Ration Card about New Rules In Karnataka: ರೇಷನ್ ಕಾರ್ಡ್ ಗೆ ಡಿಮ್ಯಾಂಡಪ್ಪೋ ಡಿಮಾಂಡು! ಹೌದು ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅದು ಐದು ಶಕ್ತಿ ಯೋಜನೆಗಳು ಜಾರಿಯಾದ ಮೇಲಂತೂ ರೇಷನ್ ಕಾರ್ಡ್ ಗೆ ಬಹಳ ಬೇಡಿಕೆ ಬಂದಿದೆ. ಎಪಿಎಲ್ ಕಾರ್ಡ್ ಇದ್ದವರು ಕೂಡ ಅದನ್ನ ಬಿಪಿಎಲ್ ರೇಷನ್ ಕಾರ್ಡ್ ಗೆ ಬದಲಾಯಿಸಿಕೊಳ್ಳುತ್ತಿದ್ದಾರೆ. ವೈದ್ಯಕೀಯ ಶುಲ್ಕ ಶೈಕ್ಷಣಿಕ ಶುಲ್ಕ ಹಾಗೂ ಅಕ್ಕಿಯಲ್ಲಿ ರಿಯಾಯಿತಿ ಹೀಗೆ ಹಲವಾರು ತರಹದಲ್ಲಿ ನಮ್ಮ ರಾಜ್ಯ ಸರ್ಕಾರವು ರಿಯಾಯಿತಿಯನ್ನು ಕೊಡುತ್ತಿರುವುದರಿಂದ ಎಲ್ಲರೂ ಕೂಡ ರೇಷನ್ ಕಾರ್ಡ್ ಗೆ ಮುಗಿಬಿದ್ದಿದ್ದಾರೆ.

ಇನ್ನು 2016ರಲ್ಲಿಯೇ ಸರಕಾರವು ರೇಷನ್ ಕಾರ್ಡ್ ಬಗ್ಗೆ ಕೆಲವೊಂದು ರೂಲ್ಸ್ ಅನ್ನ ಜಾರಿಗೆ ತಂದಿತ್ತು. ಆದರೂ ಸಹಿತ ಸರ್ಕಾರಕ್ಕೆ ನಾಮ ಹಾಕಿ ಬಹುಜನರು ತಮ್ಮ ಎಪಿಎಲ್ ಕಾರ್ಡುಗಳನ್ನು ಬಿಪಿಎಲ್ ಕಾರ್ಡ್ ಗಳಾಗಿ ಪರಿವರ್ತಿಸಿಕೊಂಡಿದ್ದಾರೆ. ಆದರೆ ಸರಕಾರವು ಅದನ್ನು ಕಡೆಗಣಿಸದೆ ಪತ್ತೆ ಹಚ್ಚುವ ಕೆಲಸವನ್ನು ಕೈಗೊಂಡಿದ್ದು ಈಗಾಗಲೇ ಬಹಳಷ್ಟು ಜನರ ರೇಷನ್ ಕಾರ್ಡ್ಗಳನ್ನು ರದ್ದು ಮಾಡುವುದಾಗಿ ಜನರಿಗೆ ಎಚ್ಚರಿಕೆಯನ್ನು ನೀಡಿದೆ.

Ration Card about New Rules In Karnataka

ಈಗ ಸರ್ಕಾರಕ್ಕೆ ಮತ್ತೊಂದು ಪ್ರಶ್ನೆ ಎದುರಾಗಿದೆ. ಅದೇನೆಂದರೆ ಎಲ್ಲರೂ ಕೂಡ ಒಂದೇ ಕುಟುಂಬದಲ್ಲಿ ವಾಸಿಸುತ್ತಿದ್ದರು ಕೂಡ ರೇಷನ್ ಕಾರ್ಡ್ ಮಾತ್ರ ಬೇರೆ ಬೇರೆಯಾಗಿದೆ. ಒಂದೇ ತಾಯಿಯ ನಾಲ್ಕು ಮಕ್ಕಳು ಕೂಡ ನಾಲ್ಕು ರೇಷನ್ ಕಾರ್ಡನ್ನು ಹೊಂದಿದ್ದಾರೆ. ಇದು ಸರ್ಕಾರಕ್ಕೆ ಬಹು ದೊಡ್ಡ ಸಮಸ್ಯೆಯಾಗಿದೆ. ಅವರೆಲ್ಲರ ರೇಷನ್ ಕಾರ್ಡ್ ಬೇರೆ ಬೇರೆಯಾಗಿದ್ದರು ಕೂಡ ಒಂದೇ ವಿಳಾಸದಲ್ಲಿದೆ. ಇದು ಒಂದು ರೀತಿಯಲ್ಲಿ ಸರ್ಕಾರವನ್ನು ವಂಚಿಸುವ ಉದ್ದೇಶ ಅಂತಾನೆ ಹೇಳಬಹುದು.ಹಾಗೆಯೇ ಇನ್ನು ಕೆಲವರು ಏನು ಮಾಡಿದ್ದಾರೆ ಎಂದರೆ ಕುಟುಂಬದಲ್ಲಿ ಮೃತಪಟ್ಟವರ ಹೆಸರನ್ನ ರೇಷನ್ ಕಾರ್ಡಿನಲ್ಲಿಯೇ ಉಳಿಸಿಕೊಂಡಿದ್ದಾರೆ.

ಇನ್ನು ಕೂಡ ತೆಗೆದು ಹಾಕಿಲ್ಲ. ರಾಜ್ಯದಲ್ಲಿ ಇಂಥವರ ಸಂಖ್ಯೆ ಹೆಚ್ಚಾಗಿ ಕಾಣಿಸುತ್ತಿದೆ. ಸರ್ಕಾರಕ್ಕೆ ಇದು ದೊಡ್ಡ ತಲೆ ನೋವಾಗಿದೆ. ಸರ್ಕಾರಕ್ಕೆ ಈಗಿರುವ ಕೆಲಸ ಎಂದರೆ ನಕಲಿ ಕಾರ್ಡುಗಳನ್ನ ಪತ್ತೆ ಹಚ್ಚುವುದು,ನಕಲಿ ಜನರನ್ನ ರೇಷನ್ ಕಾರ್ಡಿನಿಂದ ತೆಗೆದುಹಾಕುವುದು ಹಾಗೂ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರ ತನಿಖೆಯನ್ನು ನಡೆಸುವುದು ಈ ಮೂರು ಕೆಲಸವನ್ನು ಸರ್ಕಾರ ಮಾಡಬೇಕಿದೆ. ಇದರಿಂದ ಬಹಳಷ್ಟು ನಕಲಿ ಬಿಪಿಎಲ್ ಕಾರ್ಡುಗಳು ರದ್ದಾಗಲಿವೆ. ನಿಮಗೆ ಮೊದಲೇ ತಿಳಿಸುವ ಮಾಹಿತಿ ಏನೆಂದರೆ ಸರ್ಕಾರವೇ ರದ್ದು ಮಾಡುವ ಮೊದಲು ನೀವೇ ಎಚ್ಚೆತ್ತುಕೊಂಡು ಯಾರಿಗೆ ಅವಶ್ಯಕತೆ ಇಲ್ಲವೋ ಬಿಪಿಎಲ್ ಕಾರ್ಡ್ ನದ್ದು ಅವರೇ ಖುದ್ದಾಗಿ ನಿಮ್ಮ ನಿಮ್ಮ ಕಾರ್ಡ್ಗಳನ್ನು ಹಿಂದಕ್ಕೆ ತೆಗೆದುಕೊಳ್ಳಿ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

ಇದನ್ನೂ ಓದಿ ಪಿತ್ರಾರ್ಜಿತ ಅಸ್ತಿ ಮಾರಾಟ ಮಾಡುವವರಿಗೆ ಸರ್ಕಾರದಿಂದ ಹೊಸ ರೂಲ್ಸ್ ಜಾರಿ, ಈ ಮಾಹಿತಿ ನಿಮಗೆ ಗೊತ್ತಿರಲಿ

Leave a Reply

Your email address will not be published. Required fields are marked *