Ultimate magazine theme for WordPress.

RCB ಗೆಲುವಿನ ಬಗ್ಗೆ ಸೌರವ್ ಗಂಗೂಲಿ ಹೇಳಿದ್ದೇನು? ನಿಜಕ್ಕೂ ಈ ಬಾರಿ ಗೆಲವು RCB ಪಾಲಾಗುತ್ತಾ

0 2

ಬಿಸಿಸಿಐ ಅಧ್ಯಕ್ಷ ಹಾಗೂ ಭಾರತದ ಮಾಜಿ ಕ್ರಿಕೆಟ್ ತಂಡದ ನಾಯಕ ಸೌರವ್ ಗಂಗೂಲಿಯವರು ಆರ್ಸಿಬಿ ಕುರಿತು ಏನು ಹೇಳಿದ್ದಾರೆ ಎಂಬುದನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಸೌರವ್ ಗಂಗೂಲಿ ಅವರು ಭಾರತದ ಕ್ರಿಕೆಟ್ ತಂಡದ ಉತ್ತಮ ಆಟಗಾರರಲ್ಲಿ ಇವರು ಕೂಡ ಒಬ್ಬರು. ಟೆಸ್ಟ್ ಕ್ರಿಕೆಟ್ನಲ್ಲಿ ಇವರು ಭಾರತದ ಅತ್ಯಂತ ಸಫಲ ನಾಯಕನಾಗಿದ್ದರು. ಇವರ ನಾಯಕತ್ವದಲ್ಲಿ ಭಾರತವು ನಲವತ್ತೊಂಬತ್ತು ಟೆಸ್ಟ್ ಪಂದ್ಯಗಳಲ್ಲಿ ಇಪ್ಪತ್ತೊಂದು ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ. ಸೌರವ್ ಗಂಗೂಲಿ ಅವರ ನಾಯಕತ್ವದಲ್ಲಿ ಭಾರತದ ಕ್ರಿಕೆಟ್ ತಂಡ ಎರಡು ಸಾವಿರದ ಹದಿಮೂರರಲ್ಲಿ ವಿಶ್ವಕಪ್ ಫೈನಲ್ ತಲುಪಿತ್ತು. ಎಡಗೈ ಆಟಗಾರರಾದ ಇವರು ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ರನ್ನುಗಳನ್ನು ಗಳಿಸಿದ್ದರು.

ಇವರನ್ನು ಪ್ರೀತಿಯಿಂದ ಇವರ ಸಹ ಆಟಗಾರರು ದಾದಾ ಎಂದು ಕರೆಯುತ್ತಿದ್ದರು. ಸೌರವ್ ಗಂಗೂಲಿಯವರು ಎರಡು ಸಾವಿರದ ಹದಿನೆಂಟರ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದರು. ಸೌರವ್ ಗಂಗೂಲಿಯವರು ಬೆಂಗಳೂರಿನಲ್ಲಿ ನಡೆಯುತ್ತಿರುವ ಐಪಿಎಲ್ ಹರಾಜಿನಲ್ಲಿ ಪಾಲ್ಗೊಳ್ಳುವುದಕ್ಕೆ ಬೆಂಗಳೂರಿಗೆ ಬಂದಿದ್ದರು ಆ ಸಮಯದಲ್ಲಿ ಅವರಿಗೆ ಎದೆ ನೋವು ಕಾಣಿಸಿಕೊಂಡಿರುವ ಕಾರಣ ಹೃದಯ ತಪಾಸಣೆಗಾಗಿ ಅವರನ್ನು ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ಅಧ್ಯಕ್ಷರಾದ ಡಾಕ್ಟರ್ ದೇವಿ ಶೆಟ್ಟಿ ಹಾಗೂ ತಂಡದವರು ಸೌರವ್ ಗಂಗೂಲಿ ಅವರ ಆರೋಗ್ಯ ತಪಾಸಣೆಯನ್ನು ಮಾಡಿದ್ದರು.

ಅವರು ಬೆಂಗಳೂರಿಗೆ ಬಂದಂತಹ ಸಮಯದಲ್ಲಿ ಮಾಧ್ಯಮದವರು ಕೇಳಿದ ಕೆಲವು ಪ್ರಶ್ನೆಗೆ ಉತ್ತರಿಸಿದ ಅವರು ಚಿಕ್ಕವಯಸ್ಸಿನಿಂದ ಬೆಂಗಳೂರಿಗೆ ಬರುತ್ತಿದ್ದೇನೆ ಈಗಾಗಲೇ ಹಲವಾರು ಬಾರಿ ಬೆಂಗಳೂರಿಗೆ ಬಂದಿದ್ದೇನೆ. ನನಗೆ ಬೆಂಗಳೂರು ತುಂಬಾ ಹಿಡಿಸುತ್ತದೆ ಕ್ರಿಕೆಟ್ ಮ್ಯಾಚ್ ಗಳನ್ನು ಆಡುವುದಕ್ಕಾಗಿ ಅನೇಕ ಸಾರಿ ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೆ ದೇವಿ ಶೆಟ್ಟಿ ಅವರ ಆಸ್ಪತ್ರೆಯ ಬಗ್ಗೆ ಮಾತನಾಡಿ ಒಂದು ವರ್ಷದಿಂದ ನನಗೆ ಇಲ್ಲಿಯ ಪರಿಚಯ ಇದೆ.

ಇಲ್ಲಿ ಜನರಿಗೋಸ್ಕರ ತುಂಬಾ ಶ್ರಮವಹಿಸಿ ಕೆಲಸವನ್ನು ಮಾತುತ್ತಾರೆ ನಾನು ಪ್ರತಿದಿನ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು. ನಂತರ ಆರ್ಸಿಬಿ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಆರ್ಸಿಬಿ ಗೆಲ್ಲಬೇಕೆ ಪ್ರತಿಸಾರಿ ಆರ್ಸಿಬಿ ಗೆಲ್ಲಬೇಕು ಎಂದು ಹೇಳುತ್ತಾರೆ ಆದರೆ ಗೆಲ್ಲುವುದಿಲ್ಲ ಈಸಾರಿ ಗೆಲ್ಲಬಹುದು ಎಂದು ಹೇಳಿದ್ದಾರೆ. ಇದಿಷ್ಟು ಸೌರವ್ ಗಂಗೂಲಿ ಅವರು ಬೆಂಗಳೂರಿಗೆ ಬಂದಾಗ ಹೇಳಿದ ಮಾತುಗಳಾಗಿವೆ.

Leave A Reply

Your email address will not be published.