ರವಿ ಬೆಳಗೆರೆ ಅವರ ಬಗ್ಗೆ ಯಾರಿಗೆ ತಿಳಿದಿಲ್ಲ. ಬುಕ್ ಸ್ಟಾಲ್ ಗಳಿಗೆ ಹೋದರೆ ಅವರು ಬರೆದ ಪುಸ್ತಕಗಳನ್ನು ಕೇಳುವವರೇ ಜಾಸ್ತಿ. ಇವರು ಇಡೀ ಬೆಂಗಳೂರನ್ನು 6 ಬಾರಿ ಸುತ್ತಿದ್ದಾರೆ. ಇಡೀ ಬೆಂಗಳೂರು ತಿರುಗುವುದು ಎಂದರೆ ಸುಲಭದ ಕೆಲಸವೇ ಅಲ್ಲ. ನಾವು ಇಲ್ಲಿ ರವಿ ಬೆಳಗೆರೆ ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ರವಿ ಬೆಳಗೆರೆ ಅವರು 1958ರಲ್ಲಿ ಬಳ್ಳಾರಿಯಲ್ಲಿ ಹುಟ್ಟಿದರು. ಅವರಿಗೆ ಈಗ 62ವರ್ಷ ಆಗಿತ್ತು. ಇವರು ಹಾಯ್ ಬೆಂಗಳೂರು ಮತ್ತು ಓ ಮನಸೇ ಮ್ಯಾಗ್ಸಿನ್ ನ ಚೀಫ್ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರು ಎರಡು ಬಾರಿ ಮದುವೆ ಆಗಿದ್ದಾರೆ. ಇವರ ಹೆಂಡತಿಯರ ಹೆಸರು ಲಲಿತಾ ಹಾಗೂ ಯಶೋಮತಿ. ಇವರ ದೊಡ್ಡ ಮಗಳು ಚೇತನಾ ಬೆಳಗೆರೆ. ಹಾಗೆಯೇ ಇವರ ಎರಡನೇ ಮಗಳ ಹೆಸರು ಭಾವನಾ ಬೆಳಗೆರೆ. ಇವರ ಬಗ್ಗೆ ಯಾರಿಗೆ ಗೊತ್ತಿಲ್ಲ. ಭಾವನಾ ಬೆಳಗೆರೆ ಅವರು ಬಿಗ್ಬಾಸ್ ಗೆ ಬಂದಿದ್ದರು. ಇವರು ಶ್ರೀನಗರ ಕಿಟ್ಟಿ ಅವರನ್ನು ಲವ್ ಮಾಡಿ ಮದುವೆ ಆಗಿದ್ದಾರೆ.
ಇವರ ಮಗನ ಹೆಸರು ಕರ್ಣ. ಇವರು ಇಂಗ್ಲೆಂಡ್ ನ ಪ್ರಸಿದ್ಧ ಸಿಟಿಯಾದ ಬಗಿಂಗಮ್ ಯುನಿವರ್ಸಿಟಿಯಲ್ಲಿ ತಮ್ಮ ವಿದ್ಯಾಭ್ಯಾಸ ಮುಗಿಸಿ ಬೆಂಗಳೂರಿಗೆ ಬಂದಿದ್ದಾರೆ. ಕರ್ಣ ಅವರು 2018ರಲ್ಲಿ ತಮ್ಮ ಪ್ರೇಯಸಿಯಾದ ಲಕ್ಷ್ಮೀ ಅವರನ್ನು ಮದುವೆ ಆಗಿದ್ದಾರೆ. ಈಗ ಇವರಿಗೆ ಒಂದು ಮಗುವಾಗಿದೆ. ರವಿ ಬೆಳಗೆರೆ ಅವರು ಮತ್ತೆ ತಾತ ಆಗಿದ್ದಾರೆ. ಈಗ ಕರ್ಣ ಅವರು ಫ್ಯಾಮಿಲಿ ಬಿಸನೆಸ್ ಆದಂತಹ ಪ್ರಾರ್ಥನಾ ಎಜುಕೇಷನ್ ಸೊಸೈಟಿಯಲ್ಲಿ ಸೆಕ್ರೆಟರಿ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ರವಿ ಬೆಳಗೆರೆ ಅವರು ತಮ್ಮ ಎರಡನೇ ಹೆಂಡತಿ ಯಶೋಮತಿಯನ್ನು ಮೊದಲು ಭೇಟಿ ಮಾಡಿದ್ದು ಹಾಯ್ ಬೆಂಗಳೂರು ಆಫೀಸ್ ನಲ್ಲಿ.
ಅಲ್ಲಿಯೇ ಪರಸ್ಪರ ಪ್ರೀತಿ ಮಾಡಿ ಇಬ್ಬರೂ ಮದುವೆ ಆಗಿದ್ದಾರೆ. ಇವರಿಗೆ ಒಬ್ಬ ಮಗನಿದ್ದಾನೆ. ಅವನ ಹೆಸರು ಹಿಮಾವತ್. ರವಿ ಬೆಳಗೆರೆ ಅವರು ತಮ್ಮ ಎಲ್ಲಾ ಆಸ್ತಿಯನ್ನು ಎಲ್ಲಾ ಮಕ್ಕಳಿಗೂ ಸಮಾನವಾಗಿ ಹಂಚಿದ್ದಾರೆ. ಇತ್ತೀಚೆಗೆ ಕೆಲವು ದಿನಗಳ ಹಿಂದೆ ರವಿ ಬೆಳಗೆರೆ ಅವರು ಸಾವನ್ನಪ್ಪಿ ತಮ್ಮ ಅದ್ಭುತವಾದ ಬರಹಕ್ಕೆ ಅಂತ್ಯ ಹಾಡಿದ್ದಾರೆ. ಇವರ ಪುಸ್ತಕಗಳ ಅಭಿಮಾನಿಗಳು ಈಗ ಇವರನ್ನು ಕಳೆದುಕೊಂಡು ಬಹಳ ದುಃಖದಲ್ಲಿದ್ದಾರೆ. ಏಕೆಂದರೆ ಇವರ ಬರಹಗಳು ಅಷ್ಟೊಂದು ಸುಂದರವಾಗಿರುತ್ತಿತ್ತು .