Ration Card Updates: ಹೊಸ ರೇಷನ್ ಕಾರ್ಡ್ ಪಡೆಯುವವರಿಗೆ ಮಹತ್ವದ ಬದಲಾವಣೆ ಮಾಡಿದ ಸರ್ಕಾರ, ಈ ದಾಖಲೆಗಳು ಇದ್ರೆ ಮಾತ್ರ ಹೊಸ ರೇಷನ್ ಕಾರ್ಡ್ ಸಿಗುತ್ತೆ

0 886

Ration Card Updates New rules on Karnataka govt: ಇದೀಗ ಸರ್ಕಾರ ಜಾರಿಗೊಳಿಸುವ ಗ್ಯಾರಂಟಿ ಯೋಜನೆಗಳನ್ನು ಪಡೆಯಲು ರೇಷನ್ ಕಾರ್ಡ್ ಅತಿ ಅವಶ್ಯಕವಾಗಿರುತ್ತದೆ ಆದರೆ ಅನೇಕ ಜನರು ಇನ್ನೂ ಕೂಡ ರೇಷನ್ ಕಾರ್ಡ್ ಹೊಂದಿಲ್ಲ ಹೊಂದಿದ್ದರು ಅದನ್ನು ತಿದ್ದುಪಡಿ ಮಾಡಿಸಿಲ್ಲ ಅಷ್ಟೇ ಅಲ್ಲದೆ ಕೆಲವು ತಿಂಗಳ ಹಿಂದೆ ಅರ್ಜಿ ಸಲ್ಲಿಸಿದವರಿಗೂ, ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ರೇಷನ್ ಕಾರ್ಡನ್ನ ವಿತರಣೆ ಮಾಡಿಲ್ಲ ಆದ್ದರಿಂದ ಇದೀಗ ಮುಂಬರುವ ದಿನಗಳಲ್ಲಿ ರೇಷನ್ ಕಾರ್ಡ್ ಅನ್ನ ಆದಷ್ಟು ಬೇಗ ವಿತರಣೆಯನ್ನ ಮಾಡುವ ಕಾರ್ಯವನ್ನು ಕೈಗೊಳ್ಳಲಾಗುವುದು ಎಂದು ಕಳೆದ ವಾರ ನಡೆದ ಸುದ್ದಿಗೋಷ್ಠಿಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆಎಚ್ ಮುನಿಯಪ್ಪ ಮಾತನಾಡಿದರು.

ಅನೇಕ ಸರ್ಕಾರಿ ಸೇವಾ ಕೇಂದ್ರಗಳಲ್ಲಿ ಈ ರೇಷನ್ ಕಾರ್ಡ್ ತಿದ್ದುಪಡಿ ಕಾರ್ಯವನ್ನು ಮಾಡಿಕೊಡಲಾಗುತ್ತಿದ್ದು ಇದರಲ್ಲಿಯೂ ಕೂಡ ಕೆಲವು ದೋಷಗಳು ಕಂಡು ಬರುತ್ತಿವೆ ಇದನ್ನು ಆನ್ಲೈನ್ ನಲ್ಲಿ ಮಾಡಿಸಲು ಆಗುವುದಿಲ್ಲ ಸರ್ಕಾರಿ ಸೇವಾ ಕೇಂದ್ರಗಳ ಮೂಲಕವೇ ಮಾಡಿಸಬೇಕು. ಅದರಿಂದ ಹೊಸದಾಗಿ ರೇಷನ್ ಕಾರ್ಡ್ ಪಡೆಯಲು ಸರ್ಕಾರಿ ಸೇವಾ ಕೇಂದ್ರಗಳಿಗೆ ಅರ್ಜಿ ಸಲ್ಲಿಸುವವರಿಗೆ ಬೇಕಾಗುವ ಕೆಲವು ದಾಖಲೆಗಳು ಯಾವವು ಎಂಬುದನ್ನು ಇಲ್ಲಿ ನಾವು ನೋಡೋಣ.

Ration Card Updates New rules on Karnataka govt

ಪ್ರಮುಖವಾಗಿ ರೇಷನ್ ಕಾರ್ಡ್ ಮಾಡಿಸಲು ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಬೇಕಾಗುತ್ತದೆ ಮತ್ತು ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಹೊರತುಪಡಿಸಿ ಕುಟುಂಬದ ಎಲ್ಲಾ ಸದಸ್ಯರ ಬಯೋಮೆಟ್ರಿಕ್ ಬೇಕಾಗುತ್ತದೆ ಇದಾದ ನಂತರ ಕುಟುಂಬದಲ್ಲಿ ಯಾರಾದರೂ ಉಪ ಸದಸ್ಯರ ಹೆಸರಿನಲ್ಲಿ ಆದಾಯ ಪ್ರಮಾಣ ಪತ್ರವನ್ನು ನೀಡಬೇಕು. ಒಂದು ವೇಳೆ ಮನೆಯಲ್ಲಿ ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿದ್ದರೆ ಅವರ ಜನನ ಪ್ರಮಾಣ ಪತ್ರವನ್ನು ನೀಡಬೇಕಾಗುತ್ತದೆ ಕುಟುಂಬದ ಸದಸ್ಯರ ಮೊಬೈಲ್ ಸಂಖ್ಯೆ ಹಾಗೂ ಇಮೇಲ್ ಐಡಿ ಕೂಡ ಬೇಕಾಗುತ್ತದೆ.

ವಿಶೇಷವಾಗಿ ಇರುವ ಸೂಚನೆ ಏನೆಂದರೆ ಯಾರು ಸ್ವಂತ ವೈಟ್ ಬೋರ್ಡ್ ಕಾರುಗಳನ್ನು ಹೊಂದಿರುತ್ತಾರೋ ಅವರು ಬಿಪಿಎಲ್ ಕಾರ್ಡ್ ಅರ್ಜಿ ಸಲ್ಲಿಸಿದರೆ ಅವರ ಅರ್ಜಿ ತಿರಸ್ಕೃತ ಗೊಳ್ಳುತ್ತದೆ. ಇದರ ಬಗ್ಗೆ ಸ್ವತಹ ಆಹಾರ ಇಲಾಖೆ ಸಚಿವರು ಹೇಳಿಕೆ ನೀಡಿದ್ದಾರೆ. ಆದರೆ ಉದ್ಯೋಗದ ಕಾರಣಕ್ಕಾಗಿ ಎಲ್ಲೋ ಬೋರ್ಡ್ ಕಾರ್ ಗಳನ್ನ ಹೊಂದಿದವರಿಗೆ ಬಿಪಿಎಲ್ ಕಾರ್ಡ್ ಪಡೆಯುವುದಕ್ಕೆ ಯಾವುದೇ ಸಮಸ್ಯೆ ಇರುವುದಿಲ್ಲ.

ಸರ್ಕಾರವು ಈ ನಿಟ್ಟಿನಲ್ಲಿ ರೇಷನ್ ಕಾರ್ಡ್ ಪಡೆಯಲು ಹೊಸ ನಿಯಮವನ್ನು ಜಾರಿಗೆ ತಂದಿದ್ದು ಈ ಹಿಂದೆ ಕೂಡ ಅನುಕೂಲಸ್ಥರು ನಕಲಿ ಮಾಹಿತಿ ನೀಡಿ ಅಥವಾ ಸರ್ಕಾರಕ್ಕೆ ಮಾಹಿತಿ ಮರೆಯಚಿ ಬಿಪಿಎಲ್ ಕಾರ್ಡ್ಗಳನ್ನ ಪಡೆದುಕೊಳ್ಳುತ್ತಿದ್ದರು ಇದು ಸರ್ಕಾರದ ಗಮನಕ್ಕೆ ಬಂದಿದ್ದು ಇದೀಗ ಕಟ್ಟುನಿಟ್ಟಿನ ನಿಯಮಗಳನ್ನು ಕೈಗೊಂಡು ಅವುಗಳನ್ನು ರದ್ದು ಮಾಡಲು ಸರ್ಕಾರ ನಿರ್ಧರಿಸಿದೆ. ಇದನ್ನೂ ಓದಿ ಗೃಹಲಕ್ಷ್ಮಿ ಯೋಜನೆಯ ಹಣ ಸಿಗಬೇಕು ಅಂದ್ರೆ ಮಹಿಳೆಯರು ಈ ಕೆಲಸ ಮಾಡೋದು ಕಡ್ಡಾಯ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.