ರವಿ ಚನ್ನಣ್ಣನವರ್ ಅವರ ಬಗ್ಗೆ ಎಲ್ಲರಿಗೂ ತಿಳಿದಿದೆ. ಅವರು ಒಬ್ಬ ಐಪಿಎಸ್ ಅಧಿಕಾರಿ ಅವರು ಅನೇಕ ಕಾರ್ಯಕ್ರಮಗಳಲ್ಲಿ ಮೋಟಿವೇಶನ್ ಮಾತುಗಳನ್ನಾಡುವ ಮೂಲಕ ಯುವಕರ ಮನಸನ್ನು ಗೆದ್ದಿದ್ದಾರೆ. ಇತ್ತೀಚಿಗೆ ಅವರ ಬಗ್ಗೆ ಅಪವಾದವು ಬಂದಿರುವುದನ್ನು ನೋಡಿದ್ದೇವೆ. ಇದೀಗ ಅವರ ತಮ್ಮನ ಹೆಂಡತಿ ರವಿ ಅವರ ಕುಟುಂಬದವರ ಬಗ್ಗೆ ದೂರು ನೀಡಿದ್ದಾರೆ. ಹಾಗಾದರೆ ದೂರು ಕೊಡಲು ಕಾರಣವೇನು ಎಂಬುದನ್ನು ಸಂಪೂರ್ಣವಾಗಿ ಈ ಲೇಖನದಲ್ಲಿ ನೋಡೋಣ.

ಶಿವಮೊಗ್ಗದ ಯೋಗೀಶ್ ಅವರ ಮಗಳು ರೋಜಾ ಅವರ ಮದುವೆ 2015 ರಲ್ಲಿ ರವಿ ಡಿ ಚನ್ನಣ್ಣನವರ್ ಅವರ ತಮ್ಮ ರಾಘವೇಂದ್ರ ಅವರೊಂದಿಗೆ ಆಗಿತ್ತು. ರೋಜಾ ಅವರು ರವಿ ಚನ್ನಣ್ಣನವರ್ ಅವರ ಕುಟುಂಬ ಶಿವಮೊಗ್ಗದ ನಮ್ಮ ಮನೆಗೆ ಅವರ ತಮ್ಮನಿಗೆ ಹೆಣ್ಣು ಕೇಳಲು ಬಂದರು ಒಪ್ಪಿಕೊಂಡು ಮದುವೆಯನ್ನು ಮಾಡಿದರು. ನಂತರ ರಾಘವೇಂದ್ರ ಅವರಿಗೆ ಅನೈತಿಕ ಸಂಬಂಧ ಇದೆ ಸ್ವಲ್ಪ ದಿನಗಳ ಕಾಲ ಸುಮ್ಮನಿರು ನಂತರದ ದಿನಗಳಲ್ಲಿ ಸರಿಹೋಗುತ್ತದೆ ಎಂದು ಹೇಳಿದರು. ನಾನು ವೇಟ್ ಮಾಡಿದೆ ಇಲ್ಲಿಯವರೆಗೂ ಓದು ನಾವು ಸರಿ ಮಾಡುತ್ತೇವೆ ಎಂದು ಹೇಳುತ್ತಾ ಬಂದರು. ಅವರ ಮನೆಗೆ ಸಂಸಾರ ಮಾಡಲು ಹೋದಾಗ ಆ ಹುಡುಗಿಯೊಂದಿಗೆ ಸಂಬಂಧ ಮುಂದುವರೆಸಿ ನನಗೆ ಹೊಡೆದು, ಬಡಿದು ಮಾಡುತ್ತಿದ್ದರು ಎಂದು ರೋಜಾ ಅವರು ದುಃಖದಿಂದ ಹೇಳಿದರು.

ಈಗ ಆ ಹುಡುಗಿಯೊಂದಿಗೆ ರಾಘವೇಂದ್ರ ಅವರಿಗೆ ಮದುವೆಯಾಗಿದೆ ನೀನು ಇರುವುದಿದ್ದರೆ ಅವರೊಂದಿಗೆ ಇರು ಎಂದು ಹೇಳುತ್ತಿದ್ದಾರೆ. ಆ ಹುಡುಗಿಯ ಹೆಸರು ರುಕ್ಮಿಣಿ ಅವಳು ರವಿ ಅವರ ಕುಟುಂಬಕ್ಕೆ ಸಂಬಂಧಿಯಾಗಬೇಕು. ಈ ವಿಷಯದ ಬಗ್ಗೆ ರವಿ ಚನ್ನಣ್ಣನವರ್ ಅವರು ಇಬ್ಬರು ಅನುಸರಿಸಿಕೊಂಡು ಹೋಗಿ ಎಂದು ಹೇಳುತ್ತಿದ್ದಾರೆ. ಇದು ಯಾವ ಹೆಣ್ಣಿಂದಲು ಸಾಧ್ಯವಿಲ್ಲ ಹೀಗಾಗಿ ನಾನು ಕಮಿಷನರ್ ಆಫೀಸ್ ಗೆ ಕಂಪ್ಲೇಂಟ್ ಮಾಡಲು ಬಂದಿದ್ದೇನೆ, ನನಗೆ ನ್ಯಾಯ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದೇನೆ ಎಂದು ರೋಜಾ ಅವರು ಹೇಳಿಕೊಂಡಿದ್ದಾರೆ.

ರಾಘವೇಂದ್ರ ಅವರು ಕೆಲಸ ಮಾಡುತ್ತಿದ್ದಾರೆ ಎನ್ನುವುದರ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ರಾಘವೇಂದ್ರ ಅವರ ಕುಟುಂಬ ರೋಜಾ ಅವರ ತಂದೆಯಿಂದ ಸಾಕಷ್ಟು ಹಣ, ಬಂಗಾರ ಪಡೆದಿದ್ದಾರೆ. ರಾಘವೇಂದ್ರ ಅವರ ಕುಟುಂಬದವರಿಂದ ಹಾಗೂ ರುಕ್ಮಿಣಿ ಅವರ ಅಣ್ಣನ ಕಡೆಯಿಂದ ರೋಜಾ ಅವರಿಗೆ ರಾಘವೇಂದ್ರ ಅವರನ್ನು ಬಿಡು ಇಲ್ಲದಿದ್ದರೆ ಹಾಗೆ ಮಾಡುತ್ತೇವೆ ಹೀಗೆ ಮಾಡುತ್ತೇವೆ ಎಂಬ ಹೆದರಿಕೆಯ ಕರೆಗಳು ಬರುತ್ತಿವೆ. ಇದರ ಬಗ್ಗೆ ರೋಜಾ ಅವರು ರವಿ ಚನ್ನಣ್ಣನವರ್ ಹತ್ತಿರ ಕೇಳಿದಾಗ ಅವರು ಕೋರ್ಟ್ ನಲ್ಲಿ ನೋಡಿ ಎಂದು ಹೇಳಿದ್ದಾರೆಂದು ರೋಜಾ ಅವರು ಹೇಳಿಕೊಂಡಿದ್ದಾರೆ. ರೋಜಾ ಅವರಿಗೆ ರವಿ ಚನ್ನಣ್ಣನವರ್ ಕುಟುಂಬದವರಿಂದ ಅನ್ಯಾಯ ಆಗಿದೆ ನ್ಯಾಯ ಸಿಗಬೇಕು. ಯಾವ ಹೆಣ್ಣಿಗೂ ಇಂತಹ ಅನ್ಯಾಯ ಆಗಬಾರದು. ರೋಜಾ ಅವರಿಗೆ ನ್ಯಾಯ ಸಿಗಲಿ ಎಂದು ಆಶಿಸೋಣ.

Leave a Reply

Your email address will not be published. Required fields are marked *