ಭಾರತದ ಮಾರುಕಟ್ಟೆಯಲ್ಲಿ ಟಾಟಾ ಪ್ರೊಡೆಕ್ಟ್ಸ್ ರಾರಾಜಿಸುತ್ತವೆ. ಟಾಟಾ ಕಂಪನಿಯು ಅಗ್ರ ಸ್ಥಾನದಲ್ಲಿದೆ. ಇಷ್ಟೊಂದು ದೊಡ್ಡ ಕಂಪನಿಯ ಒಡೆತನ ರತನ್ ಟಾಟಾ ಅವರಿಗೆ ಸಲ್ಲುತ್ತದೆ. ಟಾಟಾ ಅವರ ದೇಶಪ್ರೇಮ, ಜೀವನದ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

1966 ರಲ್ಲಿ ಜೆಮಶೆಡ್ಜಿ ಟಾಟಾ ಆರಂಭಿಸಿದ ಕಂಪನಿ ಟಾಟಾ. ಮೊದಲಿಗೆ ಇದು ಕಾಟನ್ ಮಿಲ್. ನಂತರ ಕೆಲವು ವರ್ಷ ಟಾಟಾ ಕಂಪನಿಗೆ ದುಡಿದು, ಟಾಟಾ ಪ್ರೊಡಕ್ಟಗಳನ್ನು ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ರತನ್ ಟಾಟಾ ಅವರಿಗೆ ಸಲುತ್ತದೆ. ಇವರು ಡಿಸೆಂಬರ್ 28, 1937 ರಲ್ಲಿ ಜನಿಸಿದ್ದಾರೆ. ರತನ್ ಗೆ 7 ವರ್ಷವಿದ್ದಾಗ ತಂದೆ ತಾಯಿ ಬೇರೆಯಾಗುತ್ತಾರೆ. ರತನ್ ಹೀಗಾಗಿ ಜೆಆರಡಿ ಟಾಟಾ ಅವರ ನೆರಳಲ್ಲಿ ಬೆಳೆಯುತ್ತಾರೆ. ಪ್ರಾರಂಭಿಕ ಶಿಕ್ಷಣವನ್ನು ಭಾರತದಲ್ಲಿ ಮುಗಿಸಿ ಅಮೆರಿಕದಲ್ಲಿ ಇಂಜಿನಿಯರಿಂಗ್ ಪದವಿ ಪಡೆಯುತ್ತಾರೆ. ನಂತರ ಐಬಿಎಂ ಕಂಪನಿಗೆ ಕೆಲಸಕ್ಕೆ ಸೇರುತ್ತಾರೆ. ಜೆಆರಡಿ ಟಾಟಾ ಅವರ ಕರೆಗೆ ವಾಪಸ್ ಬಂದ ರತನ್ ಟಾಟಾ ಕಂಪನಿಯ ಕೆಲಸಕ್ಕೆ ಸೇರುತ್ತಾರೆ. ನಂತರ ಜೆಆರಡಿ ಟಾಟಾ ರತನ್ ಅವರನ್ನು ಕಂಪನಿಯ ಚೇರಮನ್ ಆಗಿ ನೇಮಿಸುತ್ತಾರೆ ಇದನ್ನು ಕೆಲವರು ವಿರೋಧಿಸುತ್ತಾರೆ, ಇದಾವುದಕ್ಕೂ ತಲೆ ಕೆಡಿಸಿಕೊಳ್ಳದೆ ರತನ್ ಟಾಟಾ ತಮ್ಮ ಕೆಲಸಕ್ಕೆ ಗಮನ ಕೊಡುತ್ತಾರೆ. ರತನ್ ಟಾಟಾ ಹಾಗೂ ಅವರ ಕುಟುಂಬದವರಿಗೆ ದೇಶದ ಮೇಲೆ ಅಪಾರ ಭಕ್ತಿ. ಒಮ್ಮೆ ಜೆಮಶೆಡ್ಜಿ ಟಾಟಾ ಬ್ರಿಟಿಷ್ ಹೋಟೆಲ್ ನಲ್ಲಿ ರೂಮ್ ಬುಕ್ ಮಾಡಲು ಹೋಗುತ್ತಾರೆ ಆದರೆ ಆ ಹೋಟೆಲಿನ ಮಾಲಿಕ ಭಾರತದ ನಾಯಿಗೂ ಇಲ್ಲಿ ರೂಮ್ ಸಿಗುವುದಿಲ್ಲ ಎಂದು ಹೇಳುತ್ತಾರೆ ಇದರಿಂದ ಮನನೊಂದ ಜೆಮಶೆಡ್ಜಿ ಟಾಟಾ ಭಾರತಕ್ಕೆ ಬಂದು ಮುಂಬೈ ತೀರದಲ್ಲಿ ಒಂದು ಭವ್ಯವಾದ ತಾಜ್ ಹೋಟೆಲ್ ನಿರ್ಮಾಣ ಮಾಡುತ್ತಾರೆ. ಈ ಹೋಟೆಲ್ ವಿಶ್ವದ ಅತ್ಯಂತ ಲಕ್ಷುರಿ ಹೋಟೆಲ್ ಮತ್ತು ಭಾರತದ ಮೊದಲ ಪಂಚತಾರಾ ಹೋಟೆಲ್ ಎಂಬ ಖ್ಯಾತಿಗೆ ಪಾತ್ರವಾಗಿದೆ. ಒಮ್ಮೆ ವಿವೇಕಾನಂದರ ಜೊತೆ ಜೇಮಶೆಡ್ಜಿ ಟಾಟಾ ಅವರ ಜೊತೆ ಪ್ರಯಾಣ ಮಾಡುತ್ತಿದ್ದಾಗ ವಿವೇಕಾನಂದರ ಹತ್ತಿರ ಟಾಟಾ ಅವರು ವಿದೇಶದ ವಸ್ತುಗಳನ್ನು ತೆಗೆದುಕೊಂಡು ಹೋಗಿ ನಮ್ಮ ದೇಶದಲ್ಲಿ ಮಾರಬೇಕು ಆ ರೀತಿ ಒಂದು ಯೋಚನೆ ಮಾಡುತ್ತಿದ್ದೇನೆ ಎಂದರು. ಆಗ ವಿವೇಕಾನಂದರು ನಮ್ಮ ದೇಶದಲ್ಲಿ ವಸ್ತುಗಳನ್ನು ತಯಾರು ಮಾಡುವ ತಂತ್ರಜ್ಞಾನವನ್ನು ಬೆಳಸಬಹುದಲ್ಲ ಎನ್ನುತ್ತಾರೆ ಇದರಿಂದ ಪ್ರೇರಣೆಗೊಂಡ ಜೆಮಶೆಡ್ಜಿ ಟಾಟಾ ಭಾರತದಲ್ಲಿ ಹುಟ್ಟು ಹಾಕಿದ ಸಂಸ್ಥೆಯೇ ಇಂಡಿಯನ್ ಇನ್ಸಟಿಟ್ಯುಟ್ ಆಫ್ ಸೈನ್ಸ್.

ಅವರು ತಮ್ಮನ್ನು ಮತ್ತು ತಮ್ಮ ಕಂಪನಿಯನ್ನು ದೇಶಸೇವೆಗೆ ಮುಡಿಪಾಗಿಟ್ಟಿದ್ದಾರೆ. ನಂತರ ಟಾಟಾ ಇಂಡಿಕಾ ಕಾರನ್ನು ದೇಶಕ್ಕೆ ಪರಿಚಯಿಸಿದರು. ಮಾರುಕಟ್ಟೆಯಲ್ಲಿ ಟಾಟಾ ಕಾರು ನಷ್ಟವಾಯಿತು. ತಮ್ಮ ಕಾರುಗಳನ್ನು ಫೋರ್ಡ್ ಕಂಪನಿಗೆ ಮಾರಲು ನಿರ್ಧರಿಸಿದರು. ಮಾತುಕತೆಗೆ ಟಾಟಾ ಅಮೆರಿಕಕ್ಕೆ ತೆರಳಿದರು. ಅವರು ಟಾಟಾ ಅವರಿಗೆ ಅವಮಾನ ಮಾಡುತ್ತಾರೆ ಅಲ್ಲಿಂದ ವಾಪಸ್ ಬಂದ ಟಾಟಾ ತಮ್ಮ ಕಾರನ್ನು ಪುನಃ ಮಾರುಕಟ್ಟೆಗೆ ಬಿಡಲು ತಯಾರಾಗುತ್ತಾರೆ. ಆಗ ಇಂಡಿಕಾ ಕಾರು ಮಾರಾಟವಾಗುತ್ತದೆ. ಟಾಟಾ ಕಂಪನಿ ಲಾಭ ಗಳಿಸುತ್ತದೆ. ಫೋರ್ಡ್ ಕಂಪನಿ ಕಾರುಗಳು ನಷ್ಟವಾಗುತ್ತದೆ ನಷ್ಟದಲ್ಲಿದ್ದ ಕಂಪನಿಯ ಕಾರುಗಳನ್ನು ರತನ್ ಟಾಟಾ ಖರೀದಿ ಮಾಡುತ್ತಾರೆ. ನಂತರ ಇಂಗ್ಲೆಂಡಿನ ಟೆಟ್ಲಿ ಟಿ ಕಂಪನಿಯನ್ನು ಖರೀದಿಸಿ ಟಾಟಾ ಟಿ ಗೆ ಬೆರೆಸುತ್ತಾರೆ. 96 ಕ್ಕೂ ಹೆಚ್ಚು ಕಂಪನಿಯನ್ನು ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಸ್ಥಾಪಿಸಿದ ಕೀರ್ತಿ ರತನ್ ಟಾಟಾರಿಗೆ ಸಲ್ಲುತ್ತದೆ. ಒಮ್ಮೆ ಟಾಟಾ ಕಾರಿನಲ್ಲಿ ಹೋಗುವಾಗ ಒಂದು ಬೈಕ್ ನಲ್ಲಿ ಗಂಡ ಹೆಂಡತಿ ಮಕ್ಕಳು ಮಳೆಯಲ್ಲಿ ಹೋಗುತ್ತಿರುವುದನ್ನು ನೋಡಿದ ಅವರು ಕಾರನ್ನು ಒಂದು ಲಕ್ಷಕ್ಕೆ ನ್ಯಾನೋ ಕಾರನ್ನು ಮಾರ್ಕೆಟ್ ಗೆ ಬಿಟ್ಟರು. ಅವರ ತಾಜ್ ಹೋಟೆಲ್ ಗೆ ಉಗ್ರರು ಧಾಳಿ ಮಾಡಿದ್ದರು, ಆ ದುರಂತದಲ್ಲಿ ಸಾವಿಗೀಡಾದವರಿಗೆ ಪ್ರತಿ ತಿಂಗಳು ರತನ್ ಟಾಟಾ ಅವರು ಸ್ಯಾಲರಿ ಹಾಕುತ್ತಿದ್ದರು. ಅವರ ಆಸ್ತಿಯ ಮೌಲ್ಯ 7 ಲಕ್ಷ ಕೋಟಿ. ಆದರೂ ಸಿರಿವಂತರ ಪಟ್ಟಿಯಲ್ಲಿಲ್ಲ ಅವರು ಕಂಪನಿಯ ಒಟ್ಟು ಲಾಭದಲ್ಲಿ ಶೇಕಡಾ 60 ರಷ್ಟು ಚಾರಿಟೇಬಲ್ ಟ್ರಸ್ಟ್ ಗೆ ಕೊಡುತ್ತಾರೆ. ಅವರು ತಮ್ಮ ಸ್ವಂತಕ್ಕೆ ಬಳಸುವುದು ಕಡಿಮೆ. ಇವರಿಗೆ ಪದ್ಮವಿಭೂಷಣ, ಪದ್ಮಭೂಷಣ ಪ್ರಶಸ್ತಿ ಲಭಿಸಿದೆ. ಇವರಿಗೆ ಈಗ 82 ವರ್ಷ. ರತನ್ ಟಾಟಾ ಅವರ ಜೀವನ ಸುಖಕರವಾಗಿದ್ದು ಹೆಚ್ಚಿನ ದೇಶ ಸೇವೆ ಮಾಡಲಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!