ಕೆಂಪು ಬಾಳೆಹಣ್ಣು ಸಾಮಾನ್ಯವಾಗಿ ಸಿಗೋದು ಕಷ್ಟ ಇದು ಮಾರುಕಟ್ಟೆಯಲ್ಲಿ ಕಡಿಮೆ ಪ್ರಮಾಣದಲ್ಲಿ ದೊರೆಯುವ ಹಣ್ಣಾಗಿದೆ. ಆದ್ರೆ ನಿಜಕ್ಕೂ ಈ ಹಣ್ಣಿನಲ್ಲಿ ಆರೋಗ್ಯಕ್ಕೆ ಬೇಕಾಗುವಂತ ಗುಣಗಳು ಹೇರಳವಾಗಿದೆ. ಈ ಕೆಂಪು ಬಾಳೆಹಣ್ಣಿನಲ್ಲಿ ಮೆಗ್ನಿಶಿಯಂ, ಕ್ಯಾಲ್ಶಿಯಂ, ಹಾಗು ವಿಟಮಿನ್ ಅಂಶಗಳನ್ನು ಹೇರಳವಾಗಿ ಹೊಂದಿದ್ದು ದೇಹಕ್ಕೆ ಉತ್ತಮ ಆರೋಗ್ಯವನ್ನು ವೃದ್ಧಿಸಬಲ್ಲದು.
ಕೆಂಪುಬಾಳೆಹಣ್ಣು ತಿನ್ನೋದ್ರಿಂದ ಕಿಡ್ನಿ ಯಲ್ಲಿ ಕಲ್ಲಾಗದಂತೆ ತಡೆಯುತ್ತದೆ ಹಾಗೂ ಶರೀರದ ತೂಕವನ್ನು ಕಡಿಮೆ ಮಾಡುತ್ತದೆ. ಕೆಂಪುಬಾಳೆಹಣ್ಣು ನಾರಿನಂಶ ಹೊಂದಿದ್ದು ಇದರಲ್ಲಿ ಕ್ಯಾಲರಿ ಅಂಶ ಕಡಿಮೆ ಇರುತ್ತದೆ. ಕೆಂಪು ಬಾಳೆಹಣ್ಣು ಹೃದಯದ ಆರೋಗ್ಯಕ್ಕೆ ಹಾಗೂ ಅಷ್ಟೇ ಅಲ್ದೆ ಕ್ಯಾನ್ಸರ್ ಬರುವುದನ್ನು ತಡೆಯುವ ಶಕ್ತಿ ಈ ಹಣ್ಣಿಗಿದೆ. ತೂಕ ನಷ್ಟ ಮಾಡಿಕೊಳ್ಳಲು ಬಯಸುವವರಿಗೆ ಪರಿಣಾಮಕಾರಿ. ಹಿಮೋಗ್ಲೋಬಿನ್ ಸಂಖ್ಯೆ ಹೆಚ್ಚಿಸಲು ಮತ್ತು ರಕ್ತ ಶುದ್ಧಿಗೆ ಸಹಾಯಕಾರಿ.
ಕೆಂಪುಬಾಳೆಹಣ್ಣು ವಿಟಮಿನ್ ಸಿ, ಬಿ-6, ಪೊಟಾಷಿಯಂ ಮತ್ತು ಮೆಗ್ನೀಷಿಯಂ ಅಂಶಗಳನ್ನು ಹೊಂದಿದ್ದು, ನಿಕೋಟಿನ್ನ ದಿಢೀರ್ ಕೊರತೆಯಿಂದ ದೇಹವನ್ನು ಪುನಶ್ಚೇತನಗೊಳಿಸಲು ನೆರವಾಗುತ್ತದೆ. ಇನ್ನು ಅಜೀರ್ಣತೆ ಸಮಸ್ಯೆ ಇರೋರಿಗೆ ಈ ಕೆಂಪುಬಾಳೆಹಣ್ಣು ಉಪಯೋಗಕಾರಿ ಹೌದು ಜೀರ್ಣಕ್ರಿಯೆಗೆ ಸಹಾಯಕವಾಗಿರುವುದರಿಂದ ಮೂಲವ್ಯಾಧಿಯನ್ನು ತಡೆಯುವ ಶಕ್ತಿ ಹೊಂದಿದೆ. ಕೆಂಪು ಬಾಳೆಹಣ್ಣು ಸೇವನೆಯಿಂದ ದೇಹದ ಮೂಳೆಗಳು ಗಟ್ಟಿಯಾಗುವುದು ಹಾಗು ಸ್ನಾಯುಗಳು ಬಲಶಾಲಿಯಾಗಿರುವುದು.