ತಮ್ಮ ನಗುವಿನಿಂದಲೆ ಎಲ್ಲರ ಮನಸ್ಸನ್ನು ಗೆದ್ದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರು ಕಿರಿಕ್ ಪಾರ್ಟಿ ಸಿನಿಮಾ ನಂತರ ನಟ ರಕ್ಷಿತ್ ಶೆಟ್ಟಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು ನಂತರ ಕೆಲವು ಕಾರಣಗಳಿಂದ, ಮನಸ್ತಾಪದಿಂದ ನಿಶ್ಚಿತಾರ್ಥವನ್ನು ಮುರಿದುಕೊಂಡರು. ನಟ ವಿಜಯ್ ದೇವರಕೊಂಡ ಅವರೊಂದಿಗೆ ಸಿನಿಮಾದಲ್ಲಿ ನಟಿಸಿದ ನಂತರ ಇಬ್ಬರು ಸುದ್ದಿಯಲ್ಲಿ ಇರುತ್ತಿದ್ದರು ಇದೀಗ ಹೈದ್ರಾಬಾದ್ ನ ಜಿಮ್ ನಿಂದ ಇಬ್ಬರು ಹೊರಗೆ ಬರುತ್ತಿರುವ ಫೋಟೊ ಸಖತ್ ವೈರಲ್ ಆಗಿದೆ. ಅದರ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ ಮೋಡಿ ಮಾಡಿದ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ. ಆಗಾಗ ಡೇಟಿಂಗ್ ವಿಚಾರವಾಗಿ ಇಬ್ಬರು ಸುದ್ದಿಯಲ್ಲಿರುತ್ತಾರೆ ಅಲ್ಲದೆ ಒಟ್ಟಿಗೆ ಕ್ಯಾಮರಾ ಕಣ್ಣಿಗೆ ಬೀಳುವ ಇವರು ಇತ್ತೀಚೆಗೆ ಹೈದರಾಬಾದ್ನ ಜಿಮ್ನಲ್ಲಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಅವರು ಬಾಲಿವುಡ್ ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ ಆದ್ದರಿಂದ ಮುಂಬೈನಲ್ಲಿ ನೆಲೆಸಿರುವ ರಶ್ಮಿಕಾ ಅವರು ಮಹಾರಾಷ್ಟ್ರದಲ್ಲಿ ಕೊರೋನ ಏರಿಕೆಯಾದ ಕಾರಣ ಕರ್ಫ್ಯೂ ಜಾರಿ ಮಾಡುತ್ತಿದ್ದಂತೆ ಹೈದರಾಬಾದ್ಗೆ ವಾಪಸ್ ಬಂದಿದ್ದಾರೆ. ಹೈದರಾಬಾದ್ನಲ್ಲಿ ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ವರ್ಕೌಟ್ ಮಾಡಿ ಜಿಮ್ನಿಂದ ಹೊರಬರುತ್ತಿರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪೋಟೊದಲ್ಲಿ ರಶ್ಮಿಕಾ ಜೋರಾಗಿ ನಗುತ್ತಿದ್ದು, ವಿಜಯ್ ದೇವರಕೊಂಡ ಮಾಸ್ಕ್ ಧರಿಸಿದ್ದಲ್ಲದೆ ಕ್ಯಾಪ್ನಿಂದ ಮುಖವನ್ನು ಮುಚ್ಚಿಕೊಂಡಿದ್ದಾರೆ. ಲಿಫ್ಟ್ನಿಂದ ಹೊರಬರುತ್ತಿದ್ದಂತೆ ಮುಖಮುಚ್ಚಿಕೊಂಡು ಬಂದ ದೇವರಕೊಂಡ ಮತ್ತು ಹಿಂದೆಯಿಂದ ನಗುತ್ತಾ ಹೊರಗೆ ಬರುತ್ತಿರುವ ರಶ್ಮಿಕಾ ಅವರ ಫೋಟೋಗಳು ಎಲ್ಲಾ ಕಡೆ ಹರಿದಾಡುತ್ತಿದೆ. ಅವರಿಬ್ಬರೂ ಕ್ಯಾಮರಾ ಕಣ್ಣಿಗೆ ಸೆರೆಯಾಗಬಾರದು ಎನ್ನುವ ಕಾರಣಕ್ಕೆ ಮುಖ ಮುಚ್ಚಿಕೊಂಡಿದ್ದರಾ ಅಥವಾ ನಗು ತಡೆಯಲಾರದೆ ಮುಖಮುಚ್ಚಿಕೊಂಡರಾ ಎನ್ನುವುದು ಅಭಿಮಾನಿಗಳ ಪ್ರಶ್ನೆ.
ಈಗಾಗಲೆ ರಶ್ಮಿಕಾ ಮತ್ತು ವಿಜಯ್ ಇಬ್ಬರೂ ಮುಂಬೈ ಹೋಟೆಲ್ ನಲ್ಲಿ ಒಟ್ಟಾಗಿ ಕಾಣಿಸಿಕೊಂಡು ಸುದ್ದಿಯಾಗಿದ್ದರು. ಆಗಲೂ ರಶ್ಮಿಕಾ ಅವರನ್ನು ಭೇಟಿಯಾಗಿ ವಿಜಯ್ ಹೋಟೆಲ್ ನಿಂದ ಹೊರಬರುತ್ತಿರುವ ಫೋಟೋಗಳು ವೈರಲ್ ಆಗಿತ್ತು. ರಶ್ಮಿಕಾ ಅವರು ಬಾಲಿವುಡ್ನಲ್ಲಿ ಮಿಷನ್ ಮಜ್ನು ಮತ್ತು ಗುಡ್ ಬೈ ಎಂಬ ಸಿನಿಮಾದಲ್ಲಿ ಬ್ಯೂಸಿಯಾಗಿದ್ದಾರೆ. ಮೊದಲ ಬಾರಿಗೆ ಬಿಗ್ ಬಿ ಅಮಿತಾಬ್ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ, ಇದು ಅವರಿಗೆ ಸಂತೋಷದ ವಿಷಯವಾಗಿದೆ. ಅದರಂತೆ ನಟ ವಿಜಯ್ ದೇವರಕೊಂಡ ಲೈಗರ್ ಸಿನಿಮಾದಲ್ಲಿ ಬ್ಯೂಸಿಯಾಗಿದ್ದಾರೆ. ಇಬ್ಬರು ಡಿಯರ್ ಕಾಮ್ರೆಡ್ ಸಿನಿಮಾ ಬಳಿಕ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಮೋಡಿ ಮಾಡಿದ ಈ ಜೋಡಿಯನ್ನು ಮತ್ತೊಮ್ಮೆ ಒಟ್ಟಿಗೆ ತೆರೆಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಒಟ್ಟಿನಲ್ಲಿ ಇವರಿಬ್ಬರೂ ಯಾವುದಾದರೂ ಸುದ್ದಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಇವರಿಬ್ಬರಿಗೂ ಹೆಚ್ಚು ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಗಲಿ ಎಂದು ಆಶಿಸೋಣ.