ಸಾಕಷ್ಟು ಜನರು ಹೊಸದಾಗಿ ರೇಶನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸುತ್ತಿದ್ದಾರೆ, ರೇಷನ್ ಕಾರ್ಡ್ ಪಡೆಯಲಿರುವ ನಾಗರೀಕರ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಸರ್ಕಾರ ಮಾಹಿತಿ ನೀಡಿದೆ. ಇಂಥ ಜನರಿಗೆ ಮಾತ್ರ ಸರ್ಕಾರದ ಸೌಲಭ್ಯಗಳ ಲಾಭ ಸಿಗುತ್ತದೆ ಎಂದು ತಿಳಿಸಲಾಗಿದೆ. ರೇಷನ್ ಕಾರ್ಡ್ ಇರುವವರು ಉಚಿತ ರೇಷನ್ ಪಡೆಯುವುಅರ ಜೊತೆಗೆ ಇನ್ನು ಅನೇಕ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಹಾಗಾಗಿ ರೇಷನ್ ಕಾರ್ಡ್ ಎಲ್ಲರಿಗೂ ಪ್ರಮುಖವಾದ ದಾಖಲೆ ಆಗಿದೆ.

ರೇಷನ್ ಕಾರ್ಡ್ ಗಳನ್ನು ಜನರಿಗೆ ವಿತರಣೆ ಮಾಡುವುದು ಅವರ ಬಡತನದ ಆಧಾರದ ಮೇಲೆ, ಬಡತನದ ರೇಖೆಗಿಂತ ಕೆಳಗಿರುವವರಿಗೆ ಒಂದು ಬಗೆಯ ರೇಷನ್ ಕಾರ್ಡ್, ಬಡತನದ ರೇಖೆಗಿಂತ ಜಾಸ್ತಿ ಇರುವವರಿಗೆ ಇನ್ನೊಂದು ರೀತಿಯ ರೇಷನ್ ಕಾರ್ಡ್ ನೀಡಲಾಗುತ್ತದೆ. ಈ ರೇಷನ್ ಕಾರ್ಡ್ ನ ಅನುಸಾರ ಅವರಿಗೆ ರೇಶನ್ ಕಾರ್ಡ್ ಪ್ರಯೋಜನ ಸಿಗುತ್ತದೆ. ಹಾಗೆಯೇ ನ್ಯಾಯಯುತವಾದ ಬೆಲೆಯಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ರೇಷನ್ ಪಡೆಯಲು ಸಾಧ್ಯವಾಗುತ್ತದೆ.

ಆದರೆ ರೇಷನ್ ಕಾರ್ಡ್ ಗೆ ಸಂಬಂಧಿಸಿದ ಹಾಗೆ ಕೆಲವೊಮ್ಮೆ ತಪ್ಪುಗಳು ನಡೆದು ಹೋಗುತ್ತದೆ, ರೇಷನ್ ಕಾರ್ಡ್ ನಲ್ಲಿ ಮನೆಯವರ ಹೆಸರು ತಪ್ಪಾಗಿ ಪ್ರಿಂಟ್ ಆಗಿರಬಹುದು. ಜೊತೆಗೆ ರೇಷನ್ ಕಾರ್ಡ್ ಗೆ ಹೊಸ ಹೆಸರನ್ನು ಸೇರಿಸಬೇಕಾಗಬಹುದು. ಈ ರೀತಿ ಇರುವವರಿಗೆ ಈಗ ಸರ್ಕಾರವು ನಿಮ್ಮ ರೇಷನ್ ಕಾರ್ಡ್ ಗೆ ಹೊಸಬರ ಹೆಸರನ್ನು ಸೇರಿಸಲು ಅವಕಾಶ ನೀಡಿದೆ, ಈ ಕೆಲಸವನ್ನು ನೀವು ಸುಲಭವಾಗಿ ಮನೆಯಿಂದಲೇ ಮಾಡಬಹುದು. ಅದು ಹೇಗೆ ಎಂದು ತಿಳಿಸುತ್ತೇವೆ ನೋಡಿ.

ಮೊದಲನೆಯಾಗಿ ನೀವು ಯಾವ ವ್ಯಕ್ತಿಯ ಹೆಸರನ್ನು ಸೇರ್ಪಡೆ ಮಾಡಬೇಕೋ ಅವರ ಕೆಲವು ದಾಖಲೆಗಳು ಇರಬೇಕು. ಆ ವ್ಯಕ್ತಿಯ ಆಧಾರ್ ಕಾರ್ಡ್, ನಿಮ್ಮ ರೇಶನ್ ಕಾರ್ಡ್, ಗುರುತಿನ ಚೀಟಿಯಾಗಿ ವೋಟರ್ ಐಡಿ, ಡಿಎಲ್, ಪ್ಯಾನ್ ಕಾರ್ಡ್ ಅಥವಾ ಇನ್ನಿತರ ದಾಖಲೆ ಇರಬೇಕು. ಆನ್ಲೈನ್ ಮೂಲಕ ಹೆಸರು ಸೇರಿಸಲು ಮೊದಲಿಗೆ ಈ https://epds.nic.in/ ಲಿಂಕ್ ಓಪನ್ ಮಾಡಿ.. ಇದರ ಹೋಮ್ ಪೇಜ್ ನಲ್ಲಿ ರೇಷನ್ ಕಾರ್ಡ್ ಕರೆಕ್ಷನ್ ಎನ್ನುವ ಆಯ್ಕೆ ಇರುತ್ತದೆ, ಅದನ್ನು ಸೆಲೆಕ್ಟ್ ಮಾಡಿ.

ಈಗ ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಗೂ ಆಧಾರ್ ಕಾರ್ಡ್ ನಂಬರ್ ಎರಡನ್ನು ಹಾಕಿ, ಈಗ ಸರ್ಚ್ ಮಾಡಿದಾಗ ನಿಮ್ಮ ರೇಶನ್ ಕಾರ್ಡ್ ಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಬರುತ್ತದೆ. ಹೆಸರು ನವೀಕರಣ ಮಾಡುವ ಆಯ್ಕೆ ಇರುತ್ತದೆ. ಅದನ್ನು ಸೆಲೆಕ್ಟ್ ಮಾಡಿ, ಅವಶ್ಯಕತೆ ಇರುವವರ ಹೆಸರನ್ನು ಸೇರಿಸಿ, submit ಆಯ್ಕೆಯನ್ನು ಸೆಲೆಕ್ಟ್ ಮಾಡಿ. ಈ ಪ್ರಕ್ರಿಯೆ ಅನುಸರಿಸುವ ಮೂಲಕ ನಿಮ್ಮ ರೇಷನ್ ಕಾರ್ಡ್ ನಲ್ಲಿ ಅಪ್ಡೇಟ್ ಮಾಡಬಹುದು ಹಾಗೆಯೇ ಹೊಸ ಹೆಸರನ್ನು ಸೇರ್ಪಡೆ ಮಾಡಬಹುದು. ಹಾಗೆಯೇ ವೆಬ್ಸೈಟ್ ಮೂಲಕ ಸ್ಟೇಟಸ್ ಅನ್ನು ಕೂಡ ಚೆಕ್ ಮಾಡಬಹುದು.

Leave a Reply

Your email address will not be published. Required fields are marked *