ಕನಸುಗಳ ಮರ್ಮ ತಿಳಿಯುವುದು ಸುಲಭದ ಮಾತಲ್ಲ. ಆದರೂ ಪ್ರತಿ ಕನಸುಗಳಿಗೂ ಒಂದೊಂದು ಅರ್ಥವಿದೆ ಎಂದು ಶಾಸ್ತ್ರ ಹೇಳುತ್ತದೆ. ಕೆಲವೊಂದು ವಸ್ತುಗಳು, ಜೀವಿ ಕನಸಿನಲ್ಲಿ ಕಾಣಬಾರದು ಎಂದು ಹಿರಿಯರು ಹೇಳುತ್ತಾರೆ. ಹಾಗಾದರೆ ಕನಸಿನಲ್ಲಿ ಅನ್ನ ಕಂಡರೆ, ಅನ್ನ ತಿನ್ನುವುದು ಕಂಡರೆ ಏನೆಂದು ಅರ್ಥ ಅದರ ಮಾಹಿತಿ ಇಲ್ಲಿದೆ. ಕನಸಿನಲ್ಲಿ ರೊಟ್ಟಿ ಅಥವಾ ಚಪಾತಿ ಕಂಡರೆ ಇಲ್ಲವೇ ತಿನ್ನುತ್ತಿರುವಂತೆ ಕನಸು ಕಂಡರೆ ಅದು ಒಳ್ಳೆಯದನ್ನು ಸೂಚಿಸುತ್ತದೆ. ಮುಂದಿನ ದಿನಗಳಲ್ಲಿ ಆಗಬಹುದಾದ ಧನ ಲಾಭ ಅಥವಾ ಹೆಚ್ಚಿನ ಕಲಿಕೆಯನ್ನು ಇಲ್ಲವೇ ದೊಡ್ಡ ವ್ಯಕ್ತಿಗಳ ಪರಿಚಯ ಆಗುವ ಸೂಚನೆ ನೀಡುತ್ತದೆ. ಒಂದು ವೇಳೆ ನಿಮ್ಮ ಕನಸಿನಲ್ಲಿ ಅನ್ನ ಹಾಗೂ ಸಾಂಬಾರನ್ನು ಕಂಡರೆ ಅದು ಕೆಟ್ಟದ್ದನ್ನು ತೋರಿಸುತ್ತಿದೆ ಎಂದು ಅರ್ಥ. ಇದು ಧನ ಹಾನಿ ಶತ್ರು ಹುಟ್ಟಿಕೊಳ್ಳುವ ಸೂಚನೆ ಮನೆಗಳಲ್ಲಿ ಕಲಹ ಇಲ್ಲವೆ ಮನಸ್ತಾಪ ಉಂಟಾಗುವ ಸೂಚನೆ ಕೊಡುತ್ತದೆ.

ಬರಿದಾದ ತಟ್ಟೆಯನ್ನು ಕಂಡರೆ ಅಥವಾ ಬಗೆ ಬಗೆಯ ತಿನಿಸುಗಳಿಂದ ತುಂಬಿದ ಬಟ್ಟಲುಗಳನ್ನು ಇಲ್ಲ ಬರಿಯ ಸಾಂಬಾರಿನ ತಟ್ಟೆ ಇದ್ದು ಅನ್ನ ಚಪಾತಿ ಇಲ್ಲದೆ ಇದ್ದಲ್ಲಿ ಅದು ಶುಭ ಸೂಚಿಸುತ್ತದೆ. ಮುಂದೆ ಆಗುವ ಶುಭದ ಸೂಚನೆ ಇದು ನೀಡುತ್ತದೆ. ಯಾವುದೋ ಕೆಲಸಕ್ಕೆ ಪ್ರಯತ್ನಿಸು ಸಂದರ್ಭದಲ್ಲಿ ಊಟದ ಮುಂದೆ ಕುಳಿತು ಊಟ ಮಾಡಲಾಗದೆ ಇರುವ ರೀತಿ ಕನಸ್ಸು ಬಿದ್ದರೆ ಅದು. ಆ ಕೆಲಸಕ್ಕಾಗಿ ಮಾಡಿರುವ ಪ್ರಯತ್ನ ಸರಿಯಾಗಿಲ್ಲ ಅಂತಲೋ ಅಥವಾ ಇನ್ನು ಬೇರೆ ರೀತಿಯ ಪ್ರಯತ್ನದ ಜೊತೆಗೆ ಇನ್ನು ಪ್ರಯತ್ನದ ಅವಶ್ಯಕತೆ ಇದೆ ಎಂದು ಅರ್ಥ ಕೊಡುತ್ತದೆ. ಇನ್ನೂ ಕನಸಿನಲ್ಲಿ ಶತ್ರುಗಳ ಜೊತೆಗೆ ಊಟ ಮಾಡುತ್ತಿರುವಂತೆ ಕಂಡರೆ ಅದು ಒಳ್ಳೆಯದೆ ಮುಂದೊಂದು ದಿನ ಅವರಿಂದಾಗುವ ಹಾನಿ ತಪ್ಪಿತು ಎಂದು ಅರ್ಥ ಕೊಡುತ್ತದೆ. ಇವುಗಳೆಲ್ಲವೂ ಕನಸಿನಲ್ಲಿ ಅನ್ನ ಕಂಡರೆ ಅಥವಾ ಊಟ ಮಾಡುವಂತೆ ಕಂಡರೆ ಆ ಕನಸು ಸೂಚಿಸುವ ಅರ್ಥಗಳು.

Leave a Reply

Your email address will not be published. Required fields are marked *