ತೀವ್ರ ವಿವಾದಕ್ಕೊಳಗಾದ ಸರ್ಕಾರದ ಸೇತು ಸಮುದ್ರಂ ಯೋಜನೆಯ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಸೇತು ಸಮುದ್ರಂ ಯೋಜನೆ ಇದು ಭಾರತೀಯರ ನಂಬಿಕೆಯ ರಾಮೇಶ್ವರಂ ದ್ವೀಪ ಹಾಗೂ ಶ್ರೀಲಂಕಾದ ನಡುವೆ ಇರುವ ರಾಮಸೇತುವೆಯನ್ನು ಒಡೆದು ಹಾಕಿ ಅಲ್ಲಿ ಸಮುದ್ರಯಾನಕ್ಕೆ ಅವಕಾಶ ಮಾಡಿಕೊಡುವ ಯೋಜನೆಯಾಗಿತ್ತು. ರಾಮ ನಿರ್ಮಿಸಿದ್ದ ಎಂದು ಹೇಳಲಾಗುವ ರಾಮಸೇತು ಬಗ್ಗೆ ಸಾಕಷ್ಟು ವಿವಾದಗಳು ನಡೆಯುತ್ತಿವೆ. ತಮಿಳುನಾಡಿನ ರಾಮೇಶ್ವರಂ ಬಳಿ ಇರುವ ಧನುಷ್ಕೋಟಿಯಿಂದ ಶ್ರೀಲಂಕಾದ ತಲೈಮನ್ನಾರ್ ವರೆಗಿನ ಸೇತುವೆ ಆಕರದ ಭೂಮಿಯೇ ರಾಮಸೇತು. ಇದಕ್ಕೆ ಆಡಮ್ ಬ್ರಿಡ್ಜ್ ಎಂದು ಕರೆಯುತ್ತಾರೆ. ಯುರೋಪಿಯನ್ ಹಾಗೂ ಮಧ್ಯ ಪ್ರಾಚ್ಯ ಉಲ್ಲೇಖಗಳ ಪ್ರಕಾರ ಭೂಮಿಗೆ ಬಂದ ಮೊದಲ ಮಾನವ ಆಡಮ್ ಅವನು ಆಗಸದಿಂದ ನೇರವಾಗಿ ಶ್ರೀಲಂಕಾದ ಬೆಟ್ಟವೊಂದರಲ್ಲಿ ಬಿದ್ದನು. ಅಲ್ಲಿಂದ ಅವನು ಕಿರಿದಾದ ಕಾಲು ದಾರಿಯ ಮೂಲಕ ಭಾರತಕ್ಕೆ ಬಂದನು ಅವನು ಹಿಂದೂ ಮಹಾಸಾಗರವನ್ನು ದಾಟಿದ ದಾರಿಗೆ ಆಡಮ್ ಬ್ರಿಡ್ಜ್ ಎನ್ನುವರು.
ಈ ಸೇತುವೆ ನಿರ್ಮಾಣವಾಗಿದ್ದು ಯಾವಾಗ ಎನ್ನುವುದನ್ನು ತಿಳಿಯಲು ಇಸ್ರೋ, ಭಾರತೀಯ ಪುರಾತತ್ವ ಇಲಾಖೆ, ನಾಸಾ ಪ್ರಯತ್ನ ಮಾಡಿದೆ ಆದರೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಸಂಶೋಧನೆಯಿಂದ ರಾಮೇಶ್ವರಂ ಭೂಪ್ರದೇಶ ಸುಮಾರು ಒಂದು ಲಕ್ಷದ ಇಪ್ಪತೈದು ಸಾವಿರ ವರ್ಷಗಳ ಹಿಂದೆ ಇತ್ತು ಮತ್ತು ರಾಮೇಶ್ವರಂ ಹಾಗೂ ತಲೈಮನ್ನಾರ್ ನಿರ್ಮಾಣವಾಗಿರುವುದು ಏಳು ಸಾವಿರದಿಂದ – ಹದಿನೆಂಟು ಸಾವಿರ ವರ್ಷಗಳ ಹಿಂದೆ ಎಂದು ತಿಳಿದು ಬಂದಿದೆ. ಈ ಸೇತುವೆ ನಿರ್ಮಾಣವಾಗಿದ್ದು ಕೇವಲ ಐದುನೂರರಿಂದ ಆರುನೂರು ವರ್ಷಗಳ ಹಿಂದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ.
ಪ್ರೊಫೆಸರ್ ಎಸ್.ಎಮ್ ರಾಮಸ್ವಾಮಿ ನೇತೃತ್ವದಲ್ಲಿ ನಡೆದ ಸಂಶೋಧನೆಯ ಪ್ರಕಾರ ಈ ಸೇತುವೆ ಮೂರು ಸಾವಿರದ ಐದುನೂರು ವರ್ಷಗಳ ಹಿಂದೆ ನಿರ್ಮಾಣವಾಗಿದೆ. ಕೆಲವು ಸಂಶೋಧಕರ ಪ್ರಕಾರ ಈ ಸೇತುವೆ ಮರಳು ದಿಬ್ಬಗಳಿಂದ ನಿರ್ಮಿತವಾದ ಚಿಕ್ಕ ಚಿಕ್ಕ ದ್ವೀಪಗಳು ಅವು ಒಂದಕ್ಕೊಂದು ಬೆಸೆದುಕೊಂಡು ಸೇತುವೆಯ ರೂಪವನ್ನು ಪಡೆದಿದೆ. ರಾಮಾಯಣದಲ್ಲಿ ಈ ಸೇತುವೆಯ ಬಗ್ಗೆ ಸ್ಪಷ್ಟ ಉಲ್ಲೇಖವಿದೆ. ಲಂಕೆಯ ರಾವಣ ಸೀತಾದೇವಿಯನ್ನು ಅಪಹರಿಸಿದಾಗ ಅವನ ವಿರುದ್ಧ ಯುದ್ಧ ಸಾರಿದ ರಾಮ ಲಂಕೆಯ ಕಡೆ ಪ್ರಯಾಣ ಬೆಳೆಸುತ್ತಾನೆ ಆಗ ರಾಮೇಶ್ವರಂ ಬಳಿ ಸಮುದ್ರ ಎದುರಾಯಿತು ಹೀಗಾಗಿ ವಾನರ ಸೈನ್ಯ ಸಮುದ್ರಕ್ಕೆ ಸೇತುವೆ ನಿರ್ಮಿಸಲು ಮುಂದಾಗುತ್ತದೆ ಕಲ್ಲುಗಳ ಮೇಲೆ ಶ್ರೀರಾಮ ಎಂದು ಬರೆದಿದ್ದರಿಂದ ಆ ಕಲ್ಲುಗಳು ನೀರಿನ ಮೇಲೆ ತೇಲುತ್ತಾ ಸೇತುವೆ ನಿರ್ಮಾಣವಾಯಿತು ನಂತರ ಈ ಸೇತುವೆ ಮೂಲಕ ಲಂಕೆ ತಲುಪಿದ ಶ್ರೀರಾಮ ರಾವಣನನ್ನು ಸದೆಬಡಿದು ಸೀತಾದೇವಿಯನ್ನು ಬಿಡುಗಡೆಗೊಳಿಸಿದ ಎಂಬ ಕಥೆಯಿದೆ.
ಸುಮಾರು 30 ಕಿ.ಮೀ ಉದ್ದವಿರುವ ಈ ಸೇತುವೆ ಅದರ ಅನುಪಾತಕ್ಕೆ ತಕ್ಕಷ್ಟೇ ಅಗಲವಿದೆ. ಇನ್ನು ಕೆಲವರು ಈ ಸೇತುವೆ ರಾಮ ಹಾಗೂ ವಾನರ ಸೈನ್ಯ ನಿರ್ಮಿಸಿರುವುದು ಅಲ್ಲವೆಂದು ಹೇಳುತ್ತಾರೆ. ಬ್ರಿಟನ್ ಮೂಲದ ನೀರಾವರಿ ತಜ್ಞ ಸರ್ ಆರ್ಥರ್ ಕಾಟನ್ ಅವರ ಪ್ರಕಾರ ಸುಮಾರು 15 ನೇ ಶತಮಾನದವರೆಗೂ ಭಾರತ ಮತ್ತು ಶ್ರೀಲಂಕಾದ ನಡುವಿನ ಕಾಲುದಾರಿಯಾಗಿತ್ತು 1480 ರಲ್ಲಿ ಉಂಟಾದ ಭೀಕರ ಚಂಡಮಾರುತದಿಂದ ಹಿಂದೂ ಮಹಾಸಾಗರದ ನೀರಿನ ಮಟ್ಟ ಹೆಚ್ಚಾಗಿ ಸೇತುವೆ ಸಮುದ್ರದ ಆಳದಲ್ಲಿ ಮುಳುಗಿಹೋಯಿತು. ಆದರೆ 11ನೇ ಶತಮಾನದ ಸಿಂಹಳ ದ್ವೀಪದ ಮೇಲೆ ಅಂದರೆ ಈಗಿನ ಶ್ರೀಲಂಕಾದ ಮೇಲೆ ಯುದ್ಧ ಸಾರಿದ ಚೋಳರ ಅರಸ ರಾಜ ರಾಜ ಚೋಳ ಯುದ್ದಕೆ ನೌಕಾಬಲವನ್ನು ಬಳಸಿದನೆಂದು ಉಲ್ಲೇಖವಿದೆ ಸೇತುವೆ ಇದೆ ಅಂದಮೇಲೆ ನೌಕೆಗಳನ್ನು ಯಾಕೆ ಬಳಸಿದ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಈ ಸೇತುವೆ ಜಾಗದಲ್ಲಿ ಸಮುದ್ರದ ಆಳ 3-30 ಅಡಿ ಆದ್ದರಿಂದ ಹಡಗುಗಳು ಈ ಮಾರ್ಗದಲ್ಲಿ ಸಂಚರಿಸಲು ಸಾಧ್ಯವಿಲ್ಲ. ಭಾರತದ ಹಡಗುಗಳು ಪೂರ್ವ ಕರಾವಳಿಯಿಂದ ಸಮುದ್ರ ಮಾರ್ಗವಾಗಿ ಪಶ್ಚಿಮ ಕರಾವಳಿಗೆ ಬರಲು ಇಡೀ ಶ್ರೀಲಂಕಾವನ್ನು ಸುತ್ತಿ ಬರಬೇಕು ಹೀಗಾಗಿ ಈ ಸೇತುವೆಯನ್ನು ಒಡೆದು ಧನುಷ್ಕೋಟಿಯಿಂದ ಪಾಕ್ ಜಲಸಂಧಿಯನ್ನು ನೇರವಾಗಿ ಸಂಪರ್ಕಿಸುವ ಸಮುದ್ರ ಮಾರ್ಗವನ್ನು ರೂಪಿಸಲು 2005 ರಲ್ಲಿ ಭಾರತ ಸರ್ಕಾರ ತೀರ್ಮಾನಿಸಿತ್ತು ಆದರೆ ಇದು ಹಿಂದೂ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಯಿತು. ಆದ್ದರಿಂದ ಸರ್ಕಾರ ಸೇತು ಸಮುದ್ರಂ ಯೋಜನೆಯನ್ನು ಅರ್ಧದಲ್ಲೇ ಕೈಬಿಟ್ಟಿತು. ವಿಜ್ಞಾನಿಗಳ ಪ್ರಕಾರ ಈ ಸೇತುವೆ ಇರುವ ಸಮುದ್ರದ ಮರಳಿನಲ್ಲಿ ಮೋನಾಜೈಟ್ ಎಲಿಮೆಂಟ್ ನ ಬಾರಿ ನಿಕ್ಷೇಪ ಪತ್ತೆಯಾಗಿದೆ. ಇದನ್ನು ಸರಿಯಾಗಿ ಉಪಯೋಗಿಸಿಕೊಳ್ಳುವ ವ್ಯವಸ್ಥೆ ಭಾರತದಲ್ಲಿ ಇಲ್ಲ. ಮೊನಾಜೈಟ್ ರಿಯಾಕ್ಟರ್ ಗಳನ್ನು ಸ್ಥಾಪಿಸಿದರೆ ಶಕ್ತಿ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬಿಯಾಗುತ್ತದೆ ಎಂಬುದು ವಿಜ್ಞಾನಿಗಳ ವಾದವಾಗಿದೆ. ಈ ಸೇತುವೆಯಿಂದ ಭಾರತಕ್ಕೆ ಲಾಭವಿದೆ