ಒಂದು ಊರಲ್ಲಿ ಎಲ್ಲರೂ ಕೂಡ ನಾಳೆ ಬಾ ನಾಳೆಬಾ ಎಂದು ತಮ್ಮ ಮನೆಯ ಬಾಗಿಲ ಮೇಲೆ ಚಾಕ್ ಪೀಸ್ ನಲ್ಲಿ ಬರೆದಿದ್ದರು ಏಕೆಂದರೆ ಆ ಊರಿನಲ್ಲಿ ಒಂದು ಹೆಣ್ಣು ದೆವ್ವದ ಕಾಟವಿತ್ತು. ಈ ದೆವ್ವದ ಕಾಟದ ಕಥೆಯನ್ನು ನೀವು ಕೇಳುವ ಆಸೆ ಇದ್ದರೆ ಸಂಪೂರ್ಣವಾಗಿ ಓದಿ.
ಒಂದು ದಿನ ಆ ಊರಿಗೆ ಹೊಸದಾಗಿ ಬಂದ ನಾರಾಯಣ್ ಮೂರ್ತಿ ಮತ್ತು ಪತ್ರಕರ್ತ ಆ ಊರಿನ ಪ್ರತಿಯೊಂದು ಮನೆಯನ್ನು ನೋಡುತ್ತಾರೆ ಎಲ್ಲರ ಬಾಗಿಲಿನಲ್ಲಿ ನಾಳೆ ಬಾ ಎಂದು ಬರೆದಿರುತ್ತದೆ ಆಗ ಇವನು ಆ ಊರಿನ ಜನರ ಬಳಿ ನಾಳೆ ಬಾ ಎಂದು ಏಕೆ ಬರೆದಿದ್ದರೆ ಎಂದು ಕೇಳಿದಾಗ ಅದಕ್ಕೆ ಉತ್ತರ ಯಾರೂ ಕೂಡ ಕೊಡುವುದಿಲ್ಲ.
ಆಗ ದಾರಿಯಲ್ಲಿ ಸಿಕ್ಕ ಒಬ್ಬ ಪೂಜಾರಿ ನಾಳೆ ಬಾ ಎನ್ನುವುದರ ಕಥೆಯನ್ನು ಹೇಳುತ್ತಾನೆ. ಆ ಊರಿನಲ್ಲಿ ರಾತ್ರಿ ಮಲಗಿದ್ದಾಗ 12 ಗಂಟೆಯ ನಂತರ ದೆವ್ವ ಬರುತ್ತದೆ ಆ ದೆವ್ವ ಒಂದು ಕೆಂಪು ಸೀರೆ ಉಟ್ಟಿಕೊಂಡು ಬಂದು ಒಂದು ಮನೆಯ ಬಾಗಿಲ ಬಳಿ ಸದ್ದನು ಮಾಡುತ್ತದೆ ಮನೆಯ ಬಾಗಿಲ ಮುಂದೆ ಸದ್ದು ಮಾಡುತ್ತಾ ಆ ಮನೆಯ ಮಾಲಿಕನ ಹೆಸರು ಕೂಗುತ್ತದೆ ಆ ಶಬ್ದ ಕೇಳಿ ಯಾರಿಗೆ ಆದರೂ ಕೂಡ ಭಯವಾಗುತ್ತದೆ. ಮನೆಯ ಮಾಲೀಕರು ಬಾಗಿಲನ್ನು ತೆಗೆದ ತಕ್ಷಣ ಮನೆಯ ಮಾಲೀಕರನ್ನು ಕರೆದುಕೊಂಡು ಹೋಗಿ ತಿಂದು ಸಾಯಿಸಿಬಿಡುತ್ತದೆ ಎಂಬ ಕಥೆಯನ್ನು ಪೂಜಾರಿ ಹೇಳುತ್ತಾನೆ.
ಈ ಕಥೆಯನ್ನು ಕೇಳಿದ ನಾರಾಯಣಮೂರ್ತಿ ಹಾಗೂ ಪತ್ರಕರ್ತ ರಾತ್ರಿ ಮನೆಗೆ ಹೋಗುವಾಗ ಸುಮಾರು 12 ಗಂಟೆ ಆಗಿತ್ತು ಆಗ ಎಲ್ಲಾ ಮನೆಯ ಬಾಗಿಲ ಮೇಲೆ ನಾಳೆ ಬಾ ಎಂದು ಬರೆದಿದ್ದನ್ನು ನೋಡಿ ಆತ ತುಂಬಾ ಗಾಬರಿಯಾಗಿದ್ದ. ಗಾಬರಿ ಪಟ್ಟುಕೊಂಡು ಹೋಗುವಾಗ ಕೆಂಪು ಬಟ್ಟೆ ತೊಟ್ಟ ಹುಡುಗಿ ಯಾವುದು ಅವರ ಹಿಂದೆ ಬಂದ ಹಾಗೆ ಅನಿಸುತ್ತದೆ ಇದನ್ನು ನೋಡಿದ ಹಾಗೂ ಪೂಜಾರಿ ಅವರ ಕಥೆಯನ್ನು ಕೇಳಿದ ನಾರಾಯಣಮೂರ್ತಿ ಜೋರಾಗಿ ನಡೆದು ತನ್ನ ಮನೆಯನ್ನು ಸೇರುತ್ತಾನೆ.
ಮನೆಗೆ ಸೇರಿದ ತಕ್ಷಣ ಆತನ ಮನೆಯಲ್ಲಿ ನಾಳೆ ಬಾ ಎಂದು ಬರೆದಿರುವುದಿಲ್ಲ ಹೀಗಾಗಿ ಆತನ ಮನೆಯ ಹತ್ತಿರ ಯಾರೋ ಸದ್ದು ಮಾಡಿದ ಹಾಗೆ ಅವನಿಗೆ ಅನಿಸುತ್ತದೆ. ಸದ್ದನ್ನು ಕೇಳಿದ ಆತ ಕಿಟಕಿಯಲ್ಲಿ ನೋಡಿದಾಗ ಯಾವುದೋ ಒಂದು ಮನೆಗೆ ಬೆಂಕಿ ಹತ್ತಿರುವುದನ್ನು ನೋಡುತ್ತಾನೆ ಆಗ ಆತನು ಸಹಾಯ ಮಾಡಲು ಹೋಗಲು ಬಾಗಿಲನ್ನು ತೆಗೆಯುತ್ತಾನೆ ಬಾಗಿಲನ್ನು ತೆಗೆದು ತಕ್ಷಣ ಆ ಹೆಣ್ಣು ದೆವ್ವ ಅವನನ್ನು ಕರೆದುಕೊಂಡು ಹೋಗುತ್ತದೆ. ಅವನು ಹೊರಟ ತಕ್ಷಣ ಅವನಿಗೆ ನಾನು ಎಲ್ಲಿ ಹೊರಟಿದ್ದೇನೆ ಎನ್ನುವುದು ಗೊತ್ತಿರುವುದಿಲ್ಲ. ಹಾಗಾಗಿ ಎಲ್ಲರ ಮನೆಯ ಮುಂದೆ ನಾಳೆ ಬಾ ಎಂದು ಬರೆದಿರುತ್ತಾರೆ.