ತೇರಿ ಮೇರಿ ತೇರಿ ಮೇರಿ ಹಾಡನ್ನು ಯಾರು ಕೇಳಿಲ್ಲ? ಹಲವರ ಮೊಬೈಲ್ ಗಳಲ್ಲೆಲ್ಲಾ ಇದೇ ರಿಂಗ್ ಟೋನ್ ಆಯ್ತು. ಇದನ್ನು ಹಾಡಿದವರು ರಾನು ಮಂಡಲ್. ಇವರ ಧ್ವನಿ ಲತಾ ಮಂಗೇಶ್ಕರ್ ಧ್ವನಿಯನ್ನು ಹೋಲುತ್ತಿತ್ತು. ರೇಲ್ವೇ ಪ್ಲಾಟ್ ಫಾರಂನಲ್ಲಿ ಭಿಕ್ಷೆ ಬೇಡುತ್ತಿದ್ದ ಈ ಮಹಿಳೆಯ ಹಾಡನ್ನು ಕೇಳಿದ ಬಾಲಿವುಡ್ ಸಂಗೀತ ನಿರ್ದೇಶಕ ಹಿಮೇಶ್ ಅವರು 2019 ರಲ್ಲಿ ಬೆಳಕಿಗೆ ತಂದು 3 ಹಾಡುಗಳನ್ನೂ ಹಾಡಿಸಿದ್ದರು. ಆನಂತರ ಅವರು ಏನಾದ್ರು ಎಲ್ಲಿ ಹೋದರು ? ಏನಾದರು? ಎನ್ನುವುದು ತಿಳಿದುಬಂದಿರಲಿಲ್ಲ. ಇತ್ತೀಚೆಗೆ ಬಂದ ವರದಿಯ ಪ್ರಕಾರ ರಾನು ಮಂಡಲ್ ಮತ್ತೆ ಎಂದಿನಂತೆ ತನ್ನ ಕಾಯಕಕ್ಕೆ ಮರಳಿದ ಬಗ್ಗೆ ಸಾಕಷ್ಟು ಸುದ್ಧಿ ಆಗುತ್ತಿದೆ ಇದರ ಕುರಿತಾಗಿ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಒಂದೇ ರಾತ್ರಿಯಲ್ಲಿ ಪಾಪ್ಯುಲರ್ ಆದ ರಾನು ಮಂಡಲ್ ಬಾಲಿವುಡ್ ನಲ್ಲಿ ಎಲ್ಲಾ ಕಡೆಗೂ ಇವರ ಹೆಸರೇ ಕೇಳಿ ಬರ್ತಿತ್ತು. ಸ್ಲಂ ನಲ್ಲಿ ವಾಸಿಸುತ್ತಿದ್ದ ಇವರಿಗೆ ವಾಸಿಸಲು ಒಂದು ಮನೆಯೂ ಸಿಕ್ಕಿತ್ತು. ಇವರು ಕೆಲವು ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಂಡರು. ನಂತರದ ದಿನಗಳಲ್ಲಿ ರಾನು ಮಂಡಲ್ ಆಡಿದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿತು. ಅವರು ಶಾಪಿಂಗ್ ಗೆ ಹೋದಾಗ ಅವರನ್ನು ನೋಡಲು ಬಂದ ಅಭಿಮಾನಿಗಳಿಗೆ ತನ್ನನ್ನು ಮುಟ್ಟಬೇಡಿ ಅಂತ ದರ್ಪದಿಂದ ಹೇಳಿದ್ದೂ ಸಹ ವೈರಲ್ ಆಯಿತು. ಆಕೆಯ ವರ್ತನೆಗೆ ಆಕೆಯ ಅಭಿಮಾನಿಗಳು ಮತ್ತು ಇತರರಿಂದ ಟೀಕೆಗಳನ್ನು ಎದುರಿಸಬೇಕಾಯಿತು. ಸೆಲೆಬ್ರಿಟಿಗಳ ವರ್ತನೆಗೆ ಆಕೆ ಶೀಘ್ರವಾಗಿ ಖ್ಯಾತಿಯ ಏರಿಕೆಗೆ ಕಾರಣ ಎಂದು ಹಲವರು ಆರೋಪಿಸಿದರು. ಇವರೆಷ್ಟು ಪ್ರಸಿದ್ಧರಾಗಿದ್ದರೆಂದರೆ ಮೈಸೂರಿನ 2019 ರ ಯುವ ದಸರಾಕ್ಕೂ ಇವರನ್ನು ಆಹ್ವಾನಿಸಲಾಯಿತು.
ಆದರೆ ಕಾಲ ಯಾವತ್ತೂ ಒಂದೇ ತರಹ ಇರುವುದಿಲ್ಲ ಎನ್ನುವುದಕ್ಕೆ ರಾನು ಸಾಕ್ಷಿಯಾದರು. ಉನ್ನತ ಮಟ್ಟಕ್ಕೆ ಹೋಗುತ್ತಿದ್ದಂತೆ, ಇವರ ಜೀವನದಲ್ಲಿ ಇಳಿಮುಖವೂ ಪ್ರಾರಂಭವಾಯಿತು. ಇಡಿ ವಿಶ್ವಕ್ಕೆ ಮಹಾಮಾರಿಯಾದ ಕೊರೋನಾ ಭಾರತಕ್ಕೂ ಅಪ್ಪಳಿಸುತ್ತಿದಂತೆ ಇವರನ್ನು ಕೇಳುವವರೇ ಇಲ್ಲದಂತಾಯ್ತು. ಜನರ ಮನಸ್ಸಿನಿಂದ ಇವರೂ ಮರೆಯಾದರು. ಆರ್ಥಿಕ ಮುಗ್ಗಟ್ಟು ಕಾಡತೊಡಗಿತು. ತಾನಿದ್ದ ಮನೆಯನ್ನು ತೊರೆದು ಅವರ ಹಳೆಯ ಮನೆಗೆ ಹೋದರು ಎಂದು ವರದಿಯಾಗಿದೆ. ವಿಚಿತ್ರವಾದರೂ ಇದು ಸತ್ಯ ಸಿರಿತನ ಬಂದಾಗ ಅಹಂಕಾರ ಬರುವುದು ಮಾನವ ಮಾತ್ರರಿಗೆ ಸಹಜ ಅದನ್ನು ಮೆಟ್ಟಿ ನಿಂತು ಮುಂದೆ ಸಾಗುವುದು ಕೆಲವರಿಂದ ಮಾತ್ರ ಸಾದ್ಯ,
ಈ ತಾಯಿಯ ಕಷ್ಟ ನೋಡದೆ ಆ ಭಗವಂತ ಎಲ್ಲವು ಕರುಣಿಸಿದ ಬಂದಷ್ಟೆ ವೆಗವಾಗಿ ಎಲ್ಲವು ಮಾಯವವಾಗಿಬಿಟ್ಟಿತು, ಅಲ್ಪನಿಗೆ ಐಶ್ವರ್ಯ ಬಂದರೆ ಅರ್ದ ರಾತ್ರಿಲಿ ಕೊಡೆ ಹಿಡಿದನಂತೆ ಈ ಮಾತು ಈ ತಾಯಿಗೆ ಹೇಳಿ ಮಾಡಿಸಿದಂತಿದೆ, ತನ್ನ ಆಹಂಕಾರವೆ ತನಗೆ ಮುಳುವಾಯಿತು ಎಲ್ಲರನ್ನು ನಿಂದಿಸಿ ತನ್ನ ಅವನತಿಗೆ ಕೊನೆಗೆ ತಾನೆ ನಾಂದಿ ಹಾಡಿದ್ದು ರಾನೂ ಮಂಡಲ್
ಆದರೆ ಈಗ ವರದಿಗಳು ಹೇಳುವಂತೆ ರಾನು ಮಂಡಲ್ ತೀರಾ ಕಳಪೆ ಸ್ಥಿತಿಯಲ್ಲಿ ಇದ್ದು, ಸ್ವತಃ ಸಹಾಯಕ್ಕಾಗಿ ಕೈ ಚಾಚುತ್ತಿದ್ದಾರೆ. ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧರಾತ್ರಿಯಲ್ಲೂ ಕೊಡೆ ಹಿಡಿದನಂತೆ ಅನ್ನುವ ಮಾತು ರಾನು ಮಂಡಲ್ ರಿಗೆ ಸರಿಯಾಗಿ ಅನ್ವಯವಾಗಬಹುದು. ಎಲ್ಲರಿಗೂ ಈಕೆಯ ಬದುಕು ಒಂದು ಎಚ್ಚರಿಕೆಯ ಕರೆಘಂಟೆ. ಇಲ್ಲಿ ಯಾವುದು ಶಾಶ್ವತವಲ್ಲ ನೆನಪಿರಲಿ.