ಕರ್ನಾಟಕದಲ್ಲಿ ಪ್ರತಿಯೊಬ್ಬ ರಾಜಕಾರಣಿಗಳಿಗೂ, ನೇರವಾಗಿ ಪ್ರಶ್ನೆ ಹಾಕುವ, ಖಡಕ್ ಆಗಿ ಪ್ರಶ್ನೆಗಳನ್ನು ಕೇಳುವ ಏಕೈಕ ಪತ್ರಕರ್ತರೆಂದರೆ ನಮ್ಮ ಪಬ್ಲಿಕ್ ಟಿವಿ ರಂಗನಾಥ್ ಅವರು. ಅವರ ಮುದ್ದಿನ ಮಗಳ ಮದುವೆಯನ್ನು ಭರ್ಜರಿಯಾಗಿ ಮಾಡಿದರು. ಮಗಳ ಮದುವೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ನೇರನುಡಿಯ ಪತ್ರಿಕಾ ರಂಗದಲ್ಲಿ ಹಾಗೂ ಟಿವಿ ಮಾಧ್ಯಮದಲ್ಲಿ ಪ್ರಸಿದ್ಧಿ ಪಡೆದ ರಂಗಣ್ಣ ಅವರ ಮಗಳ ಮದುವೆಯು ಅದ್ದೂರಿಯಾಗಿ ನೆರವೇರಿತು. ಇದ್ದಿದ್ದನ್ನು ಇದ್ದ ಹಾಗೆ ಹೇಳುವ ಮಾತಿನ ಧಾಟಿಯಿಂದ ಕರ್ನಾಟಕದ ಜನತೆಯ ಮೆಚ್ಚಿನ ಜರ್ನಲಿಸ್ಟ್ ಆಗಿರುವ ರಂಗಣ್ಣ ಅವರು ಪತ್ರಿಕೋದ್ಯಮದಲ್ಲಿ ಬಹಳಷ್ಟು ಸಾಧನೆ ಮಾಡಿದ್ದಾರೆ.
ರಂಗನಾಥ್ ಅವರು ತಮ್ಮ ಪ್ರೀತಿಯ ಮಗಳ ಮದುವೆ ಮಾಡಿದ್ದಾರೆ. ಪ್ರತಿ ತಂದೆಗೂ ಮಗಳ ಮದುವೆ ದೊಡ್ಡ ಕನಸಾಗಿರುತ್ತದೆ. ರಂಗನಾಥ್ ಅವರು ಒಂದು ಹಳ್ಳಿಯಲ್ಲಿ ಹುಟ್ಟಿ, ಬಡತನದಲ್ಲಿ ಬೆಳೆದವರು. ಜೀವನದಲ್ಲಿ ದೊಡ್ಡದಾಗಿ ಸಾಧನೆ ಮಾಡಬೇಕು ಸಮಾಜದಲ್ಲಿ ಬದಲಾವಣೆ ತರಬೇಕು ಎನ್ನುವ ಕಾರಣಕ್ಕೆ ಪತ್ರಿಕೋದ್ಯಮವನ್ನು ಆರಿಸಿಕೊಂಡರು.
ಹಲವು ಪತ್ರಿಕೆಗಳಲ್ಲಿ ಕೆಲಸ ಮಾಡಿ, ಅನುಭವ ಪಡೆದು ಕಷ್ಟಪಟ್ಟು ಪಬ್ಲಿಕ್ ಟಿವಿ ಚಾನೆಲ್ ಸ್ಥಾಪಿಸಿದರು. ರಂಗನಾಥ್ ಅವರಿಗೆ ಚಿತ್ರರಂಗದಲ್ಲಿ ಮತ್ತು ರಾಜಕೀಯ ರಂಗದಲ್ಲಿ ಬಹಳ ಗೌರವವಿದೆ. ರಂಗಣ್ಣ ಅವರ ಪತ್ನಿಯ ಹೆಸರು ಶಾರದಾ ಮತ್ತು ಮಗಳ ಹೆಸರು ಪಯಸ್ವಿನಿ. ರಂಗನಾಥ್ ಅವರ ಮುದ್ದಿನ ಮಗಳ ಮದುವೆಯನ್ನು ಧಾರಾ ಮುಹೂರ್ತದಂದು ಶಾಸ್ತ್ರೋಕ್ತವಾಗಿ ಬೆಂಗಳೂರಿನಲ್ಲಿ ನಡೆಸಿದರು. ರಂಗನಾಥ್ ಅವರ ಮಗಳನ್ನು ಮದುವೆ ಆಗಿರುವ ಹುಡುಗನ ಹೆಸರು ನಿಖಿಲ್ ಭಾಸ್ಕರ್. ಮುಂದಿನ ತಿಂಗಳು 4 ನೇ ತಾರೀಖಿನಂದು ಆರತಕ್ಷತೆಯ ಶಾಸ್ತ್ರ ನಡೆಯಲಿದೆ.
ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ ನಲ್ಲಿರುವ ದಿ ಗ್ರ್ಯಾಂಡ್ ಕ್ಯಾಸಲ್ ನಲ್ಲಿ ಪಯಸ್ವಿನಿ ಮತ್ತು ನಿಖಿಲ್ ಜೋಡಿಯ ಆರತಕ್ಷತೆ ನಡೆಯಲಿದೆ ಕೆಲ ದಿನಗಳ ಹಿಂದೆಯೆ ರಂಗನಾಥ್ ಅವರು ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಹಲವು ಚಿತ್ರರಂಗದ ಮತ್ತು ರಾಜಕೀಯ ಗಣ್ಯ ವ್ಯಕ್ತಿಗಳಿಗೆ ಮದುವೆಯ ಆಮಂತ್ರಣ ನೀಡಿದ್ದರು ಅದರ ಫೊಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಂಗನಾಥ್ ಅವರು ತಮ್ಮ ಮಗಳ ಮದುವೆಗೆ ಅಕ್ಟೋಬರ್ 22 ರಂದು ಪುನೀತ್ ರಾಜಕುಮಾರ್ ಅವರ ಮನೆಗೆ ಹೋಗಿ ಆಮಂತ್ರಣ ಮಾಡಿದ್ದರು. ಮದುವೆಗೆ ಪ್ರತಾಪ್ ಸಿಂಹ, ಶ್ರೀರಾಮುಲು ಸೇರಿದಂತೆ ಅನೇಕ ರಾಜಕೀಯ ರಂಗದ ಗಣ್ಯರು ಮತ್ತು ಸಿನಿಮಾ ಕ್ಷೇತ್ರದವರು ಬಂದು ಹೊಸ ದಂಪತಿಗಳಿಗೆ ಶುಭ ಕೋರಿದರು. ಡಿಸೆಂಬರ್ 4ರಂದು ಈ ನವಜೋಡಿಯ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ರಂಗನಾಥ್ ಅವರನ್ನು ಕರ್ನಾಟಕದ ಜನರು ಪ್ರೀತಿಯಿಂದ ರಂಗಣ್ಣ ಎಂದು ಕರೆಯುತ್ತಾರೆ. ರಂಗಣ್ಣ ಅವರು ತಮ್ಮ ಮಗಳ ಮದುವೆಯನ್ನು ಬಹಳ ಸರಳವಾಗಿ, ಸಂಪ್ರದಾಯದ ಪ್ರಕಾರ ಮಾಡಿದ್ದಾರೆ. ಮಗಳ ಮದುವೆಯ ಸಮಯದಲ್ಲಿ ರಂಗಣ್ಣ ಅವರು ಭಾವುಕರಾಗಿದ್ದರು.
ರಂಗನಾಥ್ ಅವರ ಮಗಳ ಮದುವೆಗೆ ಕುಟುಂಬಸ್ಥರು ಹಾಗು ಕರ್ನಾಟಕ ರಾಜ್ಯದ ರಾಜಕೀಯ ವ್ಯಕ್ತಿಗಳು ಹಾಗೂ ಕೆಲವು ಸಿನಿಮಾ ಕಲಾವಿದರು ಬಂದು ಶುಭ ಹಾರೈಸಿದ್ದಾರೆ. ರಂಗನಾಥ್ ಅವರು ಮೊಟ್ಟ ಮೊದಲ ಬಾರಿಗೆ ತಮ್ಮ ಕುಟುಂಬವನ್ನು ಜಿ ಕನ್ನಡದ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ಪರಿಚಯ ಮಾಡಿಸಿದ್ದರು. ರಂಗನಾಥ್ ಅವರ ಮಗಳು ಜರ್ನಲಿಸಂ ಓದಿಕೊಂಡು ತಂದೆಯಂತೆ ಕೆಲಸ ಮಾಡಬೇಕು ಎಂಬ ಆಸೆಯನ್ನು ಇಟ್ಟುಕೊಂಡಿದ್ದಾರೆ. ಪಯಸ್ವಿನಿ ಅವರ ಆಸೆ ಈಡೇರಲಿ ಎಂದು ಆಶಿಸೋಣ.