ಇತ್ತೀಚಿನ ದಿನಗಳಲ್ಲಿ ರೇಷನ್ ಕಾರ್ಡ್ ಬೇಕೆ ಬೇಕಾಗುತ್ತದೆ. ಅನೇಕ ಕೆಲಸಗಳಿಗೆ, ಸರ್ಕಾರದಿಂದ ಲಭ್ಯವಾಗುವ ಯೋಜನೆಗಳಿಗೆ ಅರ್ಜಿ ಸಲ್ಲಿಸುವಾಗ, ಸ್ಕಾಲರ್ ಶಿಪ್ ಪಡೆಯಲು ಇನ್ನಿತರ ಉದ್ದೇಶಗಳಿಗೆ ರೇಷನ್ ಕಾರ್ಡ್ ಬೇಕಾಗುತ್ತದೆ. ರೇಷನ್ ಕಾರ್ಡ್ ನಲ್ಲಿರುವ ಮಾಹಿತಿ ತಪ್ಪಾಗಿದ್ದರೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಕುಟುಂಬದ ಸದಸ್ಯರ ಹೆಸರನ್ನು ಸೇರ್ಪಡೆ ಮಾಡುವುದು ಅಥವಾ ತಪ್ಪಾದ ಹೆಸರುಗಳನ್ನು ತಿದ್ದುಪಡಿ ಮಾಡಲು ಕಚೇರಿಗಳಿಗೆ ಅಲೆದಾಟ ಮಾಡಬೇಕಾಗುತ್ತದೆ. ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕವೆ ಸುಲಭವಾಗಿ ಪಡಿತರ ಚೀಟಿಗೆ ಹೊಸ ಹೆಸರುಗಳ ಸೇರ್ಪಡೆ ಅಥವಾ ತಪ್ಪಾದ ಹೆಸರಿನ ತಿದ್ದುಪಡಿ ಕೆಲಸವನ್ನು ಮಾಡಿಕೊಳ್ಳಬಹುದು. ಹಾಗಾದರೆ ಅದು ಹೇಗೆ ಸಾಧ್ಯ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ರೇಷನ್ ಕಾರ್ಡ್‌ಗೆ ಕುಟುಂಬದ ಹೊಸ ಸದಸ್ಯರ ಹೆಸರು ಸೇರ್ಪಡೆ ಮಾಡಿಸಬೇಕಾದರೆ ಅಥವಾ ಹೆಸರು ತಿದ್ದುಪಡಿ ಮಾಡಬೇಕಾದರೆ ಇನ್ನು ಮುಂದೆ ಚಿಂತಿಸಬೇಡಿ. ಸ್ಮಾರ್ಟ್‌ಫೋನ್ ಅಥವಾ ಕಂಪ್ಯೂಟರ್ ಮೂಲಕವೆ ಸುಲಭವಾಗಿ ಪಡಿತರ ಕಾರ್ಡ್ ಗೆ ಕುಟುಂಬದ ಇತರ ಸದಸ್ಯರ ಹೆಸರನ್ನು ಸೇರಿಸುವುದು ಅಥವಾ ಇರುವ ಹೆಸರನ್ನು ತಿದ್ದುಪಡಿ ಮಾಡಬಹುದಾಗಿದೆ ಇದರಿಂದ ಯಾವುದೆ ಕಚೇರಿಗಳಿಗೆ ಅಲೆದಾಡದೆ ಆನ್ಲೈನ್ ಮೂಲಕವೆ ಕೆಲಸ ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಪಡಿತರ ಚೀಟಿ ಇಲ್ಲದಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಸರ್ಕಾರದಿಂದ ಪೂರೈಕೆ ಆಗುವ ಆಹಾರ ಧಾನ್ಯಗಳನ್ನು ಪಡೆಯಲು ಮಾತ್ರವಲ್ಲ, ಸರ್ಕಾರದ ಯೋಜನೆಗಳಿಗಾಗಿ, ವಿಮೆ ಸೌಲಭ್ಯಗಳಿಗಾಗಿ ಗುರುತಿನ ಪ್ರತಿಯಾಗಿ ಪಡಿತರ ಚೀಟಿ ಅತ್ಯಗತ್ಯವಾಗಿದೆ ಆದರೆ ಪಡಿತರ ಚೀಟಿಯಲ್ಲಿ ಕೆಲವೊಮ್ಮೆ ಹೆಸರು ತಪ್ಪಾಗಿ ಈ ಸೇವೆಗಳಿಗೆ ಕೊಟ್ಟಾಗ ಸೇವೆ ಲಭ್ಯವಾಗದೆ ತಪ್ಪಿಹೋಗಬಹುದು ಹಾಗೂ ಕುಟುಂಬದ ಹೊಸ ಸದಸ್ಯರ ಹೆಸರು ಸೇರ್ಪಡೆ ಮಾಡಿಸದೆ ದಾಖಲಾತಿ ಇಲ್ಲದಂತಾಗಿ ಹಲವು ಯೋಜನೆಗಳಿಂದ ವಂಚಿತವಾಗಬಹುದು.

ಮೊಬೈಲ್ ಅಥವಾ ಕಂಪ್ಯೂಟರ್ ಸಹಾಯದಿಂದ ನಿಮ್ಮ ಮನೆಯಲ್ಲೆ ಕುಳಿತು ರೇಷನ್ ಕಾರ್ಡ್‌ಗೆ ಕುಟುಂಬದ ಹೊಸ ಸದಸ್ಯರ ಹೆಸರನ್ನು ಸೇರ್ಪಡೆ ಮಾಡಬಹುದು ಹಾಗೂ ಹೆಸರು ತಿದ್ದುಪಡಿ ಮಾಡಬಹುದು. ಹೆಸರು ಸೇರಿಸುವುದು ಮತ್ತು ತಿದ್ದುಪಡಿ ಮಾಡಲು ಪಡಿತರ ಚೀಟಿಯ ಮೂಲ ದಾಖಲೆ ಮತ್ತು ಮಗುವಿನ ಜನನ ಪ್ರಮಾಣಪತ್ರದ ಜೊತೆಗೆ ಮಗುವಿನ ಪೋಷಕರ ಆಧಾರ್ ಕಾರ್ಡ್‌ ಬೇಕಾಗುತ್ತದೆ. ಹೆಂಡತಿಯ ಹೆಸರನ್ನು ಸೇರ್ಪಡೆ ಮಾಡುವಾಗ ಆ ಮಹಿಳೆಯ ಆಧಾರ್ ಕಾರ್ಡ್ ಮತ್ತು ಗಂಡನ ಮನೆಯ ಪಡಿತರ ಚೀಟಿ ಪ್ರತಿ ಬೇಕಾಗುತ್ತದೆ. ದಾಖಲೆಗಳೊಂದಿಗೆ ಆನ್‌ಲೈನ್ ಮುಖಾಂತರ ರೇಷನ್ ಕಾರ್ಡ್‌ನಲ್ಲಿ ನಿಮ್ಮ ಹೆಸರನ್ನು ಸೇರಿಸಬಹುದು.

ಮೊದಲು https://ahara.kar.nic.in/home ಎಂಬ ಅಧಿಕೃತ ವೆಬ್ ಸೈಟ್ ಗೆ ಲಾಗ್‌ ಇನ್ ಆಗಬೇಕು. ಲಾಗ್‌ಇನ್‌ ಮಾಡಿದ ನಂತರ ಮುಖ್ಯ ಪುಟದಲ್ಲಿ ಇ-ಸೇವೆಗಳು ಎಂಬ ಆಪ್ಷನ್ ಇರುತ್ತದೆ ಅದನ್ನು ಆಯ್ಕೆ ಮಾಡಬೇಕು. ನಂತರ ಅಲ್ಲಿ ತಿದ್ದುಪಡಿ/ಹೊಸ ಸೇರ್ಪಡೆಗೆ ವಿನಂತಿ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿದಾಗ ಹೊಸ ಪೇಜ್ ತೆರೆಯುತ್ತದೆ. ಅಲ್ಲಿ ಫಾರ್ಮ್ ಓಪನ್ ಆಗುತ್ತದೆ ಫಾರ್ಮ್‌ನಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿದ ನಂತರ ತಿಳಿಸಲಾದ ಎಲ್ಲ ದಾಖಲೆಗಳ ಸ್ಕ್ಯಾನ್ ಪ್ರತಿಯನ್ನು ಅಪಲೋಡ್ ಮಾಡಬೇಕು.

ಎಲ್ಲ ದಾಖಲೆಗಳ ಸ್ಕ್ಯಾನ್ ಪ್ರತಿಯನ್ನು ಅಪಲೋಡ್ ಮಾಡಿದ ನಂತರ ಸಬ್‌ಮಿಟ್ ಮಾಡಬೇಕು. ಸಬ್‌ಮಿಟ್ ಮಾಡಿದ ನಂತರ ನೋಂದಣಿ ಸಂಖ್ಯೆ ಸಿಗುತ್ತದೆ. ಆ ನೋಂದಣಿ ಸಂಖ್ಯೆ ಮೂಲಕ ವೆಬ್‌ಸೈಟ್ ಗೆ ಲಾಗ್‌ಇನ್‌ ಆಗಬಹುದು ಹಾಗೂ ಫಾರ್ಮ್ ಅನ್ನು ಟ್ರ್ಯಾಕ್ ಮಾಡಬಹುದು.

ಅರ್ಜಿ ಸಲ್ಲಿಸುವಾಗ ನೀಡಿರುವಂತಹ ಎಲ್ಲ ದಾಖಲಾತಿಗಳು ಸರಿಯಾಗಿದ್ದರೆ ಮನೆಗೆ ಅಪ್‌ಡೇಟ್ ಆಗಿರುವ ಹೊಸ ಪಡಿತರ ಚೀಟಿಯನ್ನು ಕಳುಹಿಸಲಾಗುತ್ತದೆ. ಹೀಗೆ ಖರ್ಚಿಲ್ಲದೆ ಸುಲಭವಾಗಿ ಮನೆಯಿಂದಲೆ ಪಡಿತರ ಚೀಟಿಗೆ ಕುಟುಂಬದ ಸದಸ್ಯರ ಹೆಸರನ್ನು ಸೇರಿಸಬಹುದು ಅಥವಾ ತಿದ್ದುಪಡಿ ಮಾಡಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *