ್ ಆಗಿ ಮಾತ್ರೆಗಳ ಹಾಗೇ ಮಾಡಿಕೊಂಡು ಬಿಸಿಲಿಗೆ ಒಣಗಿಸಿಕೊಳ್ಳಬೇಕು. ಒಣಗಿದ ಈ ಮಾತ್ರೆಗಳನ್ನು ಪ್ರತೀ ದಿನ ಬಳಸುವ ಅಕ್ಕಿ ಡಬ್ಬಿಗೋ ಅಥವಾ ಅಕ್ಕಿಯ ಬ್ಯಾಗ್ ಗೂ ಹಾಕಿ ಸರಿಯಾಗಿ ಇಟ್ಟುಕೊಳ್ಳಬಹುದು. ಹುಳ ಆಗೊಕೂ ಮೊದಲೇ ಈ ಮಾತ್ರೆಯನ್ನ ಮಾಡಿ ತಂದ ಅಕ್ಕಿಯಲ್ಲಿ ಹಾಕಿ ಇಟ್ಟರೆ ಹುಳಗಳು ಆಗಲ್ಲ. ಅಥವಾ ಈಗಾಗಲೆ ಹುಳಗಳು ಆಗೋಕೆ ಆರಂಭ ಆಗಿದ್ದರೂ ಸಹ ಈ ರೀತಿ ಮಾತ್ರೆಗಳನ್ನು ಹಾಕಿ ಇಟ್ಟು ಡಬ್ಬಿಯ ಮುಚ್ಚಳವನ್ನು ಸ್ವಲ್ಪ ತೆರೆದಿಟ್ಟು ಬಿಟ್ಟರೆ ಅಕ್ಕಿಯಲ್ಲಿ ಇರುವ ಹುಳಗಳು ಎಲ್ಲಾ ಹೊರಗೆ ಬರುತ್ತವೆ. ಈ ರೀತಿಯಾಗಿ ವರ್ಷಾನುಗಟ್ಟಲೆ ಆದರೂ ಸಹ ಅಕ್ಕಿಯಲ್ಲಿ ಹುಳಗಳು ಆಗುವುದಿಲ್ಲ.

Leave A Reply

Your email address will not be published.