ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಈ ಕೊರೊನಾ ಎಂಬ ಮಹಾಮಾರಿಯ ಸಮಯದಲ್ಲಿ ನೆಗಡಿ ಸಾಮಾನ್ಯವಾಗಿ ಎಲ್ಲರಿಗೂ ಕಂಡುಬರುತ್ತದೆ. ಕೊರೊನಾ ಬಂದಾಗ ನೆಗಡಿ, ಕೆಮ್ಮು ಮತ್ತು ಜ್ವರ ಉಂಟಾಗುತ್ತದೆ. ಸುಮಾರು ನೂರರಲ್ಲಿ ಶೇಕಡಾ 70ರಷ್ಟು ಜನರಿಗೆ ಜ್ವರದ ಮಾತ್ರೆ ತೆಗೆದುಕೊಂಡರೆ ಜ್ವರ ಕಡಿಮೆಯಾಗುತ್ತದೆ. ಆದರೆ ನೆಗಡಿ ಮತ್ತು ಕೆಮ್ಮು ಹಾಗೆಯೇ ಇರುತ್ತದೆ. ಆದ್ದರಿಂದ ಇದಕ್ಕೆ ಮಾತ್ರೆಗಳನ್ನು ತೆಗೆದುಕೊಳ್ಳುವುದಕ್ಕಿಂತ ಮನೆಯಲ್ಲಿ ಔಷಧಿಗಳನ್ನು ಮಾಡಿಕೊಳ್ಳುವುದು ಒಳ್ಳೆಯದು. ಆದ್ದರಿಂದ ನಾವು ಇಲ್ಲಿ ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಮನೆಯಲ್ಲಿ ಬೇಕಾದಷ್ಟು ಔಷಧಿಗಳನ್ನು ಮಾಡಿಕೊಳ್ಳಬಹುದು. ನೆಗಡಿ ಮತ್ತು ಕೆಮ್ಮು ಬೇಗನೆ ಕಡಿಮೆ ಆಗುವುದಿಲ್ಲ. ಸುಲಭವಾಗಿ ನೆಗಡಿ ಮತ್ತು ಕೆಮ್ಮು ಮತ್ತು ಕಫವನ್ನು ಮನೆಯ ಮದ್ದಿನಿಂದ ಕರಗಿಸಿಕೊಳ್ಳಬಹುದು. ಮೊದಲು ಓಂಕಾಳನ್ನು ತೆಗೆದುಕೊಳ್ಳಬೇಕು. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೆಯೇ ಕಫವನ್ನು ಕರಗಿಸುತ್ತದೆ. ಒಂದು ಚಮಚ ಓಂಕಾಳನ್ನು ತೆಗೆದುಕೊಂಡು ನಂತರ ಒಂದು ಪಾತ್ರೆಗೆ ಹಾಕಿ ಹುರಿಯಬೇಕು.

ಅದಕ್ಕೆ ನಾಲ್ಕು ಬೆಳ್ಳುಳ್ಳಿಯನ್ನು ಹಾಕಬೇಕು. ಬೆಳ್ಳುಳ್ಳಿ ಕೂಡ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ಅಡುಗೆಗೆ ರುಚಿಯನ್ನು ನೀಡುತ್ತದೆ. ಹಾಗೆಯೇ ಕೆಲವರ ಮನೆಯಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಇಲ್ಲದಿದ್ದರೆ ದಿನವೇ ಕಳೆಯುವುದಿಲ್ಲ. ನಾಲ್ಕು ಎಸಳು ಬೆಳ್ಳುಳ್ಳಿಯನ್ನು ಹಾಕಿದರೆ ಸಾಕಾಗುತ್ತದೆ. ಬಹಳ ದೊಡ್ಡ ಬೆಳ್ಳುಳ್ಳಿ ಆದರೆ ಎರಡು ಹಾಕಿದರೆ ಸಾಕಾಗುತ್ತದೆ. ಸಣ್ಣ ಬೆಳ್ಳುಳ್ಳಿ ಆದರೆ ನಾಲ್ಕು ಎಸಳು ಹಾಕಬೇಕಾಗುತ್ತದೆ. ನಂತರದಲ್ಲಿ ಓಂಕಾಳು ಮತ್ತು ಬೆಳ್ಳುಳ್ಳಿಯನ್ನು ಚೆನ್ನಾಗಿ ಹುರಿಯಬೇಕು. ಎರಡೂ ಬಣ್ಣ ಬೇರೆ ಆಗುವವವರೆಗೆ ಹುರಿಯಬೇಕು.

ನಂತರದಲ್ಲಿ ಗ್ಯಾಸ್ ಆಫ್ ಮಾಡಿ ಆ ಮಿಶ್ರಣವನ್ನು ಒಂದು ಕಾಟನ್ ಬಟ್ಟೆಗೆ ಹಾಕಬೇಕು. ಅದನ್ನು ಸಣ್ಣ ಗಂಟಾಗಿ ರಬ್ಬರ್ ನ್ನು ಹಾಕಿ ಕಟ್ಟಬೇಕು. ನಂತರದಲ್ಲಿ ಇದನ್ನು ಮೂಗಿಗೆ ಹಿಡಿದು ಪರಿಮಳವನ್ನು ತೆಗೆದುಕೊಳ್ಳಬೇಕು. ಇದರಿಂದ ಕೆಮ್ಮು ಕಡಿಮೆಯಾಗುತ್ತದೆ. ಹಾಗೆಯೇ ಕಫ ಕರಗಿ ನೀರಾಗಿ ಹರಿಯುತ್ತದೆ.ಇದರಿಂದ ನೆಗಡಿ ಕಡಿಮೆಯಾಗುತ್ತದೆ. ಹಾಗೆಯೇ ಇದನ್ನು ಯಾವ ವಯಸ್ಸಿನವರು ಬೇಕಾದರೂ ಮಾಡಬಹುದು. ಅಂದರೆ ಚಿಕ್ಕ ವಯಸ್ಸಿನವರಿಗೂ ಇದನ್ನು ಮಾಡಬಹುದು. ಹಾಗೆಯೇ ದೊಡ್ಡವರೂ ಇದನ್ನು ಮಾಡಬಹುದು. ಬಿಸಿ ಬಿಸಿ ಇದ್ದಾಗ ಎದೆಯ ಮೇಲೆ ಇಟ್ಟುಕೊಂಡರೆ ಕಫ ಕರಗುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!