ರೆಡ್ ಬಸ್ ಇದು ಆನ್ಲೈನ್ ಟಿಕೆಟ್ ಮಾಡಲು ಒಂದು ವೇದಿಕೆಯಾಗಿದೆ. ಅಗಸ್ಟ್ ತಿಂಗಳು 2006ರ ವರ್ಷದಲ್ಲಿ ಇದನ್ನು ಕಂಡುಹಿಡಿಯಲಾಯಿತು. ಇದರ ಮುಖ್ಯ ಕಚೇರಿ ಕರ್ನಾಟಕ ರಾಜ್ಯದ ರಾಜಧಾನಿಯಾದ ಬೆಂಗಳೂರಿನಲ್ಲಿ ಇದೆ. ಆದ್ದರಿಂದ ನಾವಿಲ್ಲಿ ರೆಡ್ಬಸ್ ನ  ಹಿಂದಿನ ಕಥೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಫಣೀಂದ್ರ ಎಂಬ ವ್ಯಕ್ತಿ ಆಂಧ್ರಪ್ರದೇಶದ ನಿಜಾಮಾಬಾದ್ ನವರು. ಇವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಕಾಲೇಜಿನಲ್ಲಿ ಉನ್ನತ ಶಿಕ್ಷಣವನ್ನು ಮುಗಿಸುತ್ತಾರೆ. ನಂತರ ಬೆಂಗಳೂರಿನ ಒಂದು ಕಂಪನಿಯಾದ ಟ್ಯಾಕ್ಸಸ್ ಇನ್ಸ್ಟ್ರುಮೆಂಟ್ ನಲ್ಲಿ ಕೆಲಸ ಮಾಡುತ್ತಾರೆ. 2004 ನೇ ಇಸವಿಯಲ್ಲಿ ಇವರಿಗೆ ಒಂದು ಉಪಾಯ ಹೊಳೆಯುತ್ತದೆ. ಅದು ದೀಪಾವಳಿಯ ಸಮಯ ಆಗಿರುತ್ತದೆ. ಆಗ ಅವರ ಸ್ನೇಹಿತರೆಲ್ಲರೂ ಹಬ್ಬಕ್ಕಾಗಿ ಮನೆಗೆ ಹೋಗಿರುತ್ತಾರೆ. ಆದರೆ ಇವರಿಗೆ ಬಸ್ ಟಿಕೆಟ್ ಸಿಗುವುದೇ ಇಲ್ಲ. ಆಗ ಇಂಥ ಸಂದರ್ಭ ಮತ್ತೆ ಯಾರಿಗೂ ಬರಬಾರದು ಎಂದು ಇವರೇ ಒಂದು ವೆಬ್ಸೈಟನ್ನು ಮಾಡಲು ಉಪಾಯ ಹೂಡುತ್ತಾರೆ.

ಆಗ ಬಸ್ ಟಿಕೆಟ್ ಮಾಡಲು ಬೇಕಾಗುವ ಎಲ್ಲ ಮಾಹಿತಿಗಳನ್ನು ಸಂಗ್ರಹಿಸುತ್ತಾರೆ. ಆದರೆ ಯಾರೂ ಇದನ್ನು ಸರಿಯಾಗಿ ನೀಡುವುದಿಲ್ಲ. ಒಬ್ಬ ಹುಡುಗ ಬಸ್ ಟಿಕೆಟ್ ಗಳನ್ನು ಬುಕ್ ಮಾಡಿಕೊಳ್ಳುತ್ತಿರುತ್ತಾನೆ. ಅವನು ಎಲ್ಲ ಮಾಹಿತಿಗಳನ್ನು ನೀಡುತ್ತಾನೆ. ಈ ಉಪಾಯವನ್ನು ತಮ್ಮ ಸ್ನೇಹಿತರ ಬಳಿ ಹೋಗಿ ಹೇಳಿಕೊಂಡು ಹಾಗೆಯೇ ಮಾಡುತ್ತಾರೆ. ಇದಕ್ಕೆ ಸುಮಾರು 5ಲಕ್ಷ ಬಂಡವಾಳ ಹೂಡಿ ರೆಡ್ಬಸ್ ಎನ್ನುವ ವೇದಿಕೆಯನ್ನು ಮಾಡುತ್ತಾರೆ. ಆಗ ಅವರ ರೂಮ್ ಆಫೀಸ್ ಆಗುತ್ತದೆ. ಇದರಿಂದ ತುಂಬಾ ಲಾಭ ಬರುತ್ತಾ ಹೋಗುತ್ತದೆ. ಇವರ ಸ್ನೇಹಿತರೆ ಜನರ ಹತ್ತಿರ ಹೋಗಿ ಟಿಕೆಟ್ ಗಳನ್ನು ಬುಕ್ ಮಾಡಿಸುತ್ತಾ ಇರುತ್ತಾರೆ.

ಇದನ್ನು ಓದದೇ ಇರುವವರು ಕೂಡ ತಿಳಿದುಕೊಳ್ಳಬಹುದು. ಅಷ್ಟೊಂದು ಸುಲಭವಾಗಿ ವ್ಯವಸ್ಥೆಯನ್ನು ಇವರು ಮಾಡಿರುತ್ತಾರೆ.  ಸ್ವಲ್ಪ ಸಮಯದ ನಂತರ ಇನ್ನೂ ಹೆಚ್ಚಿನ ಬಂಡವಾಳವನ್ನು ಹೂಡುವುದರಿಂದ ಇನ್ನೂ ಹೆಚ್ಚಿನ ಯಶಸ್ಸನ್ನು ಇದು ಕಾಣುತ್ತದೆ. ಈಗ ಇದು ನಮ್ಮ ದೇಶದಲ್ಲಿ 15 ರಾಜ್ಯಗಳಲ್ಲಿ ತನ್ನ ಸೇವೆಗಳನ್ನು ಸಲ್ಲಿಸುತ್ತಿದೆ. 2013ರಲ್ಲಿ ಇದನ್ನು ಒಂದು ಗುಂಪಿಗೆ ಸುಮಾರು ನಾಲ್ಕು ನೂರು ಕೋಟಿ ಹಣಕ್ಕೆ ಮಾರಾಟ ಮಾಡುತ್ತಾರೆ. ಹೀಗೆ ಆಗುತ್ತದೆ ಎಂದು ಇವರು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಆದ್ದರಿಂದ ಯಾವುದನ್ನೇ ಕಷ್ಟಪಟ್ಟು ಮಾಡಿದರೆ ಗೆಲುವು ನಿಶ್ಚಿತ ಎಂದು ಹೇಳಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!