ಕರ್ನಾಟಕದ ಕಾಶ್ಮೀರ ದಾಂಡೇಲಿಯ ಸುತ್ತ ಮುತ್ತಲಿನ 6 ಪ್ರವಾಸಿ ಸ್ಥಳಗಳಿವು ನೋಡಿ

0 0

ಕರ್ನಾಟಕದ ಕಾಶ್ಮೀರ ದಾಂಡೇಲಿಯ ಸುತ್ತ ಮುತ್ತಲಿನ ಪ್ರವಾಸಿ ಸ್ಥಳಗಳ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಸಿಂಥೇರಿ ರಾಕ್ ಅಥವಾ ಸಿಂಥೇರಿ ಬಂಡೆ ದಾಂಡೇಲಿ ವನ್ಯಧಾಮ ದಟ್ಟವಾದ ಅರಣ್ಯ ಪ್ರದೇಶದಲ್ಲಿರುವ ಒಂದು ಬಂಡೆಯೇ ಸಿಂಥೇರಿ ರಾಕ್. ಈ ಶಿಲೆಯು ಸುಮಾರು 300 ಅಡಿ ಎತ್ತರವಿದೆ ಮತ್ತು ಇದು ಕಡಿದಾದ ಬಂಡೆ. ಈ ಬಂಡೆ ಶೀಥಲಿಕರಣದಿಂದ ಬ್ರಹತ್ ಭೂ ರಚನೆಯಾಗಿದೆ. ಸಿಂಥೇರಿ ರಾಕ್ ಕಾಳಿ ನದಿ ತಟದಲ್ಲಿದೆ. ದಾಂಡೇಲಿಯಿಂದ ಗುಂದಕ್ಕೆ ಹೋಗುವ ಮಾರ್ಗದಲ್ಲಿದ್ದು ದಾಂಡೇಲಿಯಿಂದ 33 ಕಿ.ಮೀ ದೂರದಲ್ಲಿದೆ. ಈ ಬಂಡೆಯನ್ನು ಕಂಡುಹಿಡಿದ ಸಾಹಸಿ ಮಹಿಳೆ ಸಿಂಥೆರಾ ಬ್ರಿಟಿಷ್ ನಿವಾಸಿ ಆದ್ದರಿಂದ ಈ ಜಾಗವನ್ನು ಸಿಂಥೇರಿ ರಾಕ್ಸ್ ಎಂದು ಕರೆಯಲಾಗುತ್ತದೆ, ಛಾಯಾಗ್ರಾಹಕರಿಗೆ ಇದು ಸ್ವರ್ಗವಾಗಿದೆ. ಅಣಶಿ ಅಭಯಾರಣ್ಯ ಇದು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಬಳಿಯಿರುವ ರಾಷ್ಟ್ರೀಯ ಅಭಯಾರಣ್ಯ. ಗೋವಾ ಮತ್ತು ಮಹಾರಾಷ್ಟ್ರದ ಗಡಿಯಲ್ಲಿರುವ 6 ಬೇರೆ ಬೇರೆ ಅರಣ್ಯ ಪ್ರದೇಶಗಳಿಗೆ ಹೊಂದಿಕೊಂಡಿದೆ. ಅಣಶಿ ಅಭಯಾರಣ್ಯ 2,200 ಚದರ ಕಿಲೋ ಮೀಟರ್ ರಕ್ಷಿತ ಅರಣ್ಯ ಪ್ರದೇಶವನ್ನು ಹೊಂದಿದೆ. ಇಲ್ಲಿ ಹಲವು ವನ್ಯಜೀವಿಗಳನ್ನು ನೋಡಬಹುದು. ಮುಖ್ಯವಾಗಿ ಕಾಣುವ ವನ್ಯಜೀವಿಗಳೆಂದರೆ ಕಪ್ಪು ಚಿರತೆ, ಹುಲಿ, ಆನೆ. ಮಾಗೋಡ್ ಜಲಪಾತ, ಬೇಡ್ತಿ ನದಿಯ ನೀರು ಮಾಗೋಡ್ ಜಲಪಾತದಲ್ಲಿ 650 ಅಡಿ ಎತ್ತರದಿಂದ ಬೀಳುತ್ತದೆ. ನೊರೆ ನೊರೆಯಾಗಿ ಬೀಳುವ ನೀರನ್ನು ನೋಡುವುದೆ ಕಣ್ಣಿಗೆ ಹಬ್ಬ. ದಾಂಡೇಲಿ ಪಟ್ಟಣದಿಂದ ಸುಮಾರು 75 ಕಿ.ಮೀ ದೂರದಲ್ಲಿದೆ. ಮಳೇಗಾಲದಲ್ಲಿ ಈ ಪ್ರದೇಶದಲ್ಲಿ ದಿನವಿಡೀ ದಟ್ಟವಾದ ಮಂಜಿನ ಮುಸುಕು ಆವರಿಸಿ ಹೊಸದೊಂದು ಲೋಕ ಸೃಷ್ಟಿಯಾಗುತ್ತದೆ. ಹತ್ತಿರದಲ್ಲಿ ಕವಡಿಕೆರೆ ಸರೋವರ ಇದೆ. ಇದು ಸೂರ್ಯಾಸ್ತಕ್ಕೆ ಹೇಳಿ ಮಾಡಿಸಿದ ಜಾಗ. ಇದು ಮಾಗೋಡ್ ಜಲಪಾತದಿಂದ 11 ಕಿ.ಮೀ ದೂರದಲ್ಲಿದೆ. ಕಾಳಿ ನದಿ ರಿವರ್ ರಾಕಿಂಗ ಹಾಗೂ ರ್ಯಾಫ್ಟಿಂಗ್ ಗೆ ಹೇಳಿ ಮಾಡಿಸಿದ ಜಾಗ. ಈ ನದಿಯು ಪ್ರಕ್ಷುಬ್ಧ ಹಾಗೂ ಸಾಕಷ್ಟು ಶಾಂತವಾಗಿರುವ ರಾಪಿಡ್ ಗಳನ್ನು ಒಳಗೊಂಡಿದೆ.

ಸುಪಾ ಅಣೆಕಟ್ಟು, ಕಾಳಿ ನದಿಗೆ ನಿರ್ಮಿಸಲಾದ ಸುಪಾ ಅಣೆಕಟ್ಟು ಕರ್ನಾಟಕದ ಅತ್ಯಂತ ಎತ್ತರವಾದ ಅಣೆಕಟ್ಟು ಎಂಬ ಖ್ಯಾತಿಯನ್ನು ಹೊಂದಿದೆ. ಇದು ದಾಂಡೇಲಿಯಿಂದ 22 ಕಿ.ಮೀ ದೂರದಲ್ಲಿದೆ. 1101 ಮೀ ಎತ್ತರವಿದ್ದು, 322 ಮೀ ಉದ್ದವಾಗಿದೆ. ಈ ಅಣೆಕಟ್ಟನ್ನು 1985 ರಲ್ಲಿ ಉದ್ಘಾಟಿಸಲಾಯಿತು, ಈ ಅಣೆಕಟ್ಟಿನ ಸುತ್ತ ಮುತ್ತಲಿನ ಪ್ರದೇಶ ಕಾಡಿನಿಂದ ಆವೃತವಾಗಿದೆ. ಉಳವಿ ಇದು ಪುರಾತನ ಸ್ಥಳ, ದುರ್ಗಮ ಪ್ರದೇಶ ಹಾಗೂ ಪವಿತ್ರ ಯಾತ್ರಾ ಸ್ಥಳವಾಗಿದೆ. ಪ್ರಖ್ಯಾತ ಚೆನ್ನಬಸವೇಶ್ವರ ದೇವಾಲಯವಿದೆ. ಇದು ದಾಂಡೇಲಿಯಿಂದ 48 ಕಿ.ಮೀ ದೂರದಲ್ಲಿದೆ. ಇದು ಲಿಂಗಾಯತ ಜನರ ಪ್ರಮುಖ ಯಾತ್ರಾ ಸ್ಥಳವಾಗಿದೆ. ಚೆನ್ನಬಸವಣ್ಣನವರ ಸಮಾಧಿ ಇಲ್ಲಿದೆ. 12 ನೇ ಶತಮಾನದಲ್ಲಿ ಬಸವೇಶ್ವರರು ಲಿಂಗೈಕ್ಯರಾಗುವ ಮೊದಲು ಕಲ್ಯಾಣದಿಂದ ಉಳವಿಗೆ ಬಂದರು. ಬಸವಣ್ಣನ ಸೋದರಿ ಅಕ್ಕ ನಾಗಲಾಂಬಿಕೆ ಹೆಸರಿನಲ್ಲಿರುವ ಗುಹೆಯು ಇಲ್ಲಿದೆ. ಉಳವಿ ಜಾತ್ರೆಗೆ ಕರ್ನಾಟಕದ ಎಲ್ಲ ಕಡೆಯಿಂದ ಜನರು ಬರುತ್ತಾರೆ. ದಾಂಡೇಲಿ ವನ್ಯಜೀವಿ ಧಾಮ ಇದು ಉತ್ತರ ಕನ್ನಡ ಜಿಲ್ಲೆಯ ಕಾಳಿ ನದಿಯ ದಡದಲ್ಲಿದೆ. ಇದು ಕರ್ನಾಟಕದ ಎರಡನೇ ಅತಿ ದೊಡ್ಡ ಅಭಯಾರಣ್ಯವಾಗಿದೆ. ಇಲ್ಲಿ ತೆರೆದ ಜೀಪಿನಲ್ಲಿ ಸಫಾರಿ ಮಾಡುವುದೇ ರೋಮಾಂಚನ. ಸಾತೋಡಿ ಜಲಪಾತ ಹಲವಾರು ಝರಿಗಳಿಂದ ಸೇರಿದ ನೀರು 15 ಮೀ ಎತ್ತರದಿಂದ ಧುಮುಕುತ್ತದೆ. ನಂತರ ಕೊಡಸಳ್ಳಿ ಜಲಾಶಯದ ಮೂಲಕ ಕಾಳಿ ನದಿಯನ್ನು ಸೇರುತ್ತದೆ. ಇದು ದಾಂಡೇಲಿಯಿಂದ 34 ಕಿ.ಮೀ ದೂರದಲ್ಲಿದೆ. ಈ ಜಲಪಾತವನ್ನು ಬಹಳಷ್ಟು ಜನರು ಅಮೆರಿಕದ ನಯಾಗರ ಜಲಪಾತಕ್ಕೆ ಹೋಲಿಸಿದ್ದಾರೆ ಅದಕ್ಕೆ ಇದನ್ನು ಮಿನಿ ನಯಾಗರ ಎನ್ನುತ್ತಾರೆ. ಕುಳಗಿ ನೈಸರ್ಗಿಕ ಶಿಬಿರ ಇದು ದಾಂಡೇಲಿಯಿಂದ 12 ಕಿ.ಮೀ ದೂರದಲ್ಲಿದ್ದು ಪ್ರವಾಸಿಗರಿಗೆ ಟೆಂಟ್ ಮಾಡುವ ವ್ಯವಸ್ಥೆ ಇದೆ. ಇಲ್ಲಿ 15-20 ಟೆಂಟ್ ಗಳಿದ್ದು ತಮಗಿಷ್ಟವಾದ ಟೆಂಟನ್ನು ಬಾಡಿಗೆಗೆ ಪಡೆದುಕೊಳ್ಳಬಹುದು. ಟೆಂಟ್ ಗಳಿಗೆ ಪಕ್ಷಿಗಳ ಹೆಸರನ್ನು ಇಡಲಾಗಿದೆ. ಈ ಎಲ್ಲ ಪ್ರವಾಸಿ ಸ್ಥಳಕ್ಕೆ ಬರಲು ಚಳಿಗಾಲ ಸೂಕ್ತವಾಗಿದೆ. ಅಂದರೆ ಅಕ್ಟೋಬರ್ ನಿಂದ ಫೆಬ್ರುವರಿ ತಿಂಗಳು ಸೂಕ್ತವಾಗಿದೆ.

Leave A Reply

Your email address will not be published.